For Quick Alerts
ALLOW NOTIFICATIONS  
For Daily Alerts

ನಿಲ್ಲಿ... ಹಣಕಾಸು ನಿರ್ವಹಣೆ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಇಂದಿನ ಹವ್ಯಾಸಗಳೇ ಮುಂದಿನ ಆರ್ಥಿಕ ಸುಸ್ಥಿರತೆಗೆ ಭದ್ರ ಅಡಿಪಾಯ. ನಮ್ಮಲ್ಲಿನ ಉತ್ತಮ ಹಣಕಾಸು ನಿರ್ಧಾರ ಮತ್ತು ನಿರ್ವಹಣೆ ಉಜ್ವಲ ಭವಿಷ್ಯಕ್ಕೆ ದಾರಿದೀಪ ಆಗಬಲ್ಲದು.

By Siddu
|

"ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ" ಎಂಬುದು ಜನಪ್ರಿಯ ಗಾದೆಮಾತು. ಇದು ಪ್ರತಿಯೊಬ್ಬರ ಜೀವನದಲ್ಲಿ ಹಣಕಾಸು ನಿರ್ವಹಣೆ ಎಷ್ಟೊಂದು ಮುಖ್ಯ ಎನ್ನುವುದನ್ನು ಪ್ರತಿಧ್ವನಿಸುತ್ತದೆ. ನಮ್ಮ ಇಂದಿನ ಹವ್ಯಾಸಗಳೇ ಮುಂದಿನ ಆರ್ಥಿಕ ಸುಸ್ಥಿರತೆಗೆ ಭದ್ರ ಅಡಿಪಾಯ. ನಮ್ಮಲ್ಲಿನ ಉತ್ತಮ ಹಣಕಾಸು ನಿರ್ಧಾರ ಮತ್ತು ನಿರ್ವಹಣೆ ಉಜ್ವಲ ಭವಿಷ್ಯಕ್ಕೆ ದಾರಿದೀಪ ಆಗಬಲ್ಲದು. ಹಣಕಾಸು ಸ್ಥಿತಿ ಸುಧಾರಿಸಲು ಅನುಸರಿಸಬೇಕಾದ 11 ಮಾರ್ಗ

ದೈನಂದಿನ ಹಣಕಾಸು ಅಡಿಪಾಯವನ್ನು ಸುಭದ್ರಗೊಳಿಸಿ ಆರ್ಥಿಕ ಸುಸ್ಥಿರತೆ ಸಾಧಿಸುವುದು ಹೇಗೆ? ಉತ್ತಮ ಹಣಕಾಸು ನಿರ್ವಹಣೆ ಹೇಗೆ? ಇದರ ಬಗ್ಗೆ ನಮಗೇಷ್ಟು ಗೊತ್ತು? ನಾವೇನು ಮಾಡಬಹುದು? ರೂಢಿಸಿಕೊಳ್ಳಬೇಕಾದ ಹವ್ಯಾಸಗಳೇನು? ಇಂತಹ ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಅನವಶ್ಯಕ ಖರ್ಚು ತಪ್ಪಿಸುವ 9 ಸರಳ ಮಾರ್ಗಗಳು

ಹೀಗಾಗಿ ಹಣಕಾಸಿನ ಉಳಿತಾಯ ಮತ್ತು ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ಈ 12 ಅಂಶಗಳನ್ನು ನೋಡೋಣ ಬನ್ನಿ...

1. ಬಜೆಟ್ ಯೋಜನೆ ಹೇಗೆ?

1. ಬಜೆಟ್ ಯೋಜನೆ ಹೇಗೆ?

ನಿಮ್ಮ ವೈಯಕ್ತಿಕ ಹಣಕಾಸು ಪರಿಸ್ಥಿತಿ ತಿಳಿಯಲು ಪ್ರತಿ ತಿಂಗಳ ನಿಮ್ಮ ಆದಾಯವನ್ನು ಲೆಕ್ಕ ಹಾಕಿ, ಅದರಲ್ಲಿ ನಿಮ್ಮ ಹಣ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ(ರಿಕರಿಂಗ್ ಬಿಲ್ಸ್, ಮನರಂಜನೆ ಮತ್ತು ಗೃಹ ನಿರ್ಮಾಣ, ಆಹಾರ, ಬಟ್ಟೆ ಮತ್ತು ಇನ್ನಿತರ ಉಪಯುಕ್ತತೆ)ಎಂಬುದನ್ನು ತಿಳಿದುಕೊಳ್ಳಬೇಕು. ದೈನಂದಿನ ಆದಾಯ, ಖರ್ಚುವೆಚ್ಚಗಳ ಹಣಕಾಸು ಯೋಜನೆಗಾಗಿ ಕಾಗದ, ಎಕ್ಸೆಲ್ ಸೀಟ್ ಅಥವಾ ಗೂಗಲ್ ಡಾಕ್ಸ್ ಬಳಸಬಹುದು.
ಬಜೆಟ್ ಪ್ಲಾನ್ ನಂತರ ನಿಮ್ಮ ವೆಚ್ಚವನ್ನು ಟ್ರ್ಯಾಕ್ ಮಾಡಿ ಆದಾಯಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಅವಕಾಶ ಕೊಡದೆ ವಾಸ್ತವಿಕವಾಗಿ ಖರ್ಚುವೆಚ್ಚ ನಿರ್ವಹಿಸಿ.

2. ಕ್ರೆಡಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

2. ಕ್ರೆಡಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಇದು ಹಣಕಾಸು ನಿರ್ವಹಣೆಯಲ್ಲಿ ತುಂಬಾ ಮುಖ್ಯವಾದ ಸಂಗತಿ. ಕ್ರೆಡಿಟ್ ಎನ್ನುವುದು ಒಂದು ಕರಾರಿನ ಒಪ್ಪಂದ(contractual agreement) ಆಗಿರುತ್ತದೆ. ಸಾಲಗಾರ ಸರಕುಗಳನ್ನು ಖರೀದಿ ಮಾಡಿ ನಂತರ ಅದರ ಮೊತ್ತವನ್ನು ಪಾವತಿಸಲು ಒಪ್ಪುವ ವಿಧಾನವಾಗಿದೆ.
ಇದು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್, ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಮೇಲಿನ ಕ್ರೆಡಿಟ್ ನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಕ್ರೆಡಿಟ್ ಬಳಸುವುದರ ಮೇಲೆ ವೆಚ್ಚಗಳು ಅನ್ವಯವಾಗುತ್ತವೆ.
ಕ್ರೆಡಿಟ್ ಆಫರ್ ಜತೆ ಬರುವ ಅನೇಕ ಪ್ರಯೋಜನಗಳನ್ನು ವಿಧವಿಧದ ಕ್ರೆಡಿಟ್ ಆಯ್ಕೆಗಳ ವೆಚ್ಚಗಳೊಂದಿಗೆ ಹೋಲಿಕೆ ಮಾಡಿ ನೋಡುವುದು ತುಂಬಾ ಮುಖ್ಯವಾಗಿರುತ್ತದೆ. ಹೆಚ್ಚು ವೆಚ್ಚ ಮಾಗೂ ಸಾಲಕ್ಕೆ ಆಧ್ಯತೆ ನೀಡದೆ ಕ್ರೆಡಿಟ್ ನ್ನು ಹೇಗೆ ಉಪಯೋಗಿಸುತ್ತಿರಿ ಎಂಬುದಕ್ಕೆ ನೀವು ಜವಾಬ್ಧಾರರಾಗಿರುತ್ತಿರಿ.

3. ಕ್ರೆಡಿಟ್ ವರದಿ ಪರಿಶೀಲನೆ ಹೇಗೆ?

3. ಕ್ರೆಡಿಟ್ ವರದಿ ಪರಿಶೀಲನೆ ಹೇಗೆ?

ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತಾ ಅದರ ಸುಸ್ಥಿರತೆ ಕಾಪಾಡಿಕೊಳ್ಳವುದು ಹಣಕಾಸು ನಿರ್ವಹಣೆಯ ಇನ್ನೊಂದು ಮುಖ್ಯ ಅಂಶ. ನಿಮ್ಮ ವಾರ್ಷಿಕ ವರದಿಯ ಉಚಿತ ಪ್ರತಿಯನ್ನು ಪಡೆದು ಎಲ್ಲಾ ಮಾಹಿತಿ ನಿಖರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನೀವು ಕಟ್ಟ ಕ್ರೆಡಿಟ್ ಹೊಂದಿದ್ದರೆ ಹೊಂದಿದ್ದರೆ ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಸಾಲ ಪಾವತಿಸಿ ಅನಗತ್ಯ ಖರ್ಚುವೆಚ್ಚಗಳನ್ನು ತಪ್ಪಿಸಿಕೊಳ್ಳಿ.

4. ಸಾಲದಿಂದ ಹೊರ ಬರುವುದು ಹೇಗೆ?

4. ಸಾಲದಿಂದ ಹೊರ ಬರುವುದು ಹೇಗೆ?

ಸಾಲದಿಂದ ಹೊರಬರಲು ನೋಡುವುದು ದೀರ್ಘಾವಧಿ ಗುರಿಯಾದರೆ, ಅಲ್ಪಾವಧಿಗಾಗಿ ಕೆಲ ಗುರಿಗಳನ್ನಿಟ್ಟು ಅದನ್ನು ಸಾಧಿಸಲು ಮರೆಯದಿರಿ. ಪ್ರತಿಯೊಬ್ಬ ವ್ಯಕ್ತಿಗೆ ಹಣಕಾಸು ನಿರ್ವಹಣೆ ಸಂದರ್ಭದಲ್ಲಿ ಕ್ರೆಡಿಟ್ ಸ್ಕೋರ್ ತುಂಬಾ ಪ್ರಧಾನ ಘಟ್ಟ. ಇದರ ಕುರಿತು ವೃತ್ತಿಪರರಿಂದ ಸಲಹೆ ಪಡೆದುಕೊಳ್ಳಿ.

5. ಸಾಲ ಪರಿಹಾರ ಒದಗಿಸುವವರ ಆಯ್ಕೆ ಹೇಗೆ?

5. ಸಾಲ ಪರಿಹಾರ ಒದಗಿಸುವವರ ಆಯ್ಕೆ ಹೇಗೆ?

ಹೌದು. ಕೆಲವೊಮ್ಮೆ ನಿಮ್ಮ ಸಾಲದ ಸಮಸ್ಯೆಗಳನ್ನು ಒಂದು ಪ್ರತಿಷ್ಠಿತ ಕಂಪನಿ ಅಥವಾ ವೃತ್ತಿಪರರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಿ. ನಿಮಗೆ ವಿಶ್ವಾಸ ಅಥವಾ ಪರಿಚಯ ಇರುವ ವೃತ್ತಿಪರರನ್ನು ಇಲ್ಲವೆ ಕಂಪನಿಯನ್ನು ಆಯ್ಕೆ ಮಾಡಿಕ ಸಲಹೆ ಪಡೆಯಿರಿ. ಪರಿಹಾರ ಒದಗಿಸುವವರು ಪ್ರತಿಷ್ಠಿತ ದಾಖಲೆ, ಬಿಸಿನೆಸ್ ಪಾಂಡಿತ್ಯ, ಬಹು ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲ ಸಾಮರ್ಥ್ಯ ಹೊಂದಿದವರಾಗಿರಬೇಕು. ಜತೆಗೆ ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹಕ್ಕೆ ಪಾತ್ರರಾಗಿರುವುದರೊಂದಿಗೆ ಉತ್ತಮ ಅನುಭವ, ಸಂಪನ್ಮೂಲ, ಪ್ರಮಾಣಿತ ಸಲಹೆಗಾರ ಆಗಿರಬೇಕು. ಅಂತವರು ಮಾತ್ರ ನಿಮ್ಮ ಹಣಕಾಸು ಸಂಬಂಧಿ ಸಲಹೆಗಳನ್ನು ನೀಡಲು ಸಾಧ್ಯ.

6. ಉಳಿತಾಯ ಭದ್ರಗೊಳಿಸುವುದು ಹೇಗೆ?

6. ಉಳಿತಾಯ ಭದ್ರಗೊಳಿಸುವುದು ಹೇಗೆ?

ಹೆಚ್ಚಿನ ಭಾರತೀಯರಲ್ಲಿ ಉಳಿತಾಯ ಯೋಜನೆ ಬಗ್ಗೆ ಕೊರತೆ ಕಾಡುತ್ತದೆ. ನೀವು ಅವರಲ್ಲಿ ಒಬ್ಬರಾಗಬೇಡಿ. ನಿಮ್ಮ ಉಳಿತಾಯ ಮಾಡುವ ವಿಧಾನಗಳನ್ನು ಹುಡುಕಿ ಅದಕ್ಕನುಗುಣವಾಗಿ ಆರ್ಥಿಕ ಭದ್ರತೆ ಸಾಧಿಸಿ. ಇದರಿಂದ ದೊಡ್ಡ ಸಾಲಗಳನ್ನು ಮಾಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯ. ಹೀಗಾಗಿ ಪ್ರತಿನಿತ್ಯ ನಿಯಮಿತವಾಗಿ ಉಳಿತಾಯ ಮಾಡಲು ಪ್ರಾರಂಭಿಸಿ.
ಉದಾ: ನಿಮ್ಮ ಪೇಚೆಕ್ ನಿಂದ ಉಳಿತಾಯ ಖಾತೆ ಅಥವಾ ನಿವೃತ್ತಿ ಖಾತೆಗೆ ಸ್ವಯಂಚಾಲಿತ ಠೇವಣಿಗಳನ್ನು ಹೊಂದಿಸಿಕೊಳ್ಳಿ.

7. ನಿವೃತ್ತಿ ಆರಾಮದಾಯಕ ಹೇಗೆ?

7. ನಿವೃತ್ತಿ ಆರಾಮದಾಯಕ ಹೇಗೆ?

ದೈನಂದಿನ ಆರಾಮದಾಯಕ ಜೀವನ ನಿರ್ವಹಣೆಗೆ ಎಷ್ಟು ಹಣ ಬೇಕು ಎಂಬುದನ್ನು ನಿರ್ಧರಿಸಿ ಹಾಗೂ ಯಾವ ಹಣಕಾಸು ಮೂಲ ನಿಮ್ಮ ನಿವೃತ್ತಿ ಜೀವನಕ್ಕೆ ಸಹಾಯಕ ಆಗಬಲ್ಲದು ಎಂಬುದನ್ನು ತಿಳಿದುಕೊಳ್ಳಿ. ಮೂಲ ಉಳಿತಾಯ ಖಾತೆಗಳು, ಠೇವಣಿ ಪತ್ರಗಳು, ಪಿಂಚಣಿ ಯೋಜನೆಗಳು, ಮ್ಯೂಚುವಲ್ ಫಂಡ್, ಸ್ಟಾಕ್, ​​ಬಾಂಡ್ಸ್ ಮತ್ತು ಇನ್ನಿತರ ಉಳಿತಾಯ ಆಯ್ಕೆಗಳನ್ನು ಈ ವ್ಯಾಪ್ತಿಗೆ ತರಬಹುದು. ಇದರ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸಿ ಅಗತ್ಯತೆಗೆ ಅನುಗುಣವಾಗಿ ಹಣಕಾಸು ಯೋಜನೆ ರೂಪಿಸಿಕೊಳ್ಳಬೇಕು.

8. ಆರೋಗ್ಯ ಯೋಜನೆ ಆಯ್ಕೆ ಹೇಗೆ?

8. ಆರೋಗ್ಯ ಯೋಜನೆ ಆಯ್ಕೆ ಹೇಗೆ?

ಕುಟುಂಬದ ಪರಿಸ್ಥಿತಿಗೆ ಅನುಗುಣವಾಗಿ ಅತ್ಯುತ್ತಮವಾದ ಆರೋಗ್ಯ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಏನೋ ಒಂದು ಅವಘಡ ಸಂಭವಿಸಿ ಆರ್ಥಿಕ ಪರಿಸ್ಥಿತಿ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಿಗಾಗಿ ಈಗಿನಿಂದಲೇ ಸರಿಯಾದ ಹಣಕಾಸು(ವಿಮೆ/ಪಾಲಿಸಿ) ಯೋಜನೆ ಪ್ರಾರಂಭಿಸುವುದು ಉತ್ತಮ ನಡೆ. ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರಿಂದ ಅಗತ್ಯ ಸಂದರ್ಭದಲ್ಲಿ ಆಪತ್ ಬಾಂಧವನಾಗಿ ಸಹಾಯಕ್ಕೆ ಬರುತ್ತದೆ.

9. ವಿಮೆ ಖರೀದಿ ಹೇಗೆ?

9. ವಿಮೆ ಖರೀದಿ ಹೇಗೆ?

ಹೆಚ್ಚಿನ ಜನರಿಗೆ ವಿಮೆಯ ಮೌಲ್ಯ, ಪ್ರಯೋಜನ ಹಾಗೂ ಯಾವ ವಿಧದ ವಿಮೆ ಖರೀದಿಸಬೇಕು ಎಂಬುದು ಗೊತ್ತಿರುವುದಿಲ್ಲ.
ನಿಮ್ಮ ಸಂಗಾತಿ ಉದ್ಯೋಗದಲ್ಲಿ ಇಲ್ಲದಿದ್ದರೆ ಅಥವಾ ಕುಟುಂಬದ ಸದಸ್ಯರು ನಿಮ್ಮನ್ನು ಅವಲಂಬಿಸಿದರೆ ಅವರ ಹೆಸರಿನಲ್ಲಿ ಅವಶ್ಯವಾಗಿ ವಿಮೆ ಮಾಡಿಸಿ. ಜತೆಗೆ ಆರೋಗ್ಯ ವಿಮೆಯನ್ನು ಮಕ್ಕಳ ಹೆಸರಿನಲ್ಲಿ ಪ್ರತ್ಯೇಕವಾಗಿ ಮಾಡಿಸುವುದು ಇನ್ನೂ ಸುರಕ್ಷಿತ.

10. ತುರ್ತು ನಿಧಿ

10. ತುರ್ತು ನಿಧಿ

ಇದು ತುಂಬಾ ಮುಖ್ಯವಾಗಿ ಪ್ರತಿಯೊಬ್ಬರೂ ಗಮನವಹಿಸಿಬೇಕಾದ ವಿಚಾರ. ಏಕೆಂದರೆ ಎಲ್ಲರಿಗೂ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ತುರ್ತು ಸನ್ನಿವೇಷಗಳು, ಕಷ್ಟ-ಕಾರ್ಪಣ್ಯಗಳು ಎದುರಾಗುತ್ತವೆ. ಇವು ಹೇಳಿ ಕೇಳಿ ಬರುವಂತವುಗಳಲ್ಲ. ಹೀಗಾಗಿ ಪೂರ್ವ ಯೋಜಿತವಾಗಿ ತುರ್ತುನಿಧಿಯನ್ನು ಇಡುವುದು ಉತ್ತಮ ಹವ್ಯಾಸ. ಇದು ಕಷ್ಟಕಾಲದ ಆಪತ್ ಬಾಂಧವನಾಗಿ ಕೆಲಸ ಮಾಡುತ್ತದೆ. ಹೆಚ್ಚಿಗೆ ಉಳಿದರೆ ಹೂಡಿಕೆ ಮಾಡಬಹುದು.

11. ಮಕ್ಕಳ ಭವಿಷ್ಯ ನಿಧಿ

11. ಮಕ್ಕಳ ಭವಿಷ್ಯ ನಿಧಿ

ಮಕ್ಕಳ ಭವಿಷ್ಯಕ್ಕಾಗಿ ನವ ದಂಪತಿಗಳು ಹಾಗೂ ಪಾಲಕರು ಮುಂಜಾಗ್ರತಾ ಕ್ರಮ ವಹಿಸುವುದು ತುಂಬಾ ಮುಖ್ಯ. ಅದರಲ್ಲೂ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ತಗಲುವುದರಿಂದ ಪ್ರತ್ಯೇಕವಾಗಿ ಹಣ ತೆಗೆದಿಡುವುದು ಮುಂಜಾಗ್ರತೆ ದೃಷ್ಟಿಯಿಂದ ಒಳ್ಳೆಯದು. ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಮಕ್ಕಳ ಶಿಕ್ಷಣ, ಮದುವೆ ಮತ್ತು ಜೀವನ ಭವಿಷ್ಯಕ್ಕಾಗಿ ವಿಮೆ ಮಾಡಿಸುವುದನ್ನು ಮರೆಯದಿರಿ.

12. ಎಸ್ಟೇಟ್ ಯೋಜನೆ ಮಹತ್ವ

12. ಎಸ್ಟೇಟ್ ಯೋಜನೆ ಮಹತ್ವ

ನಿಮಗೆ ಸಾಕಾಗುವಷ್ಟು ಆಸ್ತಿ ಇಲ್ಲದಿದ್ದರೆ ಎಸ್ಟೇಟ್ ಪ್ಲಾನ್ ಮಾಡಲು ಮರೆಯಬೇಡಿ. ಈ ಮೇಲಿನ ಎಲ್ಲ ಯೋಜನೆಗಳೊಂದಿಗೆ ಎಸ್ಟೇಟ್ ಯೋಜನೆ ಕೂಡ ಅಷ್ಟೇ ಮುಖ್ಯ. ನಿಮ್ಮ ಮರಣದ ನಂತರ ಕೂಡ ನಿಮ್ಮ ವಂಶದ ಆಸ್ತಿಯಾಗಿ ಮುಂದುವರೆಯುವುದರಿಂದ ಸರಿಯಾದ ದಾಖಲಾತಿ, ವಿಲ್ ಮಾಡಿಸಬೇಕಾಗುತ್ತದೆ.
ವಿಲ್ ತಯಾರಿ ಹೇಗೆ, ವಿಮೆ ಪ್ರಯೋಜನ, ಆಸ್ತಿ ಯಾರಿಗೆ ಸೇರಬೇಕು ಇತ್ಯಾದಿ ಅಂಶಗಳ ಕುರಿತು ಸರಿಯಾದ ಯೋಜನೆ ರೂಪಿಸಿ.

English summary

Things You Should Know about Personal Finance

The best way to understand your personal financial situation is to calculate how much you earn each month, and where all your money goes (i.e., how much you spend on recurring bills, entertainment, and living expenses such as housing, food, clothing and utilities).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X