For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

By Siddu
|

ಭಾರತ ಸರ್ಕಾರ ಅತ್ಯುನ್ನತ ಸುರಕ್ಷತೆ ಹಾಗೂ ಭದ್ರತೆಯೊಂದಿಗೆ ಅಂಚೆ ಕಚೇರಿ ಖಾತೆಗಳನ್ನು ನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರಲ್ಲಿ ಹಲವು ಬಗೆಯ ಹಲವಾರು ಪ್ರಯೋಜನಗಳ ಅನೇಕ ವಿಧದ ಅಂಚೆ ಕಚೇರಿ ಯೋಜನೆಗಳಿವೆ. ಅದರಲ್ಲಿ ಕೆಲ ಯೋಜನೆಗಳ ಮೇಲೆ ತೆರಿಗೆ ವಿನಾಯಿತಿ ಕೂಡ ಇರುತ್ತದೆ.

ಜತೆಗೆ ಹೆಚ್ಚಿನ ಪ್ರಮಾಣದ ಯೋಜನೆಗಳನ್ನು ಅಂಚೆ ಕಚೇರಿಯಿಂದ ಬ್ಯಾಂಕಿಗೆ ಅಥವಾ ಬ್ಯಾಂಕಿನಿಂದ ಅಂಚೆ ಕಚೇರಿಗೆ ವರ್ಗಾವಣೆ ಮಾಡಬಹುದಾಗಿದೆ.

ಅವುಗಳಲ್ಲಿ ಅಂಚೆ ಕಚೇರಿಯ ಪ್ರಮುಖ ಯೋಜನೆ ಹಾಗೂ ಹಲವು ಬಗೆಯ ಖಾತೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.

1. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ

1. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ

ಪ್ರತಿ ತಿಂಗಳಿಗೆ ನಿರಂತರವಾಗಿ ಆದಾಯ ಪಡೆಯಲು ಇದು ಸುರಕ್ಷಿತವಾಗಿರುವ ಉತ್ತಮ ಆಯ್ಕೆ.
ನೌಕರರು, ನಿವೃತ್ತ ನೌಕರರು/ಹಿರಿಯ ನಾಗರಿಕರು ಹೇಳಿ ಮಾಡಿಸಿದಂತ ಯೋಜನೆಯಾಗಿದ್ದು, ಪ್ರತಿ ತಿಂಗಳು ಸುಭದ್ರ ಆದಾಯ ಪಡೆಯಲು ಸಹಕಾರಿ.
5 ವರ್ಷಗಳ ಮೆಚುರಿಟಿ ಅವಧಿಯಿದ್ದು, ಪ್ರಸ್ತುತ ಶೇ. 7.80ರಷ್ಟು ವಾರ್ಷಿಕ ಬಡ್ಡಿದರ ಲಭ್ಯವಿದ್ದು, ಮಾಸಿಕಕ್ಕೆ ಅನುಗುಣವಾಗಿ ಪಾವತಿಸಲಾಗುತ್ತದೆ.

ಕನಿಷ್ಟ ಮತ್ತು ಗರಿಷ್ಠ ಹೂಡಿಕೆ:
* ಸಿಂಗಲ್ ಖಾತೆಯಾಗಿದ್ದರೆ ಕನಿಷ್ಟ ಹೂಡಿಕೆ ಮೊತ್ತ ರೂ. 1500
* ಗರಿಷ್ಠ ಹೂಡಿಕೆ ಮೊತ್ತ ರೂ. 4.5 ಲಕ್ಷ
* ಜಂಟಿ ಖಾತೆಯಾಗಿದ್ದರೆ ಕನಿಷ್ಟ ಹೂಡಿಕೆ ಮೊತ್ತ ರೂ. 1500
* ಗರಿಷ್ಠ ಹೂಡಿಕೆ ಮೊತ್ತ ರೂ. 9 ಲಕ್ಷ
ಈ ಮೇಲಿನ ಯೋಜನೆ ನಿಮ್ಮ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಗೆ ಸ್ವಯಂಚಾಲಿತ ಕ್ರೆಡಿಟ್ ಖಾತ್ರಿಗೊಳಿಸುತ್ತದೆ.

2. ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್(TD) ಯೋಜನೆ

2. ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್(TD) ಯೋಜನೆ

ಈ ಯೋಜನೆಯಲ್ಲಿ ವೈಯಕ್ತಿಕ ಖಾತೆಗಳನ್ನು ತೆರೆಯಬಹುದು. ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಮತ್ತು ಐದು ವರ್ಷಗಳ ಅವಧಿಯ ಯೋಜನೆಯಾಗಿದೆ.
1, 2, 3 ಮತ್ತು 5 ವರ್ಷಗಳ ಖಾತೆಗಳಿಗೆ ಕ್ರಮಾನುಗತವಾಗಿ ಶೇ. 7.1, 7.2೨, 7.4 ಮತ್ತು 7.9 ಬಡ್ಡಿದರದ ಪ್ರಮಾಣ ಚಾಲ್ತಿಯಲ್ಲಿದೆ.
5 ವರ್ಷಗಳ ಅವಧಿಯ TD ಮೇಲೆ ಹೂಡಿಕೆ ಮಾಡಿದರೆ 1961ರ ಆದಾಯ ತೆರಿಗೆ ಕಾಯಿದೆ ಪ್ರಕಾರ 80C ಸೆಕ್ಷನ್ ಅಡಿಯಲ್ಲಿ ಪ್ರಯೋಜನಗಳು ಲಭ್ಯವಿರುತ್ತವೆ.

1, 2, 3 ಮತ್ತು 5 ವರ್ಷಗಳ TD ಖಾತೆ ಅವಧಿಗೆ ಕನಿಷ್ಟ ಹೂಡಿಕೆ ಮೊತ್ತ ರೂ. 200. ಇದಕ್ಕಿಂತಲೂ ಹೆಚ್ಚಿನ ಹೂಡಿಕೆಗೆ ಯಾವುದೇ ನಿರ್ಬಂಧಗಳಿಲ್ಲ.

3. ಪೋಸ್ಟ್ ಆಫೀಸ್ ಉಳಿತಾಯ ಖಾತೆ

3. ಪೋಸ್ಟ್ ಆಫೀಸ್ ಉಳಿತಾಯ ಖಾತೆ

ಗುಂಪು ಖಾತೆಗಳನ್ನು ಹೊರತುಪಡಿಸಿ ಯಾರು ಬೇಕಾದರೂ ವೈಯಕ್ತಿಕ ಖಾತೆಗಳನ್ನು ತೆರೆಯಬಹುದು. ಸಾಂಸ್ಥಿಕ ಖಾತೆ, ಭದ್ರತಾ ಠೇವಣಿ ಖಾತೆ ಮತ್ತು ಅಧಿಕೃತ ಸಾಮರ್ಥ್ಯ ಖಾತೆಗಳನ್ನು ತೆರೆಯಲು ಅನುಮತಿ ಇರುವುದಿಲ್ಲ.
ವಾರ್ಷಿಕವಾಗಿ ಶೇ. 4ರಷ್ಟು ಬಡ್ಡಿದರ ಲಭ್ಯವಿದೆ. ಉಳಿತಾಯ ಖಾತೆದಾರರು ಡೆಬಿಟ್ ಕಾರ್ಡ್ ಬಳಸಬಹುದಾಗಿದ್ದು, ಕನಿಷ್ಟ ಬ್ಯಾಲೆನ್ಸ್ ಹೊಂದಿರಬೇಕಾಗುತ್ತದೆ.
ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಟ ಮೂರು ವರ್ಷಗಳಿಗೊಮ್ಮೆಯಾದರೂ ಠೇವಣಿ ಅಥವಾ ವಿತ್ ಡ್ರಾವಲ್ ವ್ಯವಹಾರವನ್ನು ಮಾಡುತ್ತಿರಬೇಕಾಗುತ್ತದೆ.
ಸಣ್ಣ ವಯಸ್ಸಿನವರ ಹೆಸರಿನಲ್ಲೂ ಖಾತೆಯನ್ನು ತೆರೆಯಬಹುದಾಗಿದೆ.

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC)

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC)

ಆದಾಯ ತೆರಿಗೆ ಮೌಲ್ಯಮಾಪನಕ್ಕೆ ಒಳಪಡುವ ಸರ್ಕಾರಿ ನೌಕರರು, ಉದ್ಯಮಿಗಳು ಮತ್ತು ಇತರೆ ಸಂಬಳದಾರರಿಗಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ಈ ಯೋಜನೆಯಲ್ಲಿ ಎಷ್ಟು ಬೇಕಾದರೂ ಮೊತ್ತ ಹೂಡಿಕೆ ಮಾಡಬಹುದು ಹಾಗೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
ಪ್ರಮಾಣಪತ್ರಗಳನ್ನು ಬ್ಯಾಂಕುಗಳಿಂದ ಸಾಲ ಪಡೆಯಲು ಮೇಲಾಧಾರ ಭದ್ರತೆಯಾಗಿ ಇರಿಸಬಹುದು. ಆದಾಯ ತೆರಿಗೆ ಕಾಯಿದೆ ಪ್ರಕಾರ 80C ಸೆಕ್ಷನ್ ಅಡಿಯಲ್ಲಿ ರೂ. 1,50,000ಗಳ ವಾರ್ಷಿಕ ಹೂಡಿಕೆ ಮೇಲೆ ರಿಯಾಯಿತಿ ಪಡೆಯಬಹುದು.
ಶೇ. 8.1ರಷ್ಟು ಬಡ್ಡಿದರವಿದ್ದು, ಮೆಚುರಿಟಿ ನಂತರವಷ್ಟೆ ಪಾವತಿಸಲಾಗುತ್ತದೆ. ಲೆಕ್ಕಾಚಾರದ ಪ್ರಕಾರ ರೂ. 100 ಐದು ವರ್ಷಗಳ ನಂತರ 147.61 ಆಗುತ್ತದೆ.
ಸೂಚನೆ: NSC VIII, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆ ಮಾಡಬೇಕಾದರೆ ಮೆಚುರಿಟಿ ಅವಧಿಯ ಒಳಗಾಗಿ ಒಮ್ಮೆ ಮಾತ್ರ ವರ್ಗಾಯಿಸಬಹುದು.

5. ಹಿರಿಯ ನಾಗರಿಕರ ಉಳಿತಾಯ ಯೋಜನೆ

5. ಹಿರಿಯ ನಾಗರಿಕರ ಉಳಿತಾಯ ಯೋಜನೆ

ಈ ಖಾತೆಯನ್ನು 60 ವರ್ಷಕ್ಕೆ ಮೇಲ್ಪಟ್ಟವರು ಯಾವುದೇ ವ್ಯಕ್ತಿ ಬೇಕಾದರೂ ತೆರೆಯಬಹುದು.
55 ವರ್ಷ ದಾಟಿದವರು ಅಥವಾ ಮೇಲ್ಪಟ್ಟವರು ಆದರೆ 60 ವರ್ಷಕ್ಕಿಂತ ಕೆಳಗಿನವರು ಸ್ವಯಂ ನಿವೃತ್ತಿ ಯೋಜನೆ ಅಥವಾ ವಿಶೇಷ ನಿವೃತ್ತಿ ಯೋಜನೆ ಅಡಿಯಲ್ಲಿ ನಿವೃತ್ತಿಯಾದವರು ಖಾತೆಯನ್ನು ತೆರೆಯಬಹುದು.
ಆದಾಯ ತೆರಿಗೆ ಕಾಯಿದೆ ಪ್ರಕಾರ 80ಸಿ ಸೆಕ್ಷನ್ ಅಡಿಯಲ್ಲಿ ಈ ಯೋಜನೆಯಲ್ಲಿ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು.
ಒಂದು ವರ್ಷದ ನಂತರ ಖಾತೆಯನ್ನು ಅಕಾಲಿಕವಾಗಿ ಮುಚ್ಚುಬಹುದಾಗಿದ್ದು, ಒಂದು ವರ್ಷಕ್ಕೆ ಶೇ. 1.5ರಷ್ಟು ಹಾಗೂ ಎರಡು ವರ್ಷಕ್ಕೆ ಶೇ 1ರಷ್ಟು ಮೊತ್ತವನ್ನು
ಕಡಿತಗೊಳಿಸಲಾಗುತ್ತದೆ.

ತ್ರೈಮಾಸಿಕಕ್ಕೆ ಅನುಗುಣವಾಗಿ ಮೊದಲ ಕೆಲಸ ದಿನವಾದ ಏಪ್ರಿಲ್, ಜುಲೈ, ಆಕ್ಟೋಬರ್ ಮತ್ತು ಜನೆವರಿಯಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಮಾಸಿಕ ಆದಾಯ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಮಾಸಿಕ ಹಾಗೂ ತ್ರೈಮಾಸಿಕಕ್ಕೆ ಅನುಗುಣವಾಗಿ ಉತ್ತಮ ಬಡ್ಡಿದರ ಬಯಸುವ ಹಿರಿಯ ನಾಗರಿಕರಿಗೆ ಉತ್ತಮ ಆಯ್ಕೆಯಾಗಿದೆ.

6. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್)

6. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್)

ಈ ಯೋಜನೆ ಸಂಬಳ ಪಡೆಯುವ, ಸ್ವಯಂ ಉದ್ಯೋಗ ಹಾಗೂ ಎಲ್ಲ ವರ್ಗದವರಿಗೂ ದೀರ್ಘಾವಧಿ ಹೂಡಿಕೆಗಾಗಿ ಹೇಳಿ ಮಾಡಿಸಿದ ಅನುಕೂಲಕರ ಯೋಜನೆಯಾಗಿದೆ.
ಒಂದು ವರ್ಷಕ್ಕೆ ರೂ. 1,50,000 ಹೂಡಿಕೆ ಮಾಡಿದರೆ
ತೆರಿಗೆ ಇಲಾಖೆಯ 80ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ.
ಪ್ರಸ್ತುತ ಶೇ. 8.10ರಷ್ಟು ಬಡ್ಡಿದರ ಲಭ್ಯವಿದೆ. ಈ ಯೋಜನೆ ಅವಧಿ 15 ವರ್ಷಗಳಾಗಿದ್ದು, ಮೂರನೇ ವರ್ಷದಿಂದ ಸಾಲಸೌಲಭ್ಯವಿರುತ್ತದೆ.

English summary

Post Office Schemes And Its Benifits

Post office schemes are offered by the Government of India and are highly secure. There are different schemes catering different needs, some of the schemes are exempted from Income tax.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X