For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆಗಳ ಮೇಲೆ ಈ 10 ಅಂಶಗಳು ಪರಿಣಾಮ ಬೀರುತ್ತವೆ. ಏಕೆ?

ಚಿನ್ನದ ಬೆಲೆಯನ್ನು ಹತ್ತು ಹಲವು ಪರಿಸ್ಥಿತಿಗಳು ನಿರ್ಧರಿಸುತ್ತಿದ್ದು, ಇವುಗಳನ್ನು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕ ತಜ್ಞರು ನೀಡುವ ಕೆಲವು ವಿವರಗಳು ಇವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.

By Siddu
|

ವಿಶ್ವದಲ್ಲಿ ಕರೆನ್ಸಿ ನೋಟುಗಳಿಗೆ ಸಮಾನವಾಗಿ ಬೆಲೆಬಾಳುವ, ಬೇಡಿಕೆಯುಳ್ಳ ಹಾಗೂ ಜನರಿಗೆ ಅತಿಹೆಚ್ಚು ವ್ಯಾಮೋಹ ಇರುವ ವಸ್ತುವೆಂದರೆ ಅದು ಬಂಗಾರ. ಚಿನ್ನ ಅತಿಹೆಚ್ಚು ಜನರು ಕೊಳ್ಳಬಯಸುವ ದ್ರವ್ಯವಾಗಿದ್ದು, ಇದರ ಬೆಲೆ ಮಾತ್ರ ಯು.ಎಸ್. ಡಾಲರುಗಳನ್ನು ಆಧರಿಸಿದ್ದು ಪ್ರತಿದಿನ ಏರಿಳಿತವನ್ನು ಕಾಣುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿನ ಏರಿಳಿತಗಳು ಚಿನ್ನದ ಬೇಡಿಕೆ ಮತ್ತು ಪೂರೈಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇರುತ್ತವೆ.

ಚಿನ್ನದ ಬೆಲೆಯನ್ನು ಹತ್ತು ಹಲವು ಪರಿಸ್ಥಿತಿಗಳು ನಿರ್ಧರಿಸುತ್ತಿದ್ದು, ಇವುಗಳನ್ನು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕ ತಜ್ಞರು ನೀಡುವ ಕೆಲವು ವಿವರಗಳು ಇವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.

ಈ ನಿಟ್ಟಿನಲ್ಲಿ ಚಿನ್ನದ ಮೇಲೆ ಜಾಗತಿಕವಾಗಿ ಪ್ರಭಾವ ಬೀರುವ ಪ್ರಮುಖ ಹತ್ತು ಅಂಶಗಳನ್ನು ನೀಡಲಾಗಿದ್ದು, ಇವು ಚಿನ್ನ ಪ್ರಿಯರಿಗೆ ನೆರವಾಗಲಿವೆ...

1. ವಿಶ್ವ ಆರ್ಥಿಕ ಬಿಕ್ಕಟ್ಟು

1. ವಿಶ್ವ ಆರ್ಥಿಕ ಬಿಕ್ಕಟ್ಟು

ಯಾವಾಗ ಜನರಿಗೆ ತಮ್ಮ ಸರ್ಕಾರಗಳಲ್ಲಿ ಅಥವಾ ಹಣಕಾಸು ಮಾರುಕಟ್ಟೆಯಲ್ಲಿ ಭರವಸೆ ಕಡಿಮೆಯಾದಾಗ ಇವರು ತಮ್ಮ ಹೂಡಿಕೆಯಲ್ಲಿ ಅಭದ್ರತೆಯನ್ನು ಊಹಿಸಿ ತಮ್ಮ ಹಣವನ್ನು ಹಿಂಪಡೆಯಲು ಮುಂದಾಗುತ್ತಾರೆ. ಇದಕ್ಕೆ ಸರಕು ಬಿಕ್ಕಟ್ಟು(crisis commodity) ಎಂದು ಕರೆಯುತ್ತಾರೆ. ಈ ಕಾರಣ ಹಣಕಾಸಿನ ವಹಿವಾಟು ಮತ್ತು ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವಾಗುತ್ತದೆ. ಆರ್ಥಿಕ ಬಿಕ್ಕಟ್ಟು ಅಥವಾ ರಾಜಕೀಯ ಗೊಂದಲದ ಮಧ್ಯೆ ಚಿನ್ನವನ್ನು ಸುರಕ್ಷತೆ, ಸುಭದ್ರತೆಯ ಮೂಲ ಎಂದು ಭಾವಿಸಲಾಗುತ್ತದೆ.
ಉದಾಹರಣೆಗೆ ರಷ್ಯನ್ನರು ಉಕ್ರೇನ್ ದೇಶಕ್ಕೆ ದೇಶಾಂತರಗೊಂಡ ಸಮಯದಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಮೊದಲ ಗಲ್ಫ್ ಯುದ್ದದಲ್ಲಿ ಹೂಡಿಕೆದಾರರು ತಮ್ಮ ಹಣವನ್ನು ಹಿಂಪಡೆದ ಕಾರಣ ಚಿನ್ನದ ಬೆಲೆ ಪಾತಾಳಕ್ಕಿಳಿದಿತ್ತು. ಅಂದರೆ ಚಿನ್ನದ ಬೆಲೆ ಏರಿಳಿತಗಳಿಗೆ ರಾಜಕೀಯ ಅರಾಜಕತೆ ಅಥವಾ ಗೊಂದಲವೇ ನೇರವಾಗಿ ಪ್ರಭಾವ ಬೀರುತ್ತದೆ.

2. ಹಣದುಬ್ಬರ

2. ಹಣದುಬ್ಬರ

ಜನರು ಕಾಗದ ರೂಪದಲ್ಲಿರುವ ಹಣಕ್ಕಿಂತಲೂ ಚಿನ್ನವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಕಾರಣ ಹಣದುಬ್ಬರ ಹಾಗೂ ಕಾಲಕ್ರಮೇಣ ಹಣ ತನ್ನ ಮೌಲ್ಯ ಕಳೆದುಕೊಂಡು ಅಪಮೌಲ್ಯೀಕರಣಕ್ಕೆ ಒಳಗಾಗುತ್ತದೆ.
ಆದರೆ ಚಿನ್ನದ ಬೆಲೆ ಮಾತ್ರ ಹೆಚ್ಚೂ ಕಡಿಮೆ ಒಂದೇ ತೆರನಾಗಿರುತ್ತದೆ. ಏಕೆಂದರೆ ಚಿನ್ನಕ್ಕೆ ರಾಜಕೀಯ ವಲಯದ ಹೊರಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಾಮರ್ಥ್ಯವಿದೆ. ಚಿನ್ನದ ಮೇಲೆ ಹಣ ಹೂಡುವುದು ಅತಿ ಕಡಿಮೆ ಗಂಡಾತರವಿರುವ, ಯಾವಾಗ ಮಾರಾಟ ಮಾಡಲು ಹೋದರೂ ಬೇಡಿಕೆ ಇರುತ್ತದೆ. ಹೂಡಿದ ಹಣಕ್ಕೆ ಮೋಸ ಮಾಡದ ದ್ರವ್ಯವಾಗಿದೆ.

3. ಯುಎಸ್ ಡಾಲರ್ ಮೌಲ್ಯ
 

3. ಯುಎಸ್ ಡಾಲರ್ ಮೌಲ್ಯ

ವಿಶ್ವದ ಹಲವು ದೇಶಗಳ ಕರೆನ್ಸಿ ಬೆಲೆ ಯು.ಎಸ್. ಡಾಲರ್ಗಿಂತಲೂ ಹೆಚ್ಚು ಬೆಲೆ ಬಾಳುತ್ತಿ,ದ್ದರೂ ವಿಶ್ವದ ಮಾನ್ಯತೆ ಪಡೆದ ಕರೆನ್ಸಿ ಎಂದರೆ ಯು.ಎಸ್. ಡಾಲರ್ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದಿಗೂ ಯುಎಸ್ ಡಾಲರ್ ಪ್ರಮುಖ ವಹಿವಾಟಿನ ಮಾಧ್ಯಮವಾಗಿದೆ. ಚಿನ್ನದ ಬೆಲೆ ಎಂದಿಗೂ ಡಾಲರ್ ಬೆಲೆಗೆ ವಿರುದ್ದವಾಗಿ ಕೆಲಸ ಮಾಡುತ್ತದೆ. ಅಂದರೆ ಯುಎಸ್ ಡಾಲರ್ ಮೌಲ್ಯ ಗರಿಷ್ಠವಾಗಿದ್ದಾಗ ಚಿನ್ನದ ಬೆಲೆ ಕನಿಷ್ಟ ಹಾಗೂ ಡಾಲರ್ ಬೆಲೆ ಕನಿಷ್ಟವಾಗಿದ್ದಾಗ ಚಿನ್ನದ ಬೆಲೆ ಗರಿಷ್ಠವಾಗಿರುತ್ತದೆ.
ಉದಾಹರಣೆಗೆ 2014 ರ ಸೆಪ್ಟೆಂಬರ್ 1 ರಿಂದ 10 ರ ನಡುವೆ ಯುಎಸ್ ಡಾಲರ್ ಸೂಚ್ಯಂಕ ಹೆಚ್ಚೂ ಕಡಿಮೆ 2ಕ್ಕೆ ಏರಿದ್ದಾಗ ಹೆಚ್ಚಿನ ಜನರು ತಮ್ಮ ಚಿನ್ನವನ್ನು ಮಾರಾಟ ಮಾಡುವತ್ತ ಹೆಚ್ಚು ಉತ್ಸುಕರಾಗಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಚಿನ್ನವನ್ನು ಕೊಳ್ಳಬಯಸುವವರು ಡಾಲರ್ ಬೆಲೆ ಹೆಚ್ಚಿರುವಾಗ ಕೊಳ್ಳುವುದರಿಂದ ಹೆಚ್ಚಿನ ಬೆಲೆಯ ಬೆಂಬಲ ಸಿಗುತ್ತದೆ.

4. ಸೆಂಟ್ರಲ್ ಬ್ಯಾಂಕ್ ಅಸ್ಥಿರತೆ

4. ಸೆಂಟ್ರಲ್ ಬ್ಯಾಂಕ್ ಅಸ್ಥಿರತೆ

ಭಾರತಕ್ಕೆ ರಿಸರ್ವ್ ಬ್ಯಾಂಕ್ ಹೇಗೋ ಹಾಗೇ ಯುಎಸ್ಎ ಗೆ ಫೇಡರಲ್ ರಿಸರ್ವ್(Federal Reserve) ಕೇಂದ್ರ ಬ್ಯಾಂಕು. ಅಂತೆಯೇ ಹೆಚ್ಚಿನ ದೇಶಗಳು ತಮ್ಮದೇ ಕೇಂದ್ರೀಯ ಬ್ಯಾಂಕ್ ಗಳನ್ನು ಹೊಂದಿವೆ. ಯೂರೋಪ್ ನಲ್ಲಿ European Central Bank, ಜಪಾನ್ ನಲ್ಲಿ The Bank of Japan, ಸ್ವಿಟ್ಜರ್ಲ್ಯಾಂಡಿನಲ್ಲಿ The Swiss National Bank ಇತ್ಯಾದಿ. ಆದರೆ ಪ್ರತಿ ಬ್ಯಾಂಕ್ ತನ್ನದೇ ಸೂತ್ರಗಳನ್ನು ಅಳವಡಿಸುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬ್ಯಾಂಕುಗಳ ಸೂತ್ರಗಳು ಅಥವಾ ನೀತಿಗಳು ಚಿನ್ನದ ಮೇಲೂ ಪ್ರಭಾವ ಬೀರುತ್ತವೆ. ಕೆಲವು ನೀತಿಗಳು ಚಿನ್ನವನ್ನು ಕೊಳ್ಳುವವರಿಗೆ ಅನುಕೂಲಕರವಾಗಿಯೂ ಕೆಲವು ಅನಾನುಕೂಲಕರವಾಗಿಯೂ ಇರುತ್ತವೆ. ಯಾವಾಗ ಈ ಬ್ಯಾಂಕುಗಳು ತನ್ನ ಕರೆನ್ಸಿ ನೋಟುಗಳನ್ನು ರದ್ದುಪಡಿಸುವಂತಹ ಕಠಿಣ ಕ್ರಮಗಳನ್ನು ಘೋಷಿಸುತ್ತವೆಯೋ ಮರುಕ್ಷಣವೇ ಜನರು ಚಿನ್ನವನ್ನು ಮಾರಲು ಅಥವಾ ಕೊಳ್ಳಲು ಮಾರುಕಟ್ಟೆಗೆ ಭಾರೀ ಸಂಖ್ಯೆಯಲ್ಲಿ ನುಗ್ಗುತ್ತಾರೆ. ಕೆಲವೊಮ್ಮೆ ಸೆಂಟ್ರಲ್ ಬ್ಯಾಂಕುಗಳು ತಮ್ಮಲ್ಲಿರುವ ಚಿನ್ನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ವಿಫಲವಾಗಿವೆ ಎಂದ ಅಂಶ ಬಯಲಾದರೆ ಹೂಡಿಕೆದಾರರು ಚಿನ್ನವನ್ನು ತಮ್ಮದೇ ಸುರಕ್ಷತೆಯಲ್ಲಿ ಉಳಿಸಿಕೊಳ್ಳಲು ಬಯಸುತ್ತಾರೆ. ಇದು ಚಿನ್ನ ಕೊಳ್ಳಲು ಬೇಡಿಕೆಯನ್ನು ಮುಂದಿಟ್ಟು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತವೆ.

5. ಬಡ್ಡಿ ದರಗಳು

5. ಬಡ್ಡಿ ದರಗಳು

ಸಾಮಾನ್ಯವಾಗಿ ಖಜಾನೆ ಬಾಂಡ್(treasury bonds) ಅಥವಾ ಉಳಿತಾಯ ಖಾತೆಗಳಂತೆ ಚಿನ್ನದ ಮೂಲಕ ಬಡ್ಡಿ ದೊರಕುವುದಿಲ್ಲ. ಬದಲಿಗೆ ಚಿನ್ನದ ಬೆಲೆಯಲ್ಲಿನ ಏರಿಕೆ ಅಥವಾ ಇಳಿಕೆ ಬಡ್ಡಿದರಗಳನ್ನು ಏರಿಸಲು ಅಥವಾ ಇಳಿಸಲು ಕಾರಣವಾಗುತ್ತವೆ. ಬಡ್ಡಿದರಗಳಲ್ಲಿ ಏರಿಕೆಯಾದಾಗ ಚಿನ್ನವನ್ನು ಸುಮ್ಮನೇ ಮನೆಯಲ್ಲಿಡುವುದಕ್ಕಿಂತ ಮಾರಾಟ ಮಾಡಿ ಇದರ ಬದಲಿಗೆ ಹಣವನ್ನು ಉಳಿತಾಯ ಖಾತೆಯಲ್ಲಿರಿಸುವ ಮೂಲಕ ಬಡ್ಡಿಯನ್ನು ಪಡೆದು ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಯೋಚಿಸುತ್ತಾರೆ. ಈ ಯೋಚನೆ ಚಿನ್ನವನ್ನು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತದೆ. ವ್ಯತಿರಿಕ್ತವಾಗಿ ಬಡ್ಡಿದರ ಇಳಿದರೆ ಜನರು ತಮ್ಮ ಹಣವನ್ನು ಹಿಂಪಡೆದು ಚಿನ್ನ ಖರೀದಿಸತೊಡಗುತ್ತಾರೆ. ಇದರಿಂದ ಚಿನ್ನದ ಬೆಲೆ ಏರುತ್ತದೆ.

6. QE-Quantitative Easing (ಹೆಚ್ಚಿನ ನಗದು ಒದಗಿಸುವಿಕೆ)

6. QE-Quantitative Easing (ಹೆಚ್ಚಿನ ನಗದು ಒದಗಿಸುವಿಕೆ)

ಕೆಲವೊಮ್ಮೆ ಕೇಂದ್ರೀಯ ಬ್ಯಾಂಕುಗಳೇ ತನ್ನ ಆಧೀನದಲ್ಲಿರುವ ಇತರ ಬ್ಯಾಂಕುಗಳು ಮತ್ತು ವಿತ್ತ ಸಂಸ್ಥೆಗಳಿಗೆ ಹೆಚ್ಚಿನ ನಗದನ್ನು ಒದಗಿಸುವ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಅವಕಾಶ ನೀಡುತ್ತದೆ. ಇದನ್ನೇ Quantitative Easing ಎಂದು ಕರೆಯುತ್ತಾರೆ. ಈ ಅವಕಾಶವನ್ನು ಬ್ಯಾಂಕುಗಳು ಸಾರ್ವಜನಿಕರಿಗೆ ನೀಡಲು ಕೆಲವು ರಿಯಾಯತಿಗಳನ್ನು ಘೋಷಿಸುತ್ತವೆ. Bank of England, The Bank of Japan ಮತ್ತು The European Central Bank ಗಳು ಈಗಾಗಲೇ ಈ ಕ್ರಮವನ್ನು ಅನುಸರಿಸಿವೆ. ಈ ಕ್ರಮದ ಪರಿಣಾಮವಾಗಿ ಬಡ್ಡಿದರಗಳು ಭಾರೀ ಪ್ರಮಾಣದಲ್ಲಿ ಇಳಿಯುತ್ತವೆ. ಪರಿಣಾಮವಾಗಿ ಗ್ರಾಹಕರು ಹೆಚ್ಚು ಹೆಚ್ಚು ಚಿನ್ನವನ್ನು ಕೊಳ್ಳತೊಡಗುತ್ತಾರೆ. ಆದರೆ ಈ ಕ್ರಮದಲ್ಲಿ ಮೊದಲಿಗೆ ಬಂದ ಗ್ರಾಹಕರಿಗೆ ಮಾತ್ರವೇ ಹೆಚ್ಚಿನ ಲಾಭವಾಗುತ್ತದೆ. ಯಾವಾಗ ನಾಲ್ಕು ಜನರಿಗೆ ಲಾಭವಾಯಿತೋ ಇಡಿಯ ದೇಶದ ಜನರೇ ಬ್ಯಾಂಕುಗಳತ್ತ ನುಗ್ಗುವುದನ್ನು ಇತಿಹಾಸ ದಾಖಲಿಸಿದೆ. ಒಂದು ಹಂತದಲ್ಲಿ ಭಾರೀ ಪ್ರಮಾಣದ ಕೊಳ್ಳುವಿಕೆಯಿಂದ ಹಣದುಬ್ಬರ ಎದುರಾಗುತ್ತದೆ ಹಾಗೂ ಚಿನ್ನವ ಇದ್ದವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಚಿನ್ನದ ಬೆಲೆ ಥಟ್ಟನೇ ಗಗನಕ್ಕೇರಿಬಿಡುತ್ತದೆ. ಫೆಡೆರಲ್ ಬ್ಯಾಂಕ್ ಈ ಕ್ರಮವನ್ನು ಅನುಸರಿಸಿತ್ತು. ಆದರೆ ಇದರ ದುಷ್ಟರಿಣಾಮವನ್ನು ಕಂಡುಕೊಂಡು 2014ರ ಅಕ್ಟೋಬರ್ 29ರಂದು ಆದೇಶವನ್ನು ಹಿಂಪಡೆದಿತ್ತು.

7. ಸರ್ಕಾರದ ನಿಕ್ಷೇಪ

7. ಸರ್ಕಾರದ ನಿಕ್ಷೇಪ

ಯುಎಸ್ ಫೇಡರಲ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ ಸಹಿತ ಹಲವು ಬ್ಯಾಂಕುಗಳು ಕಾಗದ ರೂಪದ ಹಣ ಮತ್ತು ಚಿನ್ನವನ್ನು ತಮ್ಮ ಆರ್ಥಿಕ ನಿಕ್ಷೇಪವಾಗಿ ಪರಿಗಣಿಸುತ್ತವೆ. ಅದರಲ್ಲೂ ಯೂರೋಪಿಯನ್ ಬ್ಯಾಂಕುಗಳು ಕೂಡ ಚಿನವನ್ನು ಪ್ರಮುಖ ನಿಕ್ಷೇಪವಾಗಿ ಪರಿಗಣಿಸುತ್ತವೆ. ಇದಕ್ಕಾಗಿ ಈ ರಾಷ್ಟ್ರಗಳು ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತವೆ. ಚಿನ್ನವನ್ನು ನಿಕ್ಷೇಪವಾಗಿ ಬಳಸುವ ಇತರ ರಾಷ್ಘ್ರಗಳೆಂದರೆ ಫ್ರಾನ್ಸ್ ಜರ್ಮನಿ, ಇಟಲಿ, ಗ್ರೀಸ್ ಮತ್ತು ಪೋರ್ಚುಗಲ್. ಈ ರಾಷ್ಟ್ರಗಳು ತಮ್ಮ ನಿಕ್ಷೇಪಕ್ಕೆ ಅಗತ್ಯವಿರುವ ಪ್ರಮಾಣವನ್ನು ಕೊಳ್ಳುತ್ತಾ ಮಾರುತ್ತಾ ಇರುತ್ತವೆ. ಯಾವಾಗ ಇವುಗಳ ಕೊಳ್ಳುವಿಕೆ ಹೆಚ್ಚುತ್ತದೆಯೋ ಆಗ ಬೇಡಿಕೆ ಹೆಚ್ಚಿ ಚಿನ್ನದ ಬೆಲೆ ಏರುತ್ತದೆ. ಯಾವಾಗ ನಿಕ್ಷೇಪ ಹೆಚ್ಚಾಯಿತು ಎನ್ನಿಸಿ ಮಾರಾಟ ಮಾಡಲು ತೊಡಗುತ್ತವೆಯೋ ಆಗ ಚಿನ್ನದ ಬೆಲೆ ಇಳಿಯುತ್ತದೆ. ಆಯಾ ರಾಷ್ಟ್ರಗಳ ಕರೆನ್ಸಿ ಒದಗಿಸುವಿಕೆಯ ಸಾಮರ್ಥ್ಯ ಹೆಚ್ಚಿ ಚಿನ್ನದ ಅಗತ್ಯತೆ ಬಿದ್ದಾಗ ಚಿನ್ನ ಕೊಳ್ಳುತ್ತವೆ ಹಾಗೂ ಕಡಿಮೆಯಾದಾಗ ಚಿನ್ನವನ್ನು ಮಾರಾಟ ಮಾಡುತ್ತವೆ. ಇದು ಚಿನ್ನದ ಬೆಲೆಯನ್ನು ನಿರ್ಧರಿಸುತ್ತದೆ.

8. ಆಭರಣ ಮತ್ತು ಕೈಗಾರಿಕೆಗಳು

8. ಆಭರಣ ಮತ್ತು ಕೈಗಾರಿಕೆಗಳು

ಚಿನ್ನವನ್ನು ಕೇವಲ ಆಭರಣಗಳಿಗಾಗಿ ಮಾತ್ರ ಉಪಯೋಗಿಸಲಾಗುತ್ತದೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಚಿನ್ನ ಕೈಗಾರಿಕೆಗೂ ಅಗತ್ಯವಿರುವ ಲೋಹವಾಗಿದ್ದು ವಿಶೇಷವಾಗಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ. ಉದಾಹರಣೆಗೆ ಗಡಿಯಾರ, ಮೊಬೈಲ್, ಜಿಪಿಎಸ್ ಉಪಕರಣ, ಕಂಪ್ಯೂಟರುಗಳು, ವೈದ್ಯಕೀಯ ಉಪಕರಣಗಳು ಇತ್ಯಾದಿ. ವಿಶ್ವದಲ್ಲಿ ಆಭರಣಗಳ ರೂಪದಲ್ಲಿ ಭಾರತ, ಚೀನಾ ಮತ್ತು ಅಮೇರಿಕಾಗಳಲ್ಲಿ ಮಾತ್ರವೇ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಒಟ್ಟು ಉತ್ಪನ್ನದ ಅರ್ಧದಷ್ಟು ಬಳಕೆಯಾಗುತ್ತದೆ. ಭಾರತದ ಕೆಲವು ಕಡೆಗಳಲ್ಲಿ ಇಂದಿಗೂ ಹಣದ ಬದಲಿಗೆ ಚಿನ್ನವನ್ನೇ ವಹಿವಾಟಿಗಾಗಿ ಉಪಯೋಗಿಸಲಾಗುತ್ತದೆ. ಉಡುಗೊರೆಯಾಗಿ ನೀಡಲೂ ಹಣದ ಬದಲು ಚಿನ್ನ ಅಥವಾ ಚಿನ್ನದ ಆಭರಣಗಳನ್ನೇ ನೀಡಲಾಗುತ್ತದೆ. ಚೀನಾದಲ್ಲಿಯೂ ಚಿನ್ನವನ್ನು ಹೊಂದಿರುವುದು ಪ್ರತಿಷ್ಠೆ ಹಾಗೂ ಐಶ್ವರ್ಯವಂತಿಕೆಯ ಪ್ರತೀಕವಾಗಿದೆ. ಒಟ್ಟಾರೆ ಉತ್ಪನ್ನದ ಶೇ. 12ರಷ್ಟು ಚಿನ್ನ ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಆಭರಣಗಳನ್ನು ಕೆಲವು ಸಂದರ್ಭಗಳಲ್ಲಿ ಅತಿ ಹೆಚ್ಚಾಗಿ ಕೊಳ್ಳುವ ಕಾರಣ ಈ ಬೇಡಿಕೆ ಹೆಚ್ಚುತ್ತಾ ಬೆಲೆಯೂ ಏರುತ್ತದೆ.

9. ಚಿನ್ನದ ಉತ್ಪಾದನೆ

9. ಚಿನ್ನದ ಉತ್ಪಾದನೆ

ಇಡಿಯ ವಿಶ್ವಕ್ಕೆ ಅಗತ್ಯವಿರುವ 165,000 ಮೆಟ್ರಿಕ್ ಟನ್ನುಗಳಿಗೆ ಉತ್ತರವಾಗಿ ಪ್ರತಿವರ್ಷ ಕೇವಲ 2,500 ಮೆಟ್ರಿಕ್ ಟನ್ನುಗಳಷ್ಟು ಚಿನ್ನವನ್ನು ಮಾತ್ರವೇ ಉತ್ಪಾದಿಸಲಾಗುತ್ತಿದೆ. ಈ ಪ್ರಮಾಣವನ್ನು ಊಹಿಸಿಕೊಳ್ಳಬೇಕಾದರೆ ಸುಮಾರು ಮೂರುವರೆ ಒಲಿಂಪಿಕ್ ಈಜುಕೊಳಗಳನ್ನು ಕಲ್ಪಿಸಿಕೊಳ್ಳಬಹುದು.
ವಿಶ್ವದ ಅಗತ್ಯತೆ ಅನುಗುಣವಾಗಿ ಕೇವಲ ಹದಿನಾರು ಚದರಡಿ ಗಾತ್ರದ ಕೋಣೆಯಷ್ಟು ಚಿನ್ನವನ್ನು ಮಾತ್ರವೇ ಉತ್ಪಾದಿಸಲು ಸಾಧ್ಯವಾಗುತ್ತಿದೆ. ಚಿನ್ನಕ್ಕೇಕೆ ಇಷ್ಟು ಬೆಲೆ ಎಂದರೆ ಇದರ ನಿರ್ಮಾಣಕ್ಕಾಗಿ ಆಗುವ ಖರ್ಚು ಅತಿ ದೊಡ್ಡದಾಗಿರುವುದು. ಅತಿ ಹೆಚ್ಚು ಸಾಂದ್ರತೆ ಇರುವ ಗಣಿಯ ಮಣ್ಣಿನಿಂದ ಚಿನ್ನವನ್ನು ಸೋಸಿ ತೆಗೆದರೆ ಒಂದು ಟನ್ ಅದಿರಿನಲ್ಲಿ ಸಿಗುವುದು ಗರಿಷ್ಠ 5.3 ಗ್ರಾಂ ಮಾತ್ರ. ಹಾಗಾಗಿ ಹೆಚ್ಚು ಚಿನ್ನವನ್ನು ಪಡೆಯಬೇಕಾದರೆ ಹೆಚ್ಚಿನ ಪ್ರಮಾಣದ ಅದಿರನ್ನು ಸೋಸುವುದು ಅನಿವಾರ್ಯ. ಹಾಗಾಗಿ ಗಣಿ ಒಡೆಯರು ತಮ್ಮ ನಿರ್ಮಾಣದ ಖರ್ಚನ್ನು ಸರಿದೂಗಿಸಲು ಚಿನ್ನದ ಉತ್ಪನ್ನಗಳನ್ನು ಮಾರಬೇಕಾಗುತ್ತದೆ. ಆದರೆ ಕೆಲವೊಮ್ಮೆ ಹೆಚ್ಚಿನ ಉತ್ಪತ್ತಿಯಾಗಿದ್ದಾಗ ಇದನ್ನು ಸಂಗ್ರಹಿಸಿಟ್ಟು ಬೆಲೆ ಬಂದಾಗ ಮಾರಲಾಗುತ್ತದೆ. ಹಾಗಾಗಿ ಇವರ ಸಂಗ್ರಹದಲ್ಲಿ ನಿನ್ನೆಯಷ್ಟೇ ನಿರ್ಮಿಸಿದ ಚಿನ್ನದ ನಾಣ್ಯ ಇರಬಹುದು ಅಥವಾ ನೂರಾರು ವರ್ಷ ಹಿಂದಿನ ನಾಣ್ಯಗಳೂ ಇರಬಹುದು.

10. ಬೇಡಿಕೆ vs ಪೂರೈಕೆ

10. ಬೇಡಿಕೆ vs ಪೂರೈಕೆ

ಮನುಷ್ಯನನ್ನು ಚಿನ್ನದ ಆಕರ್ಷಣೆ ಕಾಡಿದ್ದು ಇಂದು ನಿನ್ನೆಯಿಂದಲ್ಲ. ಪ್ರಾಕ್ತನಶಾಸ್ತ್ರಜ್ಞರ ಪ್ರಕಾರ ಕನಿಷ್ಟ 5,000 ವರ್ಷಗಳಿಂದಲೂ ಚಿನ್ನಕ್ಕಾಗಿ ಉತ್ಖತನ ನಡೆಸಲಾಗುತ್ತಾ ಬರಲಾಗಿದೆ. ಬೆಲೆ ಎಷ್ಟೇ ಇದ್ದರೂ ಚಿನ್ನಕ್ಕೆಂದೂ ಬೇಡಿಕೆ ಕಡಿಮೆಯಾಗದು. ಆದ್ದರಿಂದ ಚಿನ್ನವನ್ನು ಖರೀದಿಸ ಬಯಸುವವರು ಕೆಲವಾರು ಪರಿಸ್ಥಿತಿಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಉತ್ಪಾದನಾ ಖರ್ಚು, ಹಣದ ಒದಗಿಸುವಿಕೆ, ಹಣಕಾಸಿನ ವ್ಯವಸ್ಥೆ ಸುಗಮವಾಗಿರುವುದು ಅಥವಾ ಸುಗಮವಾಗಿರದೇ ಇರುವುದು, ಜಾಗತಿಕ ಮಟ್ಟದಲ್ಲಿ ಸ್ಥಿರತೆ, ಚಿನ್ನದ ಆಭರಣಗಳಿಗೆ ಮತ್ತು ಕೈಗಾರಿಕೆಗಳಿಗೆ ಹೆಚ್ಚುವ ಬೇಡಿಕೆ ಹಾಗೂ ಕೇಂದ್ರೀಯ ಬ್ಯಾಂಕುಗಳ ನಿಯಮದಲ್ಲಿ ಬದಲಾವಣೆ ಹಾಗೂ ನೂತನ ನೀತಿಗಳು ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಚಿನ್ನ ಒಂದು ಪರಿಮಿತಿಯಲ್ಲಿ ಉತ್ಪಾದಿಸಲ್ಪಡುವ ಉತ್ಪನ್ನವಾಗಿದ್ದು ಜಾಗತಿಕ ಪರಿಸ್ಥಿತಿಯ ಕಾರಣ ಚಿನ್ನ ಆಕರ್ಷಕವಾಗಿ ಕಂಡರೆ ಇದಕ್ಕೆ ಬೇಡಿಕೆ ಕುದುರುತ್ತದೆ. ಆದರೆ ಚಿನ್ನದ ಬೆಲೆಯನ್ನು ದೀರ್ಘಾವಧಿಯಲ್ಲಿ ಅವಲೋಕಿಸಿದಾಗ ಏರುವಿಕೆ ಮತ್ತು ಇಳಿಕೆಯ ನಡುವಣ ಒಂದು ಬೆಲೆಯನ್ನು ಸ್ಥಿರವಾಗಿ ಕಾಯ್ದುಕೊಂಡು ಬರುತ್ತಿದೆ. ಒಂದು ವೇಳೆ ನಿಮ್ಮ ಚಿನ್ನವನ್ನು ಯಾವುದೇ ಮಾರುಕಟ್ಟೆಯ ಆರ್ಥಿಕ ಸ್ಥಿತಿಯಲ್ಲಿ ಸುರಕ್ಷತೆಯಲ್ಲಿರಿಸಲು ಬಯಸಿದರೆ ನೀವು ಎಸ್ಬಿಸಿ(SBC) ಗೋಲ್ಡ್ ಸಂಸ್ಥೆಯನ್ನು ಸಂಪರ್ಕಿಸಬಹುದು.

English summary

How These 10 Factors Regularly Influence Gold Prices

Gold is used as a standard of value for currencies all over the world. The price of gold gets stated as a currency value, often in U.S. dollars, and the price of gold can fluctuate with market conditions. What influences the price of gold in the current marketplace? Below are ten significant influences on gol
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X