For Quick Alerts
ALLOW NOTIFICATIONS  
For Daily Alerts

ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡುತ್ತಿಲ್ಲವೆ? ಇಲ್ಲಿವೆ 7 ದಾರಿ

By Siddu Thorat
|

ಮಕ್ಕಳ ಭವಿಷ್ಯ ಮತ್ತು ಶಿಕ್ಷಣ ಉಜ್ವಲವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಬಹುದೊಡ್ಡ ಕನಸಾಗಿರುತ್ತದೆ. ಆದರೆ ಈ ನಿಟ್ಟಿನಲ್ಲಿ ನೀವು ಸರಿಯಾದ ವಿಧಾನಗಳಲ್ಲಿ ಉಳಿತಾಯ ಮತ್ತು ಹೂಡಿಕೆ ಮಾಡುತ್ತಿದ್ದಿರಾ?

 

ಮಕ್ಕಳ ಯೋಜನೆಗಳಿಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಅನೇಕ ವಿಮಾ ಕಂಪನಿಗಳು ಬಗೆಬಗೆಯ ಸ್ಕೀಮ್ ಗಳನ್ನು ಘೋಷಿಸಿವೆ. ಅನೇಕ ವಿಧದ ವಿಮೆಗಳ ಮೇಲೆ ಹೂಡಿಕೆ ಮಾಡಬಹುದಾಗಿದೆ. ಲಭ್ಯವಿರುವ ಇರುವಂತಹ ಅನೇಕ ವಿಮಾ ಯೋಜನೆಗಳಲ್ಲಿ ಯಾವುದು ಉತ್ತಮ? ಯಾವುದರ ಮೇಲೆ ಹೂಡಿಕೆ ಮಾಡಬೇಕು? ಯಾವುದು ಹೆಚ್ಚು ಲಾಭದಾಯಕ? ಹೀಗೆ ಅನೇಕ ಕಷ್ಟಕರ ಗೊಂದಲಗಳು, ಯಾವುದನ್ನು ಆಯ್ಕೆ ಮಾಡುವುದು, ಎಷ್ಟು ಹೂಡಿಕೆ ಮಾಡುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರುತ್ತದೆ ಅಲ್ಲವೆ?

ಮೊದಲಿಗೆ ನಿಮ್ಮಲ್ಲಿ ಒಂದು ಗುರಿಯ ಅಗತ್ಯವಿದೆ. ಎಂಬಿಎ ಮತ್ತು ಇಂಜಿನೀಯರಿಂಗ್ ಪದವಿ ಪಡೆಯಲು ಹೆಚ್ಚುಕಡಿಮೆ 10 ಲಕ್ಷ ಬೇಕಾಗುತ್ತದೆ. ಇದು ಇಂದಿನ ಸಾಮಾನ್ಯ ವೆಚ್ಚವಾಗಿದೆ ಎಂದೇ ಹೇಳಬಹುದು. ಹಣದ ಅವಶ್ಯಕತೆಯ ಆಧಾರದ ಮೇಲೆ ನೀವು ಇದನ್ನು ಯೋಜನೆ ಮಾಡಬೇಕು. ಅಂದರೆ 10-15 ವರ್ಷಗಳ ನಂತರ ಹಣದ ಅಗತ್ಯವಿದ್ದಲ್ಲಿ ನಿಮ್ಮ ದಿನನಿತ್ಯ ವೆಚ್ಚ ಆಧರಿಸಿ ಉಳಿತಾಯ ಮಾಡಲು ಪ್ರಾರಂಭಿಸಬೇಕು. (ಪ್ರತಿ ತಿಂಗಳು ನಿರಂತರ ಆದಾಯ ಬೇಕೆ?)

ಇವತ್ತು ರೂ. 5 ಲಕ್ಷ ಇದ್ದರೆ ಮುಂದಿನ 15 ವರ್ಷಗಳ ನಂತರ ಶೇ. 8ರ ಹಣದುಬ್ಬರದ ದರದಲ್ಲಿ ಇದು ರೂ. 46 ಲಕ್ಷಕ್ಕೆ ಸಮವಾಗಿರುತ್ತದೆ.
ಹೂಡಿಕೆ ಮಾಡುವ ಮುನ್ನ ಎರಡು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಒಂದು ತೊಂದರೆಗಳು ಮತ್ತು ಎರಡನೇಯದು ಸಮಯಾವಕಾಶ.

ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡಲು ಹೂಡಿಕೆ ಮಾಡಬಹುದಾದ ಅನೇಕ ಉತ್ತಮ ವಿಧಾನಗಳು ಇಲ್ಲಿವೆ. ಇದನ್ನು ಅನುಸರಿಸುವುದು ಸುರಕ್ಷಿತ ಮತ್ತು ಲಾಭದಾಯಕ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (ಹೆಚ್ಚು ಲಾಭ ಕೊಡುವ 7 ಹೂಡಿಕೆ)

ಈಕ್ವಿಟಿ ಮ್ಯೂಚುವಲ್ ಫಂಡ್

ಈಕ್ವಿಟಿ ಮ್ಯೂಚುವಲ್ ಫಂಡ್

ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ತೊಂದರೆದಾಯಕ ಆಗಿದ್ದರೂ ಇದು ಹಣದುಬ್ಬರವನ್ನು ನಿಗ್ರಹಿಸಿ ಅತ್ಯುತ್ತಮವಾದ ಆದಾಯವನ್ನೇ ತಂದುಕೊಡುತ್ತದೆ. ಜುಲೈ 17, 2016ಕ್ಕೆ ಹತ್ತು ವರ್ಷಗಳ ಮುಕ್ತಾಯಕ್ಕೆ ವಾರ್ಷಿಕ ರಿಟರ್ನ್ ಶೇ. 11ರಷ್ಟಿದೆ ಎಂದು ಸೆನ್ಸೆಕ್ಸ್ ಹೇಳಿದೆ. ಈಕ್ವಿಟಿ ಮೇಲಿನ ಆದಾಯ ತೆರಿಗೆ ಮುಕ್ತವಾಗಿದ್ದು, ಸ್ಥಿರ ಠೇವಣಿಗಳಿಗಿಂತಲೂ ಉತ್ತಮವಾಗಿದೆ. ಸ್ಥಿರ ಠೇವಣಿಗಳ ಮೇಲೆ ಪ್ರಸ್ತುತ ಶೇ.7.7ರಷ್ಟು ವಾರ್ಷಿಕ ಬಡ್ಡದರ ಇದೆ. ಹೀಗಾಗಿ ಈಕ್ವಿಟಿ ಮೇಲೆ ಹೂಡಿಕೆ ಮಾಡಲು ಬಯಸಿದ್ದಲ್ಲಿ ತಡ ಮಾಡದೆ ಮಾಡುವುದು ಉತ್ತಮ. ಇದರಿಂದ ಉತ್ತಮ ಲಾಭ ಸಿಗುವುದಂತು ಗ್ಯಾರಂಟಿ.

ಸಮತೋಲಿತ ನಿಧಿ

ಸಮತೋಲಿತ ನಿಧಿ

ಇವು ಮ್ಯೂಚುವಲ್ ಫಂಡ್ ಗಳಾಗಿದ್ದು 65%ರಷ್ಟು ಆಸ್ತಿ ಮೇಲೆ ಮತ್ತು ಇನ್ನುಳಿದವನ್ನು ಸಾಲ ಪತ್ರಗಳ ಮೇಲೆ ಈಕ್ವಿಟಿ ಹೂಡಿಕೆ ಮಾಡಬಹುದಾಗಿದೆ. ಮುಖ್ಯವಾಗಿ ತೆರಿಗೆ ಉದ್ದೇಶಗಳಿಗಾಗಿ ಈಕ್ವಿಟಿ ಫಂಡ್ ಗಳನ್ನು ನಿರ್ಧರಿಸಲಾಗುತ್ತದೆ. ಇವುಗಳಿಗೆ ಸ್ವಲ್ಪ ಕಡಿಮೆ ಪ್ರಾಮುಖ್ಯತೆ ಇದ್ದರೂ ಸಂಪ್ರದಾಯಸ್ಥರಿಗೆ ಇದು ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ
 

ಸುಕನ್ಯಾ ಸಮೃದ್ಧಿ ಯೋಜನೆ

ಇದು ಸಂಪ್ರದಾಯಶೀಲ ಹೂಡಿಕೆದಾರರಿಗೆ ಉತ್ತಮ ಆಯ್ಕೆ ಎಂದೇ ಹೇಳಬಹುದು. ಈ ಖಾತೆಯನ್ನು ತೆರೆಯಲು ಹುಡುಗಿಗೆ ಗರಿಷ್ಠ 10 ವರ್ಷ ವಯಸ್ಸಾಗಿರಬೇಕು. ಈ ಹೂಡಿಕೆಯ 80ಸಿ ಸೆಕ್ಷನ್ ಅಡಿಯಲ್ಲಿ ಒಂದು ವರ್ಷದಲ್ಲಿ ರೂ. 1.5 ಲಕ್ಷದವರೆಗೆ ನೀವು ಮೊತ್ತವನ್ನು ಪಡೆಯಬಹುದಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಂತೆಯೇ ಸುಕನ್ಯಾ ಸಮೃದ್ಧಿ ಯೋಜನೆ ಸಹ ತೆರಿಗೆ ಮುಕ್ತವಾಗಿದ್ದು, ಹೆಚ್ಚು ಲಾಭಗಳನ್ನು ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ 8.6%ರಷ್ಟು ಬಡ್ಡಿಯನ್ನು ಘೋಷಿಸಲಾಗಿದ್ದು, ಸರ್ಕಾರವೇ ಇದರ ಬಡ್ಡಿದರದ ಪ್ರಮಾಣವನ್ನು ನಿರ್ಣಯಿಸುತ್ತದೆ. ಮೇಲಿನ ಬಡ್ಡಿದರದಂತೆ ನೀವು ವರ್ಷಕ್ಕೆ ರೂ. 1.5 ಲಕ್ಷ ಹೂಡಿಕೆ ಮಾಡಿದರೆ 18 ವರ್ಷಗಳ ಸಂದರ್ಭದಲ್ಲಿ ನಿಮಗೆ ರೂ. 57 ಲಕ್ಷ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮಗುವಿನ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಇದರ ಪ್ರಯೋಜನ ಪಡೆಯಲು ಸಾಧ್ಯ.

ಫಬ್ಲಿಕ್ ಪ್ರಾವಿಡೆಂಟ್ ಫಂಡ್

ಫಬ್ಲಿಕ್ ಪ್ರಾವಿಡೆಂಟ್ ಫಂಡ್

ಯಾರಿಗೆ ಹೆಣ್ಣು ಮಗು ಇಲ್ಲವೋ ಅವರು ಫಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಸುಕನ್ಯಾ ಸಮೃದ್ಧಿ ಯೋಜನೆಯಂತೆ ಇದರಲ್ಲೂ ತೆರಿಗೆ ಲಾಭಗಳನ್ನು ಪಡೆಯಬಹುದು.

ಡೆಬ್ಟ್ ಮ್ಯೂಚುವಲ್ ಫಂಡ್

ಡೆಬ್ಟ್ ಮ್ಯೂಚುವಲ್ ಫಂಡ್

ತೆರಿಗೆ ಲಾಭದ ದೃಷ್ಟಿಯಿಂದ ಸ್ಥಿರ ಠೇವಣಿಗಳಿಗೆ ಪರ್ಯಾಯವಾಗಿ ಇದನ್ನು ಆಯ್ಕೆ ಮಾಡಬಹುದು. ಡೆಬ್ಟ್ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಹಣದುಬ್ಬರ ವೆಚ್ಚ, ತೆರಿಗೆ ಕಡಿತದ ಪರಿಣಾಮಗಳನ್ನು ಸರಿಪಡಿಸಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

ವಿಮೆ/ಇನ್ಸೂರೆನ್ಸ್

ವಿಮೆ/ಇನ್ಸೂರೆನ್ಸ್

ದಂಪತಿಗಳು ತಮ್ಮ ಹೆಸರಿನಲ್ಲಿ ಪ್ರತ್ಯೇಕ ಅವಧಿಯ ವಿಮೆಗಳನ್ನು ಹೊಂದಿರಬೇಕು. ಅಲ್ಲದೆ ಎಲ್ಐಸಿ ವಿಮೆ ಮಾಡಿಸಿಕೊಳ್ಳುವುದರಿಂದ ಅಗತ್ಯ ಸಂದರ್ಭದಲ್ಲಿ ಆಪತ್ ಬಾಂಧವನಾಗಿ ಸಹಾಯಕ್ಕೆ ಬರುತ್ತದೆ. ದಂಪತಿಗಳಿಗಾಗಿಯೇ ಅನೇಕ ಕಂಪನಿಗಳು ವಿಭಿನ್ನ ಅವಧಿಯ ವಿಮೆಗಳನ್ನು ಪ್ರಾರಂಭಿಸಿದ್ದು ಇವುಗಳನ್ನು ಮಾಡಿಸುವುದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತುಂಬಾ ಉಪಯೋಗಕಾರಿ ಅಗಬಲ್ಲದು.

ಬಂಗಾರ ಖರೀದಿ

ಬಂಗಾರ ಖರೀದಿ

ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮುಂಜಾಗ್ರತಾ ಕ್ರಮ ವಹಿಸುವುದು ತುಂಬಾ ಮುಖ್ಯ. ಅದರಲ್ಲೂ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ತಗಲುವುದರಿಂದ ಪ್ರತ್ಯೇಕವಾಗಿ ಹಣ ತೆಗೆದಿಡುವುದು ಮುಂಜಾಗ್ರತೆ ದೃಷ್ಟಿಯಿಂದ ಒಳ್ಳೆಯದು. ಇದರಿಂದಾಗಿ ಬಂಗಾರವನ್ನು ಮಕ್ಕಳ ಹೆಸರಲಿ ಖರೀದಿ ಮಾಡಿಡುವುದರಿಂದ ಕಷ್ಟಕರ ಸಂದರ್ಭದಲ್ಲಿ ಅನುಕೂಲಕ್ಕೆ ಬರುತ್ತದೆ.
ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು.

9 ಹಣಕಾಸು ಸಲಹೆ</a>, <a href=money management , ಬಂಡವಾಳ ಹೂಡಿಕೆ" title="9 ಹಣಕಾಸು ಸಲಹೆ, money management , ಬಂಡವಾಳ ಹೂಡಿಕೆ" />9 ಹಣಕಾಸು ಸಲಹೆ, money management , ಬಂಡವಾಳ ಹೂಡಿಕೆ

English summary

Saving For Child's Education: Are You Doing It The Right Way?

Providing the best education to their children is every parent's dream and one of the biggest goal. But are you saving enough or investing in the right instrument to provide good education.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X