For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ(GST) ಬಿಲ್: ಪರಿಷ್ಕೃತ ಅಂಶಗಳು ಮತ್ತು ಜನಸಾಮಾನ್ಯರಿಗೆ ಸಿಗುವ 7 ಮುಖ್ಯ ಲಾಭ

By Siddu
|

ಬಹಳ ಕಾಲದಿಂದ ಬಾಕಿ ಇರುವ ಸರಕು ಮತ್ತು ಸೇವೆ ತೆರಿಗೆ ಮಸೂದೆ ಇಂದು ರಾಜ್ಯಸಭೆ ಕಲಾಪದ ಚರ್ಚೆಯ ಪ್ರಮುಖ ವಿಷಯವಾಗಿದೆ. ಜತೆಗೆ ಅನೇಕ ಪರಿಷ್ಕೃತ ಅಂಶಗಳನ್ನು ಜಿಎಸ್ಟಿ ಮಸೂದೆಯಲ್ಲಿ ಸೇರಿಸಲಾಗಿದೆ.

ಪರಿಷ್ಕೃತ ಅಂಶಗಳು:

1. ಶೇ. ಒಂದರಷ್ಟು ಹೆಚ್ಚು ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ಇಲ್ಲ.
2. ಕೇಂದ್ರ ಮತ್ತು ರಾಜ್ಯಗಳು ಗಾಹೂ ರಾಜ್ಯಗಳ ನಡುವಣ ವರಮಾನ ಹಂಚಿಕೆ ವಿವಾದ ಪರಿಹಾರಕ್ಕೆ ಜಿಎಸ್ಟಿ ಮಂಡಳಿ ರಚನೆ
3. ಜಿಎಸ್ಟಿ ಜಾರಿಗೆ ಬಂದು ಐದು ವರ್ಷಗಳವರೆಗೆ ರಾಜ್ಯಗಳಿಗೆ ಆಗುವ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಲಿದೆ.
4. ಕೇಂದ್ರ ಜಿಎಸ್ಟಿ ಮತ್ತು ಸಮಗ್ರ ಜಿಎಸ್ಟಿಯನ್ನು ನಿಯಮಾನುಸಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗುವುದು.
5. ಜಿಎಸ್ಟಿಯಲ್ಲಿ ರಾಜ್ಯಗಳ ಪಾಲು ಭಾರತ ಸರ್ಕಾರದ ಸಂಚಿತ ನಿಧಿಯ ಭಾಗ ಆಗಿರುವುದಿಲ್ಲ.
6. ಮಸೂದೆಯಲ್ಲಿ ವರಮಾನ ಹಂಚಿಕೆ ವಿವರಿಸುವ ಕಲಂ 12ರಲ್ಲಿ ಸಮಗ್ರ ಜಿಎಸ್ಟಿ ಎಂಬ ಪದ ಬಳಕೆಯೇ ಇರುವುದಿಲ್ಲ. ಅದರ ಬದಲಿಗೆ ಅಂತರರಾಜ್ಯ ವ್ಯಾಪಾರ ಅಥವಾ ವಹಿವಾಟಿನನಲ್ಲಿ ಪೂರೈಕೆಯ ಮೇಲೆ ಹೇರಲಾಗುವ ಸರಕು ಮತ್ತು ಸೇವೆಗಳ ತೆರಿಗೆ ಎಂಬ ಅಂಶವನ್ನು ಸೇರಿಸಲಾಗಿದೆ.

ಒಟ್ಟಿನಲ್ಲಿ ಜಿಎಸ್ಟಿ ಬಿಲ್ ಅಂಗೀಕಾರಕ್ಕಾಗಿ ಸದನದಲ್ಲಿ ಹಾಜರಿರುವ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಅಗತ್ಯ ಇದೆ.

ಈ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ ಬಿಲ್ ಅಥವಾ GST (Goods and Services Tax Bill) ಬಿಲ್ ಪಾಸ್ ಆದರೆ ಅನೇಕ ಲಾಭಗಳು ದೊರೆಯಲಿವೆ.

ಒಂದು ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವವರೆಗೆ ಅನೇಕ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆದರೆ ಜಿಎಸ್ಟಿ ಬಿಲ್ ಜಾರಿ ಆದರೆ ಉತ್ಪಾದನೆ, ಮಾರಾಟ ಮತ್ತು ಬಳಕೆ ಮೇಲೆ ಭಾರತದಾದ್ಯಂತ ಏಕರೂಪದ ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. ಇದರಿಂದಾಗಿ ದೇಶದ ಅಭಿವೃದ್ಧಿಯಲ್ಲಿ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಲ್ಲಿ ತುಂಬಾ ಪ್ರಯೋಜನಕಾರಿ ಆಗಲಿದೆ. (ಜಿಎಸ್ಟಿ(GST) ಬಿಲ್ ಜಾರಿ ಸಾಧ್ಯತೆ: 9 ಲಾಭ ತಪ್ಪದೆ ಪಡೆಯಿರಿ)

ಜನಸಾಮಾನ್ಯರಿಗೆ ಜಿಎಸ್ಟಿ ಬಿಲ್ ಮೂಲಕ ಸಿಗುವ 7 ಲಾಭಗಳು ಇಲ್ಲಿವೆ.

ಕಡಿಮೆ ಭ್ರಷ್ಟಾಚಾರ

ಕಡಿಮೆ ಭ್ರಷ್ಟಾಚಾರ

ಜಿಎಸ್ಟಿ ಇದೊಂದು ಏಕರೂಪದ ತೆರಿಗೆ ಆಗಿದ್ದು, ವಿವಿಧ ರೀತಿಯ ತೆರಿಗೆಗಳು ಒಂದೇ ನಿಯಮದ ಅಡಿ ಒಳಗೊಳ್ಳುವಂತೆ ಮಾಡುತ್ತದೆ. ನಮ್ಮ ವ್ಯವಸ್ಥೆಯಲ್ಲಿ ದಕ್ಷತೆ ತರುವಲ್ಲಿ ಸಹಾಯಕವಾಗಿದ್ದು, ಭ್ರಷ್ಟಾಚಾರದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದೆ. ಇದು ಜನಸಾಮಾನ್ಯರಿಗೆ ಒಂದು ದೊಡ್ಡ ವರವಾಗಲಿದೆ.

ಬೆಲೆಗಳಲ್ಲಿ ಪತನ

ಬೆಲೆಗಳಲ್ಲಿ ಪತನ

ಹಿಂದುಸ್ಥಾನ ಲೀವರ್ ಮತ್ತು ಗೊದ್ರೆಜ್ ನಂತಹ ಬೃಹತ್ FMCG ಕಂಪನಿಗಳು ವೇರ್ ಹೌಸಿಂಗ್ ಮತ್ತು ಲಾಜಿಸ್ಟಿಕ್ ಮೇಲಿನ ವೆಚ್ಚವನ್ನು ಕಡಿತಗೊಳಿಸಿವೆ. ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದಾಗ ಸೋಪ್, ಟೂತ್ ಪೇಸ್ಟ್ ನಂತಹ ಉತ್ಪನ್ನಗಳ ಮೇಲಿನ ಬೆಲೆ ಕಡಿಮೆಯಾಗುತ್ತದೆ. ಕಂಪನಿಗಳು ಬೆಲೆಯನ್ನು ಖಚಿತವಾಗಿ ಕಡಿಮೆ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ.

ಸಣ್ಣ ಕಾರುಗಳು

ಸಣ್ಣ ಕಾರುಗಳು

ಸಣ್ಣ ಕಾರುಗಳ ಬೆಲೆ ಕಡಿಮೆಯಾದರೆ ತೆರಿಗೆಯೂ ಕೂಡ 24% ರಿಂದ 18% ಇಳಿಕೆಯಾಗುತ್ತದೆ. ಆಗ ಜಿಎಸ್ಟಿ ತೆರಿಗೆ ದರ ಕೂಡ 18% ರಷ್ಟಾಗುತ್ತದೆ.
ಉತ್ಪಾದಕರು ಗ್ರಾಹಕರಿಗೆ ಲಾಭವನ್ನು ವರ್ಗಾಯಿಸಿದರೆ ಗ್ರಾಹಕರು ಭರಿಸುವ ತೆರಿಗೆಯಲ್ಲಿ ಇಳಿಕೆಯಾಗುತ್ತದೆ.

ಸಿನೆಮಾ ಟಿಕೇಟುಗಳು

ಸಿನೆಮಾ ಟಿಕೇಟುಗಳು

ಇತ್ತೀಚಿನ ದಿನಗಳಲ್ಲಿ ಮನರಂಜನೆಯ ಮೇಲಿನ ತೆರಿಗೆ ತುಂಬಾ ಹೆಚ್ಚಾಗುತ್ತಿದೆ. ಕಾರಣ ಮಲ್ಟಿಪ್ಲೆಕ್ಷ್ ಹೆಚ್ಚು ಟಿಕೇಟ್ ದರವನ್ನು ವಿಧಿಸುತ್ತಿವೆ.
ಒಂದು ವೇಳೆ ಜಿಎಸ್ಟಿ ತೆರಿಗೆ ದರ 18%ರಷ್ಟು ಇದ್ದರೆ ಮನರಂಜನೆಯ ಮೇಲಿನ ದರವು ಕಡಿಮೆಯಾಗುತ್ತದೆ. ಹೀಗಾದಲ್ಲಿ ಮಾತ್ರ ಕಂಪನಿಗಳು ದರವನ್ನು ಕಡಿತಗೊಳಿಸುತ್ತವೆ.

ಪೆಂಟಿಂಗ್ ಉತ್ಪನ್ನಗಳು

ಪೆಂಟಿಂಗ್ ಉತ್ಪನ್ನಗಳು

ಈ ವ್ಯವಹಾರದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ತೆರಿಗೆಯಿಂದ ತಪ್ಪಿಸಿಕೊಳ್ಳಬೇಕೆಂದು ತುಂಬಾ ಸ್ಪರ್ಧೆ ಏರ್ಪಟ್ಟಿದೆ. ಈ ಕಂಪನಿಗಳು ಈಗ ಜಿಎಸ್ಟಿ ಅನುಷ್ಠಾನದ ಪರಿಧಿಯಲ್ಲಿ ಬರುವುದರಿಂದ ದೊಡ್ಡ ಕಂಪನಿಗಳು ಸಹ ತನ್ನ ಬೆಲೆಗಳನ್ನು ಕಡಿಮೆಗೊಳಿಸಬೇಕಾಗುತ್ತದೆ.

ಇನ್ನೀತರ ಉತ್ಪನ್ನಗಳ ದರಗಳು

ಇನ್ನೀತರ ಉತ್ಪನ್ನಗಳ ದರಗಳು

ಅಸಂಘಟಿತ ವಲಯದ ವಿದ್ಯುತ್ ತಂತಿ ಮತ್ತು ಮರದ ಉತ್ಪನ್ನಗಳ ಕಂಪನಿಗಳು ಸಹ ವೆಚ್ಚವನ್ನು ಕಡಿಮೆ ಮಾಡಿರುವುದನ್ನು ನೋಡಬಹುದು. ಇವು ಬೃಹತ್ತ ಕಂಪನಿಗಳು ಸಹ ಬೆಲೆಯನ್ನು ಕಡಿಮೆಗೊಳಿಸುವಂತೆ ಮಾಡುತ್ತವೆ.

ಉದ್ಯೋಗ ಸೃಷ್ಟಿ

ಉದ್ಯೋಗ ಸೃಷ್ಟಿ

ಜಿಎಸ್ಟಿಯು ದೇಶದ ಜಿಡಿಪಿಯನ್ನು 2%ರಷ್ಟು ಹೆಚ್ಚಳ ಮಾಡುವಲ್ಲಿ ಮುಂದಾಳತ್ವ ವಹಿಸುವುದರಿಂದ ಇದು ಉದ್ಯೋಗ ಸೃಷ್ಟಿಯಲ್ಲಿ ಸಹಾಕವಾಗುತ್ತದೆ.

Read more about: tax money ತೆರಿಗೆ ಹಣ
English summary

GST Bill: Revised Factors and 7 Ways The Common Man Will Benefit

The GST looks increasingly like becoming a reality and may be cleared in the Rajya Sabha's monsoon session of parliament. It will make way for a single tax, doing away with the several taxes that are applicable today from the time a product is manufactured until it is sold.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X