For Quick Alerts
ALLOW NOTIFICATIONS  
For Daily Alerts

ಆಧಾರ್ e-KYC ಸೇವೆ ಯಾಕೆ ಬೇಕು? ಇಲ್ಲಿವೆ 9 ಕಾರಣ

ಬ್ಯಾಂಕು ಖಾತೆ, ಡಿಮ್ಯಾಟ್ ಖಾತೆ, ವಿಮಾ ಖಾತೆ ತೆರೆಯುವಾಗ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳ(ಜನಧನ, ಮುದ್ರಾ, ಸುಕನ್ಯಾ, ಬ್ಯಾಂಕು) ಸೌಲಭ್ಯ ಪಡೆಯುವಾಗ ಯುಐಡಿಎಐ ಗುರುತಿನ ದಾಖಲಾತಿಯಾಗಿ ಪ್ರಮುಖ ಪಾತ್ರವಹಿಸುತ್ತದೆ.

|

ನಿಮ್ಮ ಗ್ರಾಹಕ ಗುರುತಿಸಿ(KYC) ಎಂಬುದು ಗ್ರಾಹಕರ ಗುರುತು/ದಾಖಲಾತಿಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆ ಬ್ಯಾಂಕು ವ್ಯವಹಾರ, ಬ್ಯುಸಿನೆಸ್, ಸರ್ಕಾರಿ ಸಂಬಂಧಿತ ವ್ಯವಹಾರ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಾಗ ಅನುಸರಿಸಬೇಕಾಗುತ್ತದೆ.

 

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಪ್ರಕಾರ ಇ-ಕೆವೈಸಿ ಪ್ರಕ್ರಿಯೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸೇವಾಕ್ಷೇತ್ರದ ಹಿನ್ನೆಲೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ. ಮಾರುಕಟ್ಟೆಯಲ್ಲಿ ಹೊಸ ನಾವಿನ್ಯತೆಗೆ, ಕಾಗದ ರಹಿತ ವ್ಯವಸ್ಥೆಗೆ ನಾಂದಿ ಹಾಡಲಿದೆ. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

ಬ್ಯಾಂಕು ಖಾತೆ, ಡಿಮ್ಯಾಟ್ ಖಾತೆ, ವಿಮಾ ಖಾತೆ ತೆರೆಯುವಾಗ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳ(ಜನಧನ, ಮುದ್ರಾ, ಸುಕನ್ಯಾ, ಬ್ಯಾಂಕು) ಸೌಲಭ್ಯ ಪಡೆಯುವಾಗ ಇದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ(ಯುಐಡಿಎಐ) ಗುರುತಿನ ದಾಖಲಾತಿಯಾಗಿ ಪ್ರಮುಖ ಪಾತ್ರವಹಿಸುತ್ತದೆ.

ಹೀಗಾಗಿ ಪ್ರತಿಯೊಬ್ಬ ಭಾರತೀಯ ಆಧಾರ್ ಇ-ಕೆವೈಸಿ ಸೇವೆಯನ್ನು ಯಾಕೆ ಪಡೆಯಬೇಕು, ಇದರ ಕಾರಣ ಮತ್ತು ಪ್ರಯೋಜನಗಳೇನು ಇತ್ಯಾದಿ ವಿಚಾರಗಳನ್ನು ಇಲ್ಲಿ ಚರ್ಚಿಸೋಣ...

1. e-KYC ಪ್ರಯೋಜನಗಳು

1. e-KYC ಪ್ರಯೋಜನಗಳು

- ಕಾಗದ ರಹಿತ ವ್ಯವಸ್ಥೆಯನ್ನು ಬಲಪಡಿಸುವುದು
- ನಕಲಿ ದಾಖಲೆಗಳ ಸಮಸ್ಯೆಗೆ ಪರಿಹಾರ
- ನಿವಾಸಗಳ ಗೌಪ್ಯತೆ ರಕ್ಷಣೆ
- ನಿಗದಿತ ಅವಧಿಯಲ್ಲಿ ತಕ್ಷಣದ ಫಲಿತಾಂಶ
- ಕಾಗದದ ಪರಿಶೀಲನೆ, ಸಂಗ್ರಹಣೆ, ಚಲನೆ ಕಡಿಮೆ ಮಾಡುವುದು

2. ನಕಲಿ ದಾಖಲಾತಿಗಳಿಗೆ ಪರಿಹಾರ

2. ನಕಲಿ ದಾಖಲಾತಿಗಳಿಗೆ ಪರಿಹಾರ

ಪ್ರಸ್ತುತ ನಕಲಿ ದಾಖಲಾತಿಗಳ ಸಮಸ್ಯೆ ಎಲ್ಲೆಡೆ ಹರಡಿದೆ. ಇ-ಕೆವೈಸಿ ಪ್ರಕ್ರಿಯೆ ಅಳವಡಿಸುವುದರಿಂದ ಇರುವ ನಕಲಿ ದಾಖಲಾತಿಗಳ ಹಾವಳಿ ಕಡಿಮೆಯಾಗಲಿದೆ. ಮಧ್ಯಸ್ಥಗಾರರ ಕುತಂತ್ರದಿಂದಾಗಿ ಗುರುತಿನ ಚೀಟಿಗಳಲ್ಲಿ ಅನೇಕ ವಂಚನೆಗಳು ಆಗುತ್ತಿರುತ್ತವೆ. ಇನ್ನು ಮುಂದೆ ಯುಐಡಿಎಐ ಮೂಲಕ ನೇರವಾಗಿ ಇ-ಕೆವೈಸಿ ದಾಖಲಾತಿಗಳನ್ನು ಒದಗಿಸುವುದರಿಂದ ಇಂತಹ ನಕಲಿ ದಾಖಲಾತಿ ಹಾಗೂ ವಂಚನೆಗಳ ಪ್ರಮಾಣ ಕಡಿಮೆಯಾಗಲಿದೆ.

3. ಕೆವೈಸಿ ವ್ಯವಹಾರಗಳು ಸುರಕ್ಷಿತ
 

3. ಕೆವೈಸಿ ವ್ಯವಹಾರಗಳು ಸುರಕ್ಷಿತ

ನಿವಾಸ ವಿಳಾಸ ದೃಢೀಕರಣ ಹಾಗೂ ಡಿಜಿಟಲ್ ಸಹಿಯನ್ನು ಇ-ಕೆವೈಸಿ ಪ್ರಕ್ರಿಯೆ ಮುಖಾಂತರ ಮುನ್ನಡೆಸುವುದರಿಂದ ಯುಐಡಿಎಐ ಪೂರೈಸುವ ಇ-ಕೆವೈಸಿ ಡೆಟಾ ಎಲ್ಲಾ ವ್ಯವಹಾರಗಳನ್ನು ಸುರಕ್ಷಿತವಾಗಿ ನಿರ್ವಹಿಸುತ್ತದೆ. ಅಲ್ಲದೇ ಯಾವುದೇ ಅಡೆತಡೆ ಹಾಗೂ ನಿರಾಕರಣೆ ಮಾಡಲು ಸಾಧ್ಯವಿರುವುದಿಲ್ಲ.

4. ಹಸ್ತಕ್ಷೇಪವಿಲ್ಲ ಮತ್ತು ದೋಷಮುಕ್ತ

4. ಹಸ್ತಕ್ಷೇಪವಿಲ್ಲ ಮತ್ತು ದೋಷಮುಕ್ತ

ಯುಐಡಿಎಐ ಪೂರೈಸುವ ಇ-ಕೆವೈಸಿ ಡೆಟಾ ಹಾಗೂ ವಿದ್ಯುನ್ಮಾನ ಸಹಿಯನ್ನು ಯಂತ್ರ ಓದಬಲ್ಲದು. ಸೇವೆ ಒದಗಿಸುವವರು ನೇರವಾಗಿ ಈ ಡೆಟಾಗಳನ್ನು ಗ್ರಾಹಕರ ಸೇವಾ ಹಾಗೂ ಆಡಿಟ್ ಇತ್ಯಾದಿ ಉದ್ದೇಶಗಳನ್ನು ಪೂರೈಸಲು ಸಂಗ್ರಹಿಸಿಡಬಹುದು. ಮಾನವ ಹಸ್ತಕ್ಷೇಪವಿಲ್ಲದೆಯೇ ಕಡಿಮೆ ವೆಚ್ಚ ಮತ್ತು ದೋಷಮುಕ್ತವಾಗಿ ಈ ಪ್ರಕ್ರಿಯೆ ನಡೆಸಬಹುದು.

5. ಸ್ನೇಹಪರ ನಿಯಂತ್ರಣ

5. ಸ್ನೇಹಪರ ನಿಯಂತ್ರಣ

ಸೇವಾದಾರರು ಪರಿಶೋಧನೆಗಾಗಿ ಇ-ಕೆವೈಸಿ ಎಲ್ಲಾ ವಿನಂತಿಗಳನ್ನು ಸಚಿವಾಲಯಕ್ಕೆ ಒದಗಿಸಬಹುದು. ಸಚಿವಾಲಯ/ನಿಯಂತ್ರಕರು ಇ-ಕೆವೈಸಿ ದತ್ತಾಂಶಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಸಂಗ್ರಹ ಅವಧಿ, ಸಂಗ್ರಹ ವಿಧಾನ ಹಾಗೂ ಇನ್ನಿತರ ವಿಷಯಗಳ ನಿಯಮಗಳನ್ನು ರೂಪಿಸಬಹುದು.

6. ಗ್ರಾಹಕರ ಅನುಮತಿ

6. ಗ್ರಾಹಕರ ಅನುಮತಿ

ಗ್ರಾಹಕರ ಅನುಮತಿಯೊಂದಿಗೆ ಮಾತ್ರ ಇ-ಕೆವೈಸಿ ದತ್ತಾಂಶಗಳನ್ನು ಆಧಾರ್ ದೃಢೀಕರಣದ ಮೂಲಕ ಮಾತ್ರ ಒದಗಿಸಲಾಗುತ್ತದೆ. ಗ್ರಾಹಕರ ನಿವಾಸ ಮತ್ತು ದಾಖಲಾತಿಗಳ ಗೌಪ್ಯತೆಯನ್ನು ರಕ್ಷಿಸುವುದು ಮುಖ್ಯವಾಗಿರುತ್ತದೆ.

7. ಇ-ಕೆವೈಸಿ ವೈಶಿಷ್ಟ್ಯ

7. ಇ-ಕೆವೈಸಿ ವೈಶಿಷ್ಟ್ಯ

ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣವಾಗಿ ಕಾಗದ ರಹಿತವಾಗಿರುತ್ತದೆ. ವಿದ್ಯುನ್ಮಾನ, ಕಡಿಮೆ ವೆಚ್ಚದಿಂದಾಗಿ ಇ-ಕೆವೈಸಿ ಹೆಚ್ಚು ಅಂತರ್ಗತವಾಗಿರುತ್ತದೆ. ಜತೆಗೆ ಆರ್ಥಿಕ ಸೇರ್ಪಡೆಗೆ ಅನುವು ಮಾಡಿಕೊಡುತ್ತದೆ.

8. ಕಡಿಮೆ ವೆಚ್ಚ

8. ಕಡಿಮೆ ವೆಚ್ಚ

ಸಾಮಾನ್ಯವಾಗಿ ಇ-ಕೆವೈಸಿ ಹೊರತು ಪಡಿಸಿದ ಯಾವುದೇ ಪ್ರಕ್ರಿಯೆಗಳಲ್ಲೂ ಹೆಚ್ಚೆಚ್ಚು ವೆಚ್ಚಗಳನ್ನು ಗ್ರಾಹಕರು ಭರಿಸುವುದನ್ನು ನೋಡಿದ್ದೇವೆ. ಆದರೆ ಇ-ಕೆವೈಸಿಯಲ್ಲಿ ಕಾಗದ ಪರಿಶೀಲನಾ ಪ್ರಕ್ರಿಯೆ, ಕಾರ್ಯನಿರ್ವಹಣೆ ಮತ್ತು ದತ್ತಾಂಶ ಸಂಗ್ರಹಕ್ಕೆ ಯಾವುದೇ ಹೆಚ್ಚಿನ ವೆಚ್ಚ ತಗಲುವುದಿಲ್ಲ ಹಾಗೂ ಭ್ರಷ್ಟಾಚಾರದ ಅವಕಾಶ ಕಡಿಮೆ ಇರುತ್ತದೆ.

9. ತಕ್ಷಣದ ಪ್ರಕ್ರಿಯೆ

9. ತಕ್ಷಣದ ಪ್ರಕ್ರಿಯೆ

ಇ-ಕೆವೈಸಿ ಒಂದು ಸ್ವಯಂಚಾಲಿತವಾಗಿರುವ ತಕ್ಷಣದ ಪ್ರಕ್ರಿಯೆ ಆಗಿದೆ. ಇ-ಕೆವೈಸಿ ಡೆಟಾ ನೈಜತೆಯಿಂದ ಒಳಗೊಂಡಿರುತ್ತದೆ. ಅಲ್ಲದೇ ಯಾವುದೇ ವ್ಯಕ್ತಿಯ ಹಸ್ತಕ್ಷೇಪ, ಒತ್ತಡಗಳು ಈ ಪ್ರಕ್ರಿಯೆಯಲ್ಲಿ ಇರುವುದಿಲ್ಲ.

Read more about: aadhar kyc banking money
English summary

What Is Aadhar e-KYC Services? 9 Reasos for Opt Aadhar e-KYC

Gone are the days when Know Your Customer (KYC) process was a tedious task of submitting a set of documents which acts as proof of identity and address proof while opening any bank account, demat account or insurance account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X