For Quick Alerts
ALLOW NOTIFICATIONS  
For Daily Alerts

ವಾರ್ಷಿಕ ಶುಲ್ಕವಿಲ್ಲದ 5 ಬೆಸ್ಟ್ ಕ್ರೆಡಿಟ್ ಕಾರ್ಡ್

By Siddu
|

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಗಳಿಲ್ಲದ ವ್ಯವಹಾರ/ಶಾಪಿಂಗ್ ನೋಡುವುದೇ ಕಷ್ಟ. ಕ್ರೆಡಿಟ್ ಕಾರ್ಡ್ ಗಳ ಬಳಕೆ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ.

ಅದರಲ್ಲೂ ಕ್ರೆಡಿಟ್ ಕಾರ್ಡ್ ಗಳು ಮೇಲ್ವರ್ಗ ಮತ್ತು ಮಧ್ಯಮ ವರ್ಗದವರು ಹಣ ಪಾವತಿಸುವ ಸಾಧನಗಳಾಗಿ ಮಾರ್ಪಟ್ಟಿವೆ. ಇದರಿಂದ ಪ್ರತಿ ಬಾರಿ ಶಾಪಿಂಗ್/ಖರೀದಿಗೆ ಹೋಗುವಾಗ ಜೊತೆಯಲಿ ಹಣ ಒಯ್ಯುವುದನ್ನು ಇವು ತಪ್ಪಿಸುತ್ತವೆ. ಇದು ಈಗ ಖರೀದಿಸಿ ಆಮೇಲೆ ಪಾವತಿಸಿ ಎಂಬ ಪರಿಕಲ್ಪನೆ ಆಗಿದೆ.

ಭಾರತದಲ್ಲಿ ಮೊದಲ ವರ್ಷಕ್ಕೆ ವಾರ್ಷಿಕ ಫೀ ಇಲ್ಲದ ಕೆಲ ಅತ್ಯುತ್ತಮ 5 ಕ್ರೆಡಿಟ್ ಕಾರ್ಡುಗಳಿದ್ದು, ಅವುಗಳ ಮಾಹಿತಿ ಇಲ್ಲಿದೆ ನೋಡಿ...

ಐಸಿಐಸಿಐ ಬ್ಯಾಂಕ್ ಹೆಚ್ಪಿಸಿಎಲ್ ಕೋರಲ್ ಕ್ರೆಡಿಟ್ ಕಾರ್ಡ್

ಐಸಿಐಸಿಐ ಬ್ಯಾಂಕ್ ಹೆಚ್ಪಿಸಿಎಲ್ ಕೋರಲ್ ಕ್ರೆಡಿಟ್ ಕಾರ್ಡ್

ಐಸಿಐಸಿಐ ಬ್ಯಾಂಕ್ HPCL ಕೊರಲ್ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಪವರ್ಪುಲ್ ಕ್ಯಾಶ್ ಬ್ಯಾಕ್ ಅಡಿಯಲ್ಲಿ ಇಂಧನ ವೆಚ್ಚದ ಮೇಲೆ ಮತ್ತು ಇಂಧನ ಮೇಲ್ತೆರಿಗೆ ಮೇಲೆ ಮನ್ನಾ ಇರುತ್ತದೆ.
HPCL ಪಂಪುಗಳಲ್ಲಿ 100 ರೂ. ಇಂಧನಕ್ಕಾಗಿ(ಫ್ಯೂಯಲ್) ವ್ಯಯಿಸಿದರೆ ಐದು ಪೇಬ್ಯಾಕ್ ಪಾಯಿಂಟ್ ಗಳನ್ನು ಗಳಿಸಬಹುದು. ರೂ. 500ರ ಮೊತ್ತದ ಇಂಧನದ(ಫ್ಯೂಯಲ್) ಮೇಲೆ 2000 ಪೇಬ್ಯಾಕ್ ಪಾಯಿಂಟ್ ಗಳನ್ನು ಪಡೆಯಬಹುದಾಗಿದೆ.
* HPCL ಪಂಪುಗಳಲ್ಲಿ ಇಂಧನ ಖರೀದಿಸಿದರೆ 2.5% ಕ್ಯಾಶ್ ಬ್ಯಾಕ್ ಮತ್ತು 2.5% ಅಧಿಕ ಮನ್ನಾ ಕೊಡಲಾಗುತ್ತದೆ.
* ಎರಡು ಸಿನೆಮಾ ಟಿಕೇಟ್ ಗಳ ಮೇಲೆ ತಿಂಗಳಲ್ಲಿ ರೂ. 100 ರಿಯಾಯಿತಿ ಪಡೆಯಿರಿ.
* ಊಟದ ಮೇಲೆ ಕನಿಷ್ಟ 15% ಉಳಿತಾಯವನ್ನು ಮಾಡಬಹುದು. ಅಲ್ಲದೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
* ಮೊದಲ ವರ್ಷಕ್ಕೆ ಶುಲ್ಕ ಇರುವುದಿಲ್ಲ. ನಂತರದಲ್ಲಿ ವರ್ಷಕ್ಕೆ ರೂ. 199 ವಾರ್ಷಿಕ ಶುಲ್ಕ ಮತ್ತು ಸೇವಾ ತೆರಿಗೆ ಇರುತ್ತದೆ.

ಹೆಚ್ಎಸ್ಬಿಸಿ(HSBC) ಪ್ಲಾಟಿನಮ್ ಕ್ರೆಡಿಟ್ ಕಾರ್ಡ್

ಹೆಚ್ಎಸ್ಬಿಸಿ(HSBC) ಪ್ಲಾಟಿನಮ್ ಕ್ರೆಡಿಟ್ ಕಾರ್ಡ್

ಈ ಕಾರ್ಡ್ ಪಡೆದ ದಿನದಿಂದ 90 ದಿನಗಳವರೆಗೆ ಖರ್ಚು ಮಾಡಿದ 10,000 ರೂ.ಗಳ ಮೇಲೆ 10% ಕ್ಯಾಶ್ ಬ್ಯಾಕ್(ನಗದು ಹಿಂದಕ್ಕೆ) ಇರುತ್ತದೆ.
ವಾರ್ಷಿಕ ಶುಲ್ಕ ಮತ್ತು ಸೇರುವ ಶುಲ್ಕದ ಮೇಲೆ ಈ ಕ್ರೆಡಿಟ್ ಕಾರ್ಡ್ ಆಕರ್ಷಿಸುವುದಿಲ್ಲ.

ಹೆಚ್ಡಿಎಫ್ಸಿ ಬ್ಯಾಂಕ್ ಮನಿಬ್ಯಾಕ್ ಕ್ರೆಡಿಟ್ ಕಾರ್ಡ್

ಹೆಚ್ಡಿಎಫ್ಸಿ ಬ್ಯಾಂಕ್ ಮನಿಬ್ಯಾಕ್ ಕ್ರೆಡಿಟ್ ಕಾರ್ಡ್

ಬ್ಯಾಂಕಿನ ವೆಬ್ಸೈಟ್ ಮೂಲಕ ಅರ್ಜಿ ಹಾಕಿದರೆ ಜೀವನ ಪೂರ್ತಿ ಉಚಿತವಾಗಿರುತ್ತದೆ. ಹೆಚ್ಡಿಎಫ್ಸಿ ಬ್ಯಾಂಕ್ ಮನಿಬ್ಯಾಕ್ ಕ್ರೆಡಿಟ್ ಕಾರ್ಡ್ ಮೂಲಕ ರಿವಾರ್ಡ್ ಪಾಯಿಂಟ್ ಗಳನ್ನು ಪಡೆದುಕೊಳ್ಳಬಹುದು.(100ರಿವಾರ್ಡ್ ಪಾಯಿಂಟ್ = 40 ರೂ.)
ನೀವು ಕಾರ್ಡ್ ಪಡೆದ ದಿನದಿಂದ 90 ದಿನಗಳ ಒಳಗಾಗಿ ರೂ. 10,000 ಖರ್ಚು ಮಾಡಿದರೆ ಮೊದಲ ವರ್ಷದ ಶುಲ್ಕ ವ್ಯತಿರಿಕ್ತವಾಗಿ ಸಿಗುತ್ತದೆ. ಅದೇ ರೀತಿ ಒಂದು ವರ್ಷದಲ್ಲಿ ರೂ. 50,000 ಖರ್ಚು ಮಾಡಿದರೆ ನವೀಕರಣ ಶುಲ್ಕದ ಮೇಲೆ ಮಾನ್ಯತೆ ದೊರೆಯುತ್ತದೆ.

ಎಸ್ಬಿಐ ಸಿಂಪ್ಲಿ ಸೇವ್ ಎಸ್ಬಿಐ ಕಾರ್ಡ್

ಎಸ್ಬಿಐ ಸಿಂಪ್ಲಿ ಸೇವ್ ಎಸ್ಬಿಐ ಕಾರ್ಡ್

 ಮೊದಲ ವರ್ಷ 499 ರೂ. ಶುಲ್ಕ ಇರುತ್ತದೆ. ಹಿಂದಿನ ವರ್ಷದ 75,000 ರೂ. ಖರೀದಿಗಿಂತ ಈ ವರ್ಷದ ಖರೀದಿ ಕಡಿಮೆ ಇದ್ದಲ್ಲಿ 499 ರೂ. ಶುಲ್ಕವನ್ನು ವಿಧಿಸಲಾಗುವುದು.
* ದೇಶದಾದ್ಯಂತ ಎಲ್ಲ ಪೆಟ್ರೋಲ್ ಪಂಪುಗಳಲ್ಲಿ ಇಂಧನ ಮೇಲ್ತೆರಿಗೆ ಇರುವುದಿಲ್ಲ.
* ಟ್ಯಾಂಕ್ ತುಂಬಿಸಿದ ಪ್ರತಿ ಬಾರಿಯೂ 2.5% ಇಂಧನ ಮೇಲ್ತೆರಿಗೆ ಉಳಿತಾಯ ಮಾಡಿ.
* ಭೋಜನ, ಚಲನಚಿತ್ರ, ಡಿಪಾರ್ಟ್ಮೆಂಟಲ್ ಮಳಿಗೆ ಮತ್ತು ದಿನಸಿ ಮಳಿಗೆಗಳ ವ್ಯವಹಾರದ ಮೇಲೆ 2.5% ರಿಯಾಯಿತಿ ಪಡೆಯಬಹುದು.
ಅಲ್ಲದೇಎಲ್ಲ ವ್ಯವಹಾರಗಳ ಮೇಲೆ ಕ್ಯಾಶ್ ಪಾಯಿಂಟ್ ಮತ್ತು ಪ್ರತಿಫಲವನ್ನು ಪಡೆದುಕೊಳ್ಳಬಹುದು.

ಆಕ್ಸಿಸ್ ಇನ್ ಸ್ಟಾ ಈಜಿ ಕ್ರೆಡಿಟ್ ಕಾರ್ಡ್

ಆಕ್ಸಿಸ್ ಇನ್ ಸ್ಟಾ ಈಜಿ ಕ್ರೆಡಿಟ್ ಕಾರ್ಡ್

ನಿಮ್ಮ ಕ್ರೆಡಿಟ್ ಮಿತಿಯನ್ನು ಆಧರಿಸಿ ಇದನ್ನು ಬಳಸಬಹುದಾಗಿದೆ. ಎಫ್ಡಿ ಮೂಲ ಬೆಲೆಯ ಶೇ. 80ರ ಮಿತಿಯವರೆಗೆ ನೀವು ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲ ದಿನದಿಂದ ಶೇ. 100ರಷ್ಟು ಹೆಚ್ಚಿನ ನಗದು ವಾಪಸಾತಿ ಸೌಲಭ್ಯ ಪಡೆಯಬಹುದು.
* ಕ್ರೆಡಿಟ್ ಕಾರ್ಡ್ ಮುಖಾಂತರ ವ್ಯಯಿಸಲಾಗುವ ಪ್ರತಿ ರೂ. 200ರ ದೇಶಿ ಖರ್ಚಿನ ಮೇಲೆ 6 ಪಾಯಿಂಟ್ ಗಳನ್ನು ಪಡೆಯಬಹುದು.
* ಕ್ರೆಡಿಟ್ ಕಾರ್ಡ್ ಮುಖಾಂತರ ವ್ಯಯಿಸಲಾಗುವ ಪ್ರತಿ ರೂ. 200ರ ಅಂತರ್ರಾಷ್ಟ್ರೀಯ ಖರ್ಚಿನ ಮೇಲೆ 12 ಪಾಯಿಂಟ್ ಗಳನ್ನು ಪಡೆಯಬಹುದು.
* ಮೊದಲ ಆನ್ಲೈನ್ ವ್ಯವಹಾರದ ಮೇಲೆ 100 ಅಂಕಗಳನ್ನು ಪಡೆಯಬಹುದು.
* ಜನ್ಮದಿನ ಇರುವ ತಿಂಗಳಲ್ಲಿ ಖರ್ಚು ಮಾಡುವುದರಿಂದ 2x ಅಂಕಗಳನ್ನು ಪಡೆಯಬಹುದು.

ಒಟ್ಟಿನಲ್ಲಿ ಅತ್ಯುತ್ತಮವಾದ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದು ಲಾಭದಾಯಕವಾಗಿರುತ್ತವೆ ಹಾಗೂ ಅತ್ಯವಶ್ಯಕವಾಗಿರುತ್ತವೆ. ಅಲ್ಲದೇ ಎಲ್ಲ ಸಮಯಕ್ಕೂ ಉಪಯೋಗಕಾರಿಯಾಗಿವೆ. ಅನೇಕ ಭಿನ್ನ ಭಿನ್ನ ಕ್ರೆಡಿಟ್ ಕಾರ್ಡ್ ಗಳು ಜೀವನಶೈಲಿಗೆ ಅನುಗುಣವಾಗಿ ಲಭ್ಯವಿರುತ್ತವೆ. ಏನೇ ಆದರೂ ನಮಗೆ ಅನುಕೂಲಕರವಾಗಿರುವ ಹೆಚ್ಚೆಚ್ಚು ಲಾಭ, ನಗದು ವಾಪಸಾತಿ, ರಿವಾರ್ಡ್ ಅಂಕಗಳನ್ನು ಕೋಡುವ ಹಾಗೂ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದು ನಮ್ಮ ಜವಾಬ್ಧಾರಿ ಆಗಿರುತ್ತದೆ.

Read more in english: credit cards

Read more in hindi:5 ऐसे क्रेडिट कार्ड, जिन पर नहीं लगता वार्षिक शुल्क

{promotion-urls}

Read more about: money ಹಣ
English summary

5 Best Credit Cards With No Annual Fees In India

credit cards have become a necessary payment instrument for middle and upper-class families, as it avoids carrying cash each time you go out for shopping or maintain balance in your savings account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X