For Quick Alerts
ALLOW NOTIFICATIONS  
For Daily Alerts

ಕೆಲಸ ಬಿಡುವ ಮುನ್ನ ಏನ್ ಮಾಡಬೇಕು? ಇಲ್ಲೊಮ್ಮೆ ನೋಡಿ...

ಬದಲಾದ ಕಾಲದಲ್ಲಿ ಒಂದೇ ಕಂಪನಿಯಲ್ಲಿ ದಶಕಗಳ ಕಾಲ ಕೆಲಸ ಮಾಡುತ್ತ ಯಾರೂ ಕುಳಿತುಕೊಳ್ಳುವುದಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ವಿವಿಧ ಕಾರಣಗಳಿಗೆ ತಮ್ಮ ಕೆಲಸ ಬದಲಾಯಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.

By Siddu
|

ನನಗೆ ಬೇರೆ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಹಳೆ ಕಂಪನಿಗಿಂತ ಹೊಸ ಕಂಪನಿಯಲ್ಲಿ ಸ್ಯಾಲರಿ, ಕೆಲಸದ ಟೈಮಿಂಗ್ ಎಲ್ಲವೂ ಚೆನ್ನಾಗಿದೆ. ಸದ್ಯದಲ್ಲೇ ಹಳೆ ಕಂಪನಿ ಬಿಟ್ಟು ಹೊಸ ಕಂಪನಿಗೆ ಸೇರುತ್ತೆನೆ ಅಂತಾ ಕೆಲವರು ಹೇಳುವುದನ್ನು ಕೇಳಿದ್ದೇವೆ.

 

ಏಕೆಂದರೆ ಬದಲಾದ ಕಾಲದಲ್ಲಿ ಒಂದೇ ಕಂಪನಿಯಲ್ಲಿ ದಶಕಗಳ ಕಾಲ ಕೆಲಸ ಮಾಡುತ್ತ ಯಾರೂ ಕುಳಿತುಕೊಳ್ಳುವುದಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ವಿವಿಧ ಕಾರಣಗಳಿಗೆ ತಮ್ಮ ಕೆಲಸ ಬದಲಾಯಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಅವಕಾಶಗಳು ಮತ್ತು ಹೆಚ್ಚಿನ ವೇತನದ ಕಾರಣಕ್ಕೆ ಕೆಲಸ ಬದಲಾವಣೆ ಮಾಡುತ್ತೇವೆ.

ನಿಮ್ಮ ಹಣಕಾಸು ಸ್ಥಿತಿ ಉತ್ತಮವಾಗಿದ್ದರೆ ಕೆಲಸ ಬಿಡುವ ಬಗ್ಗೆ, ಹೊಸ ಅವಕಾಶ ಅರಸಿ ಮುನ್ನಡೆಯುವ ಬಗ್ಗೆ ಯೋಚನೆ ಮಾಡಬಹುದು. ಹಣಕಾಸು ಸ್ಥಿತಿ ಸುಭದ್ರವಾಗಿರದ ಹೊತ್ತಲ್ಲಿ ಕೆಲಸ ಬಿಡುವ ದುಸ್ಸಾಹಸಕ್ಕೆ ಕೈ ಹಾಕಬಾರದು.

ಕೆಲಸ ಬಿಡುವ ಮುನ್ನ ಈ ಕೆಳಗಿನ ಅಂಶಗಳನ್ನು ಒಮ್ಮೆ ಅವಲೋಕನ ಮಾಡುವುದು ಉತ್ತಮ.

1. ಕುಟುಂಬದ ಹಿರಿಯರ ಮಾತು ಕೇಳಿ

1. ಕುಟುಂಬದ ಹಿರಿಯರ ಮಾತು ಕೇಳಿ

ನೀವು ಕೆಲಸ ಬಿಟ್ಟರೆ ಅದು ತನ್ನಿಂದ ತಾನೇ ನಿಮ್ಮ ಕುಟುಂಬದವರ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದ ಕಮಿಟ್ ಮೆಂಟ್ ಗಳನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನವೊಂದಕ್ಕೆ ಬರಬೇಕಾಗುತ್ತದೆ. ಸಲಹೆಗಾರರಿದ್ದರೆ ಅವರ ಮಾತನ್ನು ಒಮ್ಮೆ ಆಲಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

2. ತುರ್ತು ಹಣಕಾಸು ನಿಧಿ ಸಿದ್ಧಮಾಡಿ ಇಟ್ಟುಕೊಳ್ಳಿ

2. ತುರ್ತು ಹಣಕಾಸು ನಿಧಿ ಸಿದ್ಧಮಾಡಿ ಇಟ್ಟುಕೊಳ್ಳಿ

ದಿನದ ಉಳಿತಾಯನ್ನು ಹೊರತುಪಡಿಸಿ ತುರ್ತು ಹಣಕಾಸು ನಿಧಿ ಸಿದ್ಧಮಾಡಿ ಇಟ್ಟುಕೊಂಡರೆ ಉತ್ತಮ. ದೀರ್ಘ ಕಾಲದ ಹೂಡಿಕೆ ಮೇಲೆ ಹಣ ಹಾಕಿದ್ದರೆ ನಿಮಗೆ ಅಗತ್ಯವಿದ್ದಾಗ ನೆರವು ಸಿಗದೇ ಇರಬಹುದು. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸಬೇಕಾಗುತ್ತದೆ.

3. ನಿವೃತ್ತಿ ಮೊತ್ತ ಪರಿಶೀಲನೆ ಮಾಡಿ
 

3. ನಿವೃತ್ತಿ ಮೊತ್ತ ಪರಿಶೀಲನೆ ಮಾಡಿ

ಕೆಲಸ ಮಾಡುತ್ತಿರವ ವೇಳೆಯೇ ನಿವೃತ್ತಿ ನಂತರ ಯಾವ ಮೊತ್ತ ಕೈಗೆ ಸಿಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರಬೇಕು. ಎನ್ ಪಿಎಸ್ ಮತ್ತು ಪ್ರಾವಿಡೆಂಟ್ ಫಂಡ್ ಬಗ್ಗೆಯೂ ತಿಳಿದುಕೊಂಡಿದ್ದರೆ ಉತ್ತಮ.

4. ವಿಮಾ ಯೋಜನೆಗಳು

4. ವಿಮಾ ಯೋಜನೆಗಳು

ಕುಟುಂಬದ ಅನುಕೂಲಕ್ಕೆ ತಕ್ಕಂತೆ ವಿಮಾ ಯೋಜನೆಗಳನ್ನು ಅಳವಡಿಸುವುದು ಉತ್ತಮ ನಡೆ. ನಿಮ್ಮ ಕಂಪನಿ ನಿಮಗೆ ಸಂಬಂಧಿಸಿ ಯಾವುದಾದರೂ ವಿಮಾ ಯೋಜನೆಯನ್ನು ಮಾಡಿಸಿದೆಯೇ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ. ಹಳೆಯ ಕಂಪನಿಗೆ ರಾಜೀನಾಮೆ ನೀಡಿ ನೋಟಿಸ್ ಪಿರಿಯಡ್ ನಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಮಾಡಿದರೆ ವಿಮೆ ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಗಮನಿಸಿಕೊಳ್ಳಬೇಕು.

5. ಬಿಲ್ ಪಾವತಿ ಮಾಡಿ

5. ಬಿಲ್ ಪಾವತಿ ಮಾಡಿ

ನೀವು ನೀಡಬೇಕಾದ ಎಲ್ಲ ಬಿಲ್ ಗಳನ್ನು ಕೊಂಚ ಮುಂಚಿತವಾಗಿ ತುಂಬಿದರೂ ತಪ್ಪಿಲ್ಲ. ಇಎಮ್ ಐ ಕಂತುಗಳನ್ನು ಪಾವತಿಮಾಡಿದರೂ ಒಳ್ಳೆಯದೇ. ಇದಾದ ನಂತರ ನಿಮಗೆ ನಿಮ್ಮ ಬಳಿ ಎಷ್ಟು ಹಣ ಮಿಕ್ಕುತ್ತದೆ ಎಂಬ ಸ್ಪಷ್ಟ ಮಾಹಿತಿ ಸಿಗುತ್ತದೆ. (kannadagoodreturns.in)

English summary

Things To Consider Before Quitting Your Job

In contemporary times, staying in a single company for a decade is not considered smart. These days we come across individuals who shift their jobs a number of times.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X