For Quick Alerts
ALLOW NOTIFICATIONS  
For Daily Alerts

ಎಲ್ ಐಸಿ ಕ್ರೆಡಿಟ್ ಕಾರ್ಡ್ ಎಂದರೇನು? ಯಾಕಾಗಿ?

|

ಎಲ್ ಐ ಸಿ (ಜೀವ ವಿಮಾ ನಿಗಮ) ಎಕ್ಸಿಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಕೊಡಮಾಡುತ್ತಿದೆ. ಭಾರತದ ಎಲ್ಲ ಸೇವಾ ಬಳಕೆದಾರರು ಈ ಕಾರ್ಡ್ ನ್ನು ಪಡೆದುಕೊಳ್ಳಬಹುದು.

 

ಗ್ರಾಹಕನ ಪಾಲಿಸಿ ಎಲಿಜಿಬಿಲಿಟಿಯನ್ನು ಆಧಾರವಾಗಿ ಇಟ್ಟುಕೊಂಡು ವಿವಿಧ ನಮೂನೆಯ ಕಾರ್ಡ್ ಗಳನ್ನು ನೀಡುತ್ತಿದೆ. ಗ್ರಾಹಕರು ಆಡ್-ಒನ್ ಕಾರ್ಡ್ ನ್ನು ಪಡೆದುಕೊಳ್ಳಲು ಅವಕಾಶವಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಾಗಿಲ್ಲ.

ವಾರ್ಷಿಕವಾಗಿ ಯಾವುದೇ ಶುಲ್ಕ ನೀಡಬೇಕಿಲ್ಲ. ಒಂದು ವೇಳೆ ಕಾರ್ಡ್ ಕಳೆದುಕೊಂಡರೂ ಶುಲ್ಕ ಪಡೆದುಕೊಳ್ಳದೇ ಹೊಸ ಕಾರ್ಡ್ ನೀಡಲಾಗುತ್ತದೆ. ಹಾಗಾದರೆ ಈ ಎಲ್ ಐ ಸಿ ಕ್ರೆಡಿಟ್ ಕಾರ್ಡ್ ನ ವಿಶೇಷತೆಗಳು ಏನು? ಎಂಬುದನ್ನು ಮುಂದೆ ನೋಡಿಕೊಂಡು ಬರೋಣ....

ಎಲ್ ಐ ಸಿ ಗೋಲ್ಡ್ ಕ್ರೆಡಿಟ್ ಕಾರ್ಡ್

ಎಲ್ ಐ ಸಿ ಗೋಲ್ಡ್ ಕ್ರೆಡಿಟ್ ಕಾರ್ಡ್

1.8 ಲಕ್ಷ ರು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಈ ಕಾರ್ಡ್ ಪಡೆದುಕೊಳ್ಳಬಹುದು. ರಿವಾರ್ಡ್ ಪಾಯಿಂಟ್ಸ್ ಗಳನ್ನು ಸಹ ಇಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. ಎಲ್ ಐಸಿ ಪ್ರೀಮಿಯಮ್ ಆಧಾರದಲ್ಲಿ ನೂರು ರು. ವೆಚ್ಚ ಮಾಡಿದರೆ ಒಂದು ರಿವಾರ್ಡ್ ಪಾಯಿಂಟ್ ನಿಮ್ಮದಾಗುತ್ತದೆ.

ಎಲ್ ಐಸಿ ಟಿಟಾನಿಯಮ್ ಕಾರ್ಡ್

ಎಲ್ ಐಸಿ ಟಿಟಾನಿಯಮ್ ಕಾರ್ಡ್

3 ಲಕ್ಷ ರು. ಗಿಂತ ಅಧಿಕ ಆದಾಯ ಇರುವವರು ಈ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಪೆಟ್ರೋಲ್ ಬಂಕ್ ಗಳಲ್ಲಿ ಈ ಕಾರ್ಡ್ ಬಳಕೆ ಮಾಡಿಕೊಂಡರೆ ವಿಶೇಷ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಪ್ರೀಮಿಯಂ ಪೇಮೆಂಟ್ ಮಾಡಿದರೆ ನೂರು ರು. ಗೆ ಎರಡು ರಿವಾರ್ಡ್ ಪಾಯಿಂಟ್ ಸಿಗುತ್ತದೆ. ರಿಲಯನ್ಸ್ ಟ್ರೆಂಡ್ಸ್, ಡಿಜಿಟಲ್ ಮುಂತಾದ ಕಡೆ ಖರೀದಿ ಮಾಡಿದರೆ ಹೆಚ್ಚಿನ ಅಂಕ ಪಡೆದುಕೊಳ್ಳಲು ಸಾಧ್ಯವಿದೆ.

ಎಲ್ ಐಸಿ ಪ್ಲಾಟಿನಂ  ಕಾರ್ಡ್
 

ಎಲ್ ಐಸಿ ಪ್ಲಾಟಿನಂ ಕಾರ್ಡ್

5 ಲಕ್ಷ ರು. ಗಿಂತ ಅಧಿಕ ಆದಾಯ ಇರುವವರು ಈ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು. 42 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಸ್ಯಾಲರಿ ಸ್ಲಿಪ್ ನೀಡುವುದು ಕಡ್ಡಾಯ. ನೂರು ರು, ವೆಚ್ಚಕ್ಕೆ 2 ರಿವಾರ್ಡ್ ಪಾಯಿಂಟ್. ಬುಕ್ ಮೈ ಶೋ, ವಿಎಲ್ ಸಿಸಿ ಮುಂತಾದವುಗಳ ಮೇಲೆ ಕಾರ್ಡ್ ಆಧಾರದಲ್ಲಿ ವೆಚ್ಚ ಮಾಡಿದರೆ ಅಧಿಕ ಲಾಭ.

ಎಲ್ ಐಸಿ ಸಿಗ್ನಿಚರ್ ಕ್ರೆಡಿಟ್ ಕಾರ್ಡ್

ಎಲ್ ಐಸಿ ಸಿಗ್ನಿಚರ್ ಕ್ರೆಡಿಟ್ ಕಾರ್ಡ್

15 ಲಕ್ಷ ರು. ಗಿಂತ ಅಧಿಕ ಆದಾಯ ಇರುವವರು ಈ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ. ಆಪಲ್, ಕಿಮ್ಯಾ, ಈಡೋಕ್ಸ್ ನಂತಹ ಅಧಿಕ ಮೊತ್ತದ ಬ್ರ್ಯಾಂಡ್ ಗಳ ಖರೀದಿ ಮೇಲೆ ಅಧಿಕ ಲಾಭ ಪಡೆದುಕೊಳ್ಳಬಹುದು.

ಕೊನೆ ಮಾತು

ಕೊನೆ ಮಾತು

ಕಾರ್ಡ್ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ತಕ್ಷಣ ಮಾಹಿತಿ ನೀಡಬೇಕಾದದ್ದು ಅನಿವಾರ್ಯ. ಮರುಪಾವತಿ ವಿಳಂಬ ಮಾಡಿದರೆ 5 ಸಾವಿರ ರು. ವರೆಗೆ ದಂಡ ತುಂಬಬೇಕಾದ ಪರಿಸ್ಥಿತಿ ಬಂದರೂ ಬರಬಹುದು.

English summary

LIC Credit Cards: Know The Different Types And Features

LIC credit cards is a partnership between LIC Cards Services and Axis Bank Ltd. The card company is a 100% subsidiary of LIC which was launched to start Credit Cards in India.
Story first published: Monday, June 6, 2016, 17:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X