For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿನ 6 ಉತ್ತಮ ಸಂಬಳ ಖಾತೆಗಳು

By Siddu
|

ನಮ್ಮ ದೇಶದಲ್ಲಿ ಸಾವಿರಾರು ಜನರು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಉದ್ಯೋಗಿಯೂ ಸಂಬಳ ಖಾತೆಯನ್ನು ಹೊಂದಿದ್ದು, ತಿಂಗಳ ಅಂತ್ಯದಲ್ಲಿ ಎಲ್ಲರ ಖಾತೆಗೆ ತಿಂಗಳ ಸಂಬಳ ಜಮಾ ಆಗುತ್ತದೆ.

ಸಾಮಾನ್ಯವಾಗಿ ಕಾರ್ಪೊರೇಟ್ ವಲಯದ ಕಂನಿಗಳು ಬ್ಯಾಂಕುಗಳೊಂದಿಗೆ ಟೈ ಅಪ್ ಆಗಿರುತ್ತವೆ. ಆದರಿಂದ ಆ ಬ್ಯಾಂಕುಗಳ ಮೂಲಕ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸುತ್ತಾರೆ. ಹೀಗೆ ಅನೇಕ ವಿಧದ ಸಂಬಳ ಖಾತೆಗಳಿರುತ್ತವೆ.

ಅನೇಕ ಖಾಸಗಿ ವಲಯದ ಹೆಚ್ಡಿಎಫ್ಸಿ ಅಂತಹ ಬ್ಯಾಂಕುಗಳು ಬೇರೆ ಬೇರೆ ವಿಧದ ಸಂಬಳ ಖಾತೆಗಳನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ತಿಂಗಳ ಸಂಬಳದ ಆಧಾರದ ಮೇಲೆ ಸೌಲಭ್ಯಗಳನ್ನು ಒದಗಿಸುತ್ತವೆ. ಉದಾಹರಣೆಗೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಸಾಲ ಹೀಗೆ ಅನೇಕ ಆಫರ್ ಗಳನ್ನು ಕೊಡುತ್ತವೆ.

ನಮ್ಮ ದೇಶದಲ್ಲಿ ಈ ರೀತಿ ಉತ್ತಮ ಸೌಲಭ್ಯ ಮತ್ತು ಸೇವೆಗಳನ್ನು ಒದಗಿಸುವ ಹಲವು ಬ್ಯಾಂಕುಗಳು ಇವೆ. ಅಂತಹ ಉತ್ತಮ ಸಂಬಳ ಖಾತೆ ಸೌಲಭ್ಯ ಮತ್ತು ಸೇವೆ ಹೊಂದಿರುವ ಪ್ರಮುಖ ಬ್ಯಾಂಕುಗಳ ವಿವರ ಇಲ್ಲಿದೆ ನೋಡಿ.

HDFC ಸಂಬಳ ಖಾತೆ

HDFC ಸಂಬಳ ಖಾತೆ

HDFC ಸಂಬಳದ ಖಾತೆಯಲ್ಲಿ ಒಂದು ಲಕ್ಷದ ರೂಪಾಯಿ ಇದ್ದು, ಆಕಸ್ಮಿಕ ಮರಣ ಸಂಭವಿಸಿದಲ್ಲಿ ಉಚಿತವಾಗಿ ವೈಯಕ್ತಿಕ ಆಕಸ್ಮಿಕ ಮರಣ ಕವರೇಜ್ ಸಿಗುತ್ತದೆ.
ನಿಮ್ಮ ಕುಟುಂಬದ ಸದಸ್ಯರಿಗೆ ಸಂಬಳ ಕೌಟುಂಬಿಕ ಖಾತೆ ಕೂಡ ಇರುತ್ತದೆ.

ಐಸಿಐಸಿಐ ಸಂಬಳ ಖಾತೆ

ಐಸಿಐಸಿಐ ಸಂಬಳ ಖಾತೆ

ಐಸಿಐಸಿಐ ಸಂಬಳ ಖಾತೆ ಹೊಂದಿರುವವರಿಗೆ 25,000 ರೂ.ವರೆಗೆ ಐಸಿಐಸಿಐ ಬ್ಯಾಂಕ್ ಮೂಲಕ ಉಚಿತ ರವಾನೆ (ಡಿಮಾಂಡ್ ಡ್ರಾಪ್ಟ್, ಚೆಕ್, ವೇತನ ಆದೇಶಗಳು) ಸೌಲಭ್ಯ ಇರುತ್ತದೆ.
ಐಸಿಐಸಿಐ ಬ್ಯಾಂಕ್ ಪಿಎಫ್ಆರ್ಡಿಎ (PFRDA) ನೊಂದಿಗೆ ನೋಂದಣಿಯಾಗಿದ್ದು, ಕಾಪೋರೇಟ್ ಗ್ರಾಹಕರಿಗೆ ಎನ್ಪಿಎಸ್ ಸೇವೆಯನ್ನು ಒದಗಿಸುತ್ತದೆ.
ಡೆಬಿಟ್ ಕಾರ್ಡ್ ಕಳೆದು ಹೋದಲ್ಲಿ ೨ ಲಕ್ಷದವರೆಗೆ ಹೊಣೆಗಾರಿಕೆ ರಕ್ಷಣೆ ಸೌಲಭ್ಯ ಇರುತ್ತದೆ.

ಸಿಟಿ ಬ್ಯಾಂಕ್

ಸಿಟಿ ಬ್ಯಾಂಕ್

ಸಿಟಿ ಬ್ಯಾಂಕ್ ಸಂಬಳ ಖಾತೆ ಹೊಂದಿರುವ ವ್ಯಕ್ತಿಗಳು ನಿವ್ವಳ ಮಾಸಿಕ ಸಂಬಳ ಸಾಲದ ೫ ಬಾರಿ ಓವರ್ ಡ್ರಾಪ್ಟ್ ನ್ನು ಪಡೆಯಬಹುದು.ಜತೆಗೆ ನಗದು ರಿವಾರ್ಡ್ ಅಂಕಗಳನ್ನು ಸಹ ಪಡೆಯಬಹುದು. ಆದ್ಯತೆಯ ಬೆಲೆಯಲ್ಲಿ ಮನೆ ಸಾಲ ಮತ್ತು ವೈಯಕ್ತಿಕ ಸಾಲ ನಿಮಗೆ ಸಿಗುವ ಸಾಧ್ಯತೆ ಇರುತ್ತದೆ. ಆದರೆ ಅರ್ಹತೆ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ.

ಎಸ್ಬಿಐ ಸಂಬಳ ಖಾತೆ

ಎಸ್ಬಿಐ ಸಂಬಳ ಖಾತೆ

ಎಸ್ಬಿಐ ಸಂಬಳ ಖಾತೆಯನ್ನು ಕಾರ್ಪೊರೇಟ್/ ಸಂಸ್ಥೆಗಳು ಬ್ಯಾಂಕಿನೊಂದಿಗೆ ಹೊಂದಿರುವ ವ್ಯವಹಾರ ಸಂಬಂಧಗಳನ್ನು ಅವಲಂಬಿಸಿ ವಿಶೇಷ ಪ್ಯಾಕೇಜ್ ನ್ನು ಒದಗಿಸಲಾಗುತ್ತದೆ. ಗೃಹಸಾಲ, ವಾಹನ ಸಾಲ ಇತ್ಯಾದಿ ಸಾಲಗಳನ್ನು ಆಕ‍ರ್ಷಕ ಅವಧಿಗಳ ಆಧಾರದ ಮೇಲೆ ಕೊಡಲಾಗುತ್ತದೆ.

ಆಕ್ಸಿಸ್ ಬ್ಯಾಂಕ್ ಸಂಬಳ ಖಾತೆ

ಆಕ್ಸಿಸ್ ಬ್ಯಾಂಕ್ ಸಂಬಳ ಖಾತೆ

ತಿಂಗಳ ಆದಾಯಕ್ಕನುಗುಣವಾಗಿ ಎಚ್ಡಿಎಫ್ಸಿ ಮತ್ತು ಆಕ್ಸಿಸ್ ಬ್ಯಾಂಕುಗಳು ವಿಭಿನ್ನವಾದ ಖಾತೆಗಳನ್ನು ಹೊಂದಿವೆ. ಬಾಂಧವ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆದ್ಯತೆಯ ಖಾತೆಗಳ ಅವಶ್ಯಕತೆಗಳನ್ನು ಪೂರೈಸಲು ನೇಮಕ ಮಾಡಲಾಗಿರುತ್ತದೆ. ಗ್ರಾಹಕರು ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿದಾಗ ಅಥವಾ ಫೋನ್ ಮಾಡಿದಾಗ ಬ್ಯಾಂಕಿನ ಅಧಿಕಾರಿಗಳು ನಿಮ್ಮನ್ನು ತುಂಬಾ ಆದ್ಯತೆ ಮತ್ತು ಆದರದಿಂದ ಮಾತನಾಡಿಸುವುದನ್ನು ಆನಂದಿಸಬಹುದು.

ಕೊಟಕ್ ಮಹೀಂದ್ರಾ ಬ್ಯಾಂಕ್

ಕೊಟಕ್ ಮಹೀಂದ್ರಾ ಬ್ಯಾಂಕ್

ಐಎನ್ಜಿವೈಸ್ಯ ದೊಂದಿಗೆ ವಿಲೀನವಾದ ನಂತರ ಕೊಟಕ್ ಮಹೀಂದ್ರಾ ಬ್ಯಾಂಕ್ ದೇಶದಗಲಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಫಂಡ್ಸ್ ಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಗಳಿಸಬಹುದಾಗಿದೆ. ಉಳಿತಾಯ ಖಾತೆ ಇದ್ದವರು auto Sweep-In ಅಥವಾ Sweep-Out ಸೌಲಭ್ಯ ಪಡೆಯಬಹುದು.

Check gold rates in Bangalore here

English summary

6 best salary accounts in india

All working individuals including private, public sector companies have a salary account where monthly salary will be credited by the employer. Usually, the corporate where you are working will have a tie-up with the bank to provide salary account to its employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X