For Quick Alerts
ALLOW NOTIFICATIONS  
For Daily Alerts

ತೆರಿಗೆ ಇಲಾಖೆಗೆ ವರದಿ ಮಾಡಲೇಬೇಕಾದ 10 ಟ್ರಾನ್ಸಾಕ್ಶನ್

By Siddu
|

ಒಂದು ಹಣಕಾಸು ವರ್ಷದಲ್ಲಿನ ನಿರ್ಧಿಷ್ಟ ಮೀತಿಯಲ್ಲಿರುವ ಯಾವುದೇ ಹೆಚ್ಚಿನ ಮೌಲ್ಯ ವ್ಯವಹಾರ ಮತ್ತು ನಗದು ರಸೀದಿಗಳನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗಿರುವ ನಿಯಮ ಏಪ್ರಿಲ್ 1ರಿಂದ ಜಾರಿ ಆಗಿದೆ.

ಈ ವ್ಯವಹಾರ ನಗದು ರಸೀದಿ, ವಾಪಸಾತಿ, ಷೇರುಗಳ ಖರೀದಿ, ಸ್ಥಿರ ಆಸ್ತಿ, ಠೇವಣಿಗಳು, ಬಾಂಡ್, ಮ್ಯೂಚುವಲ್ ಫಂಡ್ ಮತ್ತು ವಿದೇಶಿ ಕರೆನ್ಸಿ ಮಾರಾಟ ಒಳಗೊಂಡಿರುತ್ತದೆ.

ನಿಮ್ಮ ಖಾತೆಗಳ ಹೆಚ್ಚು ಮೌಲ್ಯ ವ್ಯವಹಾರಕ್ಕೆ ಸಂಬಂಧಿಸಿದ ಈ ವರದಿಯನ್ನು ಬ್ಯಾಂಕುಗಳು ಅಥವಾ ಕಂಪನಿಗಳು ಸಹ ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ ಎಂಬುದನ್ನು ಗಮನಿಸಬೇಕು. ಒಂದು ವೇಳೆ ನೀವು ಹೆಚ್ಚಿನ ಮೌಲ್ಯ ವ್ಯವಹಾರ ವರದಿ ಮಾಡಲು ತಪ್ಪಿದಲ್ಲಿ ತೆರಿಗೆ ಇಲಾಖೆಯಿಂದ ನೋಟಿಸು ಜಾರಿ ಆಗುತ್ತದೆ.

ಆನ್ಲೈನ್ ಮೂಲಕ 61ಎ ಫಾರ್ಮ್ ನಲ್ಲಿ ಇದನ್ನು ಪರಿಚಯಿಸಲಾಗಿದೆ. ನೀವು ರಿಟರ್ನ್ಸ್ ಫೈಲ್ ಮಾಡುವಾಗ ಹೆಚ್ಚಿನ ಮೌಲ್ಯ ವ್ಯವಹಾರವನ್ನು ವರದಿ ಮಾಡಬೇಕಾಗಿರುವುದನ್ನು ತಪ್ಪದೆ ಖಚಿತಪಡಿಸಿಕೊಳ್ಳಬೇಕು.

ಸ್ಥಿರ ಆಸ್ತಿ

ಸ್ಥಿರ ಆಸ್ತಿ

ಒಂದು ನಿರ್ಧಿಷ್ಟ ಹಣಕಾಸಿನ ವರ್ಷದಲ್ಲಿ 30 ಲಕ್ಷ ಮೀರಿದ ಸ್ಥಿರ ಆಸ್ತಿ ಖರೀದಿ ಮತ್ತು ಮಾರಾಟದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಪ್ರತಿಯೊಬ್ಬರೂ ವರದಿ ಮಾಡಬೇಕಾಗುತ್ತದೆ.

ವೃತ್ತಿಪರರು

ವೃತ್ತಿಪರರು

ವತ್ತಿಪರ ವ್ಯಕ್ತಿಗಳು 2 ಲಕ್ಷ ಮೀರಿದ ಸರಕು ಮತ್ತು ಸೇವೆಗಳ ಮಾರಾಟ/ಖರೀದಿ ಸಂದರ್ಭದಲ್ಲಿ ನಗದು ಪಾವತಿಯ ಅವಶ್ಯಕತೆಯಿದ್ದಲ್ಲಿ ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗುತ್ತದೆ.

ನಗದು ಠೇವಣಿ

ನಗದು ಠೇವಣಿ

10 ಲಕ್ಷಗಳಿಗೆ ಮೀರಿದ ಯಾವುದೇ ನಗದು ಠೇವಣಿ ಅಥವಾ ಹಣಕಾಸಿನ ವರ್ಷದಲ್ಲಿ ಒಬ್ಬರು ಇದಕ್ಕಿಂತಲೂ ಹೆಚ್ಚಿನ ವ್ಯವಹಾರ ಮಾಡಿದಲ್ಲಿ ಅಥವಾ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಖಾತೆಗಳ ಮೂಲಕ ವ್ಯವಹಾರ ಮಾಡಿದ್ದಲ್ಲಿ ಬ್ಯಾಂಕುಗಳು ತೆರಿಗೆ ಇಲಾಖೆಗೆ ಮಾಹಿತಿ ಒದಗಿಸುತ್ತವೆ.

ಚಾಲ್ತಿ ಖಾತೆಯಲ್ಲಿನ ಠೇವಣಿ

ಚಾಲ್ತಿ ಖಾತೆಯಲ್ಲಿನ ಠೇವಣಿ

ಒಂದು ನಿರ್ಧಿಷ್ಟ ಹಣಕಾಸಿನ ವರ್ಷದಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚಿನ ನಗದು ಠೇವಣಿ ಅಥವಾ ಪಾವತಿ ವ್ಯವಹಾರ ಮಾಡಿದ್ದಲ್ಲಿ ಬ್ಯಾಂಕುಗಳು ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತವೆ.

ಬ್ಯಾಂಕ್ ಡ್ರಾಪ್ಟ್ ಗಳು

ಬ್ಯಾಂಕ್ ಡ್ರಾಪ್ಟ್ ಗಳು

10 ಲಕ್ಷಕ್ಕಿಂತಲೂ ಹೆಚ್ಚಿನ ಪೂರ್ವ ಪಾವತಿ ಅಥವಾ ಬ್ಯಾಂಕ್ ಕರಡು ಖರೀದಿ ಮೂಲಕ ವ್ಯವಹಾರ ಮಾಡಿದಲ್ಲಿ ತೆರಿಗೆ ಇಲಾಖೆಗೆ ವರದಿ ಮಾಡಲಾಗುತ್ತದೆ.

ಹಣಕಾಸು ಭದ್ರತೆ

ಹಣಕಾಸು ಭದ್ರತೆ

ಒಂದು ನಿರ್ಧಿಷ್ಟ ಹಣಕಾಸು ವರ್ಷದ ಅವಧಿಯಲ್ಲಿ ವ್ಯಕ್ತಿಗಳು 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಷೇರು, ಬಾಂಡು, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಕಂಪನಿಗಳು ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ.

ಕ್ರೆಡಿಟ್ ಕಾರ್ಡ್ ಪಾವತಿ

ಕ್ರೆಡಿಟ್ ಕಾರ್ಡ್ ಪಾವತಿ

ಒಂದು ಹಣಕಾಸು ವರ್ಷದ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಿದ್ದಲ್ಲಿ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.

ಗೋಲ್ಡ್ ಇಟಿಎಫ್

ಗೋಲ್ಡ್ ಇಟಿಎಫ್

ವ್ಯಕ್ತಿಗಳು ಒಂದು ಲಕ್ಷಕ್ಕಿಂತ ಹೆಚ್ಚು ಗೋಲ್ಡ್ ಇಟಿಎಫ್ ನಲ್ಲಿ ಹೂಡಿಕೆ ಮಾಡಿದಲ್ಲಿ ಐಟಿ ಇಲಾಖೆಗೆ ವರದಿ ಸಲ್ಲಿಸಬೆಕಾಗುತ್ತದೆ.

ಮ್ಯೂಚುವಲ್ ಫಂಡ್ಸ್

ಮ್ಯೂಚುವಲ್ ಫಂಡ್ಸ್

 ಹೂಡಿಕೆದಾರರು ಎರಡು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ
ಮ್ಯೂಚುವಲ್ ಫಂಡ್ಸ್ ಖರೀದಿ ಮಾಡಿದ್ದರೆ ಐಟಿ ಇಲಾಖೆಗೆ ವರದಿ ಮಾಡಬೇಕಾಗಿರುವುದನ್ನು ಗಮನಿಸಬೇಕು.

ಷೇರುಗಳು

ಷೇರುಗಳು

ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿ ತೆರಿಗೆ ಇಲಾಖೆಗೆ ವರದಿ ಮಾಡಬೆಕಾಗುತ್ತದೆ.

English summary

10 High Value Transactions Which Are Reported To Income Tax Department

With effect from April 1, any high value transactions and cash receipts beyond a certain limit will be reported to Income tax department. These transactions will include cash receipts or withdrawal, purchase of shares, immovable property, term deposits, mutual funds, sale of foreign currency and many thing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X