For Quick Alerts
ALLOW NOTIFICATIONS  
For Daily Alerts

ಹಣಕಾಸು ಸ್ಥಿತಿ ಸುಧಾರಿಸಲು ಅನುಸರಿಸಬೇಕಾದ 11 ಮಾರ್ಗ

By Siddu
|

ನಮ್ಮ ಇಂದಿನ ಹವ್ಯಾಸಗಳೇ ಮುಂದಿನ ಉಜ್ವಲ ಭವಿಷ್ಯಕ್ಕೆ ದಾರಿದೀಪ. ಉತ್ತಮ ಹಣಕಾಸು ನಿರ್ಧಾರ ಮತ್ತು ನಿರ್ವಹಣೆ ಬದುಕನ್ನು ಸುಭದ್ರಗೊಳಿಸಿ ಹಣಕಾಸು ಸ್ಥಿರತೆಯನ್ನು ತಂದು ಕೊಡುತ್ತದೆ. ಇದು ನಾಳೆಯ ಹಣಕಾಸು ಭವಿಷ್ಯವನ್ನು ಬೆಳಗುವಂತೆ ಮಾಡುತ್ತದೆ.

ಅಂತೆಯೇ ಕೆಟ್ಟ ಹಣಕಾಸು ನಡೆವಳಿ/ಹವ್ಯಾಸಗಳು ಭವಿಷ್ಯವನ್ನು ಮುಳುಗಿಸಿ ದುರಂತಕ್ಕೆ ದಾರಿ ಮಾಡುತ್ತದೆ. ಪ್ರತಿದಿನ ಕೈಗೊಳ್ಳುವ ಹಣಕಾಸು ಹಾಗೂ ಖರ್ಚು-ವೆಚ್ಚ ಸಂಬಂಧಿ ನಿರ್ಧಾರಗಳು ಯಶಸ್ಸಿನೆಡೆಗೆ ಕೊಂಡುಯ್ಯುತ್ತವೆ.

ನಿಮ್ಮ ಹಣಕಾಸು ಅಡಿಪಾಯವನ್ನು ಗಟ್ಟಿಗೊಳಿಸಿ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬೇಕೆಂದು ಬಯಸಿದಲ್ಲಿ ಈ 11 ಹಣಕಾಸು ಹವ್ಯಾಸಗಳನ್ನು ಅಗತ್ಯವಾಗಿ ರೂಢಿಸಿಕೊಳ್ಳಬೇಕು.

1. ಆದಾಯಕ್ಕಿಂತ ಹೆಚ್ಚು ಖರ್ಚು

1. ಆದಾಯಕ್ಕಿಂತ ಹೆಚ್ಚು ಖರ್ಚು

ಹೌದು. ಇದು ನಮ್ಮಲ್ಲಿನ ಮೂಲ ಸಮಸ್ಯೆ ಎಂದೆ ಹೇಳಬೇಕು. ಏಕೆಂದರೆ ಆದಾಯಕ್ಕಿಂತ ನಮ್ಮ ಖರ್ಚಿನ ಪ್ರಮಾಣ ತುಸು ಹೆಚ್ಚೆಂದೆ ಹೇಳಬೇಕು. ಇದು ನಮಗೆ ಗೊತ್ತಿರದ ವಿಚಾರವೆನಲ್ಲ.
ಹೀಗಾಗಿ ನಮ್ಮ ತಿಂಗಳ ಆಧಾಯವನ್ನು ತಲೆಯಲ್ಲಿಟ್ಟು ಅದಕ್ಕನುಗುಣವಾಗಿ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಿದ್ದರೆ ಅದು ಕಿಸೆಗೆ ಬಿದ್ದಿರುವ ದೊಡ್ಡ ರಂಧ್ರ ಎಂದೇ ಹೇಳಬೇಕಾಗುತ್ತದೆ. ಇದು ಭವಿಷ್ಯಕ್ಕಾಗಿ ಶುಭ ಸುದ್ದಿ ಅಲ್ಲ.

2. ಉಳಿತಾಯ! ಏನದು?

2. ಉಳಿತಾಯ! ಏನದು?

ಉಜ್ವಲ ಭವಿಷ್ಯ ರೂಪಿಸುವ ಬಂಗಾರದಂತ ಮಾರ್ಗವೆಂದರೆ ಅದು ಪ್ರಸ್ತುತ ಹಣ ಉಳಿತಾಯ ಮಾಡುವುದಾಗಿದೆ. ಹೆಚ್ಚಿನವರು ಉಳಿತಾಯ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಿನವರು ಯೋಗ್ಯ ಉಳಿತಾಯ ಮಾಡಲು ಶೋಚನೀಯವಾಗಿ ವಿಫಲಗೊಳ್ಳುತ್ತಾರೆ.

3. ಬಿಲ್ಲುಗಳನ್ನು ತಡವಾಗಿ ಪಾವತಿಸುವುದು

3. ಬಿಲ್ಲುಗಳನ್ನು ತಡವಾಗಿ ಪಾವತಿಸುವುದು

ಸಮಯಕ್ಕೆ ಸರಿಯಾಗಿ ಬಿಲ್ಲುಗಳನ್ನು ಪಾವತಿಸುವುದು ಯುವಜನತೆಗೆ ಗೊತ್ತಿರದ ಪರಿಕಲ್ಪನೆ ಎಂಬಂತೆ ತೋರುತ್ತದೆ. ಭವಿಷ್ಯದಲ್ಲಿ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಯೋಚಿಸುವುದೇ ಇಲ್ಲ. ದಿನಾಂಕ ಮುಗಿದ ನಂತರ ಬಿಲ್ಲು ಪಾವತಿಸುವುದರಿಂದ ದಂಡ ಅಥವಾ ಹೆಚ್ಚುವರಿ ಬಡ್ಡಿ ಕಟ್ಟಬೇಕಾಗುತ್ತದೆ. ಅಲ್ಲದೇ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.

4. ಅಪಾಯದ ಹೂಡಿಕೆ

4. ಅಪಾಯದ ಹೂಡಿಕೆ

ಮಾರುಕಟ್ಟೆಯ ನಿಜವಾದ ಅಪಾಯಗಳನ್ನು ಅರಿಯದೆ ಅನೇಕ ಜನರು ಕುರುಡು ಕನಸುಗಳೊಂದಿಗೆ ದಿಢೀರ್ ಆಗಿ ಶ್ರೀಮಂತರಾಗಲು ಬಯಸಿ ಹೆಚ್ಚು ಲಾಭಾಂಶ ಕೊಡುವ ಹೂಡಿಕೆ ಯೋಜನೆಗಳಲ್ಲಿ ಹಣವನ್ನು ಹೂಡುತ್ತಾರೆ.
ಅಪಾಯಕರ ವೆಂಚರ್ ಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದೇ ಆದಲ್ಲಿ ಇದೊಂದು ದೊಡ್ಡ ಜೂಜಾಗಿ ನಿಮ್ಮನ್ನು ದೀವಾಳಿಯನ್ನಾಗಿಸದೇ ಬಿಡುವುದಿಲ್ಲ.

5. ಸಾಲಗಳನ್ನು ನಿಲ್ಲಿಸಿ

5. ಸಾಲಗಳನ್ನು ನಿಲ್ಲಿಸಿ

ಇತ್ತೀಚಿಗೆ ಬ್ಯಾಂಕುಗಳಿಂದ ಸಾಲಗಳನ್ನು ಪಡೆಯುವುದು ತುಂಬಾ ಸರಳವಾಗಿದ್ದು, ಇದೊಂದು ರೀತಿಯಲ್ಲಿ ಸಂಪ್ರದಾಯವಾಗಿ ಬಿಟ್ಟಿದೆ. ಅತ್ಯಧಿಕವಾಗಿ ಸಾಲಗಳನ್ನು ಪಡೆಯುವುದು ಗೌರವದ ಸಂಕೇತವಾಗುತ್ತಿದೆ.
ದುಬಾರಿ ಕಾರು, ಐ‍ಷಾರಾಮಿ ಉಪಕರಣಗಳು ಅಥವಾ ವಿದೇಶಿ ಪ್ರವಾಸ ಕೈಗೊಳ್ಳುವ ಮುನ್ನ, ಅನಗತ್ಯ ವೆಚ್ಚ ಮಾಡುವ ಮುನ್ನ ಅದರ ಅಗತ್ಯತೆ ಕುರಿತು ವಿಚಾರ ಮಾಡಿ. ಜತೆಗೆ ಖಚಿತವಾದ ಹಣಕಾಸು ಗುರಿಗಳ ಸಾಧನೆಗಾಗಿ ಉಳಿತಾಯ ಮಾಡಲು ಪ್ರಾರಂಭಿಸಿ.

6. ಮೋಜು-ಮಸ್ತಿಯ ಜೀವನ

6. ಮೋಜು-ಮಸ್ತಿಯ ಜೀವನ

ಕುಡಿತ, ಜೂಜು, ವಿಪರೀತ ಎನ್ನಬಹುದಾದ ಪಾರ್ಟಿಗಳು ಹಾಗೂ ಆಗಾಗ್ಗೆ ತಿನ್ನುವ ಚಪಲದಿಂದಾಗಿ ನಿಮ್ಮ ಭವಿಷ್ಯದ ಹಣಕಾಸಿನ ಮೇಲಷ್ಟೆ ಅಲ್ಲ ಪ್ರಸ್ತುತ ಆರ್ಥಿಕ ಸ್ಥಿರತೆ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಎಂಜಾಯ್ ಮೆಂಟ್ ಮಾಡಬೇಡಿ ಎಂದು ಹೇಳುತ್ತಿಲ್ಲ ಬದಲಾಗಿ ಇಂತ ವಿಚಾರಗಳ ಮೇಲೆ ನಿಯಂತ್ರಣವಿರಲಿ.

7. ಹೂಡಿಕೆ ಮಾಡುವಾಗ ತುಂಬಾ ಭಯಗೊಳ್ಳುವಿಕೆ

7. ಹೂಡಿಕೆ ಮಾಡುವಾಗ ತುಂಬಾ ಭಯಗೊಳ್ಳುವಿಕೆ

ನಮ್ಮಲ್ಲಿ ಅನೇಕರು ವೆಂಚರ್ಸ್ ಗಳಲ್ಲಿ ಹೂಡಿಕೆ ಮಾಡಲು ಹೆದರುತ್ತಾರೆ. ಅಪಾಯಕಾರಿ ವೆಂಚರ್ ಗಳಲ್ಲಿ ಹೂಡಿಕೆ ಮಾಡುವಾಗ ಭಯಗೊಳ್ಳಬೇಕು ನಿಜ. ಆದರೆ ಸುರಕ್ಷಿತ, ಸುಭದ್ರ ಮತ್ತು ಅಗ್ರ ಶ್ರೇಯಾಂಕದ ವೆಂಚರ್ ಗಳಲ್ಲಿ ಹೂಡಿಕೆ ಮಾಡುವಾಗ ಭಯಗೊಳ್ಳಬೇಕಾಗಿಲ್ಲ. ಮಾರುಕಟ್ಟೆಯ ಅಪಾಯಗಳನ್ನು ಹೂಡಿಕೆಯ ಒಂದು ಭಾಗವೆಂದು ಭಾವಿಸಿ ಸುರಕ್ಷಿತವಾಗಿರುವ ವೆಂಚರ್ ಗಳಲ್ಲಿ ಫಿಕ್ಸೆಡ್ ಡಿಪಾಸಿಟ್ ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು.

8. ಪ್ರಮುಖ ಆರ್ಥಿಕ ನಿರ್ಧಾರಗಳ ಪ್ರವೃತ್ತಿ

8. ಪ್ರಮುಖ ಆರ್ಥಿಕ ನಿರ್ಧಾರಗಳ ಪ್ರವೃತ್ತಿ

ಕೊನೆಯ ಕ್ಷಣದವರೆಗೂ ಸುಮ್ಮನಿರುವ ಸ್ವಭಾವವನ್ನು ಬಿಟ್ಟು ಪ್ರತಿ ಕ್ಷಣ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
ಭೂಮಿ ಖರೀದಿ, ಸ್ಥಿರ ಠೇವಣಿ ತೆರೆಯುವ ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ನಿರ್ಧಾರಗಳನ್ನು ನಾಳೆಗಾಗಿ ಮುಂದೂಡಬಾರದು.

9. ತೆರಿಗೆ ಪ್ರಯೋಜನ ಪಡೆಯಲು ವಿಫಲ

9. ತೆರಿಗೆ ಪ್ರಯೋಜನ ಪಡೆಯಲು ವಿಫಲ

ತುಂಬಾ ಜನರು ತೆರಿಗೆ ಪ್ರಯೋಜನಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುವುದಿಲ್ಲ. ಆದಾಯ ಇಲಾಖೆಯ ೮೦ಸಿ ಸೆಕ್ಷನ್ ಅಡಿಯಲ್ಲಿ ಹಲವು ತೆರಿಗೆ ಲಾಭಗಳಿರುತ್ತವೆ. ಹಾಗೆಯೇ ಕೊನೆಗಳಿಗೆಯಲ್ಲಿ ತೆರಿಗೆ ಪಾವತಿಸುವುದರಿಂದಲೂ ಹೆಚ್ಚಿನ ದಂಡ ತೆರಬೇಕಾಗುತ್ತದೆ.
ತೆರಿಗೆ ಪ್ರಯೋಜನ ಇರುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹಣವನ್ನು ಉಳಿತಾಯ ಮಾಡಬಹುದು.

10. ವಿಮೆ ರಕ್ಷಣೆ ಮಾಡುವುದು

10. ವಿಮೆ ರಕ್ಷಣೆ ಮಾಡುವುದು

ನಮ್ಮಲ್ಲಿ ಹಲವರಿಗೆ ವಿಮೆ ಪಾಲಿಸಿಗಳ ಬಗ್ಗೆ ನಂಬಿಕೆ ಇರುವುದಿಲ್ಲ. ಹೀಗಾಗಿ ಮುಂದಿನ ಭವಿಷ್ಯದ ತುರ್ತುಪರಿಸ್ಥಿತಿಯ ಬಗ್ಗೆ ಸಿದ್ದತೆ ಮಾಡಿಕೊಂಡಿರುವುದಿಲ್ಲ. ವಿಮೆ ರಕ್ಷಣೆಯನ್ನು ಆಯ್ಕೆ ಮಾಡದೆ ನಿಮ್ಮನ್ನು, ನಿಮ್ಮ ಕುಟುಂಬ ಹಾಘೂ ಆಸ್ತಿಯನ್ನು ಆರ್ಥಿಕವಾಗಿ ಅಸುರಕ್ಷಿತನನ್ನಾಗಿಸುತ್ತಿರಿ. ಜೀವನದಲ್ಲಿ ಏನೋ ಒಂದು ಅವಘಡ ಸಂಭವಿಸಿ ಆರ್ಥಿಕ ಪರಿಸ್ಥಿತಿ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಿಗಾಗಿ ಈಗಿನಿಂದಲೇ ಸರಿಯಾದ ಹಣಕಾಸು(ವಿಮೆ/ಪಾಲಿಸಿ) ಯೋಜನೆ ಪ್ರಾರಂಭಿಸಿ.

11. ನಿವೃತ್ತಿ ಖಾತೆಯಿಂದ ಹಣ ವಿತ್ ಡ್ರಾ

11. ನಿವೃತ್ತಿ ಖಾತೆಯಿಂದ ಹಣ ವಿತ್ ಡ್ರಾ

ವೆಚ್ಚಗಳನ್ನು ಭರಿಸುವುದಕ್ಕಾಗಿ ನಿಮ್ಮ ನಿವೃತ್ತಿ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಮುಂದಾಗಬೇಡಿ. ಕೆಲವು ಖಾತೆಗಳಿಂದ ಹಣವನ್ನು ಮುಂಚಿತವಾಗಿ ವಿತ್ ಡ್ರಾ ಮಾಡಿಕೊಂಡರೆ 10% ಫೆನಾಲ್ಟಿ ಭರಿಸಬೇಕಾಗುತ್ತದೆ. ಜತೆಗೆ ಹೆಚ್ಚಿನ ಬಡ್ಡಿದರ ಲಭ್ಯವಾಗದೆ ಮುಂದಿನ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿರಿ.

English summary

Bad Financial Habits That Could Affect Your Future

The things you do today can influence your future. Good money decisions made now lead to a brighter, more financially secure tomorrow. Likewise, there are bad financial habits that can sink your future and lead to debt and devastation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X