For Quick Alerts
ALLOW NOTIFICATIONS  
For Daily Alerts

ಸ್ಥಿರ ಠೇವಣಿಗಳ ಮೇಲೆ ಹೆಚ್ಚು ಬಡ್ಡಿದರ ಬೇಕೆ? ಇಲ್ಲಿವೆ 8 ಮಾರ್ಗ

By Siddu Thorat
|

ಬಡ್ಡಿದರ ಎಂಬುದು ಯಾವಾಗಲೂ ಸ್ಥಿರವಾಗಿರುವುದಿಲ್ಲ. ಇದು ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ಆದರೆ ಪ್ರತಿಯೊಬ್ಬರಿಗೂ ಸಹ ಸ್ಥಿರ ಠೇವಣಿ ಮೇಲೆ ಉತ್ತಮ ಬಡ್ಡಿದರ ಪಡೆಯಬೇಕು ಎಂಬ ಆಸೆ ಇರುತ್ತದೆ. ಅದರಲ್ಲೂ ಪ್ರತಿ ತಿಂಗಳೂ ಉತ್ತಮ ಬಡ್ಡಿದರ ಸಿಗುತ್ತದೆ ಎಂದರೆ ಯಾರಿಗೆ ತಾನೆ ಬೇಡ?

ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಉತ್ತಮ ಬಡ್ಡಿದರ ಕೊಡಬಲ್ಲ ಪ್ರಮುಖ ಮತ್ತು ಪ್ರಸಿದ್ದ ಬ್ಯಾಂಕುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಸ್ಥಿರ ಠೇವಣಿಗಳ ಮೇಲೆ ಹಣ ಹೂಡಿಕೆ ಮಾಡುವುದರಿಂದ ಉತ್ತಮ ಮತ್ತು ಹೆಚ್ಚಿನ ಬಡ್ಡಿದರ ಪಡೆಯಬಹುದಾಗಿದೆ. (ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ಇವುಗಳಲ್ಲಿ ಹೂಡಿಕೆ ಮಾಡಿ.)

ಆ 8 ಬ್ಯಾಂಕುಗಳ ಮಾಹಿತಿ ಕೆಳಗೆ ಕೊಡಲಾಗಿದೆ.

ರತ್ನಾಕರ ಬ್ಯಾಂಕು

ರತ್ನಾಕರ ಬ್ಯಾಂಕು

ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಶೇ. 8ರಷ್ಟು ಬಡ್ಡಿದರವನ್ನು ಪಡೆಯುವುದು ತುಂಬಾ ಕಷ್ಟಕರ ಸಂಗತಿ. ಆದರೆ ರತ್ನಾಕರ ಬ್ಯಾಂಕು 12 ರಿಂದ 24 ತಿಂಗಳುಗಳ ಅವಧಿಗೆ 8% ಬಡ್ಡಿದರವನ್ನು ಘೋಷಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಉತ್ತಮ ಎಂದೇ ಹೇಳಬಹುದು. ಏಕೆಂದರೆ ಸರ್ಕಾರಿ ಬ್ಯಾಂಕುಗಳು ಶೇ. 7.5ರಷ್ಟು ಬಡ್ಡಿದರವನ್ನು ಮಾತ್ರ ಕೊಡುತ್ತವೆ.

ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕು

ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕು

ಇದು ವಿದೇಶಿ ಬ್ಯಾಂಕ್ ಆಗಿದ್ದು, ಉತ್ತಮವಾದ ಬಡ್ಡಿದರವನ್ನು ಘೋಷಿಸಿದೆ. 376-390ದಿನಗಳ ವ್ಯಾಪ್ತಿಯ ಅವಧಿಗೆ 7.95ರಷ್ಟು ಬಡ್ಡಿದರ ನಿಡುತ್ತದೆ. ರತ್ನಾಕರ ಬ್ಯಾಂಕಿಗೆ ಹೋಲಿಸಿದರೆ ಇದು ಕಡಿಮೆ.

ಡಿಸಿಬಿ

ಡಿಸಿಬಿ

ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕಿಗಿಂತಲೂ ಡಿಸಿಬಿ ಬ್ಯಾಂಕಿನ ಬಡ್ಡಿದರ ಕಡಿಮೆಯಾಗಿದ್ದು, ಶೇ. 7.90ರಷ್ಟು ಬಡ್ಡಿದರವನ್ನು ಸ್ಥಿರ ಠೇವಣಿ ಮೇಲೆ ನೀಡುತ್ತದೆ. ಇದರ ಕಾಲಾವಧಿ 24 ರಿಂದ 36 ತಿಂಗಳು ಆಗಿರುತ್ತದೆ. ಇವೇಲ್ಲವೂ ಎರಡು-ಮೂರು ವರ್ಷಗಳ ಅವಧಿ ಆಗಿರುವುದರಿಂದ ಇಳಿಮುಖ ಆಗುತ್ತಿರುವ ಬಡ್ಡಿದರದಿಂದ ಉಳಿತಾಯ ಮಾಡಬಹುದು.

ಲಕ್ಷ್ಮೀ ವಿಲಾಸ ಬ್ಯಾಂಕು

ಲಕ್ಷ್ಮೀ ವಿಲಾಸ ಬ್ಯಾಂಕು

18 ತಿಂಗಳಿಂದ 5 ವರ್ಷಗಳ ಕಾಲಾವಧಿಗೆ ಲಕ್ಷ್ಮೀ ವಿಲಾಸ ಬ್ಯಾಂಕಿನ ಬಡ್ಡಿದರ ಶೇ. 7.90ರಷ್ಟು ಇದೆ. ಹಿರಿಯ ನಾಗರಿಕರು 0.50ರಷ್ಟು ಹೆಚ್ಚಿನ ಬಡ್ಡಿದರ ಪಡೆಯಬಹುದಾಗಿದ್ದು, ಇದು ಶೇ. 8.40ರಷ್ಟಾಗುತ್ತದೆ. ಆದರೆ ಇವು ದೀರ್ಘಾವಧಿಯ ಠೇವಣಿಗಳಾಗಿವೆ ಎಂದು ಹೇಳಬಹುದು.

SVC ಕೋಅಪರೇಟಿವ್

SVC ಕೋಅಪರೇಟಿವ್

SVC ಕೋಅಪರೇಟಿವ್ ಬ್ಯಾಂಕು 366 ದಿನಗಳ ಠೇವಣಿಗಳ ಮೇಲೆ 7.90% ಬಡ್ಡಿದರವನ್ನು ಘೋಷಿಸಿವೆ. ಹಿರಿಯ ನಾಗರಿಕರು ಶೇ. 8.05ರಷ್ಟು ಬಡ್ಡಿದರ ಪಡೆಯಬಹುದು. ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಉತ್ತಮ ಎಂದೇ ಹೇಳಬಹುದು.

ಇಂಡಸ್ಲ್ಯಾಂಡ್ ಬ್ಯಾಂಕು

ಇಂಡಸ್ಲ್ಯಾಂಡ್ ಬ್ಯಾಂಕು

ಒಂದು ವರ್ಷದಿಂದ ಒಂದು ವರ್ಷ ಎರಡು ತಿಂಗಳ ಒಳಗಿನ ಅವಧಿಯ ಸ್ಥಿರ ಠೇವಣಿ ಮೇಲೆ ಇಂಡಸ್ಲ್ಯಾಂಡ್ ಬ್ಯಾಂಕು ಶೇ. 7.75ರಷ್ಟು ಬಡ್ಡಿದರ ಒದಗಿಸುತ್ತದೆ. ದೇಶದಲ್ಲಿನ ಖಾಸಗಿ ವಲಯದ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಉತ್ತಮವಾದ ಬಡ್ಡಿದರ ಎಂದೇ ಹೇಳಬಹುದು.

ಸ್ಟೇಟ್ ಬ್ಯಾಂಕ್ ಆಪ್ ಪಟಿಯಾಲ

ಸ್ಟೇಟ್ ಬ್ಯಾಂಕ್ ಆಪ್ ಪಟಿಯಾಲ

ಈ ಬ್ಯಾಂಕಿನಲ್ಲೂ ಉತ್ತಮವಾದ ಬಡ್ಡಿದರ ಪಡೆಯಬಹುದಾಗಿದ್ದು, ಇದು ಎಸ್ಬಿಐ ಬ್ಯಾಂಕಿನ ಅಂಗಸಂಸ್ಥೆಯಾಗಿದೆ. ಒಂದು ವರ್ಷದಿಂದ 555 ದಿನಗಳ ಕಾಲಾವಧಿ ಮೇಲೆ ಶೇ. 7.57ರಷ್ಟು ಬಡ್ಡಿದರ ಪಡೆಯಬಹುದು.

ಇನ್ನುಳಿದ ಬ್ಯಾಂಕುಗಳು

ಇನ್ನುಳಿದ ಬ್ಯಾಂಕುಗಳು

ಈ ಮೇಲಿನ ಬ್ಯಾಂಕುಗಳನ್ನು ಹೊರತು ಪಡಿಸಿದರೆ ಇನ್ನಿತರೆ ಬ್ಯಾಂಕುಗಳು ಹೆಚ್ಚೆಂದರೆ ಶೇ. 7.5ರಷ್ಟು ಬಡ್ಡಿದರವನ್ನು ಮಾತ್ರ ನೀಡುತ್ತವೆ. ಒಂದು ವರ್ಷದ ಹಿಂದಿನ ಬಡ್ಡಿದರಕ್ಕೆ ಹೋಲಿಸಿದರೆ ಇದು ಅಷ್ಟೊಂದು ಉತ್ತಮ ಅಲ್ಲ ಎಂದೇ ಹೇಳಬಹುದು.

ಅಗಸ್ಟ್ ತಿಂಗಳಲ್ಲಿ ಹೆಚ್ಚು ಬಡ್ಡಿದರ ಕೊಡುವ 7 ಸ್ಥಿರ ಠೇವಣಿಗಳುಅಗಸ್ಟ್ ತಿಂಗಳಲ್ಲಿ ಹೆಚ್ಚು ಬಡ್ಡಿದರ ಕೊಡುವ 7 ಸ್ಥಿರ ಠೇವಣಿಗಳು

English summary

8 Banks With The Best Fixed Deposit Interest Rates

Interest rates are falling and falling fast. We have gathered a list of 8 banks that still offer you pretty decent interest rates as compared to others. Here is a list of reputed banks with the highest and best fixed deposit interest rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X