For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬರಿಗೂ 6 ಸಣ್ಣ ಉಳಿತಾಯ ಯೋಜನೆಗಳು

By Siddu
|

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ತುಂಬಾ ಜನರು ಇಷ್ಟ ಪಡುತ್ತಾರೆ. ಉತ್ತಮ ಬಡ್ಡಿ ಆದಾಯ ಗಳಿಸಲು ಹಾಗೂ ಬ್ಯಾಂಕುಗಳು ನೀಡುವ ಬಡ್ಡಿದರದ ಗಡಿಯನ್ನು ದಾಟಲು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ ಆಗಿರುತ್ತದೆ.

ಕೆಲವೊಮ್ಮೆ ಕಂಪನಿ ಸ್ಥಿರ ಠೇವಣಿಗಳು ಸುರಕ್ಷಿತವಾಗಿರುವುದಿಲ್ಲ. ಆದರೆ ಸಣ್ಣ ಉಳಿತಾಯ ಯೋಜನೆಗಳು ಸರ್ಕಾರದ ಬೆಂಬಲ/ಸಹಯೋಗದೊಂದಿಗೆ ಇರುತ್ತವೆ. ಹೀಗಾಗಿ ಇವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆಗಳಾಗಿರುತ್ತವೆ.

ಅಂತಹ 6 ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್)

ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್)

ಸರಾಸರಿಯಲ್ಲಿ ಬ್ಯಾಂಕುಗಳ ಠೇವಣಿಗಳಿಗಿಂತಲೂ ಪಿಪಿಎಫ್ ಆದಾಯ ಹೆಚ್ಚು. ಬ್ಯಾಂಕುಗಳ ಠೇವಣಿಗಳ ಮೆಲೆ ತೆರಿಗೆ ಇರುತ್ತದೆ. ಆದರೆ ಪಿಪಿಎಫ್ ಬಡ್ಡಿ ಮೇಲೆ ಯಾವುದೆ ತೆರಿಗೆ ಇರುವುದಿಲ್ಲ.
ಇನ್ನೊಂದು ದೃಷ್ಟಿಯಲ್ಲಿ ಬ್ಯಾಂಕುಗಳು ಕೇವಲ ಶೇ. 7.5ರಷ್ಟು ಬಡ್ಡಿದರ ಮಾತ್ರ ಕೊಟ್ಟರೆ ಪಿಪಿಎಫ್ ಶೇ. 8.1ರಷ್ಟು ಬಡ್ಡಿದರವನ್ನು ಕೊಡುತ್ತವೆ. 80ಸಿ ಸೆಕ್ಷನ್ ಅಡಿಯಲ್ಲಿ ಪಿಪಿಎಫ್ ತೆರಿಗೆ ರಿಯಾಯಿತಿ ಅರ್ಹತೆ ಪಡೆಯುತ್ತದೆ. ಆದರೆ ಬ್ಯಾಂಕು ಠೇವಣಿಗಳಿಗೆ ಈ ರಿಯಾಯಿತಿ ಇರುವುದಿಲ್ಲ.

ಸುಕನ್ಯಾ ಸಮೃದ್ಧಿ ಖಾತೆ

ಸುಕನ್ಯಾ ಸಮೃದ್ಧಿ ಖಾತೆ

ಕೆಲ ಕಂಪನಿಗಳ ಸ್ಥಿರ ಠೇವಣಿಗಳನ್ನು ಹೊರತುಪಡಿಸಿದರೆ ಬೇರೆ ಎಲ್ಲೂ ನಿಮಗೆ ಶೇ. 8.6ರಷ್ಟು ಬಡ್ಡಿದರವನ್ನು ಕೊಡುವುದಿಲ್ಲ. ನಿಮಗೆ ಹೆಣ್ಣು ಮಗು ಇದ್ದಲ್ಲಿ ಈ ಯೋಜನೆಯಲ್ಲಿ ತಪ್ಪದೆ ಹೂಡಿಕೆ ಮಾಡುವುದನ್ನು ಮರೆಯಬೇಡಿ.
ಇದು ತೆರಿಗೆ ಮುಕ್ತ ಆದಾಯವಾಗಿದ್ದು, 80ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ರಿಯಾಯಿತಿ ಅರ್ಹತೆ ಇರುತ್ತದೆ. ಹೆಣ್ಣು ಮಗು ಇದ್ದಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡುವುದರಿಂದ ತಪ್ಪಿಸಬೇಡಿ.

ರಾಷ್ಟ್ರೀಯ ಉಳಿತಾಯ ಪತ್ರ(ಎನ್ಎಸ್ಸಿ)

ರಾಷ್ಟ್ರೀಯ ಉಳಿತಾಯ ಪತ್ರ(ಎನ್ಎಸ್ಸಿ)

ಅಂಚೆ ಕಚೇರಿ ಯೋಜನೆಗಳು ಉತ್ತಮ ಆದಾಯ ಕೊಡಬಲ್ಲ ಸಣ್ಣ ಉಳಿತಾಯ ಸ್ಕೀಮ್ ಆಗಿದೆ. ಇವುಗಳು ಬ್ಯಾಂಕುಗಳಿಗಿಂತಲೂ ಹೆಚ್ಚಿನ ಬಡ್ಡಿದರ ಒದಗಿಸುತ್ತವೆ. ಇದು ಶೇ. 8.1ರಷ್ಟು ಬಡ್ಡಿದರ ಪಾವತಿಸುತ್ತವೆ. ಅಂದರೆ ಸರ್ಕಾರಿ ಬ್ಯಾಂಕುಗಳಿಗಿಂತ 0.5% ಹೆಚ್ಚಿನ ಬಡ್ಡಿದರ ಸಿಗುತ್ತದೆ.
ಇದನ್ನು ಹೊರತುಪಡಿಸಿ 80ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ರಿಯಾಯಿತಿ ಸೌಲಭ್ಯ ಇರುತ್ತದೆ.

ಹಿರಿಯ ನಾಗರೀಕರ ಉಳಿತಾಯ ಯೋಜನೆ

ಹಿರಿಯ ನಾಗರೀಕರ ಉಳಿತಾಯ ಯೋಜನೆ

ಶೇ. 8.6ರಷ್ಟು ಉತ್ತಮವಾದ ಬಡ್ಡಿದರ ಹಿರಿಯ ನಾಗರೀಕರ ಉಳಿತಾಯ ಯೋಜನೆಯಲ್ಲಿ ಸಿಗುತ್ತದೆ.
ಆದಾಯ ಇಲಾಖೆ ಕಾಯಿದೆಯ 80ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ರಿಯಾಯಿತಿ ಸೌಲಭ್ಯ ಇರುತ್ತದೆ.

ತಿಂಗಳ ಆದಾಯ ಯೋಜನೆ(MIPs)

ತಿಂಗಳ ಆದಾಯ ಯೋಜನೆ(MIPs)

ತಿಂಗಳ ಆದಾಯ ಬಯಸುವವರಿಗೆ ಬ್ಯಾಂಕುಗಳಿಗಿಂತಲೂ ಅಂಚೆ ಕಚೇರಿ ಯೋಜನೆ ಉತ್ತಮವಾದ ಆಯ್ಕೆ ಆಗಿದೆ. ತಿಂಗಳ ಅಂತ್ಯದಲ್ಲಿ ಬ್ಯಾಂಕು ಠೇವಣಿಗಳ ಮೆಲೆ ಕೇವಲ ಶೇ. 7-7.3ರಷ್ಟು ಬಡ್ಡಿದರ ಸಿಗುತ್ತದೆ. ಆದರೆ ತಿಂಗಳ ಆದಾಯ ಯೋಜನೆ(MIPs)ಯಲ್ಲಿ ಶೇ. 7.8ರಷ್ಟು ಬಡ್ಡಿದರ ಸಿಗುತ್ತದೆ.

ಕಿಸಾನ್ ವಿಕಾಸ ಪತ್ರ

ಕಿಸಾನ್ ವಿಕಾಸ ಪತ್ರ

ಕಿಸಾನ್ ವಿಕಾಸ ಪತ್ರದಲ್ಲಿ ಹೂಡಿಕೆ ಮಾಡುವ ಹಣ 110 ತಿಂಗಳಲ್ಲಿ (9 ವರ್ಷ 2 ತಿಂಗಳು) ಎರಡು ಪಟ್ಟು ಆಗುತ್ತದೆ.
ಕಿಸಾನ್ ವಿಕಾಸ ಪತ್ರದಲ್ಲಿ ಹೂಡಿಕೆ ಮಾಡುವುದು ಯಾರು ಸಹ ಅಷ್ಟೊಂದು ಇಷ್ಟಪಡುವುದಿಲ್ಲ. ಏಕೆಂದರೆ ಬಡ್ಡಿ ಮುಕ್ತ ಆದಾಯವಾಗಲಿ ಅಥವಾ ೮೦ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ರಿಯಾಯಿತಿ ಸೌಲಭ್ಯವಾಗಲಿ ಇರುವುದಿಲ್ಲ.
ಆದರೂ ಸಹ ಇದನ್ನು ಅಂಚೆ ಕಚೇರಿಯ ಕೊನೆಯ ಹೂಡಿಕೆಯನ್ನಾಗಿ ಆಯ್ಕೆ ಮಾಡಬಹುದಾಗಿದೆ.

ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ

English summary

6 Small Saving Schemes You Must Invest In

The only way you can beat bank interest rates and earn better interest is by investing in small saving schemes or company fixed deposits. However, company fixed deposits are not safe, while small saving schemes are backed by the government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X