For Quick Alerts
ALLOW NOTIFICATIONS  
For Daily Alerts

ಬ್ಲಾಗ್ (Blog) ಮೂಲಕ ಹಣ ಮಾಡುವುದು ಹೇಗೆ?

By Siddu Thorat
|

ಆನ್ಲೈನ್ ಎನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಆನ್ಲೈನ್ ವ್ಯವಹಾರ ಇಲ್ಲದ ಜೀವನ ಅಪೂರ್ಣ ಎಂದೇ ಎಲ್ಲರ ಭಾವನೆ. ಅಷ್ಟರ ಮಟ್ಟಿಗೆ ನಮ್ಮೊಳಗೆ ಈ ಮಾಯೆ ಹೊಕ್ಕಿಕೊಂಡಿದೆ.

 

ಸಾಮಾನ್ಯವಾಗಿ ಎಲ್ಲರ ಜೀವನವು ಆನ್ಲೈನ್ ಮಯವಾಗಿದೆ. ಏಕೆಂದರೆ ಹೆಚ್ಚೆಚ್ಚು ಜನರು, ಯುವಕರು ಆನ್ಲೈನ್ ತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ. ಇದು ಮನೆಯಲ್ಲಿ ಪಾಲಕರ ಆರೋಪವು ಹೌದು. ಇದರ ಉಪಯೋಗ, ದುರುಪಯೋಗ ನೂರಾರು. ಪ್ರತಿಯೊಬ್ಬರು ಅದನ್ನು ಬಳಸುವುದರ ಮೇಲೆ ಅವಲಂಬಿತವಾಗಿರುತ್ತದೆ.

ಹೀಗಾಗಿ ಆನ್ಲೈನ್ ಮೂಲಕ ಹಣ ಸಂಪಾದನೆ ಮಾಡುವುದು ಇತ್ತಿಚಿಗೆ ಹೊಸ ಟ್ರೆಂಡ್ ಆಗಿ ಮಾರ್ಪಡುತ್ತಿದೆ. ಎಲ್ಲರೂ ಈ ತಾಣಗಳ ಮೂಲಕ ಆದಾಯ ಗಳಿಸಲು ಬಯಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಇವುಗಳ ಪಾತ್ರ ತುಂಬಾ ಹಿರಿದು.

ಅದೇ ರೀತಿ ಬ್ಲಾಗ್ ಮೂಲಕ ಹಣ ಮಾಡುವುದು ಸಹ ಒಂದು ಸರಳ ಮಾರ್ಗವಾಗಿದೆ. ಅನೇಕರು ಇದರ ಮೂಲಕವೇ ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. ಹೀಗಾಗಿ ಇದರ ಪ್ರಯೋಜನ ತುಂಬಾ ಇದೆ.

ಕೆಲವರಿಗೆ ನಮ್ಮ ಬ್ಲಾಗ್ ನ್ನು ಹಣ ಮಾಡುವ ವ್ಯವಹಾರವನ್ನಾಗಿ ಪರಿವರ್ತಿಸುವುದು ಹೇಗೆ? ಬ್ಲಾಗ್ ಮೂಲಕ ಸಾವಿರಾರು ರೂಪಾಯಿ ಗಳಿಸಿವುದು ಹೇಗೆ? ಇದರ ಸುಲಭ ಮಾರ್ಗಗಳೇನು? ಇತ್ಯಾದಿ ಪ್ರಶ್ನೆಗಳು ಕಾಡುತ್ತಿರುತ್ತವೆ.

ಈ ನಿಟ್ಟಿನಲ್ಲಿ ಸುಲಭವಾಗಿ ಹಾಗೂ ಸೃಜನಾತ್ಮಕ ಕ್ರಿಯೆಯ ಮೂಲಕ ಹೇಗೆ ಬ್ಲಾಗ್ ಮೂಲಕ ಆದಾಯ ಗಳಿಸಬಹುದು ಎಂಬುದಕ್ಕೆ ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಬ್ಲಾಗ್ ಪ್ರಾರಂಭಿಸಿ

ಬ್ಲಾಗ್ ಪ್ರಾರಂಭಿಸಿ

ಈಗಾಗಲೇ ಅನೇಕರು ಬ್ಲಾಗ್ ಖಾತೆಯನ್ನು ಹೊಂದಿರುತ್ತಾರೆ. ಆದರೆ ಕೆಲವರು ತಮ್ಮ ಬ್ಲಾಗ್ ನ್ನು ಪ್ರಾರಂಭಿಸವುದಕ್ಕೆ ಮುನ್ನುಗ್ಗಲು ಇಷ್ಟ ಪಡುವುದಿಲ್ಲ.
ಬ್ಲಾಗ್ ಪ್ರಾರಂಭಿಸುವುದು ಅಷ್ಟೊಂದು ಸುಲಭವಲ್ಲದಿದ್ದರೂ ಹಿಂದೆ ಸರಿಯುವುದು ಖಂಡಿತ ತಪ್ಪು. ಬ್ಲಾಗಿಂಗ್ ಎಂದರೆ ಪ್ರತಿದಿನ ಪ್ರತಿಯೊಬ್ಬರೂ ಹೊಸತನ್ನು ಕಲಿಯುವುದು.
ವೈಯಕ್ತಿಕ ಬ್ಲಾಗ್ ಗಳನ್ನು ಪ್ರಾರಂಬಿಸಿ ಆ ಮೂಲಕ ಹೇಗೆ ಹಣವನ್ನು ಸಂಪಾದಿಸಬಹುದು ಎಂಬುದನ್ನು ಯೋಜನೆ ಹಾಕಬೇಕು.

ಬ್ಲಾಗ್ ಏಕೆ?

ಬ್ಲಾಗ್ ಏಕೆ?

ಬ್ಲಾಗ್ ಖಾತೆ ತೆರೆಯುವುದರಿಂದ ನಮ್ಮ ವೆಬ್ಸೈಟ್ ಗೆ ನೇರ ಟ್ರಾಫಿಕ್ ಹೆಚ್ಚಾಗುತ್ತದೆ. ವೈಯಕ್ತಿಕವಾಗಿ, ವೃತ್ತಿಪರರಾಗಿ ಬೆಳೆಯಲು ಇದು ಸಹಾಕಾರಿ. ನಮ್ಮ ಅಥಾರಿಟಿಯನ್ನು ಬಲಪಡಿಸಲು ಇದು ತುಂಬಾ ಸಹಾಯಕ. ಜೀವನದಲ್ಲಿ ದೀರ್ಘಾವಧಿಯ ಪ್ರಯೋಜನಗಳು ಹೆಚ್ಚು ಪಡೆಯಲು ಸಾಧ್ಯ. ಎಲ್ಲದಕ್ಕೂ ಮುಖ್ಯವಾಗಿ ಬ್ಲಾಗ್ ಮೂಲಕ ಆದಾಯವನ್ನು ಗಳಿಸಬಹುದಾಗಿದೆ.

ನಿಮ್ಮ ಪೋಸ್ಟ್ ಹಂಚಿಕೊಳ್ಳಿ
 

ನಿಮ್ಮ ಪೋಸ್ಟ್ ಹಂಚಿಕೊಳ್ಳಿ

ನಿಮ್ಮ ಬ್ಲಾಗ್ ಚಾಲ್ತಿಯಾದ ನಂತರ ನೀವು ಖುಷಿ ಪಡುವುದು ಸಹಜ. ಆದರೆ ಯಾರು ಸಹ ನಮ್ಮ ಬ್ಲಾಗ್ ಓದುತ್ತಿಲ್ಲವಲ್ಲ ಎನ್ನುವುದು ಸಮಸ್ಯೆಯಾಗಿರುತ್ತದೆ.
ಇದಕ್ಕೆ ಸರಳವಾದ ದಾರಿಯೆಂದರೆ ನಿಮ್ಮ ಬ್ಲಾಗ್ ನ್ನು ಎಲ್ಲಾ ಸೋಷಿಯಲ್ ಮಿಡಿಯಾ ಚಾನೆಲ್ ಗಳ ಮೂಲಕ ಪ್ರಮೋಟ್ ಮಾಡಲು ಪ್ರಾರಂಭಿಸಿ. ಆಗ ನಿಮ್ಮ ಸ್ನೇಹಿತರು ಬ್ಲಾಗ್ ಲಿಂಕ್ ಇಷ್ಟ ಪಡಲು ಮತ್ತು ಕಮೆಂಟ್ ಮಾಡಲು ಪ್ರಾರಂಭಿಸಿದಾಗ ಅವರ ಸ್ನೇಹಿತರು ಇದನ್ನು ಓದಲು ಪ್ರಾರಂಭಿಸುತ್ತಾರೆ. ಹೀಗೆ ಸಾವಧಾನವಾಗಿ ಹಾಗೂ ನಿರಂತರವಾಗಿ ನಿಮ್ಮ ಓದುಗರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತದೆ.
ಆಗ ನಿಮಗೆ ಈ ಕ್ಷೇತ್ರದಲ್ಲಿ ಈಗಾಗಲೇ ಇರುವವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಗೊತ್ತಾಗುತ್ತಾ ಹೋಗುತ್ತದೆ. ಜತೆಗೆ ನಿಮ್ಮ ಓದುಗರು ಏನನ್ನು ಇಷ್ಟ ಪಡುತ್ತಾರೆ, ಕಮೆಂಟ್ ಮಾಡುತ್ತಾರೆ ಎಂಬ ಆಧಾರದ ಮೇಲೆ ನಿಮ್ಮ ಬ್ಲಾಗಿಂಗ್ ಶೈಲಿಯನ್ನು ಸ್ಥಾಪಿಸುತ್ತಾ ಹತೋಟಿ ಪಡೆಯಬಹುದು.

ಅಧ್ಯಯನ ಮಾಡಿ

ಅಧ್ಯಯನ ಮಾಡಿ

SEO(ಸರ್ಚ್ ಇಂಜಿನ್ ಅಪ್ಟಿಮೈಜೆಸನ್) ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ. ಆದರೆ ಇದು ಗೂಗಲ್ ಸರ್ಚ್ ಸಂದರ್ಭದಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಅಂದರೆ ನೀವು SEO ನಲ್ಲಿ ಮಾಸ್ಟರ್ ಆಗಿರಬೇಕು ಅಥವಾ ಅದರ ಬಗ್ಗೆ ಹೆಚ್ಚು ಪರಿಣಿತರಾಗಿರಬೇಕು ಎಂದೇನು ಇಲ್ಲ. ಮೂಲ ಜ್ಞಾನ ಇದ್ದರೆ ಸಾಕು.
ಏಕೆಂದರೆ ನಮ್ಮ ಬ್ಲಾಗ್ ಗೆ ಓದುಗರು ನೇರವಾಗಿ ಬರುವಂತೆ ಮಾಡಲು ಇದು ಸಹಾಯಕ. ಗೂಗಲ್ ಸರ್ಚ್ ನಲ್ಲಿ ಓದುಗರು ಹೇಗೆ ವಿಷಯಗಳನ್ನು ಹುಡುಕುತ್ತಾರೆ? ಯಾವ ಪದಗಳನ್ನು ಬಳಸುತ್ತಾರೆ? ಎಲ್ಲರಿಗೂ ಪರಿಚಿತವಾಗಿರುವ ಅಂಶಗಳಾವವು? ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಓದುಗರ ಸಂಖ್ಯೆಯನ್ನು ಹಾಗೂ ಆಸಕ್ತಿಯನ್ನು ತಿಳಿದುಕೊಳ್ಳಬಹುದು. ಹೀಗಾಗಿ ಇದರ ಬಗ್ಗೆ ತಿಳಿದುಕೊಂಡು ಮುನ್ನಡೆದರೆ ಬ್ಲಾಗ್ ಮೂಲಕ ಉತ್ತಮ ಆದಾಯ ಗಳಿಸಬಹುದು.

ಜಾಹೀರಾತು ಮಾರಾಟ ಮಾಡಿ

ಜಾಹೀರಾತು ಮಾರಾಟ ಮಾಡಿ

ಒಂದು ಸಲ ನೀವು ಬ್ಲಾಗ್ ನ್ನು ಅಭಿವೃದ್ಧಿ ಪಡಿಸಿದ ನಂತರ ಓದುಗರು ನಿರಂತರವಾಗಿ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಮುಂದಿನ ಹಂತದಲ್ಲಿ ನಿಮ್ಮ ಪುಟದಲ್ಲಿ ಜಾಹಿರಾತುಗಳನ್ನು ಮಾರಾಟ ಮಾಡಬಹುದು.
ಇದನ್ನು ಗೂಗಲ್ ಆಡ್ಸೆನ್ಸ್ (Google's AdSense) ಎಂಬ ಸರಳ ಮಾರ್ಗದ ಮೂಲಕ ಮಾಡಬಹುದು. ಇದರಲ್ಲಿ ಸೈನ್ ಅಪ್ ಆದ ನಂತರ ನಿರಂತರವಾಗಿ ನೀವು ಹಣವನ್ನು ಗಳಿಸಬಹುದು. ನಿಮ್ಮ ಬ್ಲಾಗ್ ಪುಟದಲ್ಲಿರುವ ಜಾಹೀರಾತುಗಳನ್ನು ಕ್ಲಿಕ್ ಮಾಡುವುದರ ಮುಖಾಂತರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ನಿಮಗೆ ಉತ್ತಮ ಓದುಗರು/ಹಿಂಬಾಲಕರು ಇದ್ದರೆ ಈ ಮೂಲಕ ಉತ್ತಮ ಗಳಿಕೆ ಮಾಡಬಹುದು.

ಬ್ಲಾಗ್ ಒಂದು ಆದಾಯ ಶಾಖೆ

ಬ್ಲಾಗ್ ಒಂದು ಆದಾಯ ಶಾಖೆ

ಬ್ಲಾಗ್ ಬಳಕೆಯಲ್ಲಿನ ನಿಮ್ಮ ಪರಿಣಿತಿಯನ್ನು ಅವಲಂಬಿಸಿ ಬ್ಲಾಗ್ ಒಂದು ಆದಾಯ ಶಾಖೆಯಾಗಿ, ವ್ಯವಹಾರದ ಉದ್ಯಮವಾಗಿ ಪರಿವರ್ತಿಸಬಹುದು.
ಹೊಸ ಹೊಸ ಆದಾಯಗಳನ್ನು ಇದರ ಮೂಲಕ ಪಡೆಯಬಹುದು.
ಛಾಯಾಗ್ರಾಹಕರು ತಮ್ಮ ಪೋಟೊಗಳ ಪ್ರಿಂಟ್ ಗಳನ್ನು ನೇರವಾಗಿ ತಮ್ಮ ಓದುಗರಿಗೆ ಮಾರಬಹುದು. ಬರಹಗಾರರು ಮತ್ತು ಕವಿಗಳು ತಮ್ಮ ಅನನ್ಯವಾದ ಕೆಲಸದ ವಿಚಾರಗಳನ್ನು/ತುಣುಕುಗಳನ್ನು ಹಂಚಿಕೊಳ್ಳಬಹುದು.

ಬ್ಲಾಗ್ ಮೂಲಕ ಓದುಗರೊಂದಿಗೆ ಉತ್ತಮ ಸಂಪರ್ಕ ಬಾಂಧವ್ಯ

ಬ್ಲಾಗ್ ಮೂಲಕ ಓದುಗರೊಂದಿಗೆ ಉತ್ತಮ ಸಂಪರ್ಕ ಬಾಂಧವ್ಯ

ಬ್ಲಾಗ್ ಕೇವಲ ವ್ಯಾಪಾರವನ್ನಷ್ಟೆ ಮಾಡುವ ಕ್ಷೇತ್ರವಲ್ಲ. ಇದು ಅನೇಕ ವೈವಿಧ್ಯತೆಗಳ ಆಗರ. ಏಕೆಂದರೆ ನಿಮ್ಮ ನಿಷ್ಠಾವಂತ ಓದುಗರಿಗೆ ಮತ್ತು ನಿಮ್ಮ ವಿಚಾರಗಳಿಗೆ ಶೃದ್ದೆಯಿಂದ ಗಮನ ಕೊಡುವ ಜನರಿಗೆ ನೀವು ಬೆಲೆಬಾಳುವ ಸರಕು ಹಾಗೂ ರಿಯಲ್ ಹೀರೊ ಆಗಿರುತ್ತಿರಿ.

ಹೀಗಾಗಿ ನೀವು ಆನ್ಲೈನ್ ಕಾರ್ಯಾಗಾರ, ಸಲಹೆ, ಅತಿಥಿ ಬ್ಲಾಗಿಂಗ್, ಪುಸ್ತಕ, ಟಿವಿ ಅಥವಾ ರೇಡಿಯೋ ಕಾರ್ಯಕ್ರಮಗಳ ಮೂಲಕ ನಿಮ್ಮ ಓದುಗರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದು ಲಾಭದಾಯಕ ಮಾರ್ಗವಾಗಿರುತ್ತದೆ. ಇದರಿಂದಾಗಿ ಪರದೆಯ ಹಿಂದೆ ಜನರನ್ನು ಬ್ಲಾಗ್ ಮೂಲಕ ನಿರಂತರ ಸಂಪರ್ಕದಲ್ಲಿಡಲು ಸಹಾಯಕವಾಗಿರುತ್ತದೆ.

ಬ್ಲಾಗ್ ಹಣ ಮಾಡುವ ವ್ಯವಹಾರ ಕೇಂದ್ರ

ಬ್ಲಾಗ್ ಹಣ ಮಾಡುವ ವ್ಯವಹಾರ ಕೇಂದ್ರ

ನಿಧಾನವಾಗಿ ಪ್ರಾರಂಭವಾದ ಬ್ಲಾಗ್ ಕೊನೆ ಹಂತದಲ್ಲಿ ಒಂದು ಯಶಸ್ವಿ ಹಂತವನ್ನು ತಲುಪುತ್ತದೆ. ಆಗ ನಿಮಗೆ ಅಪಾರ ಓದುಗರ, ಹಿಂಬಾಲಕರ, ಆರಾಧಕರ ಸಂಖ್ಯೆ ಇರುತ್ತದೆ. ಆಗ ನೀವು ಐಕಾನ್ ಆಗಿ ಅವರ ಮುಂದೆ ಇರುತ್ತಿರಿ.
ಹೀಗಾಗಿ ಕೊನೆ ಘಳಿಗೆಯಲ್ಲಿ ನೀವು ಕನಸನ್ನು ಸಾಕಾರಗೊಳಿಸಿ ಬ್ಲಾಗ್ ಖಾತೆಯ ಮೂಲಕ ಅಪಾರ ಹಣ ಮತ್ತು ಕೀರ್ತಿ ಗಳಿಸುತ್ತಿರುತ್ತಿರಿ. ಅಂತಿಮವಾಗಿ ಬ್ಲಾಗ್ ಹಣ ಮಾಡುವ ಕೇಂದ್ರವಾಗಿ ಮಾರ್ಪಡುತ್ತಿರುತ್ತದೆ. ಇದು ಒಂದು ರೀತಿಯ ವ್ಯವಹಾರವೇ ಆಗಿರುತ್ತದೆ.

ಬ್ಲಾಗ್ ನಿರ್ವಹಣೆ

ಬ್ಲಾಗ್ ನಿರ್ವಹಣೆ

ಅಂತಿಮ ಹಂತದಲ್ಲಿ ಬ್ಲಾಗ್ ನಿರ್ವಹಣೆ ಮಾಡುವುದೇ ಒಂದು ಸವಾಲಾಗಿ ಪರಿಣಮಿಸುತ್ತದೆ. ಏಕೆಂದರೆ ನಿಮ್ಮ ಓದುಗರ, ಹಿಂಬಾಲಕರ ಆಶಯ ಹಾಗೂ ನಿರೀಕ್ಷೆಗಳನ್ನು ಪೂರೈಸುವ ದೊಡ್ಡ ಸವಾಲು ನಿಮ್ಮ ಮುಂದಿರುತ್ತದೆ.
ಬ್ಲಾಗ್ ನಿರ್ವಹಣೆ, ಓದುಗರೊಂದಿಗೆ ಪ್ರತಿಕ್ರಿಯಿಸಲು, ಪೋಸ್ಟ್ ಗಳನ್ನು ಹಾಕಲು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ.

ವೃತ್ತಿಪರರ ಸಲಹೆ

ವೃತ್ತಿಪರರ ಸಲಹೆ

ಬ್ಲಾಗ್ ಮುಖಾಂತರ ವಿಶ್ವದ ಪ್ರಸಿದ್ದ ವ್ಯಕ್ತಿಗಳ ಸಾಲಿನಲ್ಲಿ ನೀವು ನಿಲ್ಲುವಿರಿ. ಆ ಸಂದರ್ಭದಲ್ಲಿ ನಿಮ್ಮ ಓದುಗ ಮಿತ್ರರೊಂದಿಗೆ, ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು, ಅವರೊಂದಿಗೆ ವ್ಯವಹರಿಸಲು, ಕಾಲಕಾಲಕ್ಕೆ ಪ್ರಬುದ್ದತೆ ಸಾಧಿಸಲು ನಿಮಗೆ ವೃತ್ತಿಪರರ ನೆರವು, ಸಲಹೆ ಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ಅಭಿರುಚಿ ತಿಳಿಯಬಲ್ಲ ಉತ್ತಮ ವೃತ್ತಿಪರರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

Read more about: money blog ಬ್ಲಾಗ್ ಹಣ
English summary

How to Make Money through Blogging?

More and more peoples spent more time online, all of the creative folks out there should look for ways to use this to your advantage. A great way to go about this is by turning your blog into a money-making business.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X