For Quick Alerts
ALLOW NOTIFICATIONS  
For Daily Alerts

ಮಕ್ಕಳಿಗಾಗಿ ಬೆಸ್ಟ್ ಉಳಿತಾಯ ಯೋಜನೆಗಳು

ಶಿಕ್ಷಣ ಮತ್ತು ಉಳಿತಾಯ ಮೊದಲ ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ಭಾರತದಲ್ಲಿನ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಹೆಸರಿನಲ್ಲಿ ಒಂದು ಉತ್ತಮ ಹೂಡಿಕೆ ಯೋಜನೆ ಇರಬೇಕು ಎಂದುಕೊಂಡಿರುತ್ತಾರೆ.

By Siddu
|

ಪಾಲಕರಿಗೆ ತಮ್ಮ ಮಕ್ಕಳೇ ಅವರ ಜಗತ್ತು ಹಾಗೂ ಪ್ರಥಮ ಆಧ್ಯತೆ. ಮಕ್ಕಳಿಗೊಸ್ಕರ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಅದರಲ್ಲಿ ಶಿಕ್ಷಣ ಮತ್ತು ಉಳಿತಾಯ ಮೊದಲ ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ.

ಭಾರತದಲ್ಲಿನ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಹೆಸರಿನಲ್ಲಿ ಒಂದು ಉತ್ತಮ ಹೂಡಿಕೆ ಯೋಜನೆ ಇರಬೇಕು ಎಂದುಕೊಂಡಿರುತ್ತಾರೆ. ಹಾಗಿದ್ದರೆ ಹೂಡಿಕೆ ಮಾಡುವುದು ಇಲ್ಲವೆ ಉಳಿತಾಯ ಮಾಡುವುದು ಹೇಗೆ? ಮಕ್ಕಳ ಭವಿಷ್ಯಕ್ಕಾಗಿ ಯಾವ ಯೋಜನೆ ಉತ್ತಮವಾದದ್ದು? ಇಂತಹ ಹಲವು ಪ್ರಶ್ನೆಗಳು ನಮ್ಮ ಮುಂದೆ ಬರಬಹುದು. ಮಕ್ಕಳಿಗಾಗಿ 6 ಉತ್ತಮ ಉಳಿತಾಯ ಖಾತೆ

ಈ ಎಲ್ಲ ಗೊಂದಲಗಳಿಗೆ ಪರಿಹಾರ ಹಾಗೂ ಬೆಸ್ಟ್ ಉಳಿತಾಯ ಯೋಜನೆಗಳ ವಿವರ ಇಲ್ಲಿದೆ ನೋಡಿ...

1. ಮಕ್ಕಳ ಉಳಿತಾಯದ ಅಗತ್ಯವೇನು?

1. ಮಕ್ಕಳ ಉಳಿತಾಯದ ಅಗತ್ಯವೇನು?

ನಮ್ಮಲ್ಲಿ ಹಲವರಿಗೆ ಮಕ್ಕಳಿಗಾಗಿ ಉಳಿತಾಯ ಅಥವಾ ಹೂಡಿಕೆ ಮಾಡಬೇಕಾದ ಅಗತ್ಯ ಏನಿದೆ ಎಂಬ ಪ್ರಶ್ನೆ ಮೂಡಬಹುದು. ಇಂದಿನ ಆಧುನಿಕ ಜಗತ್ತಿನಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಆಫೀಸ್ಸಿನಲ್ಲಿ ಮೀಟಿಂಗ್, ಟಾರ್ಗೆಟ್, ಕರೆಗಳು, ಡೆಡ್ಲೈನ್, ಅನವಶ್ಯಕ ಒತ್ತಡ ಇತ್ಯಾದಿಗಳಲ್ಲಿಯೇ ಇಡೀ ದಿನ ಕಳೆದು ಹೋಗುತ್ತದೆ. ಆರೋಗ್ಯದ ಬಗ್ಗೆ ಅಥವಾ ಮಕ್ಕಳ ಬಗ್ಗೆ ವಿಚಾರ ಮಾಡುವಷ್ಟು ತಾಳ್ಮೆ ಅಥವಾ ಸಮಯ ನಮ್ಮಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳ ಮುಂದಿನ ಹಣಕಾಸು ಭವಿಷ್ಯದ ಬಗ್ಗೆ ಚಿಂತಿಸುವುದು ಮುಖ್ಯವಾಗಿರುತ್ತದೆ. ಮಕ್ಕಳ ಶಿಕ್ಷಣ, ಆರೋಗ್ಯ, ಮದುವೆ ಹಾಗೂ ಪ್ರಸ್ತುತ ಖರ್ಚುವೆಚ್ಚಗಳ ಹಿನ್ನೆಲೆಯಲ್ಲಿ ಉತ್ತಮ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

2. ಇನ್ಸೂರೆನ್ಸ್(ವಿಮಾ) ಪಾಲಿಸಿ

2. ಇನ್ಸೂರೆನ್ಸ್(ವಿಮಾ) ಪಾಲಿಸಿ

ಉತ್ತಮವಾದ ಟರ್ಮ್ ಇನ್ಸೂರೆನ್ಸ್‌ ಪ್ಲಾನ್ ತೆಗೆದುಕೊಳ್ಳುವುದು ಒಳಿತು. ನಿಮ್ಮ ಮಗುವಿನ ಹೆಸರಿನಲ್ಲಿಯೇ ತೆಗೆದುಕೊಳ್ಳಬೇಕೆಂದು ಹೇಳುತ್ತಿಲ್ಲ. ಬದಲಿಗೆ ನಿಮ್ಮ ಹೆಸರಿನಲ್ಲಿ ಹೆಚ್ಚುವರಿ ಟರ್ಮ್ ಇನ್ಸೂರೆನ್ಸ್‌ ಪ್ಲಾನ್ ತೆಗೆದುಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಬಹುದು.
ಉದಾ: ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ಅಥವಾ ಮದುವೆಗಾಗಿ 20 ಲಕ್ಷ ಖರ್ಚಾಗಬಹುದು ಎಂದುಕೊಂಡರೆ 20 ಲಕ್ಷದ ಹೆಚ್ಚುವರಿ ವಿಮಾ ಯೋಜನೆಯನ್ನು ಮಾಡಿಸಿಕೊಳ್ಳಬಹುದು.

3. ಸುಕನ್ಯಾ ಸಮೃದ್ಧಿ ಯೋಜನೆ

3. ಸುಕನ್ಯಾ ಸಮೃದ್ಧಿ ಯೋಜನೆ

ಭಾರತ ಸರ್ಕಾರದ ಪ್ರತಿಷ್ಠಿತ ಯೋಜನೆ ಆಗಿದ್ದು, ಈ ಯೋಜನೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಖಾತೆ ಸೌಲಭ್ಯ ಹೊಂದಿರುತ್ತದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ.
ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು. ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.6ರಷ್ಟು ಬಡ್ಡಿದರ ಇತ್ತು. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ. ಆದರೆ ಖಾತೆದಾರರು ಶೇ. 4ರಷ್ಟು ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ.

ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.6ರಷ್ಟು ಇದೆ. ಈ ಹಿಂದೆ ಠೇವಣಿಯನ್ನು 14ನೇ ವಯಸ್ಸಿನಲ್ಲಿ ಮಾಡಿಸಬಹುದಾಗಿತ್ತು. ಆದರೆ ಈಗ ಇದನ್ನು 15ನೇ ವರ್ಷಕ್ಕೆ ಹೆಚ್ಚಿಸಲಾಗಿದೆ.ಖಾತೆ ತೆರೆದ ದಿನದಿಂದ 21ನೇ ವಯಸ್ಸು ಪೂರೈಸಿದ ನಂತರ ಈ ಖಾತೆಯ ಮೆಚುರಿಟಿ ಅವಧಿ ಮುಗಿಯುತ್ತದೆ. 21 ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

4. ಪಿಪಿಎಫ್

4. ಪಿಪಿಎಫ್

ಸಾಮಾನ್ಯವಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಎಲ್ಲರ ನೆಚ್ಚಿನ ಆಯ್ಕೆ. 15 ವರ್ಷಗಳ ದೀರ್ಘಾವಧಿಗಾಗಿ ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ. ವಾರ್ಷಿಕವಾಗಿ ಒಂದು ಲಕ್ಷ ಹೂಡಿಕೆ ಮಾಡಬಹುದಾಗಿದ್ದು, ಶೇ. 8.75ರಷ್ಟು ಬಡ್ಡಿದರವನ್ನು ನಿರೀಕ್ಷಿಸಬಹುದು. ವಾರ್ಷಿಕವಾಗಿ ಒಂದು ಲಕ್ಷ ಮೊತ್ತ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದರೆ 15 ವರ್ಷಗಳ ಅವಧಿಯಲ್ಲಿ ಒಟ್ಟು ಮೊತ್ತ ರೂ. 31.30 ಲಕ್ಷ ಆಗುತ್ತದೆ. ಈ ಮೊತ್ತ ತೆರಿಗೆ ರಹಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಪಿಪಿಎಫ್ ಖಾತೆಯನ್ನು ಬ್ಯಾಂಕು ಹಾಗೂ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ.

5. ಮರುಕಳಿಸುವ ಠೇವಣಿ(RD)

5. ಮರುಕಳಿಸುವ ಠೇವಣಿ(RD)

ಇನ್ನೊಂದು ಉತ್ತಮವಾಗಿರುವ ಹಾಗೂ ಕಡಿಮೆ ರಿಸ್ಕ್ ಇರುವ ಹೂಡಿಕೆ ಎಂದರೆ ಮರುಕಳಿಸುವ ಠೇವಣಿ. ಮಕ್ಕಳ ಭವಿಷ್ಯಕ್ಕಾಗಿ ಹಣಕಾಸು ಉಳಿತಾಯ ಮಾಡುವುದಕ್ಕಾಗಿ ಇದು ನೆಚ್ಚಿನ ಆಯ್ಕೆ. ಪ್ರತಿ ತಿಂಗಳು 1 ಸಾವಿರ ಹೂಡಿಕೆ ಮಾಡಿದರೆ ಹತ್ತು ವರ್ಷಗಳ ನಂತರ ಎರಡು ಲಕ್ಷ ಅಥವಾ 15 ವರ್ಷಗಳ ನಂತರ 2.8 ಲಕ್ಷವನ್ನು ಶೇ. 9ರ ಬಡ್ಡಿದರದಂತೆ ಪಡೆಯಬಹುದು. ಒಂದು ವೇಳೆ ನೀವು ತಿಂಗಳಿಗೆ ಹತ್ತು ಸಾವಿರ ಹೂಡಿಕೆ ಮಾಡಿದರೆ ನಿಮ್ಮ ಆದಾಯ ಎಷ್ಟಾಗಬಹುದೆಂದು ಊಹಿಸಿ.

6. ಮ್ಯೂಚುವಲ್ ಫಂಡ್

6. ಮ್ಯೂಚುವಲ್ ಫಂಡ್

ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಶಿಕ್ಷಣ ಅಥವಾ ಮದುವೆಗಾಗಿ ಹಣ ಉಳಿತಾಯ ಮಾಡಬೇಕೆಂದಲ್ಲಿ ಉತ್ತಮ ಇಳುವರಿ ಕೊಡುವ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ.
ಲಾರ್ಜ್ ಕ್ಯಾಪ್ ಫಂಡ್ಸ್ ಮತ್ತು ಬ್ಯಾಲೆನ್ಸ್ಡ್ ಫಂಡ್ ಗಳನ್ನು ಹೂಡಿಕೆಗೆ ಆಯ್ಕೆ ಮಾಡಬಹುದು. ಬೇರೆಯವುಗಳಿಗೆ ಹೋಲಿಸಿದರೆ ಇವುಗಳಲ್ಲಿ ಸಲ್ಪ ರಿಸ್ಕ್ ಕಡಿಮೆ ಎನ್ನಬಹುದು. ಉತ್ತಮವಾದ ಮ್ಯೂಚುವಲ್ ಫಂಡ್ ಗಳಲ್ಲಿ ತಿಂಗಳಿಗೆ ಒಂದು ಸಾವಿರ ಹೂಡಿಕೆ ಮಾಡಿದರೆ ಶೇ. 13ರ ಬಡ್ಡಿದರದಲ್ಲಿ ಹತ್ತು ವರ್ಷಗಳ ಅವಧಿಗೆ 2.5 ಲಕ್ಷ ಅಥವಾ 15 ವರ್ಷಗಳ ಅವಧಿಯಲ್ಲಿ 5.5 ಲಕ್ಷ ಉಳಿತಾಯ ಮಾಡಬಹುದು.

7. ಬಂಗಾರದಲ್ಲಿ ಹೂಡಿಕೆ

7. ಬಂಗಾರದಲ್ಲಿ ಹೂಡಿಕೆ

ಬಂಗಾರದಲ್ಲಿ ಹೂಡಿಕೆ ಮಾಡುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಆಯ್ಕೆ. ಚಿನ್ನದ ದರ ಏರುಮುಖವಾಗಿ ಸಾಗುತ್ತಿದ್ದು, ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ಬಂಗಾರದ ನಾಣ್ಯಗಳು ಮತ್ತು ಬಂಗಾರ ETF ಗಳು 20% ಕ್ಕಿಂತಲೂ ಹೆಚ್ಚಿನ ಉತ್ತಮ ಫಲವನ್ನೆ ನೀಡಿವೆ. ವರ್ಷದ ಪ್ರಾರಂಭದಲ್ಲಿ 24K ಕ್ಯಾರೆಟ್ ಬಂಗಾರಕ್ಕೆ 25,000 ರೂ. ಬೆಲೆ ಇತ್ತು. ಆದರೆ ಈಗ ಅದರ ಬೆಲೆ 3೧,000 ಸಾವಿರಕ್ಕೆ ಏರಿದೆ. ಬಂಗಾರ ಈ ವರ್ಷದಲ್ಲಿ ಅತ್ಯುತ್ತಮ ಲಾಭ ತಂದುಕೊಟ್ಟಿದೆ.
ಗೋಲ್ಡ್ ಇಟಿಎಫ್ ಮೂಲಕ ಹೂಡಿಕೆ ಮಾಡುವುದು ಅತ್ಯುತ್ತಮವಾಗಿದ್ದು, 10-15 ವರ್ಷಗಳ ಅವಧಿ ಮೇಲೆ ಉತ್ತಮ ಪ್ರತಿಫಲ ಪಡೆಯಬಹುದು.

8. NSC ಹೂಡಿಕೆ

8. NSC ಹೂಡಿಕೆ

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಉಳಿತಾಯ ಯೋಜನೆಯಾಗಿದೆ. ಎನ್ಎಸ್ಸಿ ಯಲ್ಲಿ ಹೂಡಿಕೆ ಮಾಡುವುದಕ್ಕೆ ಗರಿಷ್ಠ ಮಿತಿ ಇರುವುದಿಲ್ಲ.
ಇದು ಭಾರತ ಸರ್ಕಾರದ ಉಳಿತಾಯ ಭಾಂಡ್ ಎಂದೇ ಪ್ರಸಿದ್ದಿ ಪಡೆದಿದೆ. ಇದರಲ್ಲಿ ಟಿಡಿಎಸ್ ಕಡಿತವಾಗುವುದಿಲ್ಲ. ತೆರಿಗೆ ಇಲಾಖೆಯ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

English summary

Best Savings for Children In India

It is important for children to learn money lessons early in life so that they can inculcate some of those lessons whe they become adults. Parents play an important role in developing money habits in children.It is parents responsibility to save and make them children to learn about importance of savings.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X