For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬ್ಯಾಂಕಿಂಗ್ ಅನುಕೂಲ/ಅನಾನುಕೂಲಗಳೇನು?

ಪ್ರಸ್ತುತ ಡಿಜಿಟಲ್ ಪೇಮೆಂಟ್ಸ್, ನೆಟ್/ಮೊಬೈಲ್ ಬ್ಯಾಂಕಿಂಗ್, ಇ-ವಾಲೆಟ್ಸ್, ಬ್ಯಾಂಕ್ ಆಪ್, ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡುಗಳು ಮುಖ್ಯ ಪಾತ್ರ ವಹಿಸುತ್ತಿವೆ.

|

ಭಾರತದ ಅರ್ಥವ್ಯವಸ್ಥೆಯಲ್ಲಿ ನಗದು ರಹಿತ ವ್ಯವಹಾರ ಅಥವಾ ಡಿಜಿಟಲೀಕರಣ ಹೊಸ ಸಂಚಲನವನ್ನೇ ಉಂಟುಮಾಡುತ್ತಿದೆ. ಪ್ರಸ್ತುತ ಡಿಜಿಟಲ್ ಪೇಮೆಂಟ್ಸ್, ನೆಟ್/ಮೊಬೈಲ್ ಬ್ಯಾಂಕಿಂಗ್, ಇ-ವಾಲೆಟ್ಸ್, ಬ್ಯಾಂಕ್ ಆಪ್, ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡುಗಳು ಮುಖ್ಯ ಪಾತ್ರ ವಹಿಸುತ್ತಿವೆ. ನಗದು ರಹಿತ ವ್ಯವಹಾರ ಹೇಗೆ? ಇಲ್ಲಿವೆ 6 ಮಾರ್ಗ

 

ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉತ್ತೇಜನ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಬ್ಯಾಂಕುಗಳು ಪ್ರೋತ್ಸಾಹಿಸುತ್ತಿವೆ. ಅಂತರ್ಜಾಲದ ಯುಗದಲ್ಲಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಮೊಬೈಲ್ ಬ್ಯಾಂಕಿಂಗ್/ಡಿಜಿಟಲೀಕರಣಕ್ಕೆ ಹೊಂದಿಕೊಳ್ಳಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಆದರೂ ಕೆಲ ಜನರು ಇನ್ನೂ ಮೊಬೈಲ್ ಬ್ಯಾಂಕಿಂಗ್ ನಿಂದ ದೂರ ಉಳಿದಿದ್ದು, ಇದೊಂದು ರಿಸ್ಕ್ ಎಂದುಕೊಂಡಿದ್ದಾರೆ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

ಮೊಬೈಲ್ ಬ್ಯಾಂಕಿಂಗ್ ಸಂದರ್ಭ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಇದರ ಅನುಕೂಲ ಹಾಗೂ ಅನಾನುಕೂಲ ಇತ್ಯಾದಿ ಅಂಶಗಳನ್ನು ವಿವರಿಸಲಾಗಿದೆ.

ಮೊಬೈಲ್ ಬ್ಯಾಂಕಿಂಗ್ ಅನುಕೂಲಗಳೇನು?

ಮೊಬೈಲ್ ಬ್ಯಾಂಕಿಂಗ್ ಅನುಕೂಲಗಳೇನು?

1. ಯಾವುದೇ ಸಮಯದಲ್ಲೂ ಬ್ಯಾಂಕಿಂಗ್

ಮೊಬೈಲ್ ಬ್ಯಾಂಕಿಂಗ್ ಮೂಲಕ ಯಾವುದೇ ಸ್ಥಳದಿಂದ, ಯಾವ ಸಮಯದಲ್ಲಾದರೂ ಬ್ಯಾಂಕಿಂಗ್ ಮಾಡಬಹುದು. ಬ್ಯಾಂಕು ವ್ಯವಹಾರಗಳಿಗಾಗಿ ಶಾಖೆಗಳಿಗೆ ತೆರಳಬೇಕಾದ ಅಗತ್ಯವಿರುವುದಿಲ್ಲ. ಜತೆಗೆ ಅಂತರ್ಜಾಲ ಸಂಪರ್ಕಕ್ಕೆ ಹುಡುಕಾಟ ನಡೆಸಬೇಕಾಗಿಲ್ಲ. ಎಲ್ಲಿಂದಲೂ ಬೇಕಾದರೂ ಸುಲಭವಾಗಿ ಹಣಕಾಸು ವ್ಯವಹಾರ ನಿಭಾಯಿಸಬಹುದು.

2. ಮೊಬೈಲ್ ಬ್ಯಾಂಕಿಂಗ್ ಸೇವೆ ಉಚಿತ

2. ಮೊಬೈಲ್ ಬ್ಯಾಂಕಿಂಗ್ ಸೇವೆ ಉಚಿತ

ಮೊಬೈಲ್ ಬ್ಯಾಂಕಿಂಗ್ ಪ್ರಕ್ರಿಯೆ ಉಚಿತ ಸೇವೆಯಾಗಿದ್ದು, ಇದು ಯಾವುದೇ ಶುಲ್ಕ ಒಳಗೊಂಡಿರುವುದಿಲ್ಲ. ಅಲ್ಲದೇ ಎಷ್ಟು ಬಾರಿ ಬೇಕಾದರೂ ಖಾತೆ ಮಾಹಿತಿ ಪಡೆಯಲು ಯಾವುದೇ ನಿರ್ಬಂಧಗಳಿರುವುದಿಲ್ಲ. ಬ್ಯಾಲೆನ್ಸ್ ಪರಿಶೀಲನೆ, ಕ್ರೆಡಿಟ್ ಮತ್ತು ಡೆಬಿಟ್ ಅಲರ್ಟ್ಸ್, ಬಿಲ್ ಪೇಮೆಂಟ್ ಅಲರ್ಟ್ಸ್, ಹಣ ರವಾನಿಸಿದ ದಾಖಲೆಗಳು, ಬ್ಯಾಲೆನ್ಸ್ ಮಾಹಿತಿ ಎಲ್ಲವನ್ನು ಮೊಬೈಲ್ ಬ್ಯಾಂಕಿಂಗ್ ಸೇವೆಯ ಮೂಲಕ ಉಚಿತವಾಗಿ ಪಡೆಯುವ ಸೌಲಭ್ಯ ಹಲವು ಬ್ಯಾಂಕುಗಳು ನೀಡಿವೆ. ಅಲ್ಲದೇ ನಿಮ್ಮ ಖಾತೆಯಿಂದ ಹಣ ರವಾನಿಸಲು ಸಾಧ್ಯವಿದೆ.

3. ಸುರಕ್ಷಿತ ಬ್ಯಾಂಕಿಂಗ್
 

3. ಸುರಕ್ಷಿತ ಬ್ಯಾಂಕಿಂಗ್

ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುವಾಗ ಭದ್ರತಾ ಕ್ರಮ ಅನುಸರಿಸಲಾಗುತ್ತದೆ. ಡೇಟಾ ನಿಮ್ಮ ಮೊಬೈಲ್ ಮಾತ್ರವಲ್ಲದೇ ಸಿಮ್ ಕಾರ್ಡ್ ನಲ್ಲೂ ಸ್ಟೋರ್ ಆಗುವುದಿಲ್ಲ.
ಈ ಅಪ್ಲಿಕೇಶನ್ ಸುಧಾರಿತ ಗೂಢಲಿಪೀಕರಣ ತಂತ್ರಜ್ಞಾನವನ್ನು ಹೊಂದಿದ್ದು, ಇದು ಇಂಟರ್ನೆಟ್ ಬ್ಯಾಂಕಿಂಗ್ ನಂತೆ ತುಂಬಾ ಸುರಕ್ಷಿತ ಮತ್ತು ಸುಭದ್ರವಾಗಿರುತ್ತದೆ.

ಮೊಬೈಲ್ ಬ್ಯಾಂಕಿಂಗ್ ಅನಾನುಕೂಲಗಳೇನು?

ಮೊಬೈಲ್ ಬ್ಯಾಂಕಿಂಗ್ ಅನಾನುಕೂಲಗಳೇನು?

1. ಸ್ಮಾರ್ಟ್ ಫೋನ್ ಅಗತ್ಯ

ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಸ್ಮಾರ್ಟ್ ಫೋನ್ ಅಗತ್ಯ. ಕೆಲವೊಂದು ಬ್ಯಾಂಕ್ ಗಳು ನಿರ್ದಿಷ್ಟ ಮೊಬೈಲ್ ಗಳಿಗೆ ಮಾತ್ರ ಅನ್ವಯವಾಗುವಂತೆ ಅಪ್ಲಿಕೇಶನ್ ಬಿಡುಗಡೆ ಮಾಡಿರುತ್ತವೆ. ಉದಾಹರಣೆಗೆ ನೀವು ಖಾತೆ ಹೊಂದಿರುವ ಬ್ಯಾಂಕ್ ಅಪ್ಲಿಕೇಶನ್ ನ್ನು ಕೆಲ ನಿರ್ಧಿಷ್ಟ ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ಹಾಕಿಸಿಕೊಳ್ಳಬಹುದು .

2. ವೈರಸ್ ದಾಳಿ

2. ವೈರಸ್ ದಾಳಿ

ಇಂಟರ್ ನೆಟ್ ಬ್ಯಾಂಕಿಂಗ್ ಗಿಂತಲೂ ಮೊಬೈಲ್ ಬ್ಯಾಂಕಿಂಗ್ ಸುರಕ್ಷಿತ ಎಂದು ತಜ್ಞರು ಹೇಳುತ್ತಾರೆ. ಆದರೂ ಕೆಲವೊಂದು 'ವೈರಸ್' ಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹ್ಯಾಕರ್ ವೊಬ್ಬ ಕಳಿಸುವ ನಕಲಿ ಮೆಸೇಜ್ ಗೆ ಮರುಳಾಗುವ ಗ್ರಾಹಕ ತನ್ನ ಖಾತೆಯ ಎಲ್ಲಾ ವಿವರಗಳನ್ನು ನೀಡುವ ಸಾಧ್ಯತೆಯಿರುತ್ತದೆ. ಜನರು ಲ್ಯಾಪ್ ಟಾಪ್ ನಲ್ಲಿ ಬಳಸುವಷ್ಟು ಸುರಕ್ಷತಾ ಕ್ರಮಗಳನ್ನು ಮೊಬೈಲ್ ನಲ್ಲಿ ಸಾಮಾನ್ಯವಾಗಿ ಬಳಸಲ್ಲ. ವೈರಸ್ ಅಪ್ಲಿಕೇಶನ್ ಹಾಕಿಕೊಂಡರೂ ಕೆಲ ಸಂದರ್ಭ ಖಾತೆಯ ಮಾಹಿತಿ ಸೋರಿಕೆಯಾಗುವ ಸಂಭವವಿರುತ್ತದೆ.

3. ಹ್ಯಾಕರ್ಸ್ ಸಮಸ್ಯೆ

3. ಹ್ಯಾಕರ್ಸ್ ಸಮಸ್ಯೆ

ಈ ಎಲ್ಲ ಸಮಸ್ಯೆಗಳೊಂದಿಗೆ ಮೊಬೈಲ್ ಬ್ಯಾಂಕಿಂಗ್ ಬಳಸುವಾಗ ಹ್ಯಾಕರ್ಸ್ ಸಮಸ್ಯೆ ಎದುರಾಗಬಹುದು. ಪಾಸ್ವರ್ಡ್ ಬಳಕೆ ಸಂದರ್ಭದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದ್ದು, ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು. ಹಣಕಾಸು/ಬ್ಯಾಂಕಿಂಗ್ ವಂಚನೆಗಳು ಸಂಬಂಧಿಕರಿಂದ ಹಾಗೂ ನೆರೆಹೊರೆಯವರಿಂದ ಹೆಚ್ಚಾಗುತ್ತವೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದ್ದು, ಯಾರು ಕೂಡ ಮೊಬೈಲ್ ದುರ್ಬಳಕೆ ಮಾಡದಂತೆ ಸ್ಕ್ರೀನ್ ಲಾಕ್ ಮಾಡಿ.

4. ಇ-ಮೇಲ್ ಲಿಂಕ್

4. ಇ-ಮೇಲ್ ಲಿಂಕ್

ಬ್ಯಾಂಕಿಂಗ್ ಲಿಂಕ್ ನಿಮ್ಮ ಇ-ಮೇಲ್ ಮುಖಾಂತರ ತೆರೆಯಬೇಡಿ. ಒಂದು ವೇಳೆ ಇ-ಮೇಲ್ ಮೂಲಕ ಮೊಬೈಲ್ ಬ್ಯಾಂಕಿಂಗ್ ವಂಚನೆಗೆ ಒಳಗಾಗಬೇಕಾಗುತ್ತದೆ. ವೈಫೈ ಸ್ಪಾಟ್ ಮೂಲಕ ಮೊಬೈಲ್ ಬ್ಯಾಂಕಿಂಗ್ ಬಳಸಬಾರದು. ಇದು ಅತ್ಯಂತ ಅಪಾಯಕಾರಿ. ನಿಮ್ಮ ಡೇಟಾ ಕಾರ್ಡ್ ಬಳಸಿ ವ್ಯವಹರಿಸಿ.

ಕೊನೆ ಮಾತು:
ಮೊಬೈಲ್ ಬ್ಯಾಂಕಿಂಗ್ ಎಷ್ಟು ಸರಳವೋ ಅದನ್ನು ಉಪಯೋಗಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಸೌಲಭ್ಯವನ್ನು ಅಷ್ಟೇ ಸುರಕ್ಷಿತವಾಗಿ ಬಳಕೆ ಮಾಡಬೇಕಾಗಿರುವುದು ನಮ್ಮ ಜವಾಬ್ಧಾರಿಯಾಗಿರುತ್ತದೆ.

English summary

Mobile Banking: What are the Advantages and Disadvantages?

The Reserve Bank of India recently informed banks to encourage mobile banking. In coming days we will see more number of people getting addicted to the ease of mobile banking.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X