For Quick Alerts
ALLOW NOTIFICATIONS  
For Daily Alerts

ನಷ್ಟವಿರದ ಈ 7 ಹೂಡಿಕೆ ಅವಕಾಶಗಳನ್ನು ತಪ್ಪಿಸಿಕೊಳ್ಳಬೇಡಿ

ಯಾವುದೇ ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ ಮಾಡಿದಾಗ ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತೇವೆ. ಅಂದರೆ ಹೂಡಿಕೆಯಲ್ಲಿರುವ ರಿಸ್ಕ್ ಬಗ್ಗೆ ಚರ್ಚಿಸುತ್ತೇವೆ. ರಿಸ್ಕ್ ಎಲ್ಲಿ ಕಡಿಮೆ ಇರುತ್ತದೆಯೋ ಆ ಬಂಡವಾಳ ಹೆಚ್ಚು ಕ್ಷೇಮ ಎಂದು ಪರಿಗಣಿಸಲಾಗುತ್ತದೆ.

By Siddu
|

ಯಾವುದೇ ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ ಮಾಡಿದಾಗ ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತೇವೆ. ಅಂದರೆ ಹೂಡಿಕೆಯಲ್ಲಿರುವ ರಿಸ್ಕ್ ಬಗ್ಗೆ ಚರ್ಚಿಸುತ್ತೇವೆ. ರಿಸ್ಕ್ ಎಲ್ಲಿ ಕಡಿಮೆ ಇರುತ್ತದೆಯೋ ಆ ಬಂಡವಾಳ ಹೆಚ್ಚು ಕ್ಷೇಮ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ಬಂಡವಾಳಗಳು ರಿಸ್ಕ್ ಬಯಸದವರಿಗೆ, ಹಿರಿಯ ನಾಗರಿಕರಿಗೆ, ನಿವೃತ್ತಿ ಹೊಂದಿದ ಬಳಿಕ ಆರಾಮದಾಯಕ ಜೀವನ ನಡೆಸುವವರಿಗೆ ಸೂಕ್ತವಾಗಿವೆ. ಉದಾಹರಣೆಗೆ ಬ್ಯಾಂಕ್ ಠೇವಣಿ. ಇದರಲ್ಲಿ ಪಡೆಯುವ ಲಾಭ ಅತಿ ಕಡಿಮೆ, ಆದರೆ ನಷ್ಟವಂತೂ ಇಲ್ಲ. ರಿಸ್ಕ್ ಇಲ್ಲದೇ ಲಾಭ ಮಾಡಲು ಸಾಧ್ಯವೇ ಇಲ್ಲ ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ.

 

ಆದರೆ ಇದು ಸತ್ಯಕ್ಕೆ ದೂರವಾಗಿದ್ದು ಇಂದು ಹಲವಾರು ಬಂಡವಾಳದ ಅವಕಾಶಗಳಿದ್ದು ಇವುಗಳಲ್ಲಿ ರಿಸ್ಕ್/ನಷ್ಟ ಅತಿ ಕಡಿಮೆ ಇರುತ್ತದೆ. ಅಲ್ಲದೆ ತೆರಿಗೆ ಪ್ರಮಾಣ ಕಡಿಮೆ ಇರುತ್ತದೆ. ಕೆಲ ಹೂಡಿಕೆಗಳು ಹೆಚ್ಚು ಲಾಭ ತಂದರೆ, ಕೆಲವು ಹೆಚ್ಚಲ್ಲದಿದ್ದರೂ ಸಾಮಾನ್ಯವಾದ ಲಾಭವನ್ನು ತರುತ್ತವೆ. ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ

ನಷ್ಟ/ರಿಸ್ಕ್ ಇಲ್ಲದ ಅನೇಕ ಹೂಡಿಕೆ ಆಯ್ಕೆಗಳು ಭಾರತದಲ್ಲಿ ಲಭ್ಯವಿವೆ. ಅವುಗಳಲ್ಲಿ ನಿಮಗ್ಯಾವುದು ಇಷ್ಟ ಎಂಬ ಆಯ್ಕೆ ನಿಮ್ಮದು. ನಷ್ಟವಿರದ ಹೂಡಿಕೆಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ...

ಸ್ಥಿರ ಠೇವಣಿಗಳು

ಸ್ಥಿರ ಠೇವಣಿಗಳು

ರಿಸ್ಕ್ ಇಲ್ಲದಿರುವ ಬಂಡವಾಳ ಎಂದಾಗ ನೆನಪಿಗೆ ಬರುವ ಮೊದಲ ಆಯ್ಕೆ ಎಂದರೆ ಸ್ಥಿರ ಠೇವಣಿಗಳು. ಉಳಿತಾಯ ಖಾತೆಗೆ ಹೋಲಿಸಿದರೆ ಇವು ಕನಿಷ್ಟ 7-8%ರಷ್ಟು ಬಡ್ಡಿಯನ್ನು ನೀಡುವ ಮೂಲಕ ಉತ್ತಮವಾದ ಪ್ರತಿಫಲವನ್ನೇ ನೀಡುತ್ತವೆ. ಆದರೆ ಈ ಆದಾಯ ಪೂರ್ಣವಾಗಿ ತೆರಿಗೆಗೆ ಒಳಪಡುತ್ತವೆ. ಆದ್ದರಿಂದ ನೀವು ಒಂದು ವೇಳೆ ಆದಾಯ ತೆರಿಗೆಗೆ ಒಳಪಡುವ ವ್ಯಾಪ್ತಿಯಲ್ಲಿದ್ದರೆ ಈ ಪ್ರತಿಫಲ ಹೆಚ್ಚಾಗಿರಲಾರದು.

ಮರುಕಳಿಸುವ ಠೇವಣಿ(RD)

ಮರುಕಳಿಸುವ ಠೇವಣಿ(RD)

ನಿಯಮಿತ ವೇತನವನ್ನು ಪಡೆಯುವ ವ್ಯಕ್ತಿಗಳಿಗೆ ಈ ಠೇವಣಿ ಅತ್ಯುತ್ತಮ ಆಯ್ಕೆಯಾಗಿದೆ. ಇವುಗಳು ಸ್ಥಿರ ಠೇವಣಿಯಿಂದ ಅತಿ ಹೆಚ್ಚು ವ್ಯತ್ಯಾಸವೇನೂ ಇರುವುದಿಲ್ಲ. ಆದರೆ ಈ ಠೇವಣಿಯಲ್ಲಿ ಪ್ರತಿ ತಿಂಗಳೂ ನಿಯಮಿತವಾಗಿ ಒಂದು ನಿಗದಿತ ಮೊತ್ತವನ್ನು ಭರ್ತಿ ಮಾಡುತ್ತಾ ಬರಬೇಕು. ಸಮಯ ಕಳೆದಂತೆ ಈ ಮೊತ್ತ ದೊಡ್ಡ ಮೊತ್ತವಾಗಿ ಪರಿವರ್ತಿತವಾಗುತ್ತದೆ. ಸ್ಥಿರ ಠೇವಣಿಯಂತೆ ಇದರ ಬಡ್ಡಿಯೂ ತೆರಿಗೆಗೆ ಒಳಪಡುತ್ತದೆ.

ಅಂಚೆ ಕಚೇರಿ ಠೇವಣಿ
 

ಅಂಚೆ ಕಚೇರಿ ಠೇವಣಿ

ಇವು ಐದು ವರ್ಷಗಳವರೆಗೆ ವಿವಿಧ ಅವಧಿಗಳ ರೂಪದಲ್ಲಿ ದೊರಕುತ್ತವೆ. ಹೆಚ್ಚಿನ ಅವಧಿಯ ಆಯ್ಕೆಯಿಂದ ಹೆಚ್ಚಿನ ಬಡ್ಡಿ ದೊರಕುತ್ತದೆ. ಐದು ವರ್ಷಕ್ಕೆ 7.8% ರ ದರವಿದ್ದು ಅತ್ಯುತ್ತಮ ಪ್ರತಿಫಲ ನೀಡುತ್ತದೆ. ಈ ಠೇವಣಿಯ ಲಾಭವೆಂದರೆ ಐದು ವರ್ಷದ ಒಳಗಿನ ಠೇವಣಿಯಿಂದ ತೆರಿಗೆಯ ಅನುಕೂಲತೆಗಳು ದೊರಕುತ್ತವೆ.

ಸ್ಥಿರ ಮೆಚುರಿಟಿ ಯೋಜನೆ

ಸ್ಥಿರ ಮೆಚುರಿಟಿ ಯೋಜನೆ

ಸ್ಥಿರ ಮೆಚುರಿಟಿ ಯೋಜನೆFixed Maturity Plan (FMP) ಒಂದು ತಿಂಗಳಿನಿಂದ ಪ್ರಾರಂಭಗೊಂಡು ಐದು ವರ್ಷಗಳ ಅವಧಿಯ ಠೇವಣಿಯಾಗಿದೆ. FMP ನೀವು ಹೂಡಿದ ಮೊತ್ತವನ್ನು ಮಾರುಕಟ್ಟೆಯಲ್ಲಿ ಹೂಡಲಾಗುತ್ತದೆ. ಈ ಠೇವಣಿ ಪರಿಪಕ್ವಗೊಳ್ಳಲು ಒಂದು ದಿನಾಂಕವಿರುತ್ತದೆ. ಆದರೆ ನೀವು ಈ ಠೇವಣಿಗಳಲ್ಲಿ ಹಣ ಹೂಡುವಾಗ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಹಾಗೂ ಸಾಧ್ಯವಾದಷ್ಟು AAA ದರ್ಜೆಯ FMP ಗಳಲ್ಲಿಯೇ ಹೂಡಿಕೆ ಮಾಡಬೇಕು.

ಡೆಬ್ಟ್ ಮ್ಯೂಚುವಲ್ ಫಂಡ್

ಡೆಬ್ಟ್ ಮ್ಯೂಚುವಲ್ ಫಂಡ್

ಈ ಆಯ್ಕೆಯಲ್ಲಿ ನಿಮ್ಮ ಹಣ ಕೇವಲ ಕಾರ್ಪೋರೇಟ್ ಬಾಂಡುಗಳು ಮತ್ತು ಸರ್ಕಾರಿ ಭದ್ರತಾ ಠೇವಣಿಗಳಲ್ಲಿ ಹೂಡಲಾಗುತ್ತದೆ. ಈ ಠೇವಣಿಗಳಿಗೆ ಯಾವುದೇ ಸ್ಥಿರವಾದ ಆದಾಯವಿರುವುದಿಲ್ಲ. ಆದರೆ ಯಾವುದೇ ದಂಡವಿಲ್ಲದೇ ನೀವು ನಿಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಬಹುದು. ಈ ಠೇವಣಿ ಆಯ್ಕೆ ಮಾಡುವುದಾದರೆ ಕಡಿಮೆ ಬಡ್ಡಿದರವಿರುವ ಕಾರಣ ದೀರ್ಘಾವಧಿಯ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಕಂಪೆನಿ ಠೇವಣಿ

ಕಂಪೆನಿ ಠೇವಣಿ

ಕಂಪನಿ ಡಿಪಾಸಿಟ್ ಎಂದು ಕರೆಯಲ್ಪಡುವ ಈ ಆಯ್ಕೆಯಲ್ಲಿ ಬ್ಯಾಂಕ್ ಠೇವಣಿಗಿಂತ ಕೊಂಚ ಹೆಚ್ಚಿನ ರಿಸ್ಕ್ ಇರುತ್ತದೆ. ಆದರೆ ಇದರ ಬಡ್ಡಿದರ ಮತ್ತು ಆದಾಯ ಕೊಂಚ ಹೆಚ್ಚಿರುತ್ತದೆ. ಯಾವುದೇ ತೊಂದರೆಗೆ ಒಳಗಾಗದೇ ಇರಲು AAA ದರ್ಜೆಯ ಸಂಸ್ಥೆಗಳಲ್ಲಿಯೇ ಹಣ ಹೂಡುವುದು ಜಾಣತನವಾಗಿದೆ. ಈ ಠೇವಣಿಗಳನ್ನು ದೀರ್ಘಾವಧಿಯ ಆಯ್ಕೆ ಮೂಲಕ ಪಡೆದುಕೊಳ್ಳುವುದೇ ಉತ್ತಮ ನಡೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಹೆಚ್ಚಿನ ಸುರಕ್ಷತೆ ಮತ್ತು ಆಕರ್ಷಕ ಬಡ್ಡಿದರದ( 8-9%) ಮೂಲಕ ಇವು ಹೆಚ್ಚು ಆಕರ್ಷಣೀಯವಾಗಿದೆ. ವಾರ್ಷಿಕ ಕನಿಷ್ಟ ರೂ. 500 ಮತ್ತು ಗರಿಷ್ಟ 1.5 ಲಕ್ಷ ರೂಪಾಯಿಗಳನ್ನು ಇದರಲ್ಲಿ ತೊಡಗಿಸಬಹುದು. ಅಲ್ಲದೇ ಈ ಠೇವಣಿಯನ್ನು ಆಧಾರವಾಗಿಸಿ ಬ್ಯಾಂಕ್ ಸಾಲ, ಹಣ ಪಡೆಯುವುದು ಮತ್ತು ಅವಧಿಯನ್ನು ವಿಸ್ತರಿಸುವುದು ಸಾಧ್ಯವಿರುತ್ತದೆ. ಪ್ರಸ್ತುತ ಉದ್ಯಮದಲ್ಲಿ ಈ ಆಯ್ಕೆ ಅತ್ಯುತ್ತಮವಾಗಿದ್ದು, ತೆರಿಗೆ ಉಳಿಸಲೂ ಸೂಕ್ತವಾಗಿದೆ.

ಕೊನೆ ಮಾತು

ಕೊನೆ ಮಾತು

ಪ್ರತಿಯೊಬ್ಬರೂ ಆರ್ಥಿಕ ಸುರಕ್ಷತೆ ಮತ್ತು ಭದ್ರತೆಗಾಗಿ ಹೂಡಿಕೆ ಮಾಡಬೇಕು. ಇವು ಕೇವಲ ನಿಮ್ಮ ಧನವನ್ನು ವೃದ್ದಿಸುವುದು ಮಾತ್ರವಲ್ಲ, ಭವಿಷ್ಯದಲ್ಲಿ ನಿಮಗೆ ನಿಯಮಿತ ವೇತನ ಇಲ್ಲದಿರುವಾಗ ಮತ್ತು ವಿಶೇಷವಾಗಿ ನಿವೃತ್ತಿಯ ಬಳಿಕ ಯಾರಿಗೂ ಹೊರೆಯಾಗದೇ ಆತ್ಮವಿಶ್ವಾಸದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ.

English summary

7 Unmissable Risk-Free Investment Options

A safe investment is where there is very little or zero risk involved. They’re usually suited for people who are retired or don’t like taking risks. It’s a common misconception that if there’s no risk involved, you won’t get good returns.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X