For Quick Alerts
ALLOW NOTIFICATIONS  
For Daily Alerts

ನೋಟು ನಿಷೇಧದ ನಂತರ ಎಲ್ಲಿ ಹೂಡಿಕೆ ಮಾಡುತ್ತಿರಿ?

ಪ್ರಸ್ತುತ ತಾತ್ಕಾಲಿಕವಾಗಿ ಹೂಡಿಕೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ನೋಟು ರದ್ದತಿ ನಂತರ ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಬಡ್ಡಿದರ, ಪ್ರತಿಫಲ ಲಭ್ಯ ಎನ್ನುವುದನ್ನು ತಿಳಿದುಕೊಳ್ಳೋಣ...

By Siddu
|

ಪ್ರಧಾನಿ ಮೋದಿ ನವೆಂಬರ್ 8ರ ಮಧ್ಯರಾತ್ರಿ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿ ಕಪ್ಪುಹಣ, ಖೋಟಾನೋಟು, ಭಯೋತ್ಪಾದನೆ ತಡೆಗೆ ಮಹತ್ವದ ಹೆಜ್ಜೆ ಇಟ್ಟು ಮಹಾಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.

 

ನೋಟು ರದ್ದತಿಯಿಂದ ದೇಶದ ಆರ್ಥಿಕತೆಯ ಮೇಲೆ ಹಲವು ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳು ಬೀರಿವೆ. ತಜ್ಞರ ಪ್ರಕಾರ ತಾತ್ಕಾಲಿಕವಾಗಿ ಜಿಡಿಪಿ, ಕಾರ್ಪೋರೇಟ್ ಗಳಿಕೆ, ಹೂಡಿಕೆ, ಹಣದುಬ್ಬರ ಹಾಗೂ ಭಿನ್ನ ಆಸ್ತಿಗಳ ಮೇಲೆ ಪರಿಣಾಮ ಬೀರಲಿದೆ. ಮಕ್ಕಳಿಗಾಗಿ 6 ಉತ್ತಮ ಉಳಿತಾಯ ಖಾತೆ

ಪ್ರಸ್ತುತ ತಾತ್ಕಾಲಿಕವಾಗಿ ಹೂಡಿಕೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ನೋಟು ರದ್ದತಿ ನಂತರ ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಬಡ್ಡಿದರ, ಪ್ರತಿಫಲ ಲಭ್ಯ ಎನ್ನುವುದನ್ನು ತಿಳಿದುಕೊಳ್ಳೋಣ...

1. ಬಂಗಾರ

1. ಬಂಗಾರ

ನೋಟು ರದ್ದತಿ ನಂತರ ಭೌತಿಕ ಬಂಗಾರ ಹೂಡಿಕೆಗೆ ಉತ್ತಮ ಆಯ್ಕೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ನಗದು ಕೊರತೆಯಿಂದ ಚಿನ್ನದ ಖರೀದಿಯ ಪ್ರಮಾಣ ಕುಸಿದಿದೆ. ಅಂತರಾಷ್ಟ್ರೀಯ ಚಿನ್ನದ ಮಾರುಕಟ್ಟೆ ಮತ್ತು ಡಾಲರ್ ನಿಂದ ಉತ್ತಮ ಸೂಚನೆ ಸಿಗುತ್ತಿದೆ. ಚಿನ್ನದ ಖರೀದಿ ಕಡಿಮೆಯಾಗಿರುವುದರಿಂದ ದರದಲ್ಲೂ ಇಳಿಕೆಯಾಗಿದೆ.
ಬಂಗಾರದ ಮೇಲೆ ಹೂಡಿಕೆ ಮಾಡಬಯಸುವವರು ಗೋಲ್ಡ್ ಇಟಿಎಫ್, ಗೋಲ್ಡ್ ಬಾಂಡ್ ಗಳನ್ನು ಖರೀದಿಸುವುದು ಅತ್ಯುತ್ತಮ ಆಯ್ಕೆ.

2. ಮ್ಯೂಚುವಲ್ ಫಂಡ್ಸ್

2. ಮ್ಯೂಚುವಲ್ ಫಂಡ್ಸ್

ಅನಾಣ್ಯೀಕರಣದ ನಂತರ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಬೆಸ್ಟ್ ಆಯ್ಕೆ. ದೀರ್ಘಾವಧಿಯಲ್ಲಿ ಉತ್ತಮ ಪ್ರತಿಫಲ ಕೊಡುವ ಈಕ್ವಿಟಿಗಳನ್ನು ಆಯ್ಕೆ ಮಾಡಿ.
ವ್ಯವಸ್ಥಿತ ಹೂಡಿಕೆ ಯೋಜನೆ(SIPs)ಯನ್ನು ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳುವುದು ಸಹ ಒಂದು ಯೋಗ್ಯ ಮಾರ್ಗ. ಇಲ್ಲಿ ರೂ. 500 ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡಬಹುದು. ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್ ಗಳಲ್ಲಿ ಉತ್ತಮ ಆದಾಯ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಅಗತ್ಯತೆಗೆ ಅನುಗುಣವಾಗಿ ಡೆಬ್ಟ್ ಫಂಡ್ಸ್, ಲಿಕ್ವಿಡ್ ಫಂಡ್ಸ್ ಆಯ್ಕೆ ಮಾಡಿ.

3. ಷೇರು ಮಾರುಕಟ್ಟೆ
 

3. ಷೇರು ಮಾರುಕಟ್ಟೆ

ಹಲವು ಕಾರಣಗಳಿಂದ ಷೇರುಪೇಟೆ ಕೆಳಮುಖವಾಗಿ ಸಾಗುತ್ತಿದೆ. ಅದಕ್ಕೆ ಅನಾಣ್ಯೀಕರಣವು ಒಂದು ಕಾರಣ. ಕಡಿಮೆ ಕಾರ್ಪೋರೇಟ್ ಗಳಿಕೆಯಿಂದಾಗಿ ಅನೇಕ ದಲ್ಲಾಳಿ ಸಂಸ್ಥೆಗಳು ಸೆನ್ಸೆಕ್ಸ್ ಟಾರ್ಗೆಟ್ ಬೆಲೆಯನ್ನು ಕತ್ತರಿಸಿವೆ.
ಪ್ರಸ್ತುತ ಷೇರುಗಳ ಬೆಲೆ ಕಡಿಮೆ ಆಗಿರುವುದರಿಂದ ದೀರ್ಘಾವಧಿಗಾಗಿ ಷೇರುಗಳನ್ನು ಖರೀದಿ ಮಾಡಿ ಉತ್ತಮ ಆದಾಯ ಗಳಿಸುವ ಅವಕಾಶ ಲಭ್ಯವಿದೆ.

4. ರಿಯಲ್ ಎಸ್ಟೇಟ್

4. ರಿಯಲ್ ಎಸ್ಟೇಟ್

ರಿಯಲ್ ಎಸ್ಟೇಟ್ ಹೂಡಿಕೆ ಮಾಡುವವರಿಗೆ ಒಂದು ಪ್ರಸಿದ್ದ ಮಾರ್ಗ. ಅನಾಣ್ಯೀಕರಣದ ನಂತರ ಕಪ್ಪುಹಣ ಹೊಂದಿದವರು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಕಷ್ಟವಾಗಿದೆ. ಮುಂದಿನ ಕೆಲ ತ್ರೈಮಾಸಿಕಗಳವರೆಗೆ ಶೇ. 20-30 ರಿಯಲ್ ಎಸ್ಟೇಟ್ ದರ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಯಾರು ಮನೆ ಖರೀದಿ ಮಾಡಲು ಇಚ್ಛಿಸುತ್ತಾರೆ ಅವರಿಗೆ ಇದು ಸುಸಂದರ್ಭ. ಗೃಹಸಾಲದ ಮೇಲೆ ಬಡ್ಡಿದರ ಕೂಡ ಕಡಿಮೆ ಇರಲಿದೆ.

5. ಬ್ಯಾಂಕ್ ಸ್ಥಿರ ಠೇವಣಿ

5. ಬ್ಯಾಂಕ್ ಸ್ಥಿರ ಠೇವಣಿ

ನೋಟು ರದ್ದತಿ ನಂತರದ ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕ್ ಎಫ್ಡಿಗಳ ಮೇಲೆ ಹೂಡಿಕೆ ಮಾಡುವುದು ಸರಿಯಾದ ಆಯ್ಕೆ ಅಲ್ಲ. ಏಕೆಂದರೆ ಎಫ್ಡಿಗಳ ಮೇಲೆ ನೀಡುವ ಬಡ್ಡಿದರ ಗಣನೀಯವಾಗಿ ಕುಸಿತ ಕಂಡಿದೆ. ನೋಟು ನಿಷೇಧದಿಂದಾಗಿ ಬ್ಯಾಂಕುಗಳಿಗೆ ಠೇವಣಿಗಳು ಹರಿದು ಬರುತ್ತಿದ್ದು, ಹೆಚ್ಚಿನ ಬ್ಯಾಂಕುಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಕಡಿತಗೊಳಿಸಿವೆ.
ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ ನಂತಹ ಪ್ರಮುಖ ಬ್ಯಾಮಕುಗಳು ಬಡ್ಡಿದರ ಕಡಿತಗೊಳಿಸಿ, ಹೊಸ ಬಡ್ಡಿದರ ಘೋಷಿಸಿವೆ.
ಇದರ ಹೊರತಾಗಿ ತೆರಿಗೆ ರಹಿತ ಬಾಂಡುಗಳ ಮೇಲೆ ಹೂಡಿಕೆ ಮಾಡುವುದು ಉತ್ತಮವಾಗಿದ್ದು, ಶೇ. 6ರಷ್ಟು ಬಡ್ಡಿದರ ಲಭ್ಯವಿದೆ. ಬಾಂಡುಗಳ ಮೇಲೆ ಸಿಗುವ ಬಡ್ಡಿದರ ತೆರಿಗೆ ರಹಿತವಾಗಿರುತ್ತದೆ.

English summary

Best Investment Options After Demonetization

The government on November 8, 2016, scrapped Rs 500 and Rs 1000 notes in order to curb black money and corruption. Experts believe that it will have a short-term impact on GDP, corporate earnings, and on different asset classes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X