For Quick Alerts
ALLOW NOTIFICATIONS  
For Daily Alerts

ಸೆಪ್ಟಂಬರ್ ತಿಂಗಳಲ್ಲಿ ಠೇವಣಿಗಳ ಮೇಲೆ ಹೆಚ್ಚು ಆದಾಯ ಬೇಕೆ?

By Siddu Thorat
|

ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ಸಲ್ಪ ಮೊತ್ತವನ್ನು ಉಳಿತಾಯ ಮಾಡಬೇಕೆಂಬ ಇಚ್ಛೆ ಇರುತ್ತದೆ. ಆದರೆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿಕೊಂಡು ಆಮೇಲೆ ಉಳಿತಾಯ ಮಾಡುವುದರ ಕುರಿತು ಚಿಂತಿಸಿದರೆ ಫಲವಿಲ್ಲ.

ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ನಿರ್ಧಿಷ್ಟವಾದ ಹಣವನ್ನು ಉಳಿತಾಯ ಮಾಡುವುದು ಭವಿಷ್ಯತ್ತಿಗಾಗಿ ಅತ್ಯುತ್ತಮವಾದ ಆಯ್ಕೆ ಆಗಿರುತ್ತದೆ.

ಸಂಬಳ ಪಡೆಯುವ ಅಥವಾ ವ್ಯವಹಾರ ಮಾಡುವ ವ್ಯಕ್ತಿಗಳು ಪ್ರತಿ ತಿಂಗಳ ಪ್ರಾರಂಭದಲ್ಲಿ ಹೂಡಿಕೆ ಮಾಡುವ ಕುರಿತು ಯೋಜನೆ ಮಾಡುತ್ತಿರುತ್ತಾರೆ. ಆದರೆ ಯಾವ ಬ್ಯಾಂಕಿನ ಅಥವಾ ಯಾವ ಕಂಪನಿಯ ಸ್ಥಿರ ಠೇವಣಿಗಳ ಮೇಲೆ ಉತ್ತಮ ಬಡ್ಡಿದರ, ಆದಾಯ ಸಿಗುತ್ತದೆ ಎಂಬ ಗೊಂದಲ ನಮ್ಮಲ್ಲಿ ಇದ್ದೆ ಇರುತ್ತದೆ. ಭಾರತದಲ್ಲಿನ 6 ಉತ್ತಮ ಸಂಬಳ ಖಾತೆಗಳು

ಹೀಗಾಗಿ ಪ್ರತಿ ತಿಂಗಳು ಪಡೆಯುವ ಸಂಬಳವನ್ನು ಉಳಿತಾಯ ಮಾಡಲು ಸುರಕ್ಷಿತವಾಗಿರುವ ಮತ್ತು ಹೆಚ್ಚು ಬಡ್ಡಿದರ ಕೊಡುವ ಸ್ಥಿರ ಠೇವಣಿಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ದಿವಾನ್ ಹೌಸಿಂಗ್

ದಿವಾನ್ ಹೌಸಿಂಗ್

40 ತಿಂಗಳ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ ದಿವಾನ್ ಹೌಸಿಂಗ್ ಶೇ. 8.90ರಷ್ಟು ಬಡ್ಡಿದರವನ್ನು ಘೋಷಿಸಿವೆ. CARE ಮತ್ತು BWR ಇವೇರಡೂ ಸ್ಥಿರ ಠೇವಣಿಗಳು ಎಎಎ ರೇಟೆಡ್ ಆಗಿದ್ದು, ತುಂಬಾ ಸುರಕ್ಷಿತ ಎಂದು ಹೆಸರು ಪಡೆದಿವೆ.
50 ಲಕ್ಷಕ್ಕಿಂತಲೂ ಹೆಚ್ಚಿನ 40 ತಿಂಗಳ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 9.15ರವರೆಗೆ ಬಡ್ಡಿದರ ನೀಡಲಾಗುತ್ತದೆ.

ಬಜಾಜ್ ಫೈನಾನ್ಸ್

ಬಜಾಜ್ ಫೈನಾನ್ಸ್

ಸ್ಥಿರ ಠೇವಣಿಗಳು ಎಎಎ ರೇಟೆಡ್ ಆಗಿದ್ದು ತುಂಬಾ ಸುರಕ್ಷಿತವಾಗಿವೆ. ಇದರಿಂದಾಗಿಯೇ ಬಜಾಜ್ ಫೈನಾನ್ಸ್ ಸುಸ್ಥಿರ ಕಂಪನಿಯಾಗಿ ನೆಲೆ ನಿಂತಿದೆ.
ಬಜಾಜ್ ಫೈನಾನ್ಸ್ ಕಂಪನಿ 12 ರಿಂದ 17 ತಿಂಗಳುಗಳ ಠೇವಣಿಗಳ ಮೇಲೆ ಶೇ. 8.55ರಷ್ಟು ಹಾಗೂ 18 ರಿಂದ 60 ತಿಂಗಳುಗಳ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ 8.65% ಬಡ್ಡಿದರ ನೀಡುತ್ತವೆ.
ಹಿರಿಯ ನಾಗರೀಕರಿಗೆ ಹೆಚ್ಚುವರಿ ಶೇ. 0.25 ಬಡ್ಡಿದರ ಲಭ್ಯವಿದೆ.

ಆರ್ಬಿಎಲ್ ಬ್ಯಾಂಕು
 

ಆರ್ಬಿಎಲ್ ಬ್ಯಾಂಕು

ಆರ್ಬಿಎಲ್ ಬ್ಯಾಂಕು 24 ರಿಂದ 36 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 8.50ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ.
ಇದು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಉತ್ತಮವಾದ ಬಡ್ಡಿದರವಾಗಿದೆ.
ಬ್ಯಾಂಕಿನ ಷೇರುಗಳು ಇತ್ತೀಚೆಗೆ ವಿನಿಮಯ ಕೇಂದ್ರದಲ್ಲಿ ಸ್ಥಾನ ಪಡೆದುಕೊಂಡಿವೆ.

ಕೆಟಿಡಿಎಫ್ಸಿ(KTDFC)

ಕೆಟಿಡಿಎಫ್ಸಿ(KTDFC)

ಕೆಟಿಡಿಎಫ್ಸಿ ಇದು ಕೇರಳ ಸರ್ಕಾರದ ಉದ್ಯಮವಾಗಿರುವುದು ಇದು ಸುರಕ್ಷಿತ ತಾಣ ಎಂಬುದರಲ್ಲಿ ಸಂಶಯವಿಲ್ಲ. ಇದರ ಬಗ್ಗೆ ಕೇರಳ ಸರ್ಕಾರ ಭದ್ರತೆ ಒದಗಿಸಿದೆ.
1, 2 ರಿಂದ 3 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 8.50ರಷ್ಟು ಬಡ್ಡಿದರ ಒದಗಿಸುತ್ತದೆ. ಈ ಕಂಪನಿಯ ಠೇವಣಿಗಳ 5,000 ರೂ. ಬಡ್ಡಿ ಮೇಲೆ ಆಕರ್ಷಕ ಟಿಡಿಎಸ್ ನೀಡುತ್ತದೆ ಎಂಬುದನ್ನು ನೆನಪಿಡಿ.

ಮಹೀಂದ್ರಾ ಫೈನಾನ್ಸ್

ಮಹೀಂದ್ರಾ ಫೈನಾನ್ಸ್

ಮಹೀಂದ್ರಾ ಫೈನಾನ್ಸ್ ತನ್ನ ಎಲ್ಲಾ ಸಂಚಿತ ಯೋಜನೆಗಳ ಕಾಲಾವಧಿಯ ಮೇಲೆ ಶೇ. 8.45 ಕ್ಕಿಂತಲೂ ಹೆಚ್ಚಿನ ಬಡ್ಡಿದರ ಒದಗಿಸುತ್ತದೆ. ಠೇವಣಿಗಳು ಎಎಎ ರೇಟೆಡ್ ಆಗಿದ್ದು ತುಂಬಾ ಸುರಕ್ಷಿತವಾಗಿವೆ. ಹಿರಿಯ ನಾಗರೀಕರಿಗೆ ಶೇ. 0.25ರಷ್ಟು ಹೆಚ್ಚುವರಿ ಬಡ್ಡಿದರ ಪಾವತಿಸಲಾಗುತ್ತದೆ.
ಬಡ್ಡಿ ಆದಾಯದ 5,000 ರೂಗಳಿಗಿಂತ ಹೆಚ್ಚಿದ್ದರೆ ಟಿಡಿಎಸ್ ಸೌಲಭ್ಯ ಅನ್ವಯವಾಗುತ್ತದೆ.

ಐಡಿಎಫ್ಸಿ ಬ್ಯಾಂಕು

ಐಡಿಎಫ್ಸಿ ಬ್ಯಾಂಕು

ಐಡಿಎಫ್ಸಿ ಬ್ಯಾಂಕು ಖಾಸಗಿ ವಲಯದ ಹೊಸ ಬ್ಯಾಂಕಾಗಿದೆ. 1 ರಿಂದ 3 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರ ಪಡೆಯಬಹುದು. ಅದೇ ರೀತಿ ಹಿರಿಯ ನಾಗರಿಕರು ಶೇ. 0.50ರಷ್ಟು ಹೆಚ್ಚು ಬಡ್ಡಿದರ ಪಡೆಯಬಹುದಾಗಿದೆ. ಅಲ್ಪಾವಧಿ ಹೂಡಿಕೆಗೆ ಉತ್ತಮ ಆಯ್ಕೆ.

ಶ್ರೀರಾಮ್ ಟ್ರಾನ್ಸ್ಪೋರ್ಟ್

ಶ್ರೀರಾಮ್ ಟ್ರಾನ್ಸ್ಪೋರ್ಟ್

ಶೇ. 10.42ರಷ್ಟು ಇಳುವರಿಯೊಂದಿಗೆ ಈ ಬ್ಯಾಂಕಿನ ಸ್ಥಿರ ಠೇವಣಿಗಳ ಮೇಲೆ ಶೆ. 8.42ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಸ್ಥಿರ ಠೇವಣಿಗಳ ಪಟ್ಟಿಯಲ್ಲಿ ಇವು ಉತ್ತಮವಾದವುಗಳಾಗಿವೆ.

ಇತರೆ ಬ್ಯಾಂಕುಗಳು

ಇತರೆ ಬ್ಯಾಂಕುಗಳು

ದೇಶದ ಇನ್ನಿತರ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಶೆ. 7.5ರಷ್ಟು ಬಡ್ಡಿದರ ಲಭ್ಯವಿರುತ್ತದೆ. ಇದಕ್ಕಿಂತಲೂ ಹೆಚ್ಚಿನ ಬಡ್ಡಿದರ ಬೇಕೆಂದರೆ ಮೇಲಿನ ಬ್ಯಾಂಕುಗಳ ಠೇವಣಿಗಳಲ್ಲಿ ಉಳಿತಾಯ ಮಾಡುವುದು ಉತ್ತಮ ಆಯ್ಕೆ ಆಗಿರುತ್ತದೆ.

ಉದ್ಯೋಗಸ್ಥರಿಗಾಗಿ ದೀರ್ಘಾವಧಿ ಹೂಡಿಕೆಗೆ 8 ಶ್ರೇಷ್ಠ ಮಾರ್ಗಉದ್ಯೋಗಸ್ಥರಿಗಾಗಿ ದೀರ್ಘಾವಧಿ ಹೂಡಿಕೆಗೆ 8 ಶ್ರೇಷ್ಠ ಮಾರ್ಗ

English summary

Best Fixed Deposits To Invest In September 2016

The beginning of the month is the best time for salaried individuals to start an investment plan. If you are looking at fixed deposits or Fds, here is a list with a combination of safety and best interest rates.
Story first published: Thursday, September 1, 2016, 10:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X