For Quick Alerts
ALLOW NOTIFICATIONS  
For Daily Alerts

9 ಹಣಕಾಸು ಸಲಹೆ: ದಂಪತಿಗಳು ಪಾಲಿಸಿದರೆ ಬಾಳು ಬಂಗಾರ...

ದಂಪತಿಗಳಿಬ್ಬರೂ ಸೇರಿ ಹಣಕಾಸು ಸಂಬಂಧಿ ಚರ್ಚೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದು ಉತ್ತಮ. ಅಪಾಯದ ಸಂದರ್ಭಗಳಲ್ಲಿ ಹಣಕಾಸಿನ ನಿರ್ವಹಣೆ ತುಂಬಾ ಕಷ್ಟಕರ ಎಂಬುದು ಎಲ್ಲರಿಗೂ ಗೊತ್ತು.

|

ಗಂಡ ಹೆಂಡತಿ ಇಬ್ಬರೂ ಬಾಳ ಬಂಡಿಯ ಎರಡು ಚಕ್ರಗಳಿಂದಂತೆ. ಈ ಎರಡು ಚಕ್ರಗಳು ಅನೋನ್ಯವಾಗಿ ಸಾಗಬೇಕಾಗುತ್ತದೆ. ಇಲ್ಲದಿದ್ದರೆ ಜೀವನ ಸುಡುಗಾಡು ಆಗಿಬಿಡುತ್ತದೆ.

 

ಹೀಗಾಗಿ ದಂಪತಿಗಳಿಬ್ಬರೂ ಸೇರಿ ಹಣಕಾಸು ಸಂಬಂಧಿ ಚರ್ಚೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದು ಉತ್ತಮ. ಅಪಾಯದ ಸಂದರ್ಭಗಳಲ್ಲಿ ಹಣಕಾಸಿನ ನಿರ್ವಹಣೆ ತುಂಬಾ ಕಷ್ಟಕರ ಎಂಬುದು ಎಲ್ಲರಿಗೂ ಗೊತ್ತು. ಆದರೂ ಹಣಕಾಸಿನ ಸ್ಥಿರತೆಗಾಗಿ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಬಜೆಟ್ ಮತ್ತು ಹೂಡಿಕೆಯ ವಿಚಾರಗಳಲ್ಲಿ ದಂಪತಿಗಳಿಬ್ಬರಲ್ಲೂ ಹೊಂದಾಣಿಕೆ ಹಾಗೂ ಹಣಕಾಸಿನ ಆದ್ಯತೆಗೆ ಅನುಗುಣವಾದ ಜಾಣ ನಡೆ ಇರಲೇಬೇಕಾಗುತ್ತದೆ.

ಗಂಡ ಹೆಂಡತಿಗಳಿಬ್ಬರೂ ದುಡಿಯುತ್ತಿದ್ದರೆ ಒಬ್ಬರ ಹೆಚ್ಚುವರಿ ಆದಾಯವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮತ್ತು ಹೂಡಿಕೆ ಮಾಡುವುದು ತುಂಬಾ ಮುಖ್ಯ.
ಹೀಗಾಗಿ ದುಡಿಯುವ ದಂಪತಿಗಳು ಉಳಿತಾಯ, ಹೂಡಿಕೆ ಮಾಡಲು ಮತ್ತು ಮುಂದಿನ ಭವಿಷ್ಯಕ್ಕಾಗಿ ಯೋಜನೆ ಮಾಡಲು ಸಹಕಾರಿಯಾಗಬಲ್ಲ ಕೆಲ ಹಣಕಾಸು ಸಲಹೆಗಳು ಇಲ್ಲಿವೆ ನೋಡಿ... (ಹೆಚ್ಚು ಲಾಭ ಕೊಡುವ 7 ಹೂಡಿಕೆ)

ಬಜೆಟ್ ಪ್ಲಾನ್ ಮಾಡಿ

ಬಜೆಟ್ ಪ್ಲಾನ್ ಮಾಡಿ

ಖರ್ಚು ವೆಚ್ಚಗಳ ಮೇಲೆ ಬಜೆಟ್ ಪ್ಲಾನ್ ಮಾಡುವುದರಿಂದ ಅನವಶ್ಯಕ ಶಾಪಿಂಗ್ ಮತ್ತು ಖರೀದಿಯನ್ನು ತಡೆಯಬಹುದು. ಸರಿಯಾದ ಯೋಜನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಎಲ್ಲರೂ ಪಾಲಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ಬಜೆಟ್ ಯೋಜನೆ ಕಡ್ಡಾಯವಾಗಿ ಪಾಲಿಸಿ.

ಹೂಡಿಕೆ ಯೋಜನೆ

ಹೂಡಿಕೆ ಯೋಜನೆ

ಹಣಕಾಸಿನ ಅಗತ್ಯತೆ ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ ದಂಪತಿಗಳಿಬ್ಬರೂ ಚರ್ಚಿಸಿ ಹೂಡಿಕೆ ಮಾಡುವುದು ಉತ್ತಮ ನಡೆ. ಏಕೆಂದರೆ ಪ್ರತಿಯೊಬ್ಬರಿಗೂ ಹೂಡಿಕೆ ಮಾಡಬೇಕು ಎಂಬ ಆಸಕ್ತಿ ಇರುತ್ತದೆ. ಕೆಲವರು ಅವರವರ ಇಷ್ಟಕ್ಕೆ ಅನುಗುಣವಾಗಿ ಅಪಾಯವಿಲ್ಲದ ಮತ್ತು ಅಪಾಯವಿರುವ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಾರೆ.

ಜಂಟಿ ಖಾತೆ
 

ಜಂಟಿ ಖಾತೆ

ಸಂಬಳ ಖಾತೆಯನ್ನು ಹೊರತುಪಡಿಸಿ ದಂಪತಿಗಳಿಬ್ಬರೂ ಜಂಟಿ ಖಾತೆ ಹೊಂದುವುದು ಉತ್ತಮ ಸಂಗತಿ. ಯಾರಾದರೊಬ್ಬರೂ ಹೊರಗಡೆ ಅಥವಾ ಊರಿಗೆ ಹೋದಾಗ ಅಗತ್ಯ ಸಂದರ್ಭಗಳಲ್ಲಿ ಖಾತೆಯನ್ನು ಬಳಸಲು ಅನುಕೂಲವಾಗುತ್ತದೆ. ಅನೇಕ ವಿಧದ ಜಂಟಿ ಖಾತೆಗಳಿದ್ದು ದಂಪತಿಗಳು ತಮ್ಮ ಅನುಕೂಲಕ್ಕೆ ತಕ್ಕ ಖಾತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ತುರ್ತು ನಿಧಿ

ತುರ್ತು ನಿಧಿ

ಕಷ್ಟಕರ ಅಥವಾ ತಾತ್ಕಾಲಿಕ ಸಂದರ್ಭಗಳಲ್ಲಿ ಹೆಚ್ಚಿನ ಮೊತ್ತದ ಹಣ ಬೇಕಾಗಬಹುದು. ಅಥವಾ ಯಾರಿಗಾದರೂ ಆದಾಯ ಇಲ್ಲದೆ ಇರಬಹುದು. ಅಂತಹ ಸಂದರ್ಭಗಳ ಉಪಯೋಗಕ್ಕಾಗಿ ತುರ್ತು ನಿಧಿಯನ್ನು ಇಟ್ಟುಕೊಳ್ಳುವುದು ಕ್ಷೇಮಕರ. ಇಲ್ಲದಿದ್ದರೆ ಅಂತಹ ಸನ್ನಿವೇಶಗಳಲ್ಲಿ ಸಾಲವನ್ನು ಪಡೆಯಬೇಕಾಗುತ್ತದೆ.

ಸಾಲ ತೆಗೆದುಕೊಳ್ಳುವುದು ತಪ್ಪಿಸಿ

ಸಾಲ ತೆಗೆದುಕೊಳ್ಳುವುದು ತಪ್ಪಿಸಿ

ಸಾಲ ಪಡೆಯುವುದೆಂದರೆ ಒಂದು ಸಲ ಎದೆ ನಡಗುತ್ತದೆ. ಸಾಲ ಪಡೆಯುವುದು ಸರಳ. ಆದರೆ ತೀರಿಸುವುದು ತುಂಬಾ ಕಷ್ಟ. ಒಬ್ಬರು ವೈಯಕ್ತಿಕ ಸಾಲ ಪಡೆಯುವುದು ಮತ್ತು ಇನ್ನೊಬ್ಬರು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ತೊಂದರೆ ಇಲ್ಲ.

ಜಂಟಿ ಗೃಹ ಸಾಲ ಲಭ್ಯ

ಜಂಟಿ ಗೃಹ ಸಾಲ ಲಭ್ಯ

ಇದು ಉತ್ತಮವಾದ ಆಯ್ಕೆ ಆಗಿದ್ದು, ಹೂಡಿಕೆ ಮಾಡಲು ಮತ್ತು ತೆರಿಗೆಯಿಂದ ಮುಕ್ತಿ ಪಡೆಯಲು ಇದು ಅತ್ಯುತ್ತಮ ಮಾರ್ಗ. ಒಟ್ಟಿಗೆ ಒಬ್ಬರು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು. ಮಹಿಳೆಯ ಹೆಸರಿನಲ್ಲಿ ಗೃಹಸಾಲ ಪಡೆದರೆ ಬಡ್ಡಿದರದ ಮೇಲೆ ವಿಶೇಷ ರಿಯಾಯಿತಿ ಇರುತ್ತದೆ.

ಹೆಚ್ಆರ್ ಎ (HRA)

ಹೆಚ್ಆರ್ ಎ (HRA)

ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಹೆಚ್ಆರ್ಎ ವಿಭಾಗಿಸಬೇಕು. ಹೀಗೆ ಮಾಡುವುದರಿಂದ ಆದಾಯ ತೆರಿಗೆ ಕಾಯಿದೆಯ 80C ಸೆಕ್ಷನ್ ಅಡಿಯಲ್ಲಿ ಇಬ್ಬರು ಹೆಚ್ಆರ್ಎ ಪ್ರಯೋಜನಗಳನ್ನು ಪಡೆಯಬಹುದು.

ವಿಮೆ/ಇನ್ಸೂರೆನ್ಸ್

ವಿಮೆ/ಇನ್ಸೂರೆನ್ಸ್

ದಂಪತಿಗಳು ತಮ್ಮ ಹೆಸರಿನಲ್ಲಿ ಪ್ರತ್ಯೇಕ ಅವಧಿಯ ವಿಮೆಗಳನ್ನು ಹೊಂದಿರಬೇಕು. ಅಲ್ಲದೆ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರಿಂದ ಅಗತ್ಯ ಸಂದರ್ಭದಲ್ಲಿ ಆಪತ್ ಬಾಂಧವನಾಗಿ ಸಹಾಯಕ್ಕೆ ಬರುತ್ತದೆ. ದಂಪತಿಗಳಿಗಾಗಿಯೇ ಅನೇಕ ಕಂಪನಿಗಳು ವಿಭಿನ್ನ ಅವಧಿಯ ವಿಮೆಗಳನ್ನು ಪ್ರಾರಂಭಿಸಿವೆ.

ಮಕ್ಕಳ ಭವಿಷ್ಯ ನಿಧಿ

ಮಕ್ಕಳ ಭವಿಷ್ಯ ನಿಧಿ

ಮಕ್ಕಳ ಭವಿಷ್ಯಕ್ಕಾಗಿ ನವ ದಂಪತಿಗಳು ಹಾಗೂ ಪಾಲಕರು ಮುಂಜಾಗ್ರತಾ ಕ್ರಮ ವಹಿಸುವುದು ತುಂಬಾ ಮುಖ್ಯ. ಅದರಲ್ಲೂ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ತಗಲುವುದರಿಂದ ಪ್ರತ್ಯೇಕವಾಗಿ ಹಣ ತೆಗೆದಿಡುವುದು ಮುಂಜಾಗ್ರತೆ ದೃಷ್ಟಿಯಿಂದ ಒಳ್ಳೆಯದು. ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು.

Read more: personal finance, money management, ಬಂಡವಾಳ ಹೂಡಿಕೆ

English summary

9 Financial Tips For Smart Working Couples In India

Financial decisions are always better when taken together. Initially, couples may find it difficult to manage their finances due to differences in penchant for risk and priorities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X