For Quick Alerts
ALLOW NOTIFICATIONS  
For Daily Alerts

ಜೀವ ವಿಮೆ ಖರೀದಿಸುವ ಮುನ್ನ 10 ಅಂಶ ನೋಡಿ...

ಜೀವ ವಿಮೆ ಖರೀದಿ ಪ್ರಮುಖ ನಿರ್ಧಾರವಾಗಿದ್ದು, ಬೇರೆ ಬೇರೆ ವಿಧಗಳ, ಪ್ರಯೋಜನ, ಅವಧಿ ಮತ್ತು ಉದ್ದೇಶದ ವಿಮೆಗಳನ್ನು ಖರೀದಿಸಬಹುದು.

By Siddu
|

ಜೀವ ವಿಮೆ ಖರೀದಿ ಪ್ರಮುಖ ನಿರ್ಧಾರವಾಗಿದ್ದು, ಜೀವ ವಿಮೆ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸುಭದ್ರತೆ, ಸುರಕ್ಷತೆ, ಅಪಘಾತ ಪರಿಹಾರಕ್ಕೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಬೇರೆ ಬೇರೆ ವಿಧಗಳ, ಪ್ರಯೋಜನ, ಅವಧಿ ಮತ್ತು ಉದ್ದೇಶದ ವಿಮೆಗಳನ್ನು ಖರೀದಿಸಬಹುದು. ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ

ನೀವು ಲೈಫ್ ಇನ್ಸೂರೆನ್ಸ್‌ ಪಾಲಿಸಿಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದಲ್ಲಿ ಈ 10 ಅಂಶಗಳನ್ನು ತಪ್ಪದೆ ತಿಳಿದುಕೊಳ್ಳಬೇಕು.

1. ಅಗತ್ಯತೆ

1. ಅಗತ್ಯತೆ

ಜೀವ ವಿಮೆ ಖರೀದಿಸುವಾಗ ಅದರ ಅಗತ್ಯತೆ ಏನು ಎಂಬುದರ ಅರಿವಿರಬೇಕು. ಇದು ನೀವು ಇನ್ನೊಬ್ಬರ ಬಗ್ಗೆ ತೆಗೆದುಕೊಳ್ಳುವ ಕಾಳಜಿಯನ್ನು ತೋರ್ಪಡಿಸುತ್ತದೆ. ಜೀವ ವಿಮೆಗಳು ಅಪಘಾತ ಪರಿಹಾರಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವುದಲ್ಲದೆ, ಅನಿಶ್ಚಿತತೆಗಳನ್ನು ಎದುರಿಸಲು ಸಹಾಯಕವಾಗಿರುತ್ತವೆ. ಹೀಗಾಗಿ ವಿಮೆ ಖರೀದಿಯ ಮುನ್ನ ಅದರ ಸಾಧಕ-ಬಾಧಕ ಮತ್ತು ಅಗತ್ಯತೆಗಳನ್ನು ತಿಳಿದುಕೊಳ್ಳಿ.

2. ಉದ್ದೇಶ

2. ಉದ್ದೇಶ

ಸಾಮಾನ್ಯವಾಗಿ ವಿಮೆಗಳಲ್ಲಿ ಹೂಡಿಕೆ ಮಾಡುವುದು ಮೂಲಭೂತ ಉದ್ದೇಶ ಎಂದು ಭಾವಿಸುತ್ತೇವೆ. ಹಾಗಾದಾಗ ಪಾಲಿಸಿ ಖರೀದಿಯ ಉದ್ದೇಶಗಳನ್ನು ಪರಿಗಣಿಸಬೇಕು. ಉದಾ: ಅನಿಶ್ಚಿತತೆಯ ಸಂದರ್ಭದಲ್ಲಿ ಮಗುವಿನ ಶಿಕ್ಷಣದ ವೆಚ್ಚ ಭರಿಸಲು ಪಾಲಿಸಿ ಸಹಾಯಕ ಆಗಬಲ್ಲದು. ಅಥವಾ ಹೆಚ್ಚಿನ ಗಂಡಾಂತರಗಳ ಸಂದರ್ಭದಲ್ಲಿ ಭದ್ರತೆಯಾಗಿ ನಿಮ್ಮನ್ನು ಕಾಪಾಡಬಲ್ಲದು.

3. ವಿಮಾ ಗ್ಯಾರೆಂಟಿ ಮೊತ್ತ (ಕವರೇಜ್)

3. ವಿಮಾ ಗ್ಯಾರೆಂಟಿ ಮೊತ್ತ (ಕವರೇಜ್)

ವ್ಯಕ್ತಿಗಳಿಗೆ ವಿವಿಧ ವಿಮಾ ಗ್ಯಾರೆಂಟಿ ಮೊತ್ತಗಳ ಅಗತ್ಯವಿರುತ್ತದೆ. ಎಷ್ಟು ಮೊತ್ತದ ಕವರೆಜ್ ನಿಮಗೆ ಬೇಕಾಗುತ್ತದೆ ಎಂಬುದರ ಮೇಲೆ ಕವರೇಜ್ ನಿರ್ಧಾರವಾಗುತ್ತದೆ. ಕವರೇಜ್ ನಿರ್ಧರಿಸುವ ಮುನ್ನ ನಿಮ್ಮ ವಯಸ್ಸು, ವೃತ್ತಿ ಮತ್ತು ವೈದ್ಯಕೀಯ ಸ್ಥಿತಿಗಳೇನು? ಎಷ್ಟು ಜನರು ನಿಮ್ಮನ್ನು ಅವಲಂಬಿಸಿದ್ದಾರೆ? ನಿಮ್ಮ ಹಣಕಾಸಿನ ಗುರಿಗಳೇನು? ಇತ್ಯಾದಿ ಪ್ರಮುಖ ಅಂಶಗಳನ್ನು ಗಮನಿಸಬೇಕು.

4. ಕೆಟಗರಿ

4. ಕೆಟಗರಿ

ಜೀವ ವಿಮೆ ಖರೀದಿಸುವಾಗ ಯಾವ ಉದ್ದೇಶ ಹಾಗೂ ಎಷ್ಟು ಕವರೇಜ್ ಮೊತ್ತ ನೀವು ಬಯಸುತ್ತಿದ್ದಿರಿ ಎಂಬುದನ್ನು ನಿರ್ಧರಿಸಿದರೆ ವಿಮಾ ಕೆಟಗರಿ ಆಯ್ಕೆ ಮಾಡಲು ಸಹಾಯಕವಾಗುತ್ತದೆ. ಟರ್ಮ್ ಇನ್ಸೂರೆನ್ಸ್ ಕವರ್ ಅಥವಾ ವೋಲ್ ಇನ್ಸೂರೆನ್ಸ್ ಕವರ್ ಆಯ್ಕೆ ಮಾಡಬಹುದು. ನಿರ್ಧಿಷ್ಟ ಅವಧಿಗೆ ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಲು ಬಯಸಿದಲ್ಲಿ ಟರ್ಮ್ ಇನ್ಸೂರೆನ್ಸ್ ಆಯ್ಕೆ ಮಾಡುವುದು ಉತ್ತಮ.

5. ಡೆಬ್ಟ್

5. ಡೆಬ್ಟ್

ನೀವು ಜೀವ ವಿಮೆ ಖರೀದಿಸಲು ಬಯಸಿದ್ದರೆ ಎಷ್ಟು ಮೊತ್ತ ಪಾವತಿಸಲು ಸಮರ್ಥರಾಗಿದ್ದಿರಿ ಎಂಬುದು ಗೊತ್ತಿರಬೇಕಾಗುತ್ತದೆ. ಪ್ರೀಮಿಯಂ ಮೊತ್ತ ನಿಗದಿತ ಅವಧಿಯೊಳಗೆ ಪಾವತಿಸುವುದು ಮುಖ್ಯವಾಗಿರುತ್ತದೆ. ವಿಳಂಬ ಮಾಡುವುದರಿಂದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

6. ಹೂಡಿಕೆ

6. ಹೂಡಿಕೆ

ಜೀವ ವಿಮೆ ಖರೀದಿ ಮಾಡುವಾಗ ಹೂಡಿಕೆ ಅಂಶವನ್ನು ನಿರ್ಲಕ್ಷಿಸಲಾಗದು. ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಪಾಲಿಸಿ(ULIP) ಮರಣ ಪ್ರಯೋಜನ ಮತ್ತು ಆರ್ಥಿಕ ಭದ್ರತೆ ಒದಗಿಸುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಿಮ್ಮನ್ನು ಪ್ರೋತ್ಸಾಹಿಸಬಹುದು.

7. ಆರ್ಥಿಕ ರಕ್ಷಣೆ

7. ಆರ್ಥಿಕ ರಕ್ಷಣೆ

ಜೀವ ವಿಮಾ ಪಾಲಿಸಿಗಳು ಅನಿರೀಕ್ಷಿತ ಸಂದರ್ಭಗಳಲ್ಲಿ ಸಹಾಯಕ್ಕೆ ನಿಲ್ಲಬಲ್ಲದು. ಉದಾ: ಮರಣ, ಅಪಘಾತ, ಅಂಗವೈಕಲ್ಯ, ಅನಾರೋಗ್ಯದಂತ ಗಂಡಾಂತರಗಳಲ್ಲಿ ಸಹಾಯ ಆಗುವುದಲ್ಲದೆ, ಆಕಸ್ಮಿಕವಾಗಿ ಮರಣ ಹೊಂದಲ್ಲಿ ವಿಮೆಗಳು ಕುಟುಂಬಕ್ಕೆ ಆಸರೆಯಾಗಬಲ್ಲವು.

8. ಉಳಿತಾಯ

8. ಉಳಿತಾಯ

ವಿಮೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚೆಚ್ಚು ಉಳಿತಾಯ ಮಾಡಲು ಸಹಾಯಕವಾಗುತ್ತದೆ. ಟರ್ಮ್ ಇನ್ಸೂರೆನ್ಸ್ ಪಾಲಿಸಿ ಮಾಡುವುದರಿಂದ ನಿಮ್ಮ ಬಳಿ ಹೆಚ್ಚು ನಗದು ಉಳಿಯುತ್ತದೆ. ಬೇರೆ ಹೂಡಿಕೆಗಳಿಗಾಗಿ ಈ ಹಣವನ್ನು ಬಳಸಬಹುದು.

9. ತೆರಿಗೆ ಪ್ರಯೋಜನ

9. ತೆರಿಗೆ ಪ್ರಯೋಜನ

ಕೆಲ ನಿರ್ಧಿಷ್ಟ ಮೊತ್ತದವರೆಗೆ ವಿಮಾ ಪ್ರೀಮಿಯಂ ತೆರಿಗೆಯಿಂದ ಮುಕ್ತವಾಗಿರುತ್ತದೆ. ಫಲಾನುಭವಿಗಳು ಪಡೆಯುವ ಕ್ಲೈಮ್ ಮೊತ್ತ ಕೂಡ ತೆರಿಗೆ ರಹಿತವಾಗಿರುತ್ತದೆ. ಆದರೆ ಪ್ರತಿ ಪಾಲಿಸಿಗಳು ಭಿನ್ನವಾಗಿರುತ್ತವೆ.

10. ನಿಯಮ ನಿಬಂಧನೆ

10. ನಿಯಮ ನಿಬಂಧನೆ

ಪ್ರತಿಯೊಂದು ಜೀವ ವಿಮಾ ಪಾಲಿಸಿಗಳು ಟರ್ಮ್ಸ್ ಮತ್ತು ಕಂಡಿಷನ್ಸ್ ಹೊಂದಿರುತ್ತವೆ. ನೀವು ವಿಮೆ ಖರೀದಿಸುವ ಮುನ್ನ ಪಾಲಿಸಿ ದಾಖಲಾತಿಗಳನ್ನು ತಪ್ಪದೆ ಓದಬೇಕು. ವಿಮೆಯ ಪ್ರಯೋಜನ ಮತ್ತು ಪರಿಣಾಮಗಳ ಬಗ್ಗೆ ಚೆನ್ನಾಗಿ ಅರಿತಿರಬೇಕು. ಜತೆಗೆ ಬೋನಸ್, ಕ್ಯಾಶ್ ಮೌಲ್ಯಗಳು ಲಭ್ಯವಿದ್ದರೆ ತಿಳಿದುಕೊಳ್ಳಬೇಕು.

English summary

10 things to know before investing in Life Insurance

Buying life insurance can be a crucial decision. Some people may choose to buy a cover early in life. Others may leave it until later. If you are thinking of investing in a life insurance policy, here are 10 points you may want to know.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X