For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 10 ಬೆಸ್ಟ್ ಇನ್‌ವೆಸ್ಟ್‌ಮೆಂಟ್‌ ಪ್ಲಾನ್

ಜನರು ಹೂಡಿಕೆ ಮಾಡುವುದು ಯಾಕೆ ಎನ್ನುವ ಪ್ರಶ್ನೆ ಎದುರಾದಾಗ ಸಿಗುವ ಉತ್ತರ ಹಣಕಾಸು ಭದ್ರತೆ ಅಥವಾ ಭವಿಷ್ಯದ ಸುರಕ್ಷತೆ. ಹಾಗಿದ್ದರೆ ಆರ್ಥಿಕ ಭದ್ರತೆ ಸಾಧಿಸುವ ಉತ್ತಮ ಮಾರ್ಗ ಯಾವುದು?

By Siddu
|

ಜನರು ಹೂಡಿಕೆ ಮಾಡುವುದು ಯಾಕೆ ಎನ್ನುವ ಪ್ರಶ್ನೆ ಎದುರಾದಾಗ ಸಿಗುವ ಉತ್ತರ ಹಣಕಾಸು ಭದ್ರತೆ ಅಥವಾ ಭವಿಷ್ಯದ ಸುರಕ್ಷತೆ. ಹಾಗಿದ್ದರೆ ಆರ್ಥಿಕ ಭದ್ರತೆ ಸಾಧಿಸುವ ಉತ್ತಮ ಮಾರ್ಗ ಯಾವುದು? ಬಹುತೇಕ ಜನರ ಪ್ರಕಾರ ಹೆಚ್ಚು ಹಣದ ಅಗತ್ಯವಿದ್ದರೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಆದರೆ ಎಲ್ಲರಿಗೂ ಹೆಚ್ಚು ಸಮಯ ದುಡಿಯುವ ಅವಕಾಶ ಇರುವುದಿಲ್ಲ. ಇದ್ದರೂ ಹೆಚ್ಚು ಹಣ ಗಳಿಸುತ್ತೇವೆ ಎಂಬ ಖಾತರಿ ಇರುವುದಿಲ್ಲ.

 

ಹೀಗಾಗಿ ಭವಿಷ್ಯದಲ್ಲಿ ಆರ್ಥಿಕ ಸ್ಥಿರತೆ ಹೊಂದಲು ಹಣದ ಉಳಿತಾಯ ಹಾಗೂ ದೀರ್ಘಾವಧಿ ಹೂಡಿಕೆ ಮುಖ್ಯವಾಗಿದ್ದು, ಸುರಕ್ಷಿತ ವಿಧಾನಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಸಂಪಾದನೆಯ ಸಾಮರ್ಥ್ಯ ಹೆಚ್ಚಾಗುತ್ತದೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

ಹಾಗಿದ್ದರೆ ಭಾರತದಲ್ಲಿ ಅಲ್ಪಾವಧಿ ಅಥವಾ ದೀರ್ಘಾವಧಿಗಾಗಿ ಹೂಡಿಕೆ ಮಾಡಬಹುದಾದ ಟಾಪ್ 10 ಉತ್ತಮ ಆಯ್ಕೆಗಳು ಯಾವವು ಎಂಬುದನ್ನು ನೋಡೋಣ.

1. ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್)

1. ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್)

ಪಿಪಿಎಫ್ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮತ್ತು ತುಂಬಾ ಸುರಕ್ಷಿತವಾಗಿರುವ ದೀರ್ಘಾವಧಿ ಹೂಡಿಕೆ ವಿಧಾನವಾಗಿದೆ. ಇದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಪಿಪಿಎಫ್ ಖಾತೆಯನ್ನು ಬ್ಯಾಂಕು ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದ್ದು, 15 ವರ್ಷಗಳ ಅವಧಿಯಾಗಿರುತ್ತದೆ. ಈ ಖಾತೆಯಿಂದ ಸಂಯುಕ್ತ ಬಡ್ಡಿಯನ್ನು ಗಳಿಸಬಹುದಾಗಿದೆ. ಇದರ ಅವಧಿಯನ್ನು ಮುಂದಿನ ಐದು ವರ್ಷಗಳಿಗೆ ಹೆಚ್ಚಿಸಬಹುದಾಗಿದೆ. ನಿಮಗೆ ಅಗತ್ಯವಿದ್ದಲ್ಲಿ ಪಿಪಿಎಫ್ ಖಾತೆಯ ಮೇಲೆ ಸಾಲವನ್ನು ಪಡೆಯಬಹುದು.
ಪ್ರಸ್ತುತ 18ರ ಸಾಲಿನಲ್ಲಿ ವಾರ್ಷಿಕ ಶೇ. 8 ಬಡ್ಡಿದರ ಲಭ್ಯವಿದೆ.
Financial Year   Interest Rate
2012-2013         8.80%
2013-2014         8.70%
2014-2015         8.70%
2015-2016         8.70%
2016-2017         8.10%

2017-2018         7.8%

2. ಮ್ಯೂಚುವಲ್ ಫಂಡ್ ಹೂಡಿಕೆ

2. ಮ್ಯೂಚುವಲ್ ಫಂಡ್ ಹೂಡಿಕೆ


ಷೇರು ಮತ್ತು ಬಾಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುವವರು ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಉತ್ತಮ. ಮ್ಯೂಚುವಲ್ ಫಂಡ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಇತ್ತಿಚಿನ ಪ್ರವೃತ್ತಿಯಾಗಿದೆ. ವ್ಯವಸ್ಥಿತ ದೀರ್ಘಾವಧಿ ಹೂಡಿಕೆಗೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ವಿಧಾನವೆಂದರೆ ಮ್ಯೂಚುವಲ್ ಫಂಡ್. ಇತರ ಹೂಡಿಕೆಗಳಿಗೆ ಹೋಲಿಸಿದರೆ ಈ ಆಯ್ಕೆ ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಉತ್ತಮವಾದ ರಿಟರ್ನ್ ಕೊಡಬಲ್ಲದು.

3. ನೇರ ಈಕ್ವಿಟಿ ಅಥವಾ ಷೇರು ಖರೀದಿ
 

3. ನೇರ ಈಕ್ವಿಟಿ ಅಥವಾ ಷೇರು ಖರೀದಿ

ನೇರ ಈಕ್ವಿಟಿ ಅಥವಾ ಷೇರು ಖರೀದಿ ಮಾಡುವ ಮುನ್ನ ಯಾವುದು ಉತ್ತಮವಾದದ್ದು ಎಂಬುದನ್ನು ವಿಶ್ಲೇಷಿಸಿ ಖಚಿತಪಡಿಸಿಕೊಳ್ಳಿ. ಭಾರತದಲ್ಲಿ ಟಾಪ್ ಟೆನ್ ದೀರ್ಘಾವಧಿ ಹೂಡಿಕೆಗಳಲ್ಲಿ ಇದು ಅತ್ಯುತ್ತಮ ಹೂಡಿಕೆಯೆನಿಸಿದೆ. ಇದು 15 ವರ್ಷಗಳಿಗಿಂತ ದೀರ್ಘಾವಧಿ ಹೂಡಿಕೆಯಾಗಿದ್ದಲ್ಲಿ ತುಸು ಹೆಚ್ಚಿನ ಪ್ರತಿಫಲ ಸಿಗುವುದು ಖಚಿತ.

4. ರಿಯಲ್ ಎಸ್ಟೇಟ್ ಹೂಡಿಕೆ

4. ರಿಯಲ್ ಎಸ್ಟೇಟ್ ಹೂಡಿಕೆ

ಭಾರತದಲ್ಲಿ ವಸತಿ, ವಾಣಿಜ್ಯ, ಆತಿಥ್ಯ, ಉತ್ಪಾದನೆ, ಚಿಲ್ಲರೆ ಮತ್ತು ಹೆಚ್ಚಿನ ಪ್ರಮುಖ ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ದೊಡ್ಡ ಭವಿಷ್ಯ ಹೊಂದಿರುವ ಕ್ಷೇತ್ರ ರಿಯಲ್ ಎಸ್ಟೇಟ್.
ಫ್ಲಾಟ್ ಖರೀದಿ ಹೂಡಿಕೆ ವಿಧಾನಗಳಲ್ಲಿನ ಉತ್ತಮ ಆಯ್ಕೆ ಎಂದೇ ಹೇಳಬೇಕು. ಏಕೆಂದರೆ ಇದರಲ್ಲಿ ಅಪಾಯ ತುಂಬಾ ಕಡಿಮೆಯಿದ್ದು, ಕಡಿಮೆ ಅವಧಿಯಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಾಗಿ ಉತ್ತಮ ಲಾಭ ಗಳಿಸಬಹುದು.

5. ಬಂಗಾರ ಹೂಡಿಕೆ

5. ಬಂಗಾರ ಹೂಡಿಕೆ

ಬಂಗಾರದ ಮೇಲೆ ಹೂಡಿಕೆ ಮಾಡುವುದು ತುಂಬಾ ಹಳೆಯ ಮತ್ತು ಪ್ರಮುಖ ವಿಧಾನವಾಗಿದೆ. ಚಿನ್ನದ ಮೌಲ್ಯ ಯಾವಾಗಲೂ ಶೀಘ್ರದಲ್ಲಿ ಹೆಚ್ಚಾಗುತ್ತಲೇ ಇರುತ್ತದೆ.
ನಿಮಗೆ ಬಂಗಾರದ ಮೇಲೆ ಹೂಡಿಕೆ ಮಾಡಲು ಇಷ್ಟವಿದ್ದಲ್ಲಿ ಗೋಲ್ಡ್ ಡಿಪಾಸಿಟ್ ಸ್ಕಿಮ್, ಗೋಲ್ಡ್ ಇಎಫ್ಟಿ, ಗೋಲ್ಡ್ ಬಾರ್, ಗೋಲ್ಡ್ ಮ್ಯೂಚುವಲ್ ಫಂಡ್ ಗಳನ್ನು ಆಯ್ಕೆ ಮಾಡಬಹುದು. ಚಿನ್ನದ ಹೂಡಿಕೆ ಅಲ್ಪಾವಧಿಯಲ್ಲಿ ಉತ್ತಮ ಲಾಭ ಕೊಡಬಲ್ಲದು.

6. ಪೋಸ್ಟ್ ಆಫೀಸ್ ಉಳಿತಾಯ ಯೋಜನೆ

6. ಪೋಸ್ಟ್ ಆಫೀಸ್ ಉಳಿತಾಯ ಯೋಜನೆ

ಭಾರತದಲ್ಲಿ ಅತ್ಯಧಿಕ ಲಾಭ ತಂದುಕೊಡುವ ಹೂಡಿಕೆಗಳಲ್ಲಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಟಾಪ್ ಟೆನ್ ಸ್ಥಾನದಲ್ಲಿ ನಿಲ್ಲುತ್ತದೆ.
ಮಾಸಿಕ ಆದಾಯ ಯೋಜನೆ ಇದ್ದು, ನಿವೃತ್ತರಿಗೆ ನಿಯಮಿತವಾದ ಆದಾಯ ತಂದುಕೊಡಬಲ್ಲದು. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಯಾವುದೇ ಅಪಾಯಗಳು ಇರುವುದಿಲ್ಲ. ಆದರೆ ಬಡ್ಡಿದರ ಸಲ್ಪಕಡಿಮೆಯಿರುತ್ತದೆ.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು:
1. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ
2. ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್(TD) ಯೋಜನೆ
3. ಪೋಸ್ಟ್ ಆಫೀಸ್ ಉಳಿತಾಯ ಖಾತೆ
4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC)
5. ಹಿರಿಯ ನಾಗರಿಕರ ಉಳಿತಾಯ ಯೋಜನೆ
6. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್)

7. ಕಂಪನಿ ಸ್ಥಿರ ಠೇವಣಿಗಳು

7. ಕಂಪನಿ ಸ್ಥಿರ ಠೇವಣಿಗಳು

ಬ್ಯಾಂಕು ಸ್ಥಿರ ಠೇವಣಿಗಳಿಗೆ ಹೋಲಿಸಿದರೆ ಕಂಪನಿ ಎಫ್ಡಿಗಳು ಹೆಚ್ಚು ಲಾಭಗಳನ್ನು ಒದಗಿಸುತ್ತವೆ. ಮೆಚುರಿಟಿ ಅವಧಿ ಮುಗಿಯುವ ಮುನ್ನ ಹಣವನ್ನು ಹಿಂಪಡೆಯಲು ಅವಕಾಶ ಇಲ್ಲದಿರುವುದರಿಂದ ತುಂಬಾ ಜಾಗೂರಕರಾಗಿ ಕಂಪನಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ಕಾಪೋರೇಟ್ ವಲಯದ ಎಫ್ಡಿ ಯೋಜನೆಗಳು ವಿಮೆ ಪ್ರಯೋಜನದ ಅಡಿಯಲ್ಲಾಗಲಿ ಅಥವಾ ಆರ್ಬಿಐ ನಿಯಂತ್ರಣದಲ್ಲಾಗಲಿ ಬರುವುದಿಲ್ಲ. ಅಪಾಯವನ್ನು ಎದುರಿಸಲು ಸಿದ್ದರಿರುವವರು ಕಂಪನಿ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಉತ್ತಮ ಆದಾಯ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

8. ಆರಂಭಿಕ ಸಾರ್ವಜನಿಕ ಕೊಡುಗೆಗಳು(IPO)

8. ಆರಂಭಿಕ ಸಾರ್ವಜನಿಕ ಕೊಡುಗೆಗಳು(IPO)

ಜೀವನದಲ್ಲಿ ಒಮ್ಮೆ ಮಾತ್ರ ಆರಂಭಿಕ ಸಾರ್ವಜನಿಕ ಕೊಡುಗೆ(IPO) ಅವಕಾಶ ಸಿಗುತ್ತದೆ. ಪ್ರತಿ ಕಂಪನಿಗಳು ಕೆವಲ ಒಂದು ಬಾರಿ ಮಾತ್ರ ಈ ಅವಕಾಶ ಒದಗಿಸುತ್ತವೆ. ಉತ್ತಮ ಮತ್ತು ಹೆಸರಾಂತ ಕಂಪನಿ ಐಪಿಒ ಬಿಡುಗಡೆ ಮಾಡಿದರೆ ತುಂಬಾ ಆಕರ್ಷಕವಾಗಿರುತ್ತದೆ. ಇದು ದೀರ್ಘಾವಧಿಗೆ ಉತ್ತಮ ಆಯ್ಕೆಯಾಗಿದ್ದು, ಅಪಾಯದ ಪ್ರಮಾಣ ಕಡಿಮೆಯಾಗಿರುತ್ತದೆ.

9. ಯುನಿಟ್ ಲಿಂಕ್ಡ್ ಇನ್ಸೂರೆನ್ಸ್‌ ಪ್ಲಾನ್

9. ಯುನಿಟ್ ಲಿಂಕ್ಡ್ ಇನ್ಸೂರೆನ್ಸ್‌ ಪ್ಲಾನ್

ಇದು ULIPs ಎಂದೇ ಪ್ರಸಿದ್ದಿ ಪಡೆದಿದ್ದು, ಭಾರತದಲ್ಲಿನ ಅತ್ಯುತ್ತಮ ಹೂಡಿಕೆಗಳಲ್ಲಿ ಒಂದಾಗಿದೆ. ಇದು ಸಾಲ(ಡೆಬ್ಟ್) ಮತ್ತು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಾಗಿದೆ. ಇದರ ಏರಿಳಿತ ನಿವ್ವಳ ಆಸ್ತಿ ಮೌಲ್ಯ(NAV) ಮೂಲಕ ಪರಿಗಣಿಸಲ್ಪಡುತ್ತದೆ. ಈ ವಿಧಾನ ಎಲ್ಲರಿಗೂ ತಿಳಿಯದಿದ್ದರೂ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

10. ಬಾಂಡುಗಳಲ್ಲಿ ಹೂಡಿಕೆ

10. ಬಾಂಡುಗಳಲ್ಲಿ ಹೂಡಿಕೆ

ನಿಮಗೆ ಮ್ಯೂಚುವಲ್ ಫಂಡ್ ಅಥವಾ ನೇರ ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಅಹಿತಕರ ಎನಿಸಿದ್ದರೆ ಬಾಂಡುಗಳಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಬಹುದು. ಏಕೆಂದರೆ ಬಾಂಡುಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ವಿಧಾನವಾಗಿದ್ದು, ಹೆಚ್ಚು ಪ್ರತಿಫಲ ಕೊಡುತ್ತವೆ. ಇದು ಸರ್ಕಾರದ ನಿಯಂತ್ರಣದಲ್ಲಿದ್ದು, ಹತ್ತು ವರ್ಷಗಳ ಅವಧಿಯ ಬಾಂಡುಗಳ ಮೇಲೆ ಶೇ. 7.70ರಷ್ಟು ಬಡ್ಡಿದರ ಪಡೆಯಬಹುದಾಗಿದೆ.

ಭಾರತದಲ್ಲಿನ ಹೂಡಿಕೆ ವಿಧಾನಗಳ ಕೋಷ್ಟಕ

ಭಾರತದಲ್ಲಿನ ಹೂಡಿಕೆ ವಿಧಾನಗಳ ಕೋಷ್ಟಕ

ಈ ಮೇಲಿನ ಕೋಷ್ಟಕದಲ್ಲಿ ಭಾರತದಲ್ಲಿ ಹೂಡಿಕೆ ಮಾಡಬಹುದಾದ ಟಾಪ್ 10 ಬೆಸ್ಟ್ ಹೂಡಿಕೆ ವಿಧಾನಗಳ ವಿವರವನ್ನು ನೀಡಲಾಗಿದೆ. ಹೀಗಾಗಿ ಹೂಡಿಕೆ ಕುರಿತು ಸರಿಯಾಗಿ ಅರಿತುಕೊಂಡು, ಸುಸ್ಥಿರವಾದ ಉಜ್ವಲ ಆರ್ಥಿಕ ಭವಿಷ್ಯಕ್ಕಾಗಿ ಉತ್ತಮವಾದ ವಿಧಾನಗಳನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ.

English summary

Best Investment Options in India

What is the best way to attain financial security? It’s to save and invest money for a long period of time to have a financial stability in future.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X