For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಟಿಡಿಎಸ್ (TDS) ಇಲ್ಲದಿರುವ ಹೂಡಿಕೆಗಳು ಯಾವುವು ಗೊತ್ತೆ?

ಟಿಡಿಎಸ್ ಅಥವಾ ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್(TDS) ಎಂಬುದು ನಮ್ಮಲ್ಲಿ ಅನೇಕರಿಗೆ ಗೊಂದಲವನ್ನು ಉಂಟು ಮಾಡುತ್ತದೆ. ಯಾವುದರ ಮೇಲೆ ಟಿಡಿಎಸ್ ಡಿಡಕ್ಟ್ ಮಾಡ್ತಾರೆ? ಟಿಡಿಎಸ್ ಡಿಡಕ್ಟ್ ಮಾಡದೆ ಇರುವ ಹಾಗೆ ಮಾಡಲು ಏನು ಮಾಡಬೇಕು?

By Siddu
|

ಟಿಡಿಎಸ್ ಅಥವಾ ಮೂಲದಲ್ಲಿ ತೆರಿಗೆ ಕಡಿತ (TDS) ಎಂಬುದು ನಮ್ಮಲ್ಲಿ ಅನೇಕರಿಗೆ ಗೊಂದಲವನ್ನು ಉಂಟು ಮಾಡುತ್ತದೆ. ಯಾವುದರ ಮೇಲೆ ಟಿಡಿಎಸ್ ಡಿಡಕ್ಟ್ ಮಾಡ್ತಾರೆ? ಟಿಡಿಎಸ್ ಡಿಡಕ್ಟ್ ಮಾಡದೆ ಇರುವ ಹಾಗೆ ಮಾಡಲು ಏನು ಮಾಡಬೇಕು? ಏನೇ ಆದರೂ ಟಿಡಿಎಸ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಹೆಚ್ಚು ವಿಚಾರ ಮಾಡುತ್ತೇವೆ.

ಟಿಡಿಎಸ್ ಡಿಡಕ್ಟ್ ಎಂಬುದು ಎಲ್ಲದಕ್ಕೂ ಅನ್ವಯವಾಗುವ ನೀತಿ. ಟಿಡಿಎಸ್ ಅಥವಾ ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ ಎಂಬುದು ಸಲ್ಪ ತೆರಿಗೆ ಸಂಗ್ರಹ ಮಾಡಲು ಸರ್ಕಾರ ಮಾಡಿಕೊಂಡ ಆಡಳಿತಾತ್ಮಕ ವ್ಯವಸ್ಥೆ ಆಗಿದೆ.

ಟಿಡಿಎಸ್ ಎಂಬುದು ಬ್ಯಾಂಕು ಠೇವಣಿ, ರಿಕರಿಂಗ್(ಮರುಕಳಿಸುವ), ಸ್ಥಿರ ಮತ್ತು ಬ್ಯಾಂಕು ಠೇವಣಿಗಳ ತೆರಿಗೆ ಉಳಿತಾಯಗಳ ಮೇಲೆ ವಿಧಿಸಲಾಗುತ್ತದೆ.

ಹೀಗಿದ್ದರೂ ಕೆಲ ಹೂಡಿಕೆಗಳ ಮೇಲಿನ ಆದಾಯಕ್ಕೆ ಟಿಡಿಎಸ್ ವಿಧಿಸಲಾಗುವುದಿಲ್ಲ. ಟಿಡಿಎಸ್ ನಿಂದ (ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ತಪ್ಪಿಸಿಕೊಳ್ಳಬೇಕೆನ್ನುವವರು ತುಂಬಾ ಜನ ಇರುತ್ತಾರೆ.

ಭಾರತದಲ್ಲಿ ಟಿಡಿಎಸ್ ಇಲ್ಲದಿರುವ ಅನೇಕ ಠೇವಣಿ/ಹೂಡಿಕೆಗಳು ಇವೆ. ಅವುಗಳ ಮಾಹಿತಿ ಇಲ್ಲಿದೆ ನೋಡಿ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಆದಾಯ ತೆರಿಗೆ ಇಲಾಖೆಯ 80ಸಿ ಸೆಕ್ಷನ್ ಅಡಿಯಲ್ಲಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೇಲೆ ಅನೇಕ ಪ್ರಯೋಜನಗಳನ್ನು ನೀಡಲಾಗಿದೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದರಿಂದ ಟಿಡಿಎಸ್ ವಿಧಿಸಲಾಗುವುದಿಲ್ಲ.
ಆದಾಯದ ಮೇಲಿನ ಬಡ್ಡಿ ತೆರಿಗೆ ಮುಕ್ತವಾಗಿರುತ್ತದೆ. ಅಲ್ಲದೆ 1.5 ಲಕ್ಷದ ಮೇಲೆ ತೆರಿಗೆ ಲಾಭಗಳನ್ನು ಪಡೆಯಬಹುದಾಗಿದೆ. ಇದರ ಮೇಲೆ ಕೊಡುವ ಬಡ್ಡಿದರ ಕೂಡ ಹೆಚ್ಚಿದ್ದು, ಇವು ಸುರಕ್ಷಿತವಾಗಿವೆ.

ULIPS

ULIPS

ಈ ಯುನೈಟೆಡ್ ಲಿಂಕ್ಡ್ ಇನ್ಶುರೆನ್ಸ್ ಪ್ಲ್ಯಾನ್ ಕೂಡ ಪಿಪಿಎಫ್ ನಂತೆಯೇ ಕಾರ್ಯನಿರ್ವಹಿಸುತ್ತದೆ. ಪಿಪಿಎಫ್ ಲಾಕ್ ಇನ್ ಅವಧಿ 15 ವರ್ಷ ಆಗಿದ್ದು, ಇದಕ್ಕೆ ಹೋಲಿಸಿದರೆ ಇದರ ಲಾಕ್ ಇನ್ ಅವಧಿ ಕೇವಲ ಐದು ವರ್ಷ ಆಗಿರುತ್ತದೆ. ಆದಾಯದ ಮೇಲೆ ಅಥವಾ ಬಡ್ಡಿ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಜತೆಗೆ ರೂ. 1.5 ಲಕ್ಷದ ಮೇಲೆ ತೆರಿಗೆ ಲಾಭಗಳನ್ನು ಪಡೆಯಬಹುದು. ಹೀಗಾಗಿ ಟಿಡಿಎಸ್ ನಿಂದ ತಪ್ಪಿಸಿಕೊಳ್ಳಬೇಕೆನ್ನುವವರಿಗೆ ಇದು ಉತ್ತಮ ಆಯ್ಕೆ.

ಷೇರುಗಳ ಮೇಲೆ ಡಿವಿಡೆಂಟ್ಸ್
 

ಷೇರುಗಳ ಮೇಲೆ ಡಿವಿಡೆಂಟ್ಸ್

ಷೇರುಗಳಿಂದ ಸಿಗುವ ಡಿವಿಡೆಂಟ್ಸ್ ಮೆಲೆ ಯಾವುದೇ
ಟಿಡಿಎಸ್ ವಿಧಿಸಲಾಗುವುದಿಲ್ಲ. ಏಕೆಂದರೆ ಡಿವಿಡೆಂಟ್ಸ್ ಗಳು ಯಾವಾಗಲೂ ತೆರಿಗೆ ಮುಕ್ತವಾಗಿರುವುದರಿಂದ ಹೂಡಿಕೆದಾರರ ಕೈಯಲ್ಲಿ ಲಾಭಾಂಶ ಉಳಿಯುತ್ತದೆ.

NCDs

NCDs

ವಿದ್ಯುನ್ಮಾನ ಮಾದರಿಯಲ್ಲಿ ನಡೆಯುವ NCD (Non Convertible Debentures ) ಮೇಲೆ ಟಿಡಿಎಸ್ ಅನ್ವಯವಾಗುವುದಿಲ್ಲ. ಆದರೂ ಗಳಿಸುವ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ.
ಆದಾಯ ತೆರಿಗೆ ಪಾವತಿಸುವಾಗ ಒಟ್ಟು ಆದಾಯವನ್ನು ಸೇರಿಸಬೇಕಾಗುತ್ತದೆ.

ELSS

ELSS

ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಯೋಜನೆಯಿಂದ ಪಡೆಯಲಾಗುವ ಡಿವಿಡೆಂಟ್ಸ್ ಮೇಲೆ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಇಲಾಖೆಯ 80ಸಿ ಸೆಕ್ಷನ್ ಅಡಿಯಲ್ಲಿ ಇದು ತೆರಿಗೆ ಮೇಲೆ ಅನೇಕ ಲಾಭಗಳನ್ನು ಪಡೆಯಲು ಅರ್ಹವಾಗಿರುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC)

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC)

ಎನ್ಸಿಡಿಯಂತೆ (Non Convertible Debentures ) ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮೇಲೂ ಟಿಡಿಎಸ್ ವಿಧಿಸಲಾಗುವುದಿಲ್ಲ.
ಆದರೆ ಬಡ್ಡಿ ಮೇಲೆ ಸಿಗುವ ಆದಾಯ ತೆರಿಗೆ ಮುಕ್ತವಾಗಿರುವುದಿಲ್ಲ. ಜತೆಗೆ ಆದಾಯ ತೆರಿಗೆ ಪಾವತಿಸುವಾಗ ಒಟ್ಟು ಆದಾಯವನ್ನು ಸೇರಿಸಬೇಕಾಗುತ್ತದೆ.

ಕೆವಿಪಿ (KVP)

ಕೆವಿಪಿ (KVP)

ಕಿಸಾನ್ ವಿಕಾಸ ಪತ್ರ ಟಿಡಿಎಸ್ ನಿಂದ ಮುಕ್ತವಾಗಿರುವುದಿಲ್ಲ. ಜತೆಗೆ ಬಡ್ಡಿ ಮೇಲಿನ ಆದಾಯದ ಮೇಲೂ ತೆರಿಗೆ ವಿಧಿಸಲಾಗುತ್ತದೆ.

Read More:ಭಾರತದಲ್ಲಿ ಚಿನ್ನದ ದರ

Read more about: tds ಟಿಡಿಎಸ್
English summary

7 Financial Instruments Where There Is No TDS In India

Tax deducted at source (TDS) is applicable to almost every instrument except a few. TDS is deducted on every kind of bank deposit, recurring, fixed and also on tax savings bank deposits. They are also applicable on a host of instruments including post office deposits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X