For Quick Alerts
ALLOW NOTIFICATIONS  
For Daily Alerts

ಐಡಿಎಫ್ಸಿ(IDFC) ಬ್ಯಾಂಕಿನ ಆಕರ್ಷಕ ಕೊಡುಗೆ ಮತ್ತು ಸೇವೆ!

By Siddu
|

ಯಾವುದೇ ಬ್ಯಾಂಕು ಅಥವಾ ಕಂಪನಿ ಪ್ರಾರಂಭದಲ್ಲಿ ಬೆಳೆಯುವಾಗ ಅದರ ಮುಂದೆ ದೊಡ್ಡ ಸವಾಲುಗಳಿರುತ್ತವೆ. ಅದು ಗ್ರಾಹಕರ ಆಧಾರದ ಮೇಲೆ ಇರಬಹುದು ಇಲ್ಲವೆ ಸಂಪತ್ತಿನ ಆಧಾರದ ಮೇಲೆ ಇರಬಹುದು. ಈ ವಿಚಾರಗಳ ಹಿನ್ನೆಲೆಯಲ್ಲಿ ಐಡಿಎಫ್ಸಿ ಬ್ಯಾಂಕು ಕೂಡ ಒಂದು.

ಐಡಿಎಫ್ಸಿ(IDFC) ಬ್ಯಾಂಕು ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿ ಮೇಲೆ ಅನೇಕ ಕೊಡುಗೆಗಳನ್ನು ನೀಡುವುದರ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಈ ಬ್ಯಾಂಕು ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. (ಡಿಪಾಸಿಟ್ಸ್ ಮೇಲೆ ಹೆಚ್ಚು ಬಡ್ಡಿದರ ಕೊಡುವ ಸರ್ಕಾರಿ ಬ್ಯಾಂಕುಗಳು)

ಐಡಿಎಫ್ಸಿ(IDFC) ಬ್ಯಾಂಕು ಯಾವ ಯಾವ ಆಕರ್ಷಕ ಕೊಡುಗೆ ಮತ್ತು ಲಾಭಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂಬುದನ್ನು ನೋಡೋಣ.

ಅತಿ ಹೆಚ್ಚು ಠೇವಣಿ ದರ

ಅತಿ ಹೆಚ್ಚು ಠೇವಣಿ ದರ

ಐಡಿಎಫ್ಸಿ ಬ್ಯಾಂಕು 181 ದಿನಗಳಿಂದ 270 ದಿನಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 7.75ರಷ್ಟು ಅತಿ ಹೆಚ್ಚು ಬಡ್ಡಿದರ ಒದಗಿಸುತ್ತದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಅತ್ಯುತ್ತಮವಾದದ್ದು ಎಂದು ಹೇಳಬಹುದು.
ಇದು ದೊಡ್ಡ ಖಾಸಗಿ ವಲಯವನ್ನು ಸಹ ಮೀರಿಸಬಲ್ಲದು. ಹಿರಿಯ ನಾಗರಿಕರಿಗೆ ಐಡಿಎಫ್ಸಿ ಬ್ಯಾಂಕು ಶೇ. 8.25ರಷ್ಟು ಬಡ್ಡಿದರ ಕೊಡುವುದರಿಂದ ಇದು ನಿಮ್ಮ ಉತ್ತಮ ಆಯ್ಕೆ ಆಗಬಲ್ಲದು.

ವಿಸಾ ಡೆಬಿಟ್ ಕಾರ್ಡ್ ಮೇಲೆ ರೂ. 25 ಲಕ್ಷದ ವಿಮೆ

ವಿಸಾ ಡೆಬಿಟ್ ಕಾರ್ಡ್ ಮೇಲೆ ರೂ. 25 ಲಕ್ಷದ ವಿಮೆ

ನೀವು ಡೆಬಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ 25 ಲಕ್ಷ ಮೊತ್ತದ ವಿಮೆಯನ್ನು ಪಡೆಯಬಹುದು. ಇದಕ್ಕಾಗಿ ನೀವು ಮೊದಲು ಉಳಿತಾಯ ಬ್ಯಾಂಕು ಖಾತೆಯನ್ನು ತೆರೆಯಬೇಕಾಗುತ್ತದೆ.

ಎಫ್ಡಿ ಮುಂಚಿತವಾಗಿ ಬಿಡಿಸಿಕೊಂಡರು ದಂಡ ಇಲ್ಲ

ಎಫ್ಡಿ ಮುಂಚಿತವಾಗಿ ಬಿಡಿಸಿಕೊಂಡರು ದಂಡ ಇಲ್ಲ

ಸಾಮಾನ್ಯವಾಗಿ ಮೆಚುರಿಟಿಗೆ ಮುಂಚಿತವಾಗಿ ಸ್ಥಿರ ಠೇವಣಿ ವಿತ್ ಡ್ರಾ ಮಾಡಿಕೊಂಡರೆ ಶೇ. 1ರಷ್ಟು ದಂಡ ವಿಧಿಸಲಾಗುತ್ತದೆ.
ನಿರ್ಧಿಷ್ಟ ಕಾಲಾವಧಿಗೆ ಶೇ. 7ರಷ್ಟು ಬಡ್ಡಿದರ ಪಡೆಯುತ್ತಿದ್ದಲ್ಲಿ ಮೆಚುರಿಟಿಗೆ ಮುಂಚಿತವಾಗಿ ವಿತ್ ಡ್ರಾ ಮಾಡಿಕೊಂಡರೆ ಶೇ. 6ರಷ್ಟು ಬಡ್ಡಿದರ ಮಾತ್ರ ಪಡೆಯುತ್ತಿರಿ.
ಆದರೆ ಐಡಿಎಫ್ಸಿ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಮುಂಚಿತವಾಗಿ ವಿತ್ ಡ್ರಾ ಮಾಡಿಕೊಂಡರೆ ಬಡ್ಡಿದರ ಕಡಿತವಾಗುವುದಿಲ್ಲ. ಬದಲಾಗಿ ನಿಗದಿತ ಮೊತ್ತವನ್ನೇ ಪಡೆಯುತ್ತಿರಿ.

ಯಾವುದೇ ಎಟಿಎಂನಿಂದ ಅನಿಯಮಿತ ಉಚಿತ ನಗದು

ಯಾವುದೇ ಎಟಿಎಂನಿಂದ ಅನಿಯಮಿತ ಉಚಿತ ನಗದು

ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ಒಂದು ತಿಂಗಳಿಗೆ ಮೂರು ಬಾರಿ ಹಣ ವ್ಯವಹಾರ ಮಾಡಬಹುದು. ಅದಕ್ಕಿಂತ ಹೆಚ್ಚಿನ ವ್ಯವಹಾರಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಆದರೆ ಐಡಿಎಫ್ಸಿ ಬ್ಯಾಂಕಿನ ಎಟಿಎಂ ವ್ಯವಹಾರಕ್ಕೆ ಈ ನಿಯಮಗಳು ಅನ್ವಯಿಸುವುದಿಲ್ಲ. ಎಷ್ಟು ಬಾರಿ ಬೇಕಾದರೂ ಅನಿಯಮಿತ ಹಾಗೂ ಉಚಿತ ನಗದು ಪಡೆಯಬಹುದು.

ತ್ವರಿತ ಬ್ಯಾಂಕಿಂಗ್ ಮತ್ತು 4 ನಿಮಿಷದಲ್ಲಿ ಆನ್ಲೈನ್ ಪಿನ್

ತ್ವರಿತ ಬ್ಯಾಂಕಿಂಗ್ ಮತ್ತು 4 ನಿಮಿಷದಲ್ಲಿ ಆನ್ಲೈನ್ ಪಿನ್

ಐಡಿಎಫ್ಸಿ ಬ್ಯಾಂಕಿನಲ್ಲಿ ನಿಮಗೆ ತ್ವರಿತಗತಿಯ ಸೇವೆಗಳು ಲಭ್ಯವಾಗುತ್ತವೆ. ಆನ್ಲೈನ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಪಿನ್ ಕೇವಲ ನಾಲ್ಕು ನಿಮಿಷದಲ್ಲಿ ಒದಗಿಸಲಾಗುತ್ತದೆ.

ಇತರೆ ಸಾಮಾನ್ಯ ಉಪಯೋಗ

ಇತರೆ ಸಾಮಾನ್ಯ ಉಪಯೋಗ

ಇವೆಲ್ಲವುಗಳನ್ನು ಹೊರತು ಪಡಿಸಿ ಅನೇಕ ಪುಯೋಗಗಳು ಲಭ್ಯವಿದ್ದು, ಅದರಲ್ಲಿ ನೆಟ್ ಬ್ಯಾಂಕಿಂಗ್ ಕೂಡ ಒಂದು. ಬೇರೆ ಯಾವುದೇ ಬ್ಯಾಂಕುಗಳು ಕನಿಷ್ಠ ಠೇವಣಿಯನ್ನು ಖಾತೆಯಲ್ಲಿ ಉಳಿಸಬೇಕೆಂದು ಕೇಳಬಹುದು. ಆದರೆ ಈ ಬ್ಯಾಂಕಿನಲ್ಲಿ ಅದರ ಸಮಸ್ಯೆಯಿಲ್ಲ.

ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ಇವುಗಳಲ್ಲಿ ಹೂಡಿಕೆ ಮಾಡಿ.ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ಇವುಗಳಲ್ಲಿ ಹೂಡಿಕೆ ಮಾಡಿ.

English summary

IDFC Bank Account Has Some Good Features

IDFC Bank is doing just that with a host of freebies on savings account and bank deposits. These days nobody even cares, if the bank has a branch in the viscinity, given internet banking and doorstep banking.
Story first published: Tuesday, August 23, 2016, 15:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X