For Quick Alerts
ALLOW NOTIFICATIONS  
For Daily Alerts

ಫಿಕ್ಸೆಡ್ ಡಿಪಾಸಿಟ್ ಹೂಡಿಕೆಗೆ ಮುನ್ನ ಇಲ್ಲೊಮ್ಮೆ ನೋಡಿ

By Siddu
|

ಭಾರತದಲ್ಲಿನ ಹೂಡಿಕೆಗಳಲ್ಲಿ ಬ್ಯಾಂಕು ಠೇವಣಿಗಳು ತುಂಬಾ ಪ್ರಸಿದ್ದಿಯನ್ನು ಪಡೆದಿವೆ. ಆದರೆ ಕೆಲವರಿಗೆ ಇದರ ನಿಯಮಾವಳಿಗಳ ಬಗ್ಗೆ ಅದರಲ್ಲೂ ಆದಾಯ ತೆರಿಗೆ, ಬಡ್ಡಿ ಆದಾಯ ಅಂಶಗಳ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ.

 

ಹಿರಿಯ ನಾಗರಿಕರಿಗೆ, ಗೃಹಿಣಿಯರು, ಶೂನ್ಯ ಅಥವಾ ಕಡಿಮೆ ತೆರಿಗೆ ಹೊಂದಿರುವ ವ್ಯಕ್ತಿಗಳು, ಚಾರಿಟೆಬಲ್/ಧಾರ್ಮಿಕ ದತ್ತಿ ಇತರ ಸ್ಥಿರ ಠೇವಣಿಗಳಿಗೆ ಸಂಬಂಧಿಸಿದಂತೆ ವಿಭಿನ್ನವಾದ ಯೋಜನೆಗಳಿರುತ್ತವೆ. ಅನೇಕ ಸಂದರ್ಭಗಳಲ್ಲಿ ಕಂಪನಿಗಳು ಹೂಡಿಕೆದಾರರಲ್ಲಿ ಆಮಿಷ ಹುಟ್ಟಿಸುವ ಸಂದರ್ಭಗಳಿರುವುದರಿಂದ ಎಚ್ಚರಿಕೆಯ ನಡೆ ಅಗತ್ಯವಾಗಿರುತ್ತದೆ. ಬೆಸ್ಟ್ 8 ಲೈಪ್ ಇನ್ಸೂರೆನ್ಸ್ ಪಾಲಿಸಿಗಳು

ಹೀಗಾಗಿ ಬ್ಯಾಂಕು ಅಥವಾ ಕಂಪನಿಗಳಲ್ಲಿ ಠೇವಣಿಗಳ ಮೇಲೆ ಹೂಡಿಕೆ ಮಾಡುವಾಗ ಅವಶ್ಯವಾಗಿ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶಗಳ ಸಂಕ್ಷಿಪ್ತ ನೋಟ ಇಲ್ಲಿದೆ.

1. ಭದ್ರತೆ/ಸುರಕ್ಷತೆಗೆ ಪ್ರಥಮ ಆದ್ಯತೆ

1. ಭದ್ರತೆ/ಸುರಕ್ಷತೆಗೆ ಪ್ರಥಮ ಆದ್ಯತೆ

ಹೌದು. ಇದು ತುಂಬಾ ಮುಖ್ಯವಾದ ಅಂಶವಾಗಿದ್ದು, ಸ್ಥಿರ ಠೇವಣಿಗಳ ಮೇಲೆ ಹೂಡಿಕೆ ಮಾಡುವುದು ಭಾರತದ ಆರ್ಥಿಕತೆಯಲ್ಲಿ ತುಂಬಾ ಸುರಕ್ಷಿತ ಎಂದೇ ಭಾವಿಸಲಾಗಿದೆ. ಆರ್ಬಿಐ ನಿಂದ ಬ್ಯಾಂಕುಗಳನ್ನು ನಿಯಂತ್ರಿಸಲ್ಪಡುವುದರಿಂದ ಇದು ಯಾವಾಗಲೂ ಸುರಕ್ಷಿತ ಆಯ್ಕೆಯಾಗಿರುತ್ತದೆ.

ಕಾರ್ಪೋರೇಟ್ FDಗಳು ಬ್ಯಾಂಕ್ FD ಗಳಷ್ಟು ಸುರಕ್ಷಿತವಲ್ಲ. ಒಂದು ಲಕ್ಷದವರೆಗಿನ ಹೂಡಿಕೆ ಮೇಲೆ ಬ್ಯಾಂಕುಗಳು ಭದ್ರತೆ ಒದಗಿಸಿದರೆ ಕಂಪನಿಗಳ ಹೂಡಿಕೆ ಮೇಲೆ ಈ ಮಾತು ನಿಜವಲ್ಲ. ಕಂಪನಿಗಳು ದಿವಾಳಿಯಾದರೆ ಹೂಡಿಕೆದಾರರ ಹಣಕ್ಕೆ ಆಪಾಯ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು.

2. ಆಕರ್ಷಕವಲ್ಲದ ತೆರಿಗೆ ಆದಾಯ

2. ಆಕರ್ಷಕವಲ್ಲದ ತೆರಿಗೆ ಆದಾಯ

ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡುವ FD ಬಡ್ಡಿದರಕ್ಕಿಂತ ಹೆಚ್ಚಿನ ಆಕರ್ಷಕ ಬಡ್ಡಿದರವನ್ನು ಕಂಪನಿಗಳು ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ.
ಆದರೆ ಶೇ. 30ರಷ್ಟು ತೆರಿಗೆ ಪಾವತಿದಾರರ ಯಾದಿಯಲ್ಲಿ ನೀವು ಬಂದರೆ ಕಂಪನಿಗಳ FDಗಳ ತೆರಿಗೆ ಆದಾಯದ ಮೇಲೆ ಯಾವುದೇ ಆಕರ್ಷಕ ಸೌಲಭ್ಯಗಳು ಲಭ್ಯವಿರುವುದಿಲ್ಲ.

3. ಹಣದುಬ್ದರದ ಪರಿಣಾಮಗಳೇನು?
 

3. ಹಣದುಬ್ದರದ ಪರಿಣಾಮಗಳೇನು?

ಹಣದುಬ್ದರ ಎದುರಾದರೆ ಸ್ಥಿರ ಠೇವಣಿಗಳನ್ನು ರಕ್ಷಿಸುವುದು ಕಷ್ಟ. ಏಕೆಂದರೆ ಸ್ಥಿರ ಠೇವಣಿಗಳ ಮೆಚುರಿಟಿ ಸಂದರ್ಭದಲ್ಲಿ ತೀವ್ರವಾಗಿ ಹಣದುಬ್ಬರದಲ್ಲಿ ಹೆಚ್ಚಳವಾದಲ್ಲಿ ಬರಬೇಕಾದ ಪ್ರತಿಫಲದಲ್ಲೂ ಇಳಿಕೆಯಾಗುತ್ತದೆ. ಷೇರು, ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಇನ್ನು ಅನಿಶ್ಚಿತತೆಯಿಂದ ಕೂಡಿರುತ್ತದೆ. ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಬ್ಯಾಂಕು FDಗಳೇ ಉತ್ತಮ ಆಯ್ಕೆ.

4. ಟಿಡಿಎಸ್ ಕಡಿತ

4. ಟಿಡಿಎಸ್ ಕಡಿತ

ಒಂದು ಹಣಕಾಸು ವರ್ಷದಲ್ಲಿ ಸ್ಥಿರ ಠೇವಣಿಗಳ ಮೇಲೆ ರೂ. 10,000ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಗಳಿಸಿದರೆ ಶೇ. 10ರಷ್ಟು ಟಿಡಿಎಸ್ (tax deducted at source) ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ನೀಡದಿದ್ದರೆ ಶೇ. 20ರಷ್ಟು ತೆರಿಗೆ ಕಡಿತಗೊಳಿಸಲಾಗುತ್ತದೆ. ಮರುಕಳಿಸುವ ಠೇವಣಿಗಳು(ಆರ್ಡಿ) ಕೂಡ ಈ ವ್ಯಾಪ್ತಿಗೆ ಬರುತ್ತದೆ.

5. ಹೆಚ್ಚುವರಿ ಖಾತೆಗಳ ಮೇಲೆ ಟಿಡಿಎಸ್ ಕಡಿತ

5. ಹೆಚ್ಚುವರಿ ಖಾತೆಗಳ ಮೇಲೆ ಟಿಡಿಎಸ್ ಕಡಿತ

ಒಂದು ಹಣಕಾಸು ವರ್ಷದಲ್ಲಿ ಒಂದು ಬ್ಯಾಂಕಿನ ಬೇರೆ ಬೇರೆ ಶಾಖೆಗಳಲ್ಲಿ ಒಂದಕ್ಕಿಂತ ಹೆಚ್ಚಿನ FD ಅಥವಾ RD ಠೇವಣಿಗಳು ಇದ್ದಲ್ಲಿ ರೂ. 10,000ಕ್ಕಿಂತ ಹೆಚ್ಚಿನ ಬಡ್ಡಿ ಮೇಲೆ ಶೇ. 10ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.

6. ಟಿಡಿಎಸ್ ಘೋಷಣೆ

6. ಟಿಡಿಎಸ್ ಘೋಷಣೆ

ಬ್ಯಾಂಕಿನವರು ಟಿಡಿಎಸ್ ಕಡಿತಗೊಳಿಸಿದ್ದರೂ ಕೂಡ ನಿಮ್ಮ ಆದಾಯ ತೆರಿಗೆ ಫೈಲಿಂಗ್ ಸಂದರ್ಭದಲ್ಲಿ ಘೋಷಿಸಬೇಕಾಗುತ್ತದೆ. ತೆರಿಗೆ ನಿಯಮದ ಪ್ರಕಾರ ಬಡ್ಡಿ ಆದಾಯ ಕೂಡ ಟ್ಯಾಕ್ಸೆಬಲ್ ಆಗಿರುತ್ತದೆ.
ಬ್ಯಾಂಕಿನವರು ಶೇ. 10ರಷ್ಟು ಟಿಡಿಎಸ್ ಕಡಿತ ಮಾಡಿದ್ದರೂ ನೀವೂ ತೆರಿಗೆ ಪಾವತಿದಾರರ ಪಟ್ಟಿಗೆ ಒಳಪಟ್ಟಿದ್ದರೆ ತೆರಿಗೆ ಫೈಲಿಂಗ್ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ.

7. 15G ಅಥವಾ 15H ಫಾರ್ಮ್

7. 15G ಅಥವಾ 15H ಫಾರ್ಮ್

ವಾರ್ಷಿಕವಾಗಿ ನಿಮ್ಮ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ನೀವು ತೆರಿಗೆ ಪಾವತಿದಾರರ ಯಾದಿಗೆ ಒಳಪಡುವುದಿಲ್ಲ. ಅಂತ ಸಂದರ್ಭದಲ್ಲಿ 15G ಅಥವಾ 15H ಫಾರ್ಮ್ ಸಲ್ಲಿಸುವುದರ ಮೂಲಕ ನಿಮ್ಮ ಬಡ್ಡಿ ಆದಾಯದ ಮೇಲೆ ಕಡಿತವಾಗುವ ಟಿಡಿಎಸ್ ನಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಈ ಫಾರ್ಮ್ ಗಳನ್ನು ಸಲ್ಲಿಸಲು ಮರೆತಲ್ಲಿ ರಿಫಂಡ್ ಪಡೆಯುವಾಗ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ.

8. ಅಪಾಯ ಉದಾಸೀನತೆ

8. ಅಪಾಯ ಉದಾಸೀನತೆ

ಕಾಪೋರೇಟ್ ನಿಶ್ಚಿತ ಠೇವಣಿಗಳು ಅಪಾಯವನ್ನು ತಂದೊಡ್ಡುತ್ತವೆ. ಕೆಲ ಸಂದರ್ಭಗಳಲ್ಲಿ ಮೆಚುರಿಟಿ ಪೂರ್ವದಲ್ಲಿ ಹೂಡಿಕೆದಾರರು ಠೇವಣಿಗಳನ್ನು ವಿತ್ ಡ್ರಾ ಮಾಡುವುದರಿಂದ ಈ ಅಪಾಯಗಳು ಸಂಭವಿಸುತ್ತವೆ.
ಒಂದು ವೇಳೆ ಕಂಪನಿ ನಷ್ಟದಲ್ಲಿದ್ದರೆ ಮೆಚುರಿಟಿ ಮೊತ್ತವನ್ನು ಕೊಡಲು ಆಗದೆ ಇರಬಹುದು.

9. ಆರ್ಬಿಐ ರೆಗ್ಯುಲೇಷನ್ಸ್

9. ಆರ್ಬಿಐ ರೆಗ್ಯುಲೇಷನ್ಸ್

1949ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯಿದೆ ಪ್ರಕಾರ ಬ್ಯಾಂಕು ಸ್ಥಿರ ಠೇವಣಿಗಳು ಆರ್ಬಿಐ ನಿಯಂತ್ರಣಕ್ಕೆ ಒಳಪಟ್ಟಿವೆ.
1956ರ ಕಂಪನಿ ಕಾಯಿದೆ ಪ್ರಕಾರ ಕಂಪನಿಗಳು ಸ್ಥಿರ ಠೇವಣಿಗಳಿಗಿಂತ ಈಕ್ವಿಟಿ, ಷೇರುದಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದಾಗಿದೆ. ಹೀಗಾಗಿ ಕಾರ್ಪೋರೇಟ್ ಸ್ಥಿರ ಠೇವಣಿಗಳು ಅಪಾಯಕಾರಿ ಎಂದೇ ಹೇಳಬಹುದು.

10. ನಾಮಿನಿ ಹೆಸರು

10. ನಾಮಿನಿ ಹೆಸರು

ಕಂಪನಿ ಸ್ಥಿರ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡುವಾಗ ಹೂಡಿಕೆದಾರರು ನಾಮಿನಿಯ ಹೆಸರನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಸ್ಥಿರ ಠೇವಣಿ ಮೆಚುರಿಟಿಯಾಗುವ ಮೊದಲೇ ಹೂಡಿಕೆದಾರ ಮರಣ ಹೊಂದಿದ್ದಲ್ಲಿ ಆ ಮೊತ್ತ ನಾಮಿನಿಗೆ ಪಾವತಿಸಲ್ಪಡುತ್ತದೆ.

11. ಹಿರಿಯ ನಾಗರಿಕರಿಗೆ ಹೆಚ್ಚು ಲಾಭ

11. ಹಿರಿಯ ನಾಗರಿಕರಿಗೆ ಹೆಚ್ಚು ಲಾಭ

ಬ್ಯಾಂಕುಗಳ ಸ್ಥಿರ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿದರ ಪಾವತಿಸುವುದರಿಂದ ಹೆಚ್ಚು ಬಡ್ಡಿ ಆದಾಯ ಗಳಿಸಬಹುದಾಗಿದೆ.

English summary

Which Things You Must Know before investing in Fixed Deposit

Banks deposits are one of the most popular investments among Indians. Yet many people are not aware of some of the rules, particularly pertaining to the taxability of interest income.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X