For Quick Alerts
ALLOW NOTIFICATIONS  
For Daily Alerts

ಇ-ಇನ್ಸೂರೆನ್ಸ್ ಖಾತೆ(eIA) ತೆರೆಯುವುದು ಹೇಗೆ?

ಹಲವಾರು ವಿಮಾ ಪಾಲಿಸಿಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವುದು ಹಾಗೂ ಅವುಗಳನ್ನು ನಿಭಾಯಿಸುವುದು ನಿಜಕ್ಕೂ ಕಷ್ಟದ ಕೆಲಸ ಎಂದೇ ಹೇಳಬೇಕು. ಹಾಗಿದ್ದರೆ ಇದಕ್ಕೆ ಪರ್ಯಾಯ ಮಾರ್ಗ ಏನು ಎಂಬ ಪ್ರಶ್ನೆ ನಮಗೆ ಕಾಡಬಹುದು.

By Siddu
|

ಹಲವಾರು ವಿಮಾ ಪಾಲಿಸಿಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವುದು ಹಾಗೂ ಅವುಗಳನ್ನು ನಿಭಾಯಿಸುವುದು ನಿಜಕ್ಕೂ ಕಷ್ಟದ ಕೆಲಸ ಎಂದೇ ಹೇಳಬೇಕು. ಹಾಗಿದ್ದರೆ ಇದಕ್ಕೆ ಪರ್ಯಾಯ ಮಾರ್ಗ ಏನು ಎಂಬ ಪ್ರಶ್ನೆ ನಮಗೆ ಕಾಡಬಹುದು.

ಇದಕ್ಕೆ ಉತ್ತರ ತುಂಬಾ ಸರಳ. ಎಲೆಕ್ಟ್ರಾನಿಕ್ ಖಾತೆಯೊಂದನ್ನು ತೆರೆಯುವ ಮೂಲಕ ನಿಮ್ಮ ಎಲ್ಲ ಪಾಲಿಸಿಗಳನ್ನು ಬಹಳ ಸುಲಭವಾಗಿ ನಿಭಾಯಿಸಬಹುದು. ಇಂಥ ಒಂದು ಪದ್ಧತಿ ಯುಪಿಎ ಸರ್ಕಾರದ ಅವಧಿಯಲ್ಲೇ ಜಾರಿಗೆ ಬಂದಿದೆ.

1. ಪಿ.ಚಿದಂಬರಂ ಐಆರ್ ಡಿಎ ಯೋಜನೆ

1. ಪಿ.ಚಿದಂಬರಂ ಐಆರ್ ಡಿಎ ಯೋಜನೆ

ಹಿಂದಿನ ಹಣಕಾಸು ಸಚಿವ ಪಿ.ಚಿದಂಬರಂ ಐಆರ್ ಡಿಎ ಯೋಜನೆ ಮೂಲಕ ಇಂಥದ್ದೊಂದು ಪದ್ಧತಿ ಘೋಷಣೆ ಮಾಡಿದ್ದರು. ಆ ಮೂಲಕ ವಿಮಾ ಕಂಪನಿಗಳಲ್ಲಿ ಪಾರದರ್ಶಕತೆ ಸಾಧಿಸಲು ಈ ಯೋಜನೆ ಮೂಲಕ ಪ್ರಯತ್ನಿಸಿದ್ದರು. ಆದರೆ ಹಲವರಿಗೆ ಈ ಬಗ್ಗೆ ಸ್ಪಷ್ಟ ತಿಳಿವಳಿಕೆಯಿಲ್ಲ.

2. ಇ-ಇನ್ಸೂರೆನ್ಸ್ ಖಾತೆ ಪ್ರಯೋಜನ

2. ಇ-ಇನ್ಸೂರೆನ್ಸ್ ಖಾತೆ ಪ್ರಯೋಜನ

ಈ ಎಲೆಕ್ಟ್ರಾನಿಕ್ ಖಾತೆ ಪಾಲಿಸಿದಾರರಿಗೆ ಅನೇಕ ಲಾಭಗಳನ್ನು ತಂದು ಕೊಡುತ್ತದೆ. ಜೀವ ವಿಮೆ, ಸಾಮಾನ್ಯ ಪಾಲಿಸಿಗಳು, ಆರೋಗ್ಯ ಸುರಕ್ಷತಾ ವಿಮೆಗಳು ಎಲ್ಲವನ್ನು ಒಂದೇ ಖಾತೆಯ ಮೂಲಕ ವ್ಯವಹರಿಸಲು ಸಾಧ್ಯವಾಗುತ್ತದೆ. 

3. ಅನುಕೂಲಕ್ಕೆ ತಕ್ಕಂತೆ ವ್ಯವಹಾರ

3. ಅನುಕೂಲಕ್ಕೆ ತಕ್ಕಂತೆ ವ್ಯವಹಾರ

ಆನ್ ಲೈನ್ ಮುಖಾಂತರ ಯಾವುದೇ ಜಾಗದಲ್ಲಿ, ಎಲ್ಲಿ ಬೇಕಾದರೂ ನಿಮ್ಮ ಖಾತೆಯ ವಿವರ ನೋಡಬಹುದು. ಅಲ್ಲದೇ ಕಂತು ಪಾವತಿಸಲು ಅವಕಾಶವಿರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣ ಪಾವತಿ ಮಾಡಬಹುದು.

4. ರೆಪೊಸಿಟರಿ ಆಯ್ಕೆ

4. ರೆಪೊಸಿಟರಿ ಆಯ್ಕೆ

ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಕೆಳಗಿನ ಯಾವುದಾದರೂ ಒಂದು ರೆಪೊಸಿಟರಿ(ಸಂಪುಟ) ಆಯ್ಕೆ ಮಾಡಿ ವ್ಯವಹರಿಸಬಹುದು.
1. ಸೆಂಟ್ರಲ್ ಇನ್ಶೂರೆನ್ಸ್ ರೆಪೊಸಿಟರಿ(ಸಿಐಆರ್ಎಲ್), 2. ನ್ಯಾಶನಲ್ ಇನ್ಶೂರೆನ್ಸ್ ಪಾಲಿಸಿ(ಎನ್ಐಆರ್) ರೆಪೊಸಿಟರಿ
3. ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ(ಎಸ್ ಎಚ್ ಸಿಎಲ್)

5. ಇ-ಇನ್ಶೂರೆನ್ಸ್ ಖಾತೆ ತೆರೆಯುವ ವಿಧಾನ

5. ಇ-ಇನ್ಶೂರೆನ್ಸ್ ಖಾತೆ ತೆರೆಯುವ ವಿಧಾನ

1. ಇ-ಇನ್ಶೂರೆನ್ಸ್ ಖಾತೆ ತೆರೆಯುವ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ
2. ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಿ
3. ರೆಪೊಸಿಟರಿ ಸಂಸ್ಥೆ ಆಯ್ಕೆ ಮಾಡಿಕೊಂಡು ಅರ್ಜಿಯನ್ನು ನಿರ್ದಿಷ್ಟ ವಿಮಾ ರೆಪೊಸಿಟರಿ ಸಂಸ್ಥೆಗೆ ಕಳುಹಿಸಿಕೊಡಬೇಕು. (ಮೇಲೆ ಹೇಳಿದ ಸಿಐಆರ್ಎಲ್, ಎನ್ಐಆರ್, ಎಸ್ ಎಚ್ ಸಿಎಲ್ ಯಾವುದಾದರೂ ಆಗಬಹುದು)
4.ರೆಪೊಸಿಟರಿ ಇ-ಖಾತೆ ತೆರೆದು ನಂತರ ನಿಮಗೆ ಇ-ಇನ್ಶೂರೆನ್ಸ್ ಖಾತೆ ನಂಬರ್ ಕಳುಹಿಸಿ ಕೊಡಲಾಗುವುದು.
5. ಖಾತೆ ನಂಬರ್ ದೊರೆತ ಮೇಲೆ ಅಪ್ ಡೇಟ್ ಆರಂಭಿಸಬಹುದು.
6. ಇ-ಪೋರ್ಟಲ್ ನಲ್ಲಿ ನಿಮ್ಮ ಪಾಲಿಸಿ ನಂಬರ್ ಅಪ್ಲೋಡ್ ಆದ ಬಗ್ಗೆ ಸಂಸ್ಥೆ ನಿಮಗೆ ಮಾಹಿತಿಯನ್ನು ಒದಗಿಸುತ್ತದೆ.
7. ಹಣ ವ್ಯವಹಾರ (ಟ್ರಾನ್ಸಾಕ್ಷನ್) ಯಶಸ್ವಿಯಾದ ಬಗ್ಗೆ ನಿಮಗೆ ಮೆಸೇಜ್ ಬರುತ್ತದೆ.

6. ಸೂಚನೆ

6. ಸೂಚನೆ

ಈ ಇ-ಇನ್ಶೂರೆನ್ಸ್ ಖಾತೆ ತೆರೆಯುವಾಗ ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನಂಬರ್ ಅಗತ್ಯವಾಗಿರುತ್ತದೆ ಎಂಬುದನ್ನು ಗಮನಿಸಬೇಕು.

English summary

How To Open e-Insurance Account (eIA)?

Holding many insurance policies and placing them safely was a tedious job. Now you can open electronic account and hold your policies under one online account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X