For Quick Alerts
ALLOW NOTIFICATIONS  
For Daily Alerts

ತೆರಿಗೆ ಪಾವತಿಸಿದ ನಂತರ ಏನು ಮಾಡಬೇಕು.. ನಿಮಗಿದು ಗೊತ್ತೆ?

By Siddu Thorat
|

ಜುಲೈ ತಿಂಗಳೆಂದರೆ ತೆರಿಗೆ ಪಾವತಿಸಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಇನ್ನೇನು ಜುಲೈ 31, 2016ಕ್ಕೆ ಕೆಲ ದಿನಗಳಷ್ಟೆ ಬಾಕಿಯಿದ್ದು, ಡೆಡ್ಲೈನ್ ತುಂಬಾ ಹತ್ತಿರವೆ ಇದೆ.

 

ಅದಕ್ಕಾಗಿ ಇಲ್ಲಿಯವರೆಗೆ ತೆರಿಗೆ ಪಾವತಿಸಿದವರು ಮತ್ತು ಮುಂದೆ ತೆರಿಗೆ ಪಾವತಿ ಮಾಡಬೇಕಾದವರು ತೆರಿಗೆ ಕಟ್ಟಿದ ನಂತರ ತಪ್ಪದೆ ಗಮನಿಸಬೇಕಾದ ಕೆಲ ಮುಖ್ಯ ಸಂಗತಿಗಳು ಇಲ್ಲಿವೆ ನೋಡಿ... (ತೆರಿಗೆ ಫೈಲ್ ಮಾಡುವಾಗ ಈ 7 ತಪ್ಪುಗಳನ್ನು ಮಾಡಬೇಡಿ)

ಮನೆಗೆ ಹೋದ ನಂತರ ತೆರಿಗೆ ರಿಟರ್ನ್ಸ್ ತಪ್ಪದೆ ಪರಿಶೀಲಿಸಿ

ಮನೆಗೆ ಹೋದ ನಂತರ ತೆರಿಗೆ ರಿಟರ್ನ್ಸ್ ತಪ್ಪದೆ ಪರಿಶೀಲಿಸಿ

ಕೆಲವರು ತುಂಬಾ ಸರಳವಾಗಿರುವ ವಿಷಯಗಳಲ್ಲಿ ಗೊಂದಲ ಮತ್ತು ತಪ್ಪನ್ನು ಮಾಡುತ್ತಿರುತ್ತಾರೆ. ಉಳಿತಾಯ ಖಾತೆಯ ಒಟ್ಟು ಆದಾಯದಲ್ಲಿ ಬ್ಯಾಂಕಿನ ಬಡ್ಡಿಯನ್ನು ಸೇರಿಸಲು ಯಾವುದೇ ಕಾರಣಕ್ಕೂ ಮರೆಯಬಾರದು ಎಂಬುದನ್ನು ಗಮನಿಸಬೇಕು.
ಆದಾಯದ ಪ್ರಧಾನ ಮೂಲವನ್ನು ಸೇರಿಸುವಾಗ ಎಂದಿಗೂ ತಪ್ಪಿಸಬಾರದು ಮತ್ತು ಅದನ್ನು ಪರಿಶೀಲಿಸಿ ನೋಡಬೇಕು.
ನೆನಪಿಡಿ, ನಿಮಗಿನ್ನು ಜುಲೈ 31, 2016ರ ವರೆಗೆ ಪರಿಷ್ಕರಿಸಲು ಸಮಯವಿದೆ. ಒಂದು ವೇಳೆ ಯಾವುದಾದರೂ ಸಂಗತಿ ಬಿಟ್ಟು ಹೋದಲ್ಲಿ ಅಥವಾ ಸರಿಯಾದ ಮಾಹಿತಿ ತುಂಬದಿದ್ದಲ್ಲಿ ಅದನ್ನು ತೆರಿಗೆ ರಿಟರ್ನ್ಸ್ ಸಮಯದಲ್ಲಿ ತೋರಿಸಿ ಸರಿಪಡಿಸಿಕೊಳ್ಳಿ.

ಬ್ಯಾಂಕು ವಿವರ ಮತ್ತು ವಿಳಾಸ ಖಚಿತಪಡಿಸಿ

ಬ್ಯಾಂಕು ವಿವರ ಮತ್ತು ವಿಳಾಸ ಖಚಿತಪಡಿಸಿ

ಇದು ತುಂಬಾ ಮುಖ್ಯಚಾದ ವಿಚಾರವಾಗಿದೆ. ಯಾವುದೇ ಕಾರಣಕ್ಕೂ ತಪ್ಪಾಗಿ ನಮೂದಿಸಬಾರದು. ಏಕೆಂದರೆ ನೀವು ಕೊಟ್ಟಿರುವ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆಗೆ ತೆರಿಗೆ ಮರುಪಾವತಿ(ರಿಫಂಡ್) ಬರುತ್ತದೆ.
ಒಂದು ವೇಳೆ ಅವರು ಮೇಲಿನ ಮಾಹಿತಿಯನ್ನು ಸರಿಯಾಗಿ ನಮೂದಿಸಿದ್ದರೆ ನಿರ್ಲಕ್ಷಿಸಿ.

ಐಟಿಆರ್ ಪ್ರತಿ ನೀಡಿ
 

ಐಟಿಆರ್ ಪ್ರತಿ ನೀಡಿ

ನೆನಪಿಡಿ, ಬೆಂಗಳೂರಿನ ಕೇಂದ್ರಿಯ ಪ್ರಕ್ರಿಯಾ ಕಚೇರಿಗೆ ನಿಮ್ಮ ITRV (ಐಟಿಆರ್ವಿ) ಫಾರ್ಮ್ ಕಳಿಸುವವರೆಗೆ ಈ ಪ್ರಕ್ರಿಯೆ ಮುಗಿಯುವುದಿಲ್ಲ.
ಫಾರ್ಮ್ ಗಳ ಮೇಲೆ ಸಹಿಯನ್ನು ತಪ್ಪದೆ ಮಾಡಬೇಕು ಅಲ್ಲದೆ ಕೋರಿಯರ್ ಮೂಲಕ ಕಳಿಸಬಾರದು. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದರೆ ಐಟಿಆರ್ ವಿ ಫಾರ್ಮ್ ಪೋಸ್ಟ್ ಮಾಡಬೇಕಾದ ಅಗತ್ಯ ಇರುವುದಿಲ್ಲ.

ಐಟಿ ಇಲಾಖೆಯಿಂದ ಬರುವ ಇ-ಮೇಲ್ ಪರಿಶೀಲಿಸಿ

ಐಟಿ ಇಲಾಖೆಯಿಂದ ಬರುವ ಇ-ಮೇಲ್ ಪರಿಶೀಲಿಸಿ

ತೆರಿಗೆ ರಿಟರ್ನ್ಸ್ ಪಾವತಿಸಿದ ನಂತರ ನಿಮಗೆ ಐಟಿ ಇಲಾಖೆಯಿಂದ ತೆರಿಗೆ ಪಾವತಿಸಿದರ ಬಗ್ಗೆ ಇ-ಮೇಲ್ ಬರುತ್ತದೆ. ಅದನ್ನು ತಪ್ಪದೆ ಪರಿಶೀಲಿಸಿ ಏನಾದರೂ ತಪ್ಪುಗಳಾಗಿವೆಯೇ ಎಂದು ನೋಡಬೇಕು.
ನಿಮ್ಮ ತೆರಿಗೆ ರಿಟರ್ನ್ಸ್ ಪಾವತಿಯಾಗಿರುವುದನ್ನು ಪಡೆದಿದ್ದಾರೆಯೇ ಇಲ್ಲವೆ ಎಂಬುದನ್ನು ಮೇಲ್ ಚೆಕ್ ಮಾಡುವುದರ ಮೂಲಕ ನೋಡುತ್ತಿರಬೇಕು. ಅದರಲ್ಲೂ ಐಟಿಆರ್ ವಿ ಫಾರ್ಮ್ ಪೋಸ್ಟ್ ಕೇಂದ್ರ ಕಚೇರಿಗೆ ತಲುಪಿದೆಯೋ ಇಲ್ಲವೊ ಎಂಬುದನ್ನು ತಪ್ಪದೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.

ಆದಾಯ ತೆರಿಗೆ ಮರುಪಾವತಿ ಪರಿಶೀಲನೆ ಹೇಗೆ?

ಆದಾಯ ತೆರಿಗೆ ಮರುಪಾವತಿ ಪರಿಶೀಲನೆ ಹೇಗೆ?

ನಿಮ್ಮ ಆದಾಯ ತೆರಿಗೆ ಮರುಪಾವತಿ(ರಿಫಂಡ್) ಬಗ್ಗೆ NSDL (ಎನ್ಎಸ್ಡಿಎಲ್) ನಲ್ಲಿ ಪರಿಶೀಲಿಸಬೇಕು.
ಕೆವಲ ನಿಮ್ಮ ಮೌಲ್ಯಮಾಪನ ವರ್ಷ ಮತ್ತು ಪ್ಯಾನ್ ಕಾರ್ಡ್ ನಂಬರನ್ನು ಒತ್ತಿದರೆ ಆದಾಯ ತೆರಿಗೆ ಮರುಪಾವತಿಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

ತೆರಿಗೆ ಕಟ್ಟಲು ಕೊನೆ ದಿನ

ತೆರಿಗೆ ಕಟ್ಟಲು ಕೊನೆ ದಿನ

ಇದೇ ಜುಲೈ 31, 2016 ತೆರಿಗೆ ಪಾವತಿಸಲು ಕೊನೆಯ ದಿನವಾಗಿದೆ. ತೆರಿಗೆ ಕಟ್ಟದೇ ಇದ್ದವರು ಯಾವುದೇ ಗೊಂದಲಗಳನ್ನು ಮಾಡಿಕೊಳ್ಳದೆ ಪಾವತಿಸಿ ನಿರಾಳರಾಗಿ.

Read more: NSDL

Read more: income tax returns

Read more about: tax money ತೆರಿಗೆ ಹಣ
English summary

6 Things To Do After You Have Filed Tax Returns

Let us at the outset emphasize once again that the deadline for filing tax returns is July 31, 2016. For those who have filed their tax returns here are a few things that you should do.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X