For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಕಂತು ನೆಟ್/ಫೋನ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಲಾಭಗಳೇನು?

By Siddu Thorat
|

ಭಾರತದ ಹಣಕಾಸು ಸಂಸ್ಥೆಗಳಲ್ಲಿ ಭಾರತಿಯ ಜೀವನ ವಿಮಾ ನಿಗಮ(ಎಲ್ಐಸಿ) ಒಂದು ಬಹುಮುಖ್ಯ ಸಂಸ್ಥೆ. ಎಲ್ಐಸಿ ಪಾಲಿಸಿ ಇಲ್ಲದ ಮನೆ ಇಲ್ಲ ಎನ್ನುವಂತೆ ದೇಶದ ಮೂಲೆಮೂಲೆಗೂ ತನ್ನ ವ್ಯಾಪಕ ವಿಸ್ತಾರವನ್ನು ಹೊಂದಿದೆ.

ಹೀಗಾಗಿ ಎಲ್ಐಸಿ ನಿಗಮ ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತ ಬಂದಿದೆ. ಅದರಲ್ಲಿ ನೆಟ್/ಫೋನ್ ಬ್ಯಾಂಕಿಂಗ್ ಸೌಲಭ್ಯ ಹೊಸ ಸೇರ್ಪಡೆಯಾಗಿದೆ. (ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು)

ನೆಟ್/ಫೋನ್ ಬ್ಯಾಂಕಿಂಗ್ ಪ್ರಯೋಜನಗಳೇನು? ಯಾವ ಪಾಲಿಸಿಗಳ ಪ್ರೀಮಿಯಂ ಪಾವತಿ ಮಾಡಬಹುದು? ಸೌಲಭ್ಯಕ್ಕಾಗಿ ಪಾವತಿಸಬೇಕಾಗಿರುವ ಶುಲ್ಕ ಎಷ್ಟು? ಯಾವ ಸಂಸ್ಥೆಗಳ ಮೂಲಕ ಪ್ರೀಮಿಯಂ ಸಂಗ್ರಹಿಸಬಹುದು? ವೆಬ್ಸೈಟ್ ನಲ್ಲಿ ವಿವರ ತುಂಬುವುದು ಹೇಗೆ? ಯಾರು ನೋಂದಾಯಿಸಿಕೊಳ್ಳಬಹುದು? ಇದರ ಪ್ರಕ್ರಿಯಾ ಕ್ರಮಗಳೇನು? ಹೀಗೆ ಅನೇಕ ಗೊಂದಲಗಳು ನಮ್ಮಲ್ಲಿ ಇದ್ದೆ ಇರುತ್ತವೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನೆಟ್/ಫೋನ್ ಬ್ಯಾಂಕಿಂಗ್ ಪ್ರಯೋಜನಗಳೇನು?

ನೆಟ್/ಫೋನ್ ಬ್ಯಾಂಕಿಂಗ್ ಪ್ರಯೋಜನಗಳೇನು?

1. ಎಲ್ಲೆಡೆಗಳಲ್ಲೂ ಮತ್ತು ಯಾವುದೇ ಸಮಯದಲ್ಲೂ ಇಂಟರ್ನೆಟ್ ಲಭ್ಯ ಇರುವುದರಿಂದ ದಿನದ ೨೪ ಗಂಟೆ ಮತ್ತು ವಾರದ ೭ ದಿನ ಹೀಗೆ ಯಾವಾಗ ಬೇಕಾದರೂ ಕಂತುಗಳನ್ನು ತುಂಬಬಹುದು.
2. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಕುಳಿತುಕೊಂಡು ಪಾವತಿಯ ಸೂಚನೆಗಳನ್ನು ನೀಡಬಹುದು ಇಲ್ಲವೇ ಪಡೆಯಬಹುದು. ಇದರಿಂದಾಗಿ ನೀವು ಎಲ್ಐಸಿ ಶಾಖೆಗೆ ಹೋಗಬೇಕಾದ ಅಗತ್ಯ ಇರುವುದಿಲ್ಲ.
3. ಸಾಲಿನಲ್ಲಿ ನಿಂತುಕೊಂಡು ಪ್ರೀಮಿಯಮ್ ಮೊತ್ತ ಕಟ್ಟಬೇಕಾದ ಅಗತ್ಯ ಇಲ್ಲದೆ ಇರುವುದರಿಂದ ಸಮಯದ ಉಳಿತಾಯ ಮಾಡಬಹುದು.
4. ಈ ಅನುಕೂಲಕ್ಕಾಗಿ ನೀವು ಎಲ್ಐಸಿ ಅಥವಾ ಅಧಿಕೃತ ಏಜೆನ್ಸಿಗಳಿಗೆ ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಇದು ಉಚಿತ ಸೇವೆಯಾಗಿದೆ.
5. ಬ್ಯಾಂಕು ಖಾತೆಗಳ ಮೂಲಕ ಮೊತ್ತವನ್ನು ಪಾವತಿಸಲು ಬಯಸಿದ್ದಲ್ಲಿ ನಿಮ್ಮ ಯಾವುದೇ ಬ್ಯಾಂಕಿನ ಅಥವಾ ಎಲ್ಲಾ ಬ್ಯಾಂಕಿನ ಖಾತೆ ಸಂಖ್ಯೆಯನ್ನು ನೋಂದಣಿ ಮಾಡಿಸಬಹುದು.

ನೆಟ್/ಫೋನ್ ಬ್ಯಾಂಕಿಂಗ್ ಪ್ರಯೋಜನಗಳೇನು?

ನೆಟ್/ಫೋನ್ ಬ್ಯಾಂಕಿಂಗ್ ಪ್ರಯೋಜನಗಳೇನು?

6. ನಿಮ್ಮ ಯಾವ ಖಾತೆಯಲ್ಲಿ ಡೆಬಿಟ್ ಮಾಡಬೇಕು ಎಂದುಕೊಂಡಿರುವ ದಿನಾಂಕವನ್ನು ಮುಂಚಿತವಾಗಿ ನಿರ್ಧರಿಸಬಹುದು.
7. ಯಾವುದೇ ಸಮಯದಲ್ಲಾದರೂ ನಿಮ್ಮ ಸೂಚನೆಗಳನ್ನು ಮಾರ್ಪಡಿಸಲು, ಬದಲಾಯಿಸಲು ಅವಕಾಶವಿರುತ್ತದೆ.
8. ಪ್ರೀಮಿಯಂ ಬಾಕಿ ಬಗ್ಗೆ ಬ್ಯಾಂಕು ಮತ್ತು ಸೇವಾದಾರರಿಂದ ಇಮೇಲ್ ಮೂಲಕ ಜ್ಞಾಪನಾ ಸಂದೇಶಗಳನ್ನು ಪಡೆಯಬಹುದು.
9. ನೆಟ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಅಂಚೆ ಅಥವಾ ಕೋರಿಯರ್ ವೆಚ್ಚಗಳನ್ನು ತಪ್ಪಿಸಬಹುದು.
10. ಡಿಡಿ, ಪೇ ಆರ್ಡರ್ ಶುಲ್ಕ, ಪ್ರೀಮಿಯಂ ಬಾಕಿ ಮತ್ತು ಇತರೆ ಪಾಲಿಸಿ ನಿಯಮಗಳನ್ನು ತಿಳಿಯಬಹುದು.

ನೆಟ್/ಫೋನ್ ಬ್ಯಾಂಕಿಂಗ್ ಮೂಲಕ ಯಾವ ಪಾಲಿಸಿಗಳ ಪ್ರೀಮಿಯಂ ಪಾವತಿ ಮಾಡಬಹುದು?
 

ನೆಟ್/ಫೋನ್ ಬ್ಯಾಂಕಿಂಗ್ ಮೂಲಕ ಯಾವ ಪಾಲಿಸಿಗಳ ಪ್ರೀಮಿಯಂ ಪಾವತಿ ಮಾಡಬಹುದು?

1. ವಾರ್ಷಿಕ, ಅರ್ಧ ವಾರ್ಷಿಕ ಅಥವಾ ತ್ರೈಮಾಸಿಕ ಕಂತುಗಳ ಮೂಲಕ ಪಾವತಿಸುವ ಪಾಲಿಸಿಗಳಿಗೆ ಇ ಸೌಲಭ್ಯವಿದೆ.

2. ನೆಟ್ವರ್ಕ ಇರುವ ಶಾಖೆಗಳಲ್ಲಿ ಕಾರ್ಯನಿರ್ವಹಿಸಲ್ಪಡುವ ಪಾಲಿಸಿಗಳು ಈ ವ್ಯಾಪ್ತಿಗೆ ಒಳಪಡುತ್ತವೆ. MAN (Metro Area Network) or WAN (Wide Area Network) ಸೇವೆಯ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ.

3. ಸಿಂಗಲ್ ಪ್ರೀಮಿಯಂ, ಸಾಮಾನ್ಯ ಮಾಸಿಕ ಮತ್ತು ಸಂಬಳ ಉಳಿತಾಯ ಯೋಜನೆಗಳಿಗೆ ಈ ಸೌಲಭ್ಯ ಇರುವುದಿಲ್ಲ.
4. ಲ್ಯಾಪ್ಸ್ ಅಥವಾ ಪುನರ್ ಪ್ರಾರಂಭ ಮಾಡಲು ಆಗದೇ ಇರುವಂತಹ ಪಾಲಿಸಿಗಳನ್ನು ತುಂಬುವ ಸೌಲಬ್ಯವಿಲ್ಲ.

ಈ ಸೌಲಭ್ಯಕ್ಕಾಗಿ ಪಾವತಿಸಬೇಕಾಗಿರುವ ಶುಲ್ಕ ಎಷ್ಟು?

ಈ ಸೌಲಭ್ಯಕ್ಕಾಗಿ ಪಾವತಿಸಬೇಕಾಗಿರುವ ಶುಲ್ಕ ಎಷ್ಟು?

1. ಎಲ್ಐಸಿ ಪಾಲಿಸಿದಾರರಿಗೆ ಈ ಸೌಲಭ್ಯ ಸಂಪೂರ್ಣ ಉಚಿತ ಇರುತ್ತದೆ.
2. ತಿಂಗಳ ವಹಿವಾಟಿನ ಆಧಾರದ ಮೇಲೆ ಎಲ್ಐಸಿ ನಿಗಮ ಬ್ಯಾಂಕು/ಅಧಿಕೃತ ಏಜಿನ್ಸಿಗಳೊಂದಿಗಿನ ಪರಸ್ಪರ ಒಪ್ಪಿಗೆ ಒಪ್ಪಂದದ ಮೂಲಕ ಕಾರ್ಯನಿರ್ವಹಿಸುತ್ತದೆ.
3. ಈ ಸೌಲಭ್ಯ ಪಡೆಯಲು ಗ್ರಾಹಕರು ಶುಲ್ಕ ಪಾವತಿಸಬೇಕಾಗಿಲ್ಲ.

ನೆಟ್/ಫೋನ್ ಬ್ಯಾಂಕಿಂಗ್ ಯಾವ ಸಂಸ್ಥೆಗಳ ಮೂಲಕ ಪ್ರೀಮಿಯಂ ಸಂಗ್ರಹಿಸಬಹುದು?

ನೆಟ್/ಫೋನ್ ಬ್ಯಾಂಕಿಂಗ್ ಯಾವ ಸಂಸ್ಥೆಗಳ ಮೂಲಕ ಪ್ರೀಮಿಯಂ ಸಂಗ್ರಹಿಸಬಹುದು?

1. ಅಧಿಕೃತ ಬ್ಯಾಂಕುಗಳು
ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪಂಜಾಬ್ ಬ್ಯಾಂಕ್, ಯುಟಿಯ ಬ್ಯಾಂಕ್, ಫೆಡರಲ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಸಿಟಿಬ್ಯಾಂಕ್

2. ಅಧಿಕೃತ ಸೇವಾ ಕೇಂದ್ರಗಳು
BillJunction.com , Timesofmoney.com , ಮತ್ತು BillDesk.com 

ಅಧಿಕೃತ ಬ್ಯಾಂಕುಗಳೊಂದಿಗೆ ಯಾರು ನೋಂದಾಯಿಸಿಕೊಳ್ಳಬಹುದು?

ಅಧಿಕೃತ ಬ್ಯಾಂಕುಗಳೊಂದಿಗೆ ಯಾರು ನೋಂದಾಯಿಸಿಕೊಳ್ಳಬಹುದು?

1. ಮೇಲೆ ಉಲ್ಲೇಖಿಸಿದ ಯಾವುದೇ ಬ್ಯಾಂಕುಗಳಲ್ಲಿ ಖಾತೆ ಇದ್ದ ಪಾಲಿಸಿದಾರರು ನೋಂದಾಯಿಸಿಕೊಳ್ಲಬಹುದು.
2. ಆಯಾ ಬ್ಯಾಂಕಿನಲ್ಲಿ ಮಾತ್ರ ನೆಟ್ ಬ್ಯಾಂಕಿಂಗ್ ಸೌಲಭ್ಯ ಆರಿಸಿಕೊಳ್ಳಬೇಕು. ಜತೆಗೆ ಆಯಾ ಬ್ಯಾಂಕುಗಳ ವೆಬ್ಸೈಟ್ ಮೂಲಕ ವಿವರ ಪಡೆಯಬಹುದು.
3. ಹೊಸ ಗ್ರಾಹಕರಿಗೆ ಡೌನ್ಲೋಡ್ ಸ್ವರೂಪ ಲಭ್ಯವಿದೆ. ಬ್ಯಾಂಕುಗಳು ಒದಗಿಸುವ ಲಾಗಿನ್ ಮತ್ತು ಪಾಸ್ವರ್ಡ್ ಗಳ ಮೂಲಕ ನೆಟ್ ಬ್ಯಾಂಕಿಂಗ್ ನಡೆಸಬಹುದು.
4. ಹೆಚ್ಚಿನ ಮಾಹಿತಿಗಾಗಿ ಆಯಾ ಬ್ಯಾಂಕುಗಳ ವೆಬ್ಸೈಟ್ ಗಳಿಗೆ ಲಾಗ್ ಆನ್ ಆಗಬಹುದು.

ಅಧಿಕೃತ ಸೇವಾ ಕೇಂದ್ರಗಳಿರುವ ನಗರಗಳು

ಅಧಿಕೃತ ಸೇವಾ ಕೇಂದ್ರಗಳಿರುವ ನಗರಗಳು

1. BillJunction.com ಮುಂಬೈ, ದೆಹಲಿ, ಕೋಲ್ಕತಾ, ಚೆನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ನಗರಗಳಲ್ಲಿ ತನ್ನ ಕಾರ್ಯಾಚರಣೆ ಹೊಂದಿದೆ.
2. TimesofMoney.com ಮುಂಬೈ, ದೆಹಲಿ, ಬೆಂಗಳೂರು ಗಳಲ್ಲಿ ಕಾರ್ಯಾಚರಣೆ ಹೊಂದಿದೆ.
3. BillDesk.com ಮುಂಬೈ, ದೆಹಲಿ, ಕೋಲ್ಕತಾ, ಚೆನೈ ಬೆಂಗಳೂರು, ಅಹಮದಾಬಾದ್ , ಪುಣೆ, ಬರೋಡ ಮತ್ತು ಸೂರತ್ ಹಾಗೂ ಪಾಲುದಾರ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ABN-AMRO ಬ್ಯಾಂಕ್ ಜೊತೆ ಟೈ ಅಪ್ ಹೊಂದಿದೆ.

ಅಧಿಕೃತ ಬ್ಯಾಂಕ್ / ಸೇವೆ ಒದಗಿಸುವ ವೆಬ್ಸೈಟ್ ನಲ್ಲಿ ವಿವರ ತುಂಬುವುದು ಹೇಗೆ?

ಅಧಿಕೃತ ಬ್ಯಾಂಕ್ / ಸೇವೆ ಒದಗಿಸುವ ವೆಬ್ಸೈಟ್ ನಲ್ಲಿ ವಿವರ ತುಂಬುವುದು ಹೇಗೆ?

1. ಬ್ಯಾಂಕು/ ಸೇವೆ ಒದಗಿಸುವವರು ನೀಡಿರುವ ವೆಬ್ಸೈಟ್ ಮೂಲಕ ನಿಮ್ಮ ಖಾತೆ ಪೇಜ್ ನಲ್ಲಿ ಲಾಗಿನ್ ಮತ್ತು ಪಾಸ್ವರ್ಡ್ ಬಳಸಿ ವಿವರಗಳನ್ನು ತುಂಬಬಹುದು.

2. ಪಾಲಿಸಿ ನಂಬರ್, ಪ್ರೀಮಿಯಂ ಕಂತು, ಇಮೇಲ್ ಐಡಿ ಮತ್ತು ಇನ್ನೀತರ ಮಾಹಿತಿಯನ್ನು ಸಾಮಾನ್ಯವಾಗಿ ತುಂಬಬೇಕು.

ವಿಮೆ ಕಂತು ಯಾವಾಗ ತುಂಬಬೇಕು?

ವಿಮೆ ಕಂತು ಯಾವಾಗ ತುಂಬಬೇಕು?

ನೋಂದಣಿ ದೃಢೀಕರಣ ಖಚಿತವಾದ ಮೇಲೆ ಎಲ್ಐಸಿ ನಿಗಮದಿಂದ ನಿಮಗೆ ಬಿಲ್, ಸಿಂಧುತ್ವ ದಿನಾಂಕ, ಪ್ರೀಮಿಯಂ ಮೊತ್ತ, ವಿಳಂಬ ಶುಲ್ಕ, ದಿನಾಂಕದ ಅವಧಿ
ಇತ್ಯಾದಿ ಮಾಹಿತಿಯನ್ನು ಬ್ಯಾಂಕು ಅಥವಾ ಸೇವಾದಾರರು ನಿರಂತರವಾಗಿ ಕಳುಹಿಸುತ್ತಿರುತ್ತಾರೆ.

English summary

LIC: What are the benefits through paid of Internet banking?

The LIC Corporation has been providing various facilities to its customers from time to time . The Net / Phone Banking facility 's new addition.Internet / Phone banking What are the benefits ? What policies can pay the premium ? We have so many confusions I'd be . Here is their complete information.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X