For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಪಾಲಿಸಿ: 10 ಉತ್ತಮ ಜೀವನ ರಕ್ಷಕ ಪಾಲಿಸಿ ಮತ್ತು ಪ್ರಯೋಜನಗಳು

By Siddu
|

ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು(ಎಲ್ಐಸಿ) ಬಹುಮುಖ್ಯ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ. ದೇಶವ್ಯಾಪಿ ಇದು ತನ್ನ ವಿಸ್ತಾರವನ್ನು ಹೊಂದಿದ್ದು, ಪ್ರತಿಯೊಂದು ಮನೆಮನೆಯಲ್ಲೂ ಪಾಲಿಸಿದಾರರಿದ್ದಾರೆಂದು ಹೇಳಬಹುದು. ಹೀಗಾಗಿ ಇದು ಜೀವನದ ಅವಿಭಾಜ್ಯ ಅಂಗವಾಗಿದೆ.

ಭಾರತದಲ್ಲಿ ಎಲ್ಐಸಿ ವಿಮೆ ವ್ಯಕ್ತಿಯ ನಿಧನದ ನಂತರ ಅಥವಾ ಜೀವಿತಾವಧಿಯಲ್ಲಿ ಕುಟುಂಬದ ಸದಸ್ಯರಿಗೆ ಅಥವಾ ನಾಮಿನಿಗೆ ಸುರಕ್ಷತೆ, ಭದ್ರತೆ, ನಷ್ಟಭರ್ತಿ, ಪರಿಹಾರ ಒದಗಿಸುತ್ತದೆ. ಎಲ್ಐಸಿ ಏಜೆಂಟರು ಗ್ರಾಹಕರಿಗೆ ವಿಮೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ವಿಮೆಗಳ ಪ್ರಕಾರ, ಪ್ರಯೋಜನೆ, ವಿಮಾ ಮೊತ್ತ, ಅವಧಿ, ಪರಿಹಾರ, ರಿಸ್ಕ್ ಕವರೇಜ್ ಇತ್ಯಾದಿ ಅನೇಕ ವಿಚಾರಗಳ ಮಾಹಿತಿ ಒದಗಿಸುತ್ತಾರೆ. ನಮಗೆ ಪರಿಚಯವಿರುವ, ವಿಶ್ವಾಸಾರ್ಹ ಏಜೆಂಟ್ ಬಳಿ ಪಾಲಿಸಿಗಳನ್ನು ಮಾಡಿಸುವುದು ಹಾಗೂ ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿರುವುದು ಉತ್ತಮ ವಿಧಾನ. (ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ 10 ಸಂಗತಿ)

ಪ್ರತಿಯೊಬ್ಬರಿಗೂ ಆಪತ್ ಕಾಲದಲ್ಲಿ ಸಹಾಯಕ್ಕೆ ನಿಲ್ಲಬಲ್ಲ, ಸುರಕ್ಷತೆ, ಭದ್ರತೆ, ಅನಾರೋಗ್ಯ, ನಿಧನ ಮತ್ತು ಅಪಘಾತ ಪರಿಹಾರ ಕೊಡಬಲ್ಲ ಅತ್ಯುತ್ತಮ ಎಲ್ಐಸಿ ಪಾಲಿಸಿಗಳನ್ನು ಪ್ರತಿಯೊಬ್ಬರೂ ಮಾಡಿಸುವುದು ಒಳಿತು. ಅಂತಹ 10 ಉತ್ತಮ ಪಾಲಿಸಿಗಳ ಮಾಹಿತಿ ಇಲ್ಲಿದೆ ನೋಡಿ.

ಎಲ್ಐಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪಾಲಿಸಿ

ಎಲ್ಐಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪಾಲಿಸಿ

ಈ ದತ್ತಿ ಯೋಜನೆ ಅಥವಾ ಪಾಲಿಸಿ ಉಳಿತಾಯ ಮತ್ತು ಹಣಕಾಸು ರಕ್ಷಣೆಯಾಗಿದೆ. ವಿಮೆಯ ಪರಿಪಕ್ವತೆಯ ಅವಧಿ ವ್ಯಕ್ತಿ ಮುಗಿಸಿದಲ್ಲಿ ವಿಮಾ ಮೊತ್ತದೊಂದಿಗೆ ಬೋನಸ್ ಮೊತ್ತವನ್ನು ಪಡೆಯುತ್ತಾನೆ. ಒಂದು ವೇಳೆ ವಿಮಾ ಅವಧಿ ಮುಗಿಯುವ ಮುನ್ನ ವ್ಯಕ್ತಿ ಸಾವನ್ನಪ್ಪಿದಲ್ಲಿ ನಾಮಿನಿ ಆ ಮೊತ್ತವನ್ನು ಪಡೆಯಲು ಅರ್ಹನಾಗಿರುತ್ತಾನೆ. ಎಷ್ಟೇ ಮೊತ್ತದ ವಿಮೆ ಇದ್ದರೂ ಸಹ ತೆರಿಗೆ ಪ್ರಮಾಣ ಜಾಸ್ತಿ ಇರುವುದಿಲ್ಲ. ಕೇವಲ ಶೇ. 10ರಷ್ಟು ಮಾತ್ರ ಇರುತ್ತದೆ.

ಈ ಪಾಲಿಸಿಯನ್ನು ಮಾಡಿಸುವ ಕನಿಷ್ಟ ವಯಸ್ಸು 90 ದಿನಗಳು ಹಾಗೂ ಗರಿಷ್ಠ ವರ್ಷ 65 ಆಗಿರುತ್ತದೆ. 10 ರಿಂದ 20 ವರ್ಷಗಳ ವ್ಯಾಪ್ತಿಯ ಅವಧಿ ಇರುತ್ತದೆ. ವಿಮಾ ಪರಿಪಕ್ವತೆಯ ಕನಿಷ್ಟ ವರ್ಷಗಳು 18-75 ಆಗಿದೆ. ಇ ವಿಮೆಯ ಕನಿಷ್ಟ ಮೊತ್ತ 50,000 ಸಾವಿರ ಆಗಿದ್ದು, ಇದಕ್ಕಿಂತಲೂ ಹೆಚ್ಚು ಎಷ್ಟಾದರೂ ಆಗಬಹುದು.

ಎಲ್ಐಸಿ ನ್ಯೂ ಎಂಡೋಮೆಂಟ್ ಪಾಲಿಸಿ

ಎಲ್ಐಸಿ ನ್ಯೂ ಎಂಡೋಮೆಂಟ್ ಪಾಲಿಸಿ

ಈ ವಿಮೆಯು ಪಾಲಿಸಿದಾರರಿಗೆ ಅಪಘಾತ ಮತ್ತು ವಿಕಲತೆಯ ಲಾಭವನ್ನು ಹೆಚ್ಚುವರಿಯಾಗಿ ಕೊಡುತ್ತದೆ.
ವ್ಯಕ್ತಿ ಮರಣ ಹೊಂದಿದಲ್ಲಿ ವಿಮೆಯ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ. 8-55 ವರ್ಷಗಳ ಅವಧಿಯಲ್ಲಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಜತೆಗೆ 75 ವರ್ಷಗಳವರೆಗೆ ಮುಂದುವರೆಸಬಹುದಾಗಿದೆ. ಆಕಸ್ಮಿಕವಾಗಿ ಅಪಘಾತದಲ್ಲಿ ಸಾವು ಸಂಭವಿಸಿದಲ್ಲಿ ವಿಮಾ ಮೊತ್ತದ ಎರಡು ಪಟ್ಟು ಮೊತ್ತ ಸಿಗುತ್ತದೆ.
ಪ್ರೀಮಿಯಂ ಮೊತ್ತದ ಮೇಲೆ ಮೊದಲ ವರ್ಷಕ್ಕೆ 3.09% ಮತ್ತು ಎರಡು ವರ್ಷ ಮೇಲ್ಪಟ್ಟು 1.54% ದರದಲ್ಲಿ ಸೇವಾ ತೆರಿಗೆ ಅನ್ವಯಿಸುತ್ತದೆ.
ಈ ವಿಮೆಯ ಅವಧಿ 12-35 ವರ್ಷಗಳಾಗಿದ್ದು, ಕನಿಷ್ಟ ಒಂದು ಲಕ್ಷ ರೂ ವಿಮಾ ಮೊತ್ತವಾಗಿರುತ್ತದೆ.

ಎಲ್ಐಸಿ ನ್ಯೂ ಜೀವನ್ ಆನಂದ ಪಾಲಿಸಿ

ಎಲ್ಐಸಿ ನ್ಯೂ ಜೀವನ್ ಆನಂದ ಪಾಲಿಸಿ

ಈ ಯೋಜನೆ ಪಾಲಿಸಿದಾರರಿಗೆ ಜೀವನ ಪರ್ಯಂತ ವಿಮೆ ಮತ್ತು ಅಪಾಯ ರಕ್ಷಣೆ ಒದಗಿಸುತ್ತದೆ. ಏಕೆಂದರೆ ಈ ಯೋಜನೆ ಪಾಲಿಸಿಯ ಅವಧಿ ಮುಗಿದ ನಂತರವೂ ಮುಂದುವರೆಯುತ್ತದೆ. ಪಾಲಿಸಿಯ ಅಂತ್ಯದಲ್ಲಿ ಪಾಲಿಸಿದಾರನಿಗೆ ಸಂಚಿತ ಮೊತ್ತ ಮತ್ತು ಅಂತಿಮ ಮೊತ್ತ ಸಿಗುತ್ತದೆ.
ಸಾವು ಸಂಭವಿಸಿದಲ್ಲಿ ಅಥವಾ 100 ವರ್ಷಗಳನ್ನು ಪೂರೈಸಿದಲ್ಲಿ ನಾಮಿನಿಗೆ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಪಾಲಿಸಿಯನ್ನು 18-50 ವರ್ಷಗಳಿಗೆ ಕೊಳ್ಳಬಹುದು.
ಪ್ರೀಮಿಯಂ ಮೊತ್ತವನ್ನು ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಮತ್ತು ತಿಂಗಳ ಅವಧಿಗೆ ತಕ್ಕಂತೆ ಪಾವತಿಸಬಹುದು. ಈ ಪಾಲಿಸಿಯ ಅವಧಿ 15-35 ವರ್ಷಗಳಾಗಿರುತ್ತದೆ. ಪಾಲಿಸಿಯ ಮೂಲ ಮೊತ್ತ 1,00,000 ರೂಪಾಯಿ ಆಗಿರುತ್ತದೆ. ಮೂರು ವರ್ಷಗಳ ನಂತರ ಸಾಲ ಪಡೆಯಬಹುದಾಗಿದೆ.
ಪ್ರೀಮಿಯಂ ಮೊತ್ತದ ಮೇಲೆ ಮೊದಲ ವರ್ಷಕ್ಕೆ 3.09% ಮತ್ತು ಎರಡು ವರ್ಷ ಮೇಲ್ಪಟ್ಟು 1.54% ದರದಲ್ಲಿ ಸೇವಾ ತೆರಿಗೆ ಅನ್ವಯಿಸುತ್ತದೆ.

ಎಲ್ಐಸಿ ಜೀವನ್ ರಕ್ಷಕ್

ಎಲ್ಐಸಿ ಜೀವನ್ ರಕ್ಷಕ್

ಇದು ನಿರಂತರ ಲಾಭ ಕೊಡುವ ಎಂಡೋಮೆಂಟ್ ಭರವಸೆಯ ಯೋಜನೆ ಆಗಿದ್ದು, ವೈದ್ಯಕೀಯವಲ್ಲದ ಸ್ಥಿರ ಲಾಭದ ಯೋಜನೆಯಾಗಿದೆ. ಪ್ರೀಮಿಯಂ ಅವಧಿಯ ಸಮಯದಲ್ಲಿ ಪಾಲಿಸಿದಾರ ಸಾವನ್ನಪ್ಪಿದರೆ ಪ್ರೀಮಿಯಂ ಮೊತ್ತ ಬಾಕಿ ಇಲ್ಲದಿದ್ದಲ್ಲಿ ಮೊತ್ತವನ್ನು ಪಾವತಿಸಬಹುದಾಗಿದೆ.
ಪಾಲಿಸಿಯ ಅವಧಿ ಮುಗಿದು ಐದು ವರ್ಷದ ನಂತರ ಸಾವು ಸಂಭವಿಸಿದಲ್ಲಿ ಲಾಯಲ್ಟಿ ಮೊತ್ತವನ್ನು ಪಾವತಿಸಲಾಗುತ್ತದೆ. ಪಾಲಿಸಿಯ ಅವಧಿ 10-20 ವರ್ಷಗಳಾಗಿರುತ್ತವೆ. ಮೂಲ ಮೊತ್ತ 75,000 ರೂ. ಹಾಗೂ ಗರಿಷ್ಠ ಮೊತ್ತ 2,00,000 ಆಗಿರುತ್ತದೆ. ಜತೆಗೆ ಮೆಚುರಿಟಿ ವಯಸ್ಸು 75 ಆಗಿದೆ.
ಮೂರು ವರ್ಷಗಳ ನಂತರ ಪಾಲಿಸಿಯನ್ನು ಶರಣಾಗತಿ ಮಾಡಬಹುದಾಗಿದ್ದು, ಪ್ರೀಮಿಯಂ ಮೊತ್ತವನ್ನು ಪಾವತಿಸಲಾಗುತ್ತದೆ.

ಎಲ್ಐಸಿ ಜೀವನ್ ಲಕ್ಷ್ಯ

ಎಲ್ಐಸಿ ಜೀವನ್ ಲಕ್ಷ್ಯ

ಇದು ಉತ್ತಮವಾದ ಪಾಲಿಸಿಗಳಲ್ಲಿ ಒಂದಾಗಿದ್ದು, ಈ ಯೋಜನೆ ಮುಖಾಂತರ ಕುಟುಂಬದ ಅಗತ್ಯತೆಗಳನ್ನು ಪೂರ್ಣಗೊಳಿಸಬಹುದಾಗಿದೆ. ಮೆಚುರಿಟಿ ಮುಂಚಿತವಾಗಿ ಪಾಲಿಸಿದಾರ ಆಕಸ್ಮಿಕವಾಗಿ ಸಾವನ್ನಪ್ಪಿದಲ್ಲಿ ಮೊತ್ತ ಮತ್ತು ಲಾಭವನ್ನು ಪಾವತಿಸಲಾಗುತ್ತದೆ. ಸರಳ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಕೂಡ ಸಿಗುತ್ತದೆ.
18-50 ವರ್ಷಗಳ ವಯಸ್ಸಿನೊಳಗೆ ಈ ಪಾಲಿಸಿಯನ್ನು ಮಾಡಬಹುದಾಗಿದ್ದು, ಮೆಚುರಿಟಿ ವಯಸ್ಸು 65 ಆಗಿರುತ್ತದೆ. ಈ ಪಾಲಿಸಿಯ ಅವಧಿ 13-25 ವರ್ಷಗಳಾಗಿರುತ್ತವೆ. ಪಾಲಿಸಿಯ ಕನಿಷ್ಟ ಮೊತ್ತ ಒಂದು ಲಕ್ಷ ಆಗಿದೆ. ಎಲ್ಐಸಿ ಆಕಸ್ಮಿಕ ಸಾವು, ಅಂಗವೈಕಲ್ಯ ಮತ್ತು ಎಲ್ಐಸಿ ಹೊಸ ಅವಧಿ ಅಶ್ಯುರೆನ್ಸ್ ಹೀಗೆ ಐಚ್ಛಿಕ ಪ್ರಯೋಜನಗಳನ್ನು ಪಡೆಯಬಹುದು.

ಎಲ್ಐಸಿ ಜೀವನ್ ಸಂಗಮ

ಎಲ್ಐಸಿ ಜೀವನ್ ಸಂಗಮ

ಇದು ಏಕ ಪ್ರೀಮಿಯಂ ಜೀವನ ವಿಮಾ ಯೋಜನೆ ಆಗಿದ್ದು, ಬಹು ಅಪಾಯದ ವ್ಯಾಪ್ತಿಗಳನ್ನು ಈ ಏಕ ಪ್ರೀಮಿಯಂ ಭರಿಸುಸುತ್ತದೆ. ಪಾಲಿಸಿದಾರ ಅಪಾಯ ಶುರುವಾಗುವ ದಿನಾಂಕದ ಮೊದಲು ಮತ್ತು ಐದು ವರ್ಷಗಳನ್ನು ಪೂರೈಸುವ ಮುನ್ನ ಸಾವನ್ನಪ್ಪಿದರೆ ಹೆಚ್ಚುವರಿ ಬಡ್ಡಿಯೊಂದಿಗೆ ಸೇವಾ ತೆರಿಗೆ ಇಲ್ಲದೆ ಹಿಂತಿರುಗಿಸಲಾಗುತ್ತದೆ.
೮೦ಸಿ ಸೆಕ್ಷನ್ ಅಡಿಯಲ್ಲಿ ಲಾಭ ಪಡೆಯಬಹುದಾಗಿದ್ದು, ಜತೆಗೆ ಮೆಚುರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. 6-50 ವರ್ಷಗಳ ವಯಸ್ಸಿನೊಳಗೆ ಈ ಪಾಲಿಸಿಯನ್ನು ಮಾಡಬಹುದಾಗಿದ್ದು, ಈ ಪಾಲಿಸಿಯ ಅವಧಿ 12 ವರ್ಷಗಳಾಗಿರುತ್ತವೆ. ಮೂರು ತಿಂಗಳ ನಂತರ ಸಾಲವನ್ನು ಪಡೆಯಬಹುದಾಗಿದೆ. ಜತೆಗೆ ಶರಣಾಗತಿಯನ್ನು ಯಾವುದೇ ಸಮಯದಲ್ಲೂ ಮಾಡಬಹುದು.

ಎಲ್ಐಸಿ ಜೀವನ್ ತರುಣ

ಎಲ್ಐಸಿ ಜೀವನ್ ತರುಣ

ಇದು ಸೀಮಿತ ಮೊತ್ತ ಪಾವತಿ ಮಾಡುವ ಪಾಲಿಸಿಯಾಗಿದೆ. ಮಕ್ಕಳ ಶಿಕ್ಷಣದ ಅವಶ್ಯಕತೆಗಳನ್ನು ಪೂರೈಸಲು ವಾರ್ಷಿಕ ಲಾಭದ ಹಿನ್ನೆಲೆಯಲ್ಲಿ 20-24 ವರ್ಷಗಳ ಅವಧಿಗೆ ಮಾಡಲಾಗುತ್ತದೆ. 25ನೇ ವರ್ಷಕ್ಕೆ ಮೆಚುರಿಟಿಯ ಲಾಭಗಳನ್ನು ನೀಡಲಾಗುತ್ತದೆ.
ಪಾಲಿಸಿದಾರರು ಆಕಸ್ಮಿಕವಾಗಿ ಸಾವನ್ನಪ್ಪಿದಲ್ಲಿ ತೆರಿಗೆ ಹೊರತುಪಡಿಸಿ, ಹೆಚ್ಚುವರಿ ಮೊತ್ತ ಮತ್ತು ಲಾಭವನ್ನು ಪಾವತಿಸಲಾಗುತ್ತದೆ. ಇದು ಮಕ್ಕಳಿಗಾಗಿ ಮತ್ತು ಅವರ ಶಿಕ್ಷಣದ ದೃಷ್ಟಿಯಿಂದ ಮಾಡಲಾಗುವ ಜನಪ್ರಿಯ ಪಾಲಿಸಿಯಾಗಿದೆ. ಈ ಪಾಲಿಸಿ ಅಡಿಯಲ್ಲಿ ಮಕ್ಕಳಿಗೆ ಪ್ರಯೋಜನಗಳು ತುಂಬಾ ಇವೆ.

ಎಲ್ಐಸಿ ಅಮೂಲ್ಯ ಜೀವನ್ - 2

ಎಲ್ಐಸಿ ಅಮೂಲ್ಯ ಜೀವನ್ - 2

ಪಾಲಿಸಿದಾರನು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಆತನ ಕುಟುಂಬಕ್ಕೆ ಹಣಕಾಸಿನ ಸೌಲಭ್ಯವನ್ನು ಎಲ್ಐಸಿ ಅಮೂಲ್ಯ ಜೀವನ್ - 2 ಪಾಲಿಸಿ ಒದಗಿಸುತ್ತದೆ.
ಇದರ ಪ್ರಮುಖವಾದ ಲಾಭಗಳೆಂದರೆ ಮರಣ ಮತ್ತು ಮೆಚುರಿಟಿ ಪ್ರಯೋಜನಗಳಾಗಿವೆ. ಈ ಪಾಲಿಸಿಯ ಅವಧಿಯ ಸಂದರ್ಭದಲ್ಲಿ ವ್ಯಕ್ತಿ ಸಾವನ್ನಪ್ಪಿದಲ್ಲಿ ಅಶ್ಯುರ್ಡ್ ಮೊತ್ತವನ್ನು ಪಾವತಿಸಲಾಗುತ್ತದೆ. ಒಂದು ವೇಳೆ ಪಾಲಿಸಿದಾರನು ಈ ಪಾಲಿಸಿಯ ಅವಧಿ ಮುಗಿಯುವವರೆಗೂ ಬದುಕುಳಿದರೆ ಮೊತ್ತವನ್ನು ಪಾವತಿಸಲಾಗುವುದಿಲ್ಲ. ಈ ಯೋಜನೆ ಅಡಿಯಲ್ಲಿ ಸಾಲ ಕೊಡಲಾಗುವುದಿಲ್ಲ. ಶರಣಾಗತಿ ಪ್ರಯೋಜನಗಳು ಇರುವುದಿಲ್ಲ. ಆಕಸ್ಮಾತ್ ಪಾಲಿಸಿದಾರ ಅಪಾಯದ ಅವಧಿ ಶುರುವಾಗುವ ಮುನ್ನ ಯಾವುದಾದರೂ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರೆ ಶೇ 80ರಷ್ಟು ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಪಾಲಿಸಿಯ ಕನಿಷ್ಟ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 60 ಆಗಿದೆ. ಪಾಲಿಸಿಯ ಅವಧಿ 5-35 ವರ್ಷ ಆಗಿರುತ್ತದೆ. ಕನಿಷ್ಟ ಮೊತ್ತ 25,00,000 ರೂ. ಆಗಿರುತ್ತದೆ. ಮೆಚುರಿಟಿಯ ಗರಿಷ್ಠ ವಯೋಮಿತಿ 70 ಆಗಿದೆ. ಶೇ 12ರಷ್ಟು ಸೇವಾ ತೆರಿಗೆ ಪ್ರಯೋಜನ ಇರುತ್ತದೆ.

ಎಲ್ಐಸಿ ಇ-ಟರ್ಮ್

ಎಲ್ಐಸಿ ಇ-ಟರ್ಮ್

ಆನ್ಲೈನ್ ಮೂಲಕ ಲಭ್ಯವಿರುವ ಈ ವಿಮೆ ಪರಿಶುದ್ದ ಅವಧಿಯ ಯೋಜನೆಯಾಗಿದೆ. ಧೂಮಪಾನಿಗಳಿಗೆ ಮತ್ತು ಧೂಮಪಾನ ಮಾಡದೆ ಇರುವವರಿಗೆ ವಿಭಿನ್ನ ಪ್ರೀಮಿಯಂ ದರದ ಯೋಜನೆಗಳಿವೆ. ಇದರಲ್ಲಿ ಮರಣದ ಲಾಭಗಳನ್ನು ಮಾತ್ರ ಪಡೆಯಬಹುದು. ಪಾಲಿಸಿದಾರ ಈ ಯೋಜನೆ ಅವಧಿಯಲ್ಲಿ ಮರಣ ಹೊಂದಿದಲ್ಲಿ ಮೊತ್ತವನ್ನು ಪಾವತಿಸಲಾಗುತ್ತದೆ. ಒಂದು ವೇಳೆ ಪಾಲಿಸಿದಾರನು ಈ ಯೋಜನೆ ಮುಗಿಯುವವರೆಗೆ ಬದುಕಿದ್ದರೆ ವಿಮಾ ಮೊತ್ತವನ್ನು ನೀಡಲಾಗುವುದಿಲ್ಲ. ಈ ವಿಮೆಯ ಕನಿಷ್ಟ ಮೊತ್ತ 2,00,000 ರೂಪಾಯಿ ಹಾಗೂ ಧೂಮಪಾನಿಗಳಲ್ಲದವರಿಗೆ 50,00,000 ರೂ. ಆಗಿರುತ್ತದೆ.
18 ರಿಂದ 60 ವರ್ಷ ವಯಸ್ಸಿನೊಳಗಿನವರು ಈ ವಿಮೆಯನ್ನು ಮಾಡಿಸಬಹುದು. 75 ಗರಿಷ್ಠ ರಕ್ಷಣೆಯ ವಯಸ್ಸು ಆಗಿದೆ. 10-35 ವರ್ಷಗಳು ಈ ವಿಮೆಯ ಅವಧಿಯಾಗಿರುತ್ತದೆ. ವಾರ್ಷಿಕವಾಗಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಎಲ್ಐಸಿ ನ್ಯೂ ಭೀಮ ಬಚತ್

ಎಲ್ಐಸಿ ನ್ಯೂ ಭೀಮ ಬಚತ್

ಇದು ಉಳಿತಾಯ ಮತ್ತು ರಕ್ಷಣಾ ಪಾಲಿಸಿಯಾಗಿದ್ದು, ಪಾಲಿದಾರ ಮರಣ ಹೊಂದಿದಲ್ಲಿ ಹಣಕಾಸಿನ ರಕ್ಷಣೆ ಒದಗಿಸುತ್ತದೆ. ಈ ವಿಮೆ ಮೆಚುರಿಟಿ ತಲುಪಿದ ನಂತರ ಪ್ರೀಮಿಯಂ ಮೊತ್ತದ ಜತೆ ಲಾಯಲ್ಟಿ ಸೇರುತ್ತದೆ.
9 ವರ್ಷಗಳ ಅವಧಿಗೆ ಈ ವಿಮೆಯ ಗರಿಷ್ಠ ವಯೋಮಿತಿ 66 ವರ್ಷ, 12 ವರ್ಷಗಳ ಅವಧಿಗೆ ಗರಿಷ್ಠ ವಯೋಮಿತಿ 63 ವರ್ಷ ಹಾಗೂ ೧೫ ವರ್ಷಗಳ ಅವಧಿಯ ವಿಮೆಗೆ 60 ವರ್ಷ ಗರಿಷ್ಠ ವಯೋಮಿತಿ ಇರುತ್ತದೆ.
9 ವರ್ಷಗಳ ಅವಧಿಯ ಪಾಲಿಸಿಗೆ 35,000 ರೂಪಾಯಿ, 12 ವರ್ಷಗಳ ಅವಧಿಗೆ 50,000 ರೂಪಾಯಿ ಮತ್ತು 15 ವರ್ಷಗಳ ಅವಧಿಗೆ 70,000 ರೂ ಆಗಿರುತ್ತದೆ. ಮೆಚುರಿಟಿಯ ವಯಸ್ಸು 75ವರ್ಷಗಳಾಗಿರುತ್ತದೆ.

English summary

LIC Policy: 10 best lic policies and benefits

Life insurance policy by Lic of India provides safety, security and reparation or compensation to the nominee or family members on the demise of an insured individual. More often the not, the liability of the family lies on the shoulders of one person.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X