For Quick Alerts
ALLOW NOTIFICATIONS  
For Daily Alerts

ಪ್ರಧಾನಮಂತ್ರಿ ಅವಾಸ ಯೋಜನೆ ಅಡಿ 1.17 ಲಕ್ಷ ಮನೆ ನಿರ್ಮಾಣ

ಪ್ರಧಾನಮಂತ್ರಿ ಅವಾಸ್ ಯೋಜನೆ(ನಗರ) ಅಡಿಯಲ್ಲಿ ದೇಶದ ಆರು ರಾಜ್ಯಗಳಲ್ಲಿ ಒಟ್ಟು ರೂ. 5,773 ಕೋಟಿ ವೆಚ್ಚದಲ್ಲಿ 1,17,814 ಮನೆಗಳ ನಿರ್ಮಾಣಕ್ಕೆ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ ಅನುಮೋದನೆ ನೀಡಿದೆ.

By Siddu
|

ಪ್ರಧಾನಮಂತ್ರಿ ಅವಾಸ್ ಯೋಜನೆ(ನಗರ) ಅಡಿಯಲ್ಲಿ ದೇಶದ ಆರು ರಾಜ್ಯಗಳಲ್ಲಿ ಒಟ್ಟು ರೂ. 5,773 ಕೋಟಿ ವೆಚ್ಚದಲ್ಲಿ 1,17,814 ಮನೆಗಳ ನಿರ್ಮಾಣಕ್ಕೆ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ ಅನುಮೋದನೆ ನೀಡಿದೆ.

 

ಈ ಯೋಜನೆಯಲ್ಲಿ ನಗರದ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಪಿಎಂಎವೈ ಯೋಜನೆ ಉದ್ದೇಶವಾಗಿದೆ. ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

ಕರ್ನಾಟಕದಲ್ಲಿ ಪಿಎಂಎವೈ(ನಗರ) ಅಡಿಯಲ್ಲಿ ಒಟ್ಟು 146,466 ಮನೆಗಳು ಮಂಜೂರಾಗಿದ್ದು, ಅದರ ವಿವರ ಇಲ್ಲಿದೆ ನೋಡಿ...

ಕೇಂದ್ರದ ನೆರವು

ಕೇಂದ್ರದ ನೆರವು

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಗರದಲ್ಲಿರುವ ಬಡವರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ರೂ. 1816 ಕೋಟಿ ನೆರವು ನೀಡಲಿದೆ.

ಮಂಜೂರಾದ ಮನೆ ಮತ್ತು ಒಟ್ಟು ಹೂಡಿಕೆ

ಮಂಜೂರಾದ ಮನೆ ಮತ್ತು ಒಟ್ಟು ಹೂಡಿಕೆ

ಪ್ರಧಾನಮಂತ್ರಿ ಅವಾಸ್ ಯೋಜನೆ(ನಗರ) ಅಡಿಯಲ್ಲಿ ಇಲ್ಲಿಯವರೆಗೆ ಮಂಜೂರು ಮಾಡಲಾಗಿರುವ ಕೈಗೆಟಕುವ ಮನೆಗಳ ಒಟ್ಟು ಸಂಖ್ಯೆ 1,760,507 ಕ್ಕೆ ಏರಿಕೆಯಾಗಿದೆ. ಸರ್ಕಾರದ ವರದಿ ಪ್ರಕಾರ ಒಟ್ಟು ರೂ. 96,018 ಹೂಡಿಕೆ ಮಾಡಿದ್ದು, ಇದರಲ್ಲಿ ರೂ. 27,714 ಕೋಟಿ ಕೇಂದ್ರ ನೆರವು ನೀಡಿದೆ.

ಕರ್ನಾಟಕದಲ್ಲಿ ಎಷ್ಟು ಮನೆ ಮತ್ತು ಹೂಡಿಕೆ?
 

ಕರ್ನಾಟಕದಲ್ಲಿ ಎಷ್ಟು ಮನೆ ಮತ್ತು ಹೂಡಿಕೆ?

ಕರ್ನಾಟಕದ 234 ನಗರ ಮತ್ತು ಪಟ್ಟಣಗಳಲ್ಲಿ 31,424 ಹೊಸ ಮನೆಗಳನ್ನು ಮಂಜೂರು ಮಾಡಲಾಗಿದೆ. ಕೇಂದ್ರದ ರೂ. 518 ಕೋಟಿ ನೆರವಿನೊಂದಿಗೆ ಒಟ್ಟು ರೂ. 1222 ಕೋಟಿ ಮೊತ್ತ ಈ ಯೋಜನೆಗೆ ವೆಚ್ಚ ಮಾಡಲಾಗುತ್ತಿದೆ.

ಫಲಾನುಭವಿ ನೇತೃತ್ವ(BLC)ಅಡಿ ಎಷ್ಟು?

ಫಲಾನುಭವಿ ನೇತೃತ್ವ(BLC)ಅಡಿ ಎಷ್ಟು?

ರಾಜ್ಯದಲ್ಲಿ ಸುಮಾರು 30,247 ಮನೆಗಳ ನಿರ್ಮಾಣಕ್ಕೆ BLC(beneficiary led construction) ಘಟಕದ ಅಡಿಯಲ್ಲಿ ಅನುಮತಿ ದೊರೆತಿದೆ. ಜತೆಗೆ ಪಾಲುದಾರಿಕೆ ಘಟಕದ ಅಡಿಯಲ್ಲಿ 1,177 ಮನೆಗಳ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಪಿಎಂಎವೈ(ನಗರ) ಅಡಿಯಲ್ಲಿ ಒಟ್ಟು 146,466 ಮನೆಗಳು ಕರ್ನಾಟಕದಲ್ಲಿ ಮಂಜೂರಾಗಿವೆ.

ಕೇರಳದಲ್ಲಿ ಎಷ್ಟು?

ಕೇರಳದಲ್ಲಿ ಎಷ್ಟು?

ಒಟ್ಟು ರೂ. 344 ಕೋಟಿ ವೆಚ್ಚದಲ್ಲಿ ಕೇರಳದ 19 ನಗರಗಳಲ್ಲಿ 11,480 ಹೊಸ ಮನೆಗಳನ್ನು ಮಂಜೂರು ಮಾಡಲಾಗಿದ್ದು, BLC(beneficiary led construction) ಘಟಕದ ಅಡಿಯಲ್ಲಿ ನಿರ್ಮಿಸಲಾಗುವುದು. ಇದರಲ್ಲಿ ರೂ. 170 ಕೋಟಿ ಕೇಂದ್ರ ಸರ್ಕಾರ ನೆರವಿಗೆ ಅನುಮೋದನೆ ನೀಡಿದೆ. ಪಿಎಂಎವೈ(ನಗರ) ಅಡಿಯಲ್ಲಿ ಒಟ್ಟು 28,236 ಮನೆಗಳನ್ನು ಮಂಜೂರು ಮಾಡಲಾಗಿದೆ.

ಮಧ್ಯಪ್ರದೇಶಕ್ಕೆ ಎಷ್ಟು?

ಮಧ್ಯಪ್ರದೇಶಕ್ಕೆ ಎಷ್ಟು?

ಮಧ್ಯಪ್ರದೇಶದ 43 ನಗರಗಳಲ್ಲಿ ಒಟ್ಟು ರೂ. 1713 ಕೋಟಿ ವೆಚ್ಚದಲ್ಲಿ 27,475 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಕೇಂದ್ರದ 412 ಕೋಟಿ ನೆರವು ಸೇರಿದೆ. ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ ಒಟ್ಟು 2,09,036 ಮನೆಗಳನ್ನು ಮಂಜೂರು ಮಾಡಿದಂತಾಗಿದೆ.

ಬಿಹಾರ, ಜಾರ್ಖಂಡ್

ಬಿಹಾರ, ಜಾರ್ಖಂಡ್

ಬಿಹಾರ ರಾಜ್ಯದ 31 ನಗರಗಳಲ್ಲಿ ಒಟ್ಟು 1208 ಕೋಟಿ ವೆಚ್ಚದಲ್ಲಿ 25221 ಮನೆಗಳ ನಿರ್ಮಾಣಕ್ಕೆ ಅನಮೋದನೆ ದೊರಕಿದೆ. ಅದೇ ರೀತಿ ಜಾರ್ಖಂಡ್ ನ 36 ನಗರಗಳಲ್ಲಿ ರೂ. 728 ಕೋಟಿ ವೆಚ್ಚದಲ್ಲಿ ಫಲಾನುಭವಿ ನೇತೃತ್ವದಲ್ಲಿ(BLC) ಒಟ್ಟು 20,099 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ರೂ. 306 ಕೋಟಿ ಕೇಂದ್ರದ ನೆರವು ಕೂಡ ಸೇರಿದೆ.

ಎಂ. ವೆಂಕಯ್ಯನಾಯ್ಡು ಹೇಳಿಕೆ

ಎಂ. ವೆಂಕಯ್ಯನಾಯ್ಡು ಹೇಳಿಕೆ

ಪಿಎಂಎವೈ(ನಗರ) ಅಡಿಯಲ್ಲಿ ಮನೆಗಳ ನಿರ್ಮಾಣ ಕಾರ್ಯದ ವೇಗ ಹೆಚ್ಚುತ್ತಿದ್ದು, ಸಚಿವಾಲಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ತ್ವರಿತಗತಿಯಲ್ಲಿ ಮನೆ ನಿರ್ಮಾಣ ಕಾರ್ಯಗಳನ್ನು ನಡೆಸುವ ಬಗ್ಗೆ ಖಚಿತಪಡಿಸಬೇಕೆಂದು ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವ ಎಂ. ವೆಂಕಯ್ಯನಾಯ್ಡು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2022ರಲ್ಲಿ ಎಲ್ಲರಿಗೂ ಮನೆ

2022ರಲ್ಲಿ ಎಲ್ಲರಿಗೂ ಮನೆ

ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು. ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ಕೊಟ್ಟು ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ.

English summary

Pradhan Mantri Awas Yojana: 1.17 lakh more houses sanctioned for urban poor

The Ministry of Housing and Urban Poverty Alleviation today approved construction of nearly one lakh 18 thousand affordable houses for the benefit of urban poor in six States at a total cost of Rs.5,773 crore under the Prime Minister’s Awas Yojana (Urban).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X