For Quick Alerts
ALLOW NOTIFICATIONS  
For Daily Alerts

ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ನೀವೂ ಅನುಸರಿಸಿದರೆ ಅವು ಸ್ವಯಂ ನಿರ್ಮಿತ(self made) ಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ.

By Siddu
|

ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತ(self made) ಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ.

 

ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು. ಅವರೆಲ್ಲ ಕೋಟ್ಯಾಧಿಪತಿಯಾದ ಸಾಹಸಗಳ ಹಿಂದಿನ ಶಕ್ತಿಗಳೇನು? ಅನುಸರಿಸಿದ ಮಾರ್ಗಗಳೇನು? ಅವರೆಲ್ಲ ಮಿಲಿಯನೇರ್ ಆಗಲು ಸಾಧ್ಯ ಆಗಿದ್ದಾದರು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಅದಕ್ಕಾಗಿ 'Stay Hungry Stay Foolish' ಯಾವಾಗಲೂ ಪ್ರಸ್ತುತ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಸ್ವಯಂ ನಿರ್ಮಿತ(self made) ಕೋಟ್ಯಾಧಿಪತಿ ಆಗಲು ಬಯಸುವ ಆಶಾವಾದಿಗಳು ತಿಳಿದುಕೊಳ್ಳಬೇಕಾದ ಸೀಕ್ರೆಟ್ ಸಂಗತಿಗಳು ಯಾವುವು ಗೊತ್ತೆ? ಇಲ್ಲಿವೆ ನೋಡಿ...

1. ಆದಾಯದ ಮೂಲಗಳನ್ನು ಹೆಚ್ಚಿಸಿ

1. ಆದಾಯದ ಮೂಲಗಳನ್ನು ಹೆಚ್ಚಿಸಿ

'Never depend on single income.' ಎಂದು ವಾರೆನ್ ಬಫೆಟ್ ಹೇಳಿದ್ದಾರೆ. ಕೋಟ್ಯಾಧಿಪತಿ ಆಗಬೇಕೆಂದು ಬಯಸುವ ಆಶಾವಾದಿಗಳು ಮೂಲಭೂತವಾಗಿ ಆದಾಯದ ಮೂಲಗಳನ್ನು ಹೆಚ್ಚಿಸಲೇ ಬೇಕು. ಒಂದೇ ಆದಾಯದ ಮೂಲಕ್ಕೆ ಅವಲಂಬನೆ ಆಗುವುದು ಬೇಡ.

10 year challenge: ದೊಡ್ಡ ಗುರಿ ಸಾಧನೆಗೆ ನಿಮ್ಮ ಚಾಲೆಂಜ್ ಹೀಗಿರಲಿ..10 year challenge: ದೊಡ್ಡ ಗುರಿ ಸಾಧನೆಗೆ ನಿಮ್ಮ ಚಾಲೆಂಜ್ ಹೀಗಿರಲಿ..

2. ಯೋಜನೆ ರೂಪಿಸಿ

2. ಯೋಜನೆ ರೂಪಿಸಿ

ಅಲನ್ ಲಾಕೆನ್ ಯೋಜನೆ ಕುರಿತು 'Failing to plan is planning to fail.' ಎಂದಿದ್ದಾರೆ. ಹೀಗಾಗಿ ಯೋಜನೆಯೇ ಯಶಸ್ಸಿನ ಮೂಲಮಂತ್ರ. ಗುರಿ ಇಲ್ಲದ ಸ್ಟೀವ್ ಜಾಬ್ಸ್ ರನ್ನು ಊಹಿಸಲು ಯಾರಿಂದಲಾದರೂ ಸಾಧ್ಯವಿದೆಯೆ? ನಿಮ್ಮ ಗುರಿಗಳನ್ನು ಬರೆದು ನೀವು ಬಯಸಿದಂತ ಭವಿಷ್ಯವನ್ನು ಊಹಿಸಿಕೊಳ್ಳಿ. ಅಂದರೆ ಮನಸ್ಸಿನಲ್ಲಿರುವ ಗುರಿಗಳನ್ನು ಬರೆದಿಟ್ಟು ಅದಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸಿ, ಅದರ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕಾಗದದ ಮೇಲೆ ಬರೆದಿಡುವುದರಿಂದ ಅದು ಸಂಭವಿಸುವಂತೆ ಮಾಡಬಹುದು!

3. ಸಮಯ ಅಮೂಲ್ಯವಾದದ್ದು
 

3. ಸಮಯ ಅಮೂಲ್ಯವಾದದ್ದು

ಒಂದು ಭಾರಿ ಕಳೆದ ಸಮಯ ಎಂದೂ ಮತ್ತೆ ಸಿಗದು.
ಸಮಯವನ್ನು ಅನ್ಯತಹ ವ್ಯರ್ಥ ಮಾಡುವುದು ಮನುಷ್ಯನ ದೊಡ್ಡ ದೌರ್ಬಲ್ಯ. ಕೆಲವರು ಟಿವಿ ನೋಡುತ್ತಾ, ಹರಟೆ ಹೊಡೆಯುತ್ತ ಕಾಲಹರಣ ಮಾಡುತ್ತಿರುತ್ತಾರೆ. ಆದರೆ ಕೋಟ್ಯಾಧಿಪತಿಗಳು ಟಿವಿ ನೋಡುವುದರಿಂದ ದೂರ ಉಳಿದು ಬಿಸಿನೆಸ್ ಸ್ಟ್ರಾಟಜಿ ಅಥವಾ ಹೊಸ ಯೋಜನೆಗಳ ಬಗ್ಗೆ ಕೆಸ ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ಬಿಸಿನೆಸ್ ಮತ್ತು ಪ್ರಾಜೆಕ್ಟ್ ಮೇಲೆ ಹೆಚ್ಚು ಸಮಯ ಕಳೆಯುವುದೇ ಸಂತೋಷ ಕೊಡುತ್ತದೆ.

4. ಬೇರೆಯವರನ್ನು ನೋಡಿ ಕಲಿಯಬೇಕು

4. ಬೇರೆಯವರನ್ನು ನೋಡಿ ಕಲಿಯಬೇಕು

ಎಲ್ಲ ತಪ್ಪುಗಳನ್ನು ನಾವೇ ಮಾಡಿ ಅದನ್ನು ಸರಿಪಡಿಸಿಕೊಂಡು ಹೋಗುವಷ್ಟು ದೀರ್ಘ ಜೀವನ ನಮ್ಮದಲ್ಲ. ಆದರಿಂದ ಇನ್ನೊಬ್ಬರ ಸೋಲು ಗೆಲುವುಗಳಿಂದ ತಿಳಿದುಕೊಳ್ಳಬೇಕಾದದ್ದು ತುಂಬಾ ಇರುತ್ತದೆ. ಇನ್ನೊಬ್ಬರಿಂದ ತಿಳಿದುಕೊಳ್ಳಬೇಕಾದ, ಬೋಧಿಸಿಕೊಳ್ಳಬೇಕಾದ ಅಗತ್ಯ ಏನಿದೆ ಎಂಬ ಅಹಂಭಾವ ಇರಬಾರದು. ಶ್ರೀಮಂತರು ಯಾವಾಗಲೂ ಸಲಹೆಗಾರರನ್ನು ಇಟ್ಟುಕೊಂಡು ಮಾರ್ಗದರ್ಶನ ಪಡೆಯುತ್ತಿರುತ್ತಾರೆ. ಹೀಗಾಗಿ ಯಾವಾಗಲೂ ತುಂಬಾ ಎಚ್ಚರಿಕೆಯಿಂದ ಮನಸ್ಸನ್ನು ಸದಾ ಜಾಗೃತನನ್ನಾಗಿ ಇಡಬೇಕಾಗುತ್ತದೆ. ಹೊಸತನಕ್ಕೆ ಸದಾ ತೆರೆದುಕೊಂಡು, ಹೊಂದಿಕೊಂಡು ಹೋಗಬೇಕಾಗುತ್ತದೆ.

5. ಯಶಸ್ಸಿಗಾಗಿ ಕನಸು ಕಾಣಿರಿ

5. ಯಶಸ್ಸಿಗಾಗಿ ಕನಸು ಕಾಣಿರಿ

ನಿಮ್ಮ ಕನಸುಗಳನ್ನು ಬಿಟ್ಟುಕೊಡಬೇಡಿ. ಉತ್ತಮ ಭವಿಷ್ಯದತ್ತ ಸಾಗಲು ಕಂಡ ಕನಸ್ಸುಗಳ ಸಾಕಾರದತ್ತ ಮುನ್ನಡೆಯಬೇಕು. ಶ್ರೀಮಂತನಾಗ ಬಯಸುವ ವ್ಯಕ್ತಿ ಕೇವಲ ಕನಸುಗಳನ್ನು ನನಸು ಮಾಡುವತ್ತ ನಡೆಯುತ್ತಿರುತ್ತಾನೆ. ಎದುರಾಗುವ ಅಡಚಣೆ, ವೈಫಲ್ಯ, ತೊಂದರೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕನಸುಗಳ ಮೇಲೆ ಸವಾರಿ ಮಾಡುವುದಷ್ಟೇ ಅವರ ಗುರಿ.

6. ನಿರಂತರತೆ ಮುಖ್ಯ

6. ನಿರಂತರತೆ ಮುಖ್ಯ

ಯಶಸ್ಸು ಅನ್ನುವುದು ನಿಂತ ನೀರಲ್ಲ. ಅದು ಯಾವಾಗಲೂ ನಿರಂತರವಾಗಿರುತ್ತದೆ. ಕೋಟ್ಯಾಧಿಪತಿ ಆಗಬಯಸುವವರಿಗೆ ನಿರಂತರತೆಯೇ ಕಿಲಿ ಕೈ. ಯೋಜನೆ ಮತ್ತು ವ್ಯವಹಾರಗಳ ಬಗ್ಗೆ ನಿರಂತರತೆ ಇರುತ್ತದೆ. ನಿರಂತರತೆ ಅನ್ನುವುದು ಅಹಂ ಅಲ್ಲ. ಅದು ದೃಢತೆಯನ್ನು ಪ್ರತಿಬಿಂಬಿಸುವ ಚಟ, ಹಂಬಲ ಹಾಗೂ ತುಡಿತ. ಹೀಗಾಗಿ ನಿರಂತರತೆ ತುಂಬಾ ಮುಖ್ಯ.

7. ಪ್ರತಿ ಹೆಜ್ಜೆ ಅವಲೋಕನ ಮಾಡಬೇಕು

7. ಪ್ರತಿ ಹೆಜ್ಜೆ ಅವಲೋಕನ ಮಾಡಬೇಕು

ಪ್ರತಿ ಹಂತದಲ್ಲೂ ಏಳು ಬೀಳುಗಳ ಬಗ್ಗೆ ಅವಲೋಕನ ಮಾಡುವುದು ತುಂಬಾ ಮುಖ್ಯ. ಪ್ರತಿನಿತ್ಯ ನಿಮ್ಮ ಪ್ರಗತಿ ಬಗ್ಗೆ ಅವಲೋಕನ ಮಾಡುವುದರಿಂದ ನಾವು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ ಹಾಗೂ ಸರಿ ತಪ್ಪುಗಳೇನು ಎಂಬುದು ಗೊತ್ತಾಗುತ್ತದೆ. ನಮ್ಮ ತಪ್ಪುಗಳನ್ನು ಸರಿಪಡಿಸಿ ಮುನ್ನಡೆಯದಿದ್ದರೆ ಯಶಸ್ಸು ಸಾಧ್ಯವಿಲ್ಲ. ಸೋಲು ಮತ್ತು ಗೆಲುವುಗಳಿಗೆ ಕಾರಣಗಳೇನು ಎಂಬುದನ್ನು ಪ್ರತಿ ಹೆಜ್ಜೆಯಲ್ಲೂ ತಿಳಿದುಕೊಳ್ಳುತ್ತಿರಬೇಕು.

8. ನಿಮ್ಮ ಸುತ್ತಮುತ್ತ ಯಶಸ್ಸು ತುಂಬಿರಲಿ

8. ನಿಮ್ಮ ಸುತ್ತಮುತ್ತ ಯಶಸ್ಸು ತುಂಬಿರಲಿ

ಶ್ರೀಮಂತ ವ್ಯಕ್ತಿಗಳು ಯಾವಾಗಲೂ ತಮ್ಮ ಸುತ್ತಮತ್ತ ಯಶಸ್ವಿ, ಸಮಾನ ಮನಸ್ಕ ಮತ್ತು ಬುದ್ದಿವಂತ ಜನರನ್ನು ಹೊಂದಿರಲು ಬಯಸುತ್ತಾರೆ. ಯಶಸ್ವಿ ವ್ಯಕ್ತಿಗಳು ಅಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿ ಇನ್ನೂ ಹೆಚ್ಚಿನ ಸಾಧನೆಗಾಗಿ ಹಪಹಪಿಸುತ್ತಿರುತ್ತಾರೆ ಅಂತವರು ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು. ಅವರಲ್ಲಿರುವ ಉತ್ಸಾಹ ಇನ್ನು ಉತ್ತಮ ಕೆಲಸಕ್ಕಾಗಿ ಪ್ರೇರೆಪಿಸುತ್ತದೆ.

9. ಬೇಗ ಎದ್ದೇಳಿ

9. ಬೇಗ ಎದ್ದೇಳಿ

ಹೆಚ್ಚಿನ ಯಶಸ್ವಿ ವ್ಯಕ್ತಿಗಳು ಬೇಗ ಎದ್ದೇಳುವ ಹವ್ಯಾಸ ಹೊಂದಿರುತ್ತಾರೆ. ಮುಂಜಾನೆ ಬೇಗ ಎದ್ದೇಳುವುದರಿಂದ ಹೆಚ್ಚಿನ ಸಮಯ ಸಿಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಇಡೀ ದಿನ ಉಲ್ಲಾಸದಿಂದ ಇರುವುದು ಮುಖ್ಯವಾಗಿರುತ್ತದೆ. ಜಗತ್ತಿನ ಅರ್ಧದಷ್ಟು ಸಂಪತ್ತು ಇವರ ಬಳಿ ಇದೆ!

English summary

How to become Crorepati: 9 secret habits

There are no shortcuts to success but there are a few habits that you can follow which will encourage you, in every way, to become a self-made crorepati.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X