For Quick Alerts
ALLOW NOTIFICATIONS  
For Daily Alerts

ತಿಂಗಳ ಸಂಬಳದ ಮೇಲೆ ತೆರಿಗೆ ಉಳಿಸಲು 8 ಮಾರ್ಗ

By Siddu Thorat
|

ನಮ್ಮ ದೇಶದಲ್ಲಿ ಹೆಚ್ಚಿನ ಜನರು ತಿಂಗಳ ಸಂಬಳದ ಮೇಲೆಯೇ ಜೀವನ ನಡೆಸುತ್ತಿರುವುದರಿಂದ ತಿಂಗಳು ಮುಗಿಯುವುದನ್ನೆ ಕಾಯುತ್ತಿರುತ್ತೇವೆ. ಏಕೆಂದರೆ ಅಷ್ಟೊಂದು ಹಣದ ಅಗತ್ಯತೆ, ಬೇರೆ ಬೇರೆ ಕಮಿಟ್ಮೆಂಟ್ ಇರುತ್ತದೆ. ಅದರಲ್ಲೂ ತಿಂಗಳ ಸಂಬಳದ ಮೇಲೆ ತೆರಿಗೆ ಎಂದರೆ ಬೇಸರ ಅಲ್ಲವೆ?

ಹೀಗಾಗಿ ನೀವು ತಿಂಗತಿಂಗಳು ಸಂಬಳ ಪಡೆಯುತ್ತಿದ್ದರೆ ನಿಮ್ಮ ಸಂಬಳದ ಮೇಲಿನ ತೆರಿಗೆಯನ್ನು ಉಳಿಸಲು ಸಹಕಾರಿಯಾಗಬಲ್ಲ 8 ಸ್ಮಾರ್ಟ್ ದಾರಿಗಳು ಇಲ್ಲಿವೆ ನೋಡಿ... [ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು]

ಊಟದ ರಶೀದಿ ಆಯ್ಕೆ

ಊಟದ ರಶೀದಿ ಆಯ್ಕೆ

ನಿಮ್ಮ ಕಂಪನಿ ಊಟದ ರಶೀದಿಯನ್ನು ಒದಗಿಸುತ್ತಿದ್ದರೆ ಅದರ ಸದುಪಯೋಗ ಮಾಡಿಕೊಳ್ಳಿ. ನೀವು ಅದರ ಮೇಲೆ ರೂ. 30,000 ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಅಂದರೆ ಹೆಚ್ಚು ತೆರಿಗೆ ಪಾವತಿಸುವವರ ಯಾದಿಯಲ್ಲಿ ನೀವಿದ್ದರೆ ತೆರಿಗೆಯಲ್ಲಿ ರೂ. 10,000 ಉಳಿಸಬಹುದಾಗಿದೆ.

ವಾಹನ ಭತ್ಯೆ

ವಾಹನ ಭತ್ಯೆ

ಕಚೇರಿ ಸಂಬಂಧಿ ಕೆಲಸಗಳಿಗಾಗಿ ಪ್ರಯಾಣ ಮಾಡಿ ಖರ್ಚುವೆಚ್ಚಗಳಿಗೆ ನೀವು ಒಳಗಾಗುತ್ತಿದ್ದಲ್ಲಿ ನಿಮ್ಮ ಸಂಬಳ ವಾಹನ ಭತ್ಯೆ ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಾಹನ ಭತ್ಯೆ ತಿಂಗಳಿಗೆ ರೂ. 1,600 ಇರುತ್ತದೆ. ಆದ್ದರಿಂದ ವರ್ಷಕ್ಕೆ ರೂ. 19,200 ತೆರಿಗೆ ಪ್ರಯೋಜನಗಳನ್ನು ನೀವು ಪಡೆಯಬಹುದಾಗಿದೆ. ಒಂದು ವೇಳೆ ನೀವು 10% ತೆರಿಗೆ ಪಾವತಿಸುವವರ ಪಟ್ಟಿಯಲ್ಲಿದ್ದರೆ ಹೆಚ್ಚುಕಡಿಮೆ ರೂ. 2000 ಉಳಿಸಬಹುದು. ಹೆಚ್ಚು ತೆರಿಗೆ ಪಾವತಿಸುವವರ ಯಾದಿಯಲ್ಲಿರುವವರು ಹೆಚ್ಚು ಕಡಿಮೆ ತೆರಿಗೆಗನುಸಾರವಾಗಿ ರೂ. 3840 ಉಳಿಸಬಹುದಾಗಿದೆ.

ಭತ್ಯೆಗಳು

ಭತ್ಯೆಗಳು

ತೆರಿಗೆಯನ್ನು ಉಳಿಸಲು ಸಹಕಾರಿಯಾಗಬಲ್ಲ ಅನೇಕ ಭತ್ಯೆಗಳು ಇವೆ. ಉದಾಹರಣೆಯಾಗಿ ನೀವು ದೂರವಾಣಿ ಖರ್ಚು ಮಾಡಿಕೊಳ್ಳುತ್ತಿದ್ದರೆ ಇದು ನಿಮ್ಮ ಸಂಬಳದ ಭಾಗವಾಗಿರುವುದಿಲ್ಲ. ಬದಲಾಗಿ ಇದು ಭತ್ಯೆಯ ಬಾಗವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಕೆಲವು ಭತ್ಯೆಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ.

LTA (ಎಲ್ಟಿಎ)

LTA (ಎಲ್ಟಿಎ)

ಒಂದು ವೇಳೆ ನಿಮ್ಮ ಕಂಪನಿ LTA ಕೊಡದಿದ್ದಲ್ಲಿ ಅದನ್ನು ಸಂಬಂಧಪಟ್ಟವರಿಗೆ ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು. LTA ಮೇಲೆ ತೆರಿಗೆ ವಿನಾಯಿತಿ ಇದ್ದು, ಅದಾಗ್ಯೂ, ನೀವು ಕಡ್ಡಾಯವಾಗಿ ಪ್ರಯಾಣದ ವಿವರ ಮತ್ತು ಬಿಲ್ಲುಗಳನ್ನು ಸಲ್ಲಿಸಬೇಕು.

ಪಿಪಿಎಫ್ ಖಾತೆ ಹೆಚ್ಚಿಸಿ

ಪಿಪಿಎಫ್ ಖಾತೆ ಹೆಚ್ಚಿಸಿ

ಆದಾಯ ತೆರಿಗೆ ಕಾಯಿದೆಯ 80C ಸೆಕ್ಷನ್ ಅಡಿಯಲ್ಲಿ ಪಿಪಿಎಫ್ ಖಾತೆಯ ಮೇಲೆ ತೆರಿಗೆ ವಿನಾಯಿತಿ ಇರುತ್ತದೆ.
ಪಿಪಿಎಫ್ ಮೊತ್ತವನ್ನು ಹೆಚ್ಚಿಸುವುದರಿಂದ ನಿಮಗೆ ತೆರಿಗೆ ಮೇಲೆ ಉತ್ತಮ ವಿನಾಯಿತಿ ಲಭ್ಯವಿರುತ್ತದೆ.

ವೈದ್ಯಕೀಯ ಬಿಲ್ಲುಗಳನ್ನು ಸಲ್ಲಿಸಿ

ವೈದ್ಯಕೀಯ ಬಿಲ್ಲುಗಳನ್ನು ಸಲ್ಲಿಸಿ

ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಸಲ್ಲಿಸುವುದನ್ನು ಮರೆಯಬೇಡಿ. ಇದರಿಂದಾಗಿ ನಿಮಗೆ ರೂ. 15,000 ತೆರಿಗೆ ಮುಕ್ತಿ ಸಿಗುತ್ತದೆ. ಇದು ನಿಮಗಾಗಿ ಅಥವಾ ನಿಮ್ಮನ್ನು ಅವಲಂಬಿಸಿದವರಿಗಾಗಿ ವೆಚ್ಚ ಮಾಡಬಹುದು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಕೇವಲ ತೆರಿಗೆ ಕಡಿತಗೊಳಿಸುವುದಕ್ಕಾಗಿ ತಪ್ಪು ಮಾಹಿತಿ ಕೊಡುವಂತಿಲ್ಲ.

80C ಸೆಕ್ಷನ್ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ

80C ಸೆಕ್ಷನ್ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ

ತೆರಿಗೆ ಉಳಿಸುವ ಬಹುಮುಖ್ಯ ವಿಧಾನ ಇದಾಗಿದೆ. ಎಲ್ಐಸಿ, ಪಿಪಿಎಫ್, ಇಪಿಎಫ್, ಗೃಹ ಸಾಲ ಇತ್ಯಾದಿಗಳ ಮೇಲೆ ಹೆಚ್ಚು ಹೂಡಿಕೆ ಮಾಡುವುದರಿಂದ 80C ಸೆಕ್ಷನ್ ಅಡಿಯಲ್ಲಿ ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. 1.5 ಲಕ್ಷದ ಒಳಗಿನ ಮೊತ್ತಕ್ಕೆ 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಲಾಭಗಳನ್ನು ಪಡೆಯಬಹುದಾಗಿದೆ.

ಸಮಯಕ್ಕೆ ಸರಿಯಾಗಿ ದಾಖಲಾತಿಗಳನ್ನು ಸಲ್ಲಿಸಿ

ಸಮಯಕ್ಕೆ ಸರಿಯಾಗಿ ದಾಖಲಾತಿಗಳನ್ನು ಸಲ್ಲಿಸಿ

ನೀವು ಸಮಯಕ್ಕೆ ಸರಿಯಾಗಿ ದಾಖಲಾತಿಗಳನ್ನು ಸಲ್ಲಿಸುವುದರಿಂದ ತಿಂಗಳ ಅಂತ್ಯದಲ್ಲಿ ಟಿಡಿಎಸ್ ನಿಂದಾಗಿ ಮೊತ್ತದಲ್ಲಿ ಕಡಿತವಾಗುವುದಿಲ್ಲ.

read more: ಸಂಬಳ

Read more about: money tax ಹಣ ತೆರಿಗೆ
English summary

8 Smart Ways To Save Tax On Your Salary

If you are getting a salary, there are various ways in which you can save money from it. Take a look at 8 smart ways to save tax on your salary.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X