For Quick Alerts
ALLOW NOTIFICATIONS  
For Daily Alerts

ಐಟಿ-ಸ್ಟಾರ್ಟ್ಅಪ್ ವಲಯದಲ್ಲಿ ಉದ್ಯೋಗ ನಷ್ಟ ಭೀತಿ ಇಲ್ಲ!

By Siddu Thorat
|

ಸ್ಟಾರ್ಟ್ಅಪ್ ಮತ್ತು ಮಾಹಿತಿ ತಂತ್ರಜ್ಞಾನ(ಐಟಿ) ಸ್ಥಗಿತದ ಬೆಳವಣಿಗೆ ಹೊರತಾಗಿ ಹೇಳಿಕೊಳ್ಳುವಷ್ಟು ಉದ್ಯೋಗ ಕಡಿತವಾಗಿಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

 

ತಂತ್ರಜ್ಞಾನ ಮತ್ತು ನವೋದ್ಯಮ ವಲಯದಲ್ಲಿ ಪಿಂಕ್ ಸ್ಲಿಪ್ ಗಳ ಬಗ್ಗೆ ವರದಿ ಆಗುತ್ತಿದ್ದರೂ, ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ ಎಂದೇ ಹೇಳಬಹುದು. ಅಲ್ಲದೇ ಉದ್ಯೋಗಾಕಾಂಕ್ಷಿಗಳಿಗೆ ಈ ಕ್ಷೇತ್ರವೇ ಆಕರ್ಷಣೀಯವಾಗಿ ಈಗಲೂ ಉಳಿದುಕೊಂಡಿದೆ.

ಕಳೆದ ಒಂದು ತಿಂಗಳಿನಿಂದ ದೇಶದಾದ್ಯಂತ ಅನೇಕ ಕಂಪನಿಗಳು ಉದ್ಯೋಗಿಗಳ ವಜಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದೆಂಬ ಭೀತಿಯಲ್ಲಿ ಇದ್ದರು. ಈ ನಡುವೆ ಆದ ಕೆಲ ಬೆಳವಣಿಗೆ, ತಜ್ಞರ ಅಭಿಪ್ರಾಯ, ಸಲಹೆ ಮತ್ತು ಉದ್ಯೋಗಿಗಳು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮ ಇತ್ಯಾದಿಗಳ ಮಾಹಿತಿ ಇಲ್ಲಿದೆ.

ಬದಲಾವಣೆಗೆ ತೆರೆದುಕೊಳ್ಳುತ್ತಿರಬೇಕು

ಬದಲಾವಣೆಗೆ ತೆರೆದುಕೊಳ್ಳುತ್ತಿರಬೇಕು

ಹೌದು. ಈ ಮಾತು ಅಕ್ಷರಶಹ ಸತ್ಯ. ಐಟಿ ಮತ್ತು ನವೋದ್ಯಮದ ಉದ್ಯೋಗಿಗಳು ನಿರಂತರವಾಗಿ ಬದಲಾಗುತ್ತಿರುವ ಹೊಸ ತಂತ್ರಜ್ಞಾನ ಮತ್ತು ಕೌಶಲ್ಯಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿರಬೇಕಾಗುತ್ತದೆ. ಇಲ್ಲದಿದ್ದರೆ ಉದ್ಯೋಗ ಕಳೆದುಕೊಳ್ಳುವ ಭಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಡಬೇಕು.

ತಜ್ಞರ ಅಭಿಪ್ರಾಯವೇನು?

ತಜ್ಞರ ಅಭಿಪ್ರಾಯವೇನು?

ಸ್ಟಾರ್ಟ್ಅಪ್ ಮತ್ತು ಮಾಹಿತಿ ತಂತ್ರಜ್ಞಾನ(ಐಟಿ) ಕಂಪನಿಗಳ ವೆಚ್ಚ ಕಡಿತದ ಹೊರತಾಗಿ ಕೌಶಲ್ಯ ಆಧಾರಿತ ಉದ್ಯೋಗಗಳ ವಲಯ ಉತ್ತಮ ಮತ್ತು ನಿರಂತರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮಾನವ ಸಂಪನ್ಮೂಲ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೆಲಸದಿಂದ ವಜಾ ಮಾಡಲು ಕಾರಣ
 

ಕೆಲಸದಿಂದ ವಜಾ ಮಾಡಲು ಕಾರಣ

ದಕ್ಷತೆ ಹಾಗೂ ಕಾರ್ಯಕ್ಷಮತೆ ತೋರದೆ ಇರುವುದರಿಂದಾಗಿ ಉದ್ಯೋಗಿಗಳಿಗೆ ಕೆಲಸದಿಂದ ವಜಾ(ಪಿಂಕ್ ಸ್ಲಿಪ್) ಮಾಡಲಾಗಿದೆ. ಅಲ್ಲದೇ ಉದ್ಯೋಗ ಕಡಿತಕ್ಕೂ ಸ್ಟಾರ್ಟ್ಅಪ್ ಗಳ ಸ್ಥಗಿತಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ.

ಉದ್ಯೋಗ ಕಡಿತ ಮಾಡಿದ ಕಂಪನಿಗಳು

ಉದ್ಯೋಗ ಕಡಿತ ಮಾಡಿದ ಕಂಪನಿಗಳು

ನವೋದ್ಯಮಗಳ ಸ್ಥಗಿತ ಮಾಡುವುದಾಗಲಿ ಇಲ್ಲವೇ ವೆಚ್ಚ ಕಡಿತ ಮಾಡುವುದಾಗಲಿ ಇತ್ತೀಚೆಗೆ ತೀರಾ ಸಾಮಾನ್ಯವಾಗಿರುವ ಸಂಗತಿಯಾಗಿದೆ. ಫ್ಲಿಪ್ಕಾರ್ಟ್, ಒಲಾ, ಆಸ್ಕ್ ಮಿ, ಇನ್ಫೋಸಿಸ್ ಉದ್ಯೋಗ ಕಡಿತ ಮಾಡಿವೆ.

ಉದ್ಯೋಗ ಕಡಿತದ ಪರಿಣಾಮಗಳೇನು?

ಉದ್ಯೋಗ ಕಡಿತದ ಪರಿಣಾಮಗಳೇನು?

* ಕಂಪನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ
* ಉದ್ಯೋಗಿಗಳ ಕಾರ್ಯಕ್ಷಮತೆಯಲ್ಲಿ ಹೆಚ್ಚಳ
* ಅನವಶ್ಯಕ ವೆಚ್ಚ ಕಡಿತ
* ಉದ್ಯೋಗಿಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗುತ್ತದೆ
* ಕಾಲಕಾಲಕ್ಕೆ ಬದಲಾಗುವ ತಂತ್ರಜ್ಞಾನ ಮತ್ತು ಕೌಶಲ್ಯಕ್ಕೆ ಹೊಂದಿಕೊಳ್ಳಬೇಕು.
* ಒಟ್ಟಿನಲ್ಲಿ ಕೆಲ ಉದ್ಯೋಗಿಗಳು ಕೆಲಸ ಕಳೆದುಕೊಳ್ಳವರು.

ಉದ್ಯೋಗ ಕಡಿತಕ್ಕೆ ಕಾರಣವೇನು?

ಉದ್ಯೋಗ ಕಡಿತಕ್ಕೆ ಕಾರಣವೇನು?

* ಹೊಸ ತಂತ್ರಜ್ಞಾನದ ಪರಿಣಾಮ ಐಟಿ ಕ್ಷೇತ್ರದಲ್ಲಿನ ಬಹುತೇಕ ತಾಂತ್ರಿಕೆತರ ಕೆಲಸಗಳು ಸ್ವಯಂಚಾಲಿತವಾಗಿ ನಡೆಯುವುದರಿಂದ ತಾಂತ್ರಿಕೇತರ ಹುದ್ದೆಗಳ ಕಡಿತ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತದೆ.
* ಕೌಶಲ್ಯ ಆಧಾರಿತ ಅಗಿರುವಂತಹ ಎಂಜಿನೀಯರ್ ನಂತಹ ಹುದ್ದೆಗಳು ಕಡಿತವಾಗುವುದಿಲ್ಲ ಎಂದು ಎಸ್ಎಚ್ಆರ್ಎಂ ಇಂಡಿಯಾ ಮುಖ್ಯ ಸಲಹೆಗಾರ ನಿಶ್ಚಿತ್ ಉಪಾಧ್ಯಾಯ ಹೇಳಿದ್ದಾರೆ.

ಉದ್ಯೋಗ ನಷ್ಟ ಭೀತಿ ಇಲ್ಲ

ಉದ್ಯೋಗ ನಷ್ಟ ಭೀತಿ ಇಲ್ಲ

5ರಿಂದ 10 ವರ್ಷಗಳ ವೃತ್ತಿ ಕೌಶಲ್ಯದ ಅನುಭವ ಹೊಂದಿರುವ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆಯೇ ಹೊರತು ಉದ್ಯೋಗ ನಷ್ಟದ ಭೀತಿ ಇಲರುವುದಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಹೊಸ ಯೋಜನೆಗಳ ಇಳಿಮುಖದಿಂದಾಗಿ ನಿರ್ದೇಶಕ, ಮ್ಯಾನೇಜರ್ ಹಂತದ ಹುದ್ದೆಗಳು ಕಡಿತವಾಗುವ ಸಾಧ್ಯತೆ ಇರುತ್ತದೆ ಎಂದು ಗ್ಲೋಬಲ್ ಹಂಟ್ ನಿರ್ದೇಶಕ ಸುನೀಲ್ ಗೋಯಲ್ ಇಂಗಿತ ವ್ಯಕ್ತಪಡಿಸಿದ್ದಾರೆ.

.ಉದ್ಯೋಗಿಗಳು ಏನು ಮಾಡಬೇಕು?

.ಉದ್ಯೋಗಿಗಳು ಏನು ಮಾಡಬೇಕು?

* ಉದ್ಯೋಗಿಗಳು ನಿರಂತರವಾಗಿ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿರಬೇಕು.
* ವೃತ್ತಿ ಕೌಶಲ್ಯಕ್ಕೆ ಸಂಬಂಧಿತ ಜ್ಞಾನ ಹೆಚ್ಚಿಸಿಕೊಳ್ಳಬೇಕು.
* ದಕ್ಷತೆ, ಪ್ರಾಮಾಣಿಕತೆಯಿಂದ ಜವಾಬ್ಧಾರಿಗಳನ್ನು ನಿರ್ವಹಿಸಬೇಕು.

 ಉದ್ಯೋಗಿಗಳನ್ನು ವಜಾ ಮಾಡಿದ 6 ಬೃಹತ್ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿದ 6 ಬೃಹತ್ ಕಂಪನಿಗಳು

English summary

There is no fear of job loss in IT and Stratup sector

Startup and information technology (IT) analysts feel that the freezing of the reduction of growth of employment was not. Many companies across the country over the past one month the dismissal of employees who were in fear of losing jobs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X