For Quick Alerts
ALLOW NOTIFICATIONS  
For Daily Alerts

ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ..

ಹೂಡಿಕೆ ಮೇಲಿರುವ ತೆರಿಗೆ, ಟಿಡಿಎಸ್, ಗಂಡಾಂತರ, ಬೋನಸ್ ಹಾಗೂ ಪ್ರತಿಫಲ-ಲಾಭ ಇತ್ಯಾದಿ ಸಂಗತಿಗಳ ಅರಿವು ಇರಲೇಕಾಗುತ್ತದೆ.

By Siddu
|

ಹೂಡಿಕೆ ಮಾಡುವವರು ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುತ್ತದೆ. ಅದರಲ್ಲೂ ಹೂಡಿಕೆ ಮೇಲಿರುವ ತೆರಿಗೆ, ಟಿಡಿಎಸ್, ಗಂಡಾಂತರ, ಬೋನಸ್ ಹಾಗೂ ಪ್ರತಿಫಲ-ಲಾಭ ಇತ್ಯಾದಿ ಸಂಗತಿಗಳ ಅರಿವು ಇರಲೇಕಾಗುತ್ತದೆ.

 

ಹೂಡಿಕೆ ಮೇಲಿನ ಪ್ರತಿಫಲ ಎಂಬುದು ತೆರಿಗೆಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಹೆಚ್ಚಿನ ಹೂಡಿಕೆಗಳು ತೆರಿಗೆ ಹಾಗೂ ಟಿಡಿಎಸ್ ಗೆ ಒಳಪಟ್ಟಿರುತ್ತವೆ. ಹೀಗಾಗಿ ಪ್ರತಿಯೊಬ್ಬರೂ ತೆರಿಗೆ ಮತ್ತು ಟಿಡಿಎಸ್ ಯಾವುದಕ್ಕೆ ಅನ್ವಯವಾಗುತ್ತದೆ ಹಾಗೂ ಹೇಗೆ ಇದನ್ನು ತಪ್ಪಿಸಬಹುದು ಎಂಬುದನ್ನು ಅರಿತಿರಬೇಕಾಗುತ್ತದೆ. ಭಾರತದಲ್ಲಿ ಟಿಡಿಎಸ್ (TDS) ಇಲ್ಲದಿರುವ ಹಣಕಾಸು ಹೂಡಿಕೆ

ತೆರಿಗೆ ಮತ್ತು ಟಿಡಿಎಸ್ ಅನ್ವಯವಾಗುವ ಕೆಲ ಪ್ರಮುಖ ಹೂಡಿಕೆಗಳ ವಿವರ ಇಲ್ಲಿದೆ ನೋಡೋಣ...

1. ಸಂಬಳದ ಮೇಲೆ ಟಿಡಿಎಸ್

1. ಸಂಬಳದ ಮೇಲೆ ಟಿಡಿಎಸ್

ತೆರಿಗೆ ಮಿತಿಯನ್ನು ಮೀರಿ ಆದಾಯ ಪಡೆಯುವ ವ್ಯಕ್ತಿಗಳ ಒಟ್ಟು ಆದಾಯದ(2.5 ಲಕ್ಷದ ಮೇಲಿನ ಆದಾಯ) ಮೇಲೆ ಟಿಡಿಎಸ್ ಕಡಿತವಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಗಳಿಸುವ ಆದಾಯದ ಪ್ರಕಾರ ಟಿಡಿಎಸ್ ಕಡಿತವಾಗುತ್ತದೆ. ಆದರೆ ತೆರಿಗೆ ಇಲಾಖೆಯ 80C ಮತ್ತು 80D ಕಾಯಿದೆ ಅಡಿಯಲ್ಲಿ ಮಾಡುವ ಹೂಡಿಕೆಗಳ ಮೇಲಿನ ಟಿಡಿಎಸ್ ಕಡಿತವನ್ನು ದಾಖಲೆಗಳನ್ನು ನೀಡುವುದರ ಮೂಲಕ ತಪ್ಪಿಸಬಹುದಾಗಿರುತ್ತದೆ. ಹಣಕಾಸು ವರ್ಷದ ಅಂತ್ಯದಲ್ಲಿ ಕಂಪನಿಗಳು ಫಾರ್ಮ್ 16A ಎಂಬ ಟಿಡಿಎಸ್ ಪ್ರಮಾಣ ಪತ್ರ ಹೊರಡಿಸುತ್ತದೆ.

2. ಬಡ್ಡಿ ಆದಾಯದ ಮೇಲೆ ಟಿಡಿಎಸ್

2. ಬಡ್ಡಿ ಆದಾಯದ ಮೇಲೆ ಟಿಡಿಎಸ್

ಒಂದು ವರ್ಷದ ಅವಧಿಯಲ್ಲಿ ರೂ. 10,000ಕ್ಕಿಂತ ಹೆಚ್ಚು ಬಡ್ಡಿ ಆದಾಯ ಗಳಿಸಿದಲ್ಲಿ ಬ್ಯಾಂಕುಗಳು ಟಿಡಿಎಸ್ ಕಡಿತ ಮಾಡುತ್ತವೆ. ಹೆಚ್ಚು ತೆರಿಗೆ ಪಾವತಿಸುವ ಚೌಕಟ್ಟಿನಲ್ಲಿ ಬರುವ ವ್ಯಕ್ತಿಗಳು ಹೊಣೆಗಾರಿಕೆಗೆ ತಕ್ಕಂತೆ ತೆರಿಗೆ ಪಾವತಿಸಬೇಕಾಗುತ್ತದೆ.
ಕಡಿಮೆ ಆದಾಯ ಇರುವವರು 15G ಅಥವಾ 15H ಫಾರ್ಮ್ ಸಬ್ಮಿಟ್ ಮಾಡುವ ಮುಖಾಂತರ ಕ್ಲ್ಮೈಮ್ ಮಾಡಬಹುದು. ಫಿಕ್ಸೆಡ್ ಡಿಪಾಸಿಟ್ಸ್ ಗಳನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ತೆರೆಯುವ ಮೂಲಕ ಟಿಡಿಎಸ್ ಕಡಿತವಾಗುವುದನ್ನು ತಪ್ಪಿಸಬಹುದು.
ಟಿಡಿಎಸ್ ಒಟ್ಟು ಮೊತ್ತದ ಮೇಲೆ ಅನ್ವಯವಾಗುತ್ತದಯೇ ಹೊರತು ಕೇವಲ ಹೆಚ್ಚಿದ ಮೊತ್ತದ ಮೇಲಲ್ಲ ಎಂಬುದನ್ನು ಗಮನಿಸಿಬೇಕು.
ಶೇ. 10ರಷ್ಟು ಟಿಡಿಎಸ್ ಅನ್ವಯವಾಗುತ್ತದೆ. ಒಂದು ವೇಳೆ ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ. 20ರಷ್ಟು ಟಿಡಿಎಸ್ ಕಡಿತವಾಗುತ್ತದೆ.

3. ಡಿಬೆಂಚರು ಮತ್ತು ಸೆಕ್ಯುರಿಟಿ ಮೇಲೆ ಟಿಡಿಎಸ್
 

3. ಡಿಬೆಂಚರು ಮತ್ತು ಸೆಕ್ಯುರಿಟಿ ಮೇಲೆ ಟಿಡಿಎಸ್

ತೆರಿಗೆ ಇಲಾಖೆಯ 193 ಸೆಕ್ಷನ್ ಅಡಿಯಲ್ಲಿ ಡಿಬೆಂಚರು ಮತ್ತು ಸೆಕ್ಯುರಿಟಿ ಮೇಲೆ ಪಡೆಯುವ ಬಡ್ಡಿ ಆದಾಯದ ಮೇಲೆ ಟಿಡಿಎಸ್ ಕಡಿತವಾಗುತ್ತದೆ.
ಸರ್ಕಾರದ ಡಿಬೆಂಚರು ಮೇಲೆ ರೂ. 10,000 ಮತ್ತು ಸೆಕ್ಯುರಿಟಿ ಮೇಲೆ ರೂ. 5000ಕ್ಕಿಂತ ಹೆಚ್ಚು ಬಡ್ಡಿ ಆಧಾಯ ಗಳಿಸಿದಲ್ಲಿ ಟಿಡಿಎಸ್ ಶೇ. 10 ರಷ್ಟು ಅನ್ವಯವಾಗುತ್ತದೆ.

4. ಇಪಿಎಫ್ ಮೇಲೆ ಟಿಡಿಎಸ್

4. ಇಪಿಎಫ್ ಮೇಲೆ ಟಿಡಿಎಸ್

 ಉದ್ಯೋಗಿಗಳು ಐದು ವರ್ಷಗಳ ಒಳಗಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ವಿತ್ ಡ್ರಾ ಮಾಡಿಕೊಂಡರೆ ಟಿಡಿಎಸ್ ಅನ್ವಯವಾಗುತ್ತದೆ.
ಆದಾಗ್ಯೂ, ಜುನ್ 1, 2016ರಿಂದ ರೂ. 50,000ಕ್ಕಿಂತ ಕಡಿಮೆ ಇರುವ ಮೊತ್ತದ ಮೇಲೆ ಟಿಡಿಎಸ್ ಕಡಿತವಾಗುವುದಿಲ್ಲ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಪಿಪಿಎಫ್ ವರ್ಗಾವಣೆ ಮಾಡಿದರೆ ಟಿಡಿಎಸ್ ಕಡಿತವಾಗುವುದಿಲ್ಲ.
ಪ್ಯಾನ್ ಕಾರ್ಡ್ ಸಲ್ಲಿಸಿ 15G ಅಥವಾ 15H ಫಾರ್ಮ್ ಸಬ್ಮಿಟ್ ಮಾಡದಿದ್ದರೆ ಶೇ. 10ರಷ್ಟು ಟಿಡಿಎಸ್ ಅನ್ವಯವಾಗುತ್ತದೆ. ಒಂದು ವೇಳೆ ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ. 20ರಷ್ಟು ಟಿಡಿಎಸ್ ಕಡಿತವಾಗುತ್ತದೆ.

5. ಸ್ಥಿರ ಆಸ್ತಿ ಮೇಲೆ ಟಿಡಿಎಸ್

5. ಸ್ಥಿರ ಆಸ್ತಿ ಮೇಲೆ ಟಿಡಿಎಸ್

ತೆರಿಗೆ ಇಲಾಖೆಯ 194-IA ಸೆಕ್ಷನ್ ಅಡಿಯಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಎಲ್ಲ ಆಸ್ತಿ ವ್ಯವಹಾರಗಳ ಮೇಲೆ ಶೇ. 1ರಷ್ಟು ಟಿಡಿಎಸ್ ಕಡಿತವಾಗುತ್ತದೆ. ಆದರೆ ಕೃಷಿ ಭೂಮಿಗೆ ಇದು ಅನ್ವಯವಾಗುವುದಿಲ್ಲ. ಪಾವತಿ ಮಾಡುವಾಗ ಇಲ್ಲವೇ ಮಾರಾಟಗಾರನಿಗೆ ಹಣ ಕೊಡುವಾಗ ಟಿಡಿಎಸ್ ಕಡಿತವಾಗುತ್ತದೆ. ಮಾರಾಟದ ನಂತರ, ಕೊಳ್ಳುವವನು ಟಿಡಿಎಸ್ ಪ್ರಮಾಣ ಪತ್ರವನ್ನು ಮಾರಾಟ ಮಾಡುವವನಿಗೆ ಒದಗಿಸುತ್ತಾರೆ.

6. ಲಾಟರಿ ಮೇಲೆ ಟಿಡಿಎಸ್

6. ಲಾಟರಿ ಮೇಲೆ ಟಿಡಿಎಸ್

ಲಾಟರಿ ಗೆಲ್ಲುವವರೂ ಅತಿ ಹೆಚ್ಚು ಶೇ. 30ರಷ್ಟು ಪ್ರಮಾಣದ ಟಿಡಿಎಸ್ ಪಾವತಿಸಬೇಕಾಗುತ್ತದೆ. ಇದು ಹತ್ತು ಸಾವಿರಕ್ಕಿಂತ ಹೆಚ್ಚು ಮೊತ್ತದ ಲಾಟರಿ ಟಿಕೆಟ್ ಗೆದ್ದವರಿಗೆ ಅನ್ವಯವಾಗುತ್ತದೆ. 194B ಸೆಕ್ಷನ್ ಅಡಿಯಲ್ಲಿ ಕಾರ್ಡ್ ಗೇಮ್ ಗಳಲ್ಲಿ, ಕ್ರಾಸ್ ವರ್ಡ್ ಫಜಲ್ ಗಳಲ್ಲಿ ಆದಾಯ ಗಳಿಸಿದಲ್ಲೂ ಟಿಡಿಎಸ್ ಅನ್ವಯವಾಗುತ್ತದೆ.

English summary

6 Incomes Where TDS Is Deducted

Individuals who are looking for investments should consider tax and TDS along with risk and return of an investment. This is because returns may differ depending on the taxation of financial instruments.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X