For Quick Alerts
ALLOW NOTIFICATIONS  
For Daily Alerts

ಇಪಿಎಫ್ (EPF) ವಿತ್ ಡ್ರಾ ಯಾವಾಗ ಮಾಡಬಹುದು?

ಕೆಲ ಪ್ರಮುಖ ಉದ್ದೇಶಗಳಿಗಾಗಿ ಇಪಿಎಫ್ ಹೂಡಿಕೆದಾರರು ತಮ್ಮ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಮೊತ್ತ ಹಿಂಪಡೆಯುವಿಕೆ ಖಾತೆದಾರರ ತಿಂಗಳ ಸಂಬಳ ಅಥವಾ ಕೊಡುಗೆ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.

|

ನೌಕರರ ಭವಿಷ್ಯ ನಿಧಿ(ಇಪಿಎಫ್) ಖಾತೆ ನಿವೃತ್ತಿ ನಂತರದ ಉಳಿತಾಯ ಯೋಜನೆಯಾಗಿದ್ದು, ಸರ್ಕಾರದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ಮೂಲಕ ನಿರ್ವಹಿಸಲ್ಪಡುತ್ತದೆ. ಉದ್ಯೋಗಿಗಳು ಸಲ್ಪ ಪ್ರಮಾಣದ ಮೊತ್ತವನ್ನು ಪಿಎಫ್ ಖಾತೆಯಲ್ಲಿ ಇಡುವುದು ಕಡ್ಡಾಯವಾಗಿದೆ. ಈ ಮೊತ್ತವನ್ನು ಉದ್ಯೋಗಿಗಳಿಗೆ ನಿವೃತ್ತಿಯಾದ ನಂತರ ನೀಡಲಾಗುತ್ತದೆ.

ಕೆಲ ಪ್ರಮುಖ ಉದ್ದೇಶಗಳಿಗಾಗಿ ಇಪಿಎಫ್ ಹೂಡಿಕೆದಾರರು ತಮ್ಮ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಮೊತ್ತ ಹಿಂಪಡೆಯುವಿಕೆ ಖಾತೆದಾರರ ತಿಂಗಳ ಸಂಬಳ ಅಥವಾ ಕೊಡುಗೆ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಪಿಎಫ್(PF) ಖಾತೆ ಯಾಕೆ ಬೇಕು?

ಇಪಿಎಫ್ ಖಾತೆಯಿಂದ ಪ್ರಮುಖ 8 ಕಾರಣಗಳಿಗಾಗಿ ಹಣ ವಿತ್ ಡ್ರಾ ಮಾಡಬಹುದು. ಅದರ ಸಂಕ್ಷೀಪ್ತ ನೋಟ ಇಲ್ಲಿದೆ ನೋಡಿ...

1. ಮದುವೆ

1. ಮದುವೆ

ಉದ್ಯೋಗಿಗಳು ಪಿಎಫ್ ಖಾತೆಯಿಂದ ಅವನ/ಅವಳ, ಮಕ್ಕಳ, ಸಹೋದರರ ಮದುವೆ ಉದ್ದೇಶಕ್ಕಾಗಿ ಹಣ ವಿತ್ ಡ್ರಾ ಮಾಡಬಹುದು. ಹಣ ವಿತ್ ಡ್ರಾ ಮಾಡಬಯಸುವವರು ಕನಿಷ್ಟ ಏಳು ವರ್ಷಗಳ ಸೇವಾವಧಿಯನ್ನು ಪೂರೈಸಬೇಕಿದ್ದು, ಶೇ. 50ರಷ್ಟು ಮೊತ್ತವನ್ನು ಹಿಂಪಡೆಯಬಹುದು.

2. ಖರೀದಿ/ಮನೆ ನಿರ್ಮಾಣ

2. ಖರೀದಿ/ಮನೆ ನಿರ್ಮಾಣ

ಸಂಬಳ ಪಡೆಯುವ ವ್ಯಕ್ತಿಗಳು ಮನೆ ನಿರ್ಮಾಣ ಅಥವಾ ಪ್ಲಾಟ್ ಖರೀದಿಗಾಗಿ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹದು. ಆಸ್ತಿ ಖರೀದಿಸುವಾಗ ಅದು ಅವನ/ಅವಳ, ಸಂಗಾತಿ ಅಥವಾ ಜಂಟಿಯಾಗಿ ನೋಂದಣಿಯಾಗಿರಬೇಕು. ಖಾತೆದಾರರು ಕನಿಷ್ಟ ಐದು ವರ್ಷ ಸೇವಾವಧಿ ಹೊಂದಿರಬೇಕು. ಖಾತೆದಾರ ತನ್ನ ಸೇವಾವಧಿಯಲ್ಲಿ ಕೆವಲ ಒಂದು ಬಾರಿ ಮಾತ್ರ ಆಸ್ತಿ ಖರೀದಿ ಅಥವಾ ಮನೆ ನಿರ್ಮಾಣಕ್ಕಾಗಿ ಹಣ ವಿತ್ ಡ್ರಾ ಮಾಡಬಹುದು.

3. ಮನೆ ರಿಪೇರಿ/ಬದಲಾವಣೆ

3. ಮನೆ ರಿಪೇರಿ/ಬದಲಾವಣೆ

ಮನೆ ದುರಸ್ತಿ, ನವೀಕರಣ ಅಥವಾ ಬದಲಾವಣೆಗಾಗಿ ಪಿಎಫ್ ಖಾತೆಯಿಂದ ಮೊತ್ತ ಹಿಂಪಡೆಯಬಹುದು. ಇದಕ್ಕಾಗಿ ಮನೆ ಅವನ/ಅವಳ, ಸಂಗಾತಿ ಅಥವಾ ಜಂಟಿಯಾಗಿ ನೋಂದಣಿ ಆಗಿರಬೇಕು. ಖಾತೆದಾರರು ಕನಿಷ್ಟ ಐದು ವರ್ಷ ಸೇವಾವಧಿ ಪೂರೈಸಿರಬೇಕಾಗುತ್ತದೆ.

4. ಮನೆ ಸಾಲ ಮರುಪಾವತಿ

4. ಮನೆ ಸಾಲ ಮರುಪಾವತಿ

ಈಗಾಗಲೇ ಅಸ್ತಿತ್ವದಲ್ಲಿರುವ ಮನೆಯ ಮೇಲಿನ ಸಾಲವನ್ನು ಮರುಪಾವತಿಸಲು ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಇದಕ್ಕಾಗಿ ಮನೆ ಅವನ/ಅವಳ, ಸಂಗಾತಿ ಅಥವಾ ಜಂಟಿಯಾಗಿ ನೋಂದಣಿ ಆಗಿರಬೇಕು. ಖಾತೆದಾರ ಮನೆ ಸಾಲ ಮರುಪಾವತಿಗಾಗಿ ಹಣ ವಿತ್ ಡ್ರಾ ಮಾಡಲು ಬಯಸಿದಲ್ಲಿ ಕನಿಷ್ಟ ಹತ್ತು ವರ್ಷ ಸೇವಾವಧಿ ಪೂರೈಸಿರಬೇಕಾಗುತ್ತದೆ.

5. ವೈದ್ಯಕೀಯ ಚಿಕಿತ್ಸೆ

5. ವೈದ್ಯಕೀಯ ಚಿಕಿತ್ಸೆ

ಇಪಿಎಫ್ ಖಾತೆದಾರ ತನ್ನ, ಪಾಲಕರ, ಸಂಗಾತಿ ಮತ್ತು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಹಣ ವಿತ್ ಡ್ರಾ ಮಾಡಲು ಅವಕಾಶವಿರುತ್ತದೆ. ಒಟ್ಟು ಕಾರ್ಪಸ್ ಆಧಾರದ ಮೇಲೆ ವೈದ್ಯಕೀಯ ಚಿಕಿತ್ಸೆಗಾಗಿ ಹಣ ಪಡೆಯಬಹುದು.

6. ವಿವಿಧ ಕಾರಣಗಳಿಗಾಗಿ

6. ವಿವಿಧ ಕಾರಣಗಳಿಗಾಗಿ

ಮೇಲೆ ಉಲ್ಲೇಖಿಸಿದ ಕಾರಣಗಳನ್ನು ಹೊರತುಪಡಿಸಿ ಇನ್ನಿತರ ಅನೇಕ ಕಾರಣಗಳಿಗಾಗಿ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಯಾವುದೇ ದೈಹಿಕ ಅಥವಾ ಮಾನಸಿಕ ಅಸಮರ್ಥತೆ, ಉತ್ತಮ ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಅಥವಾ ವಿದೇಶದಲ್ಲಿ ನೆಲೆಸುವುದಕ್ಕಾಗಿ ಹಣ ಹಿಂಪಡೆಯಬಹುದು.

7. ಮಕ್ಕಳ ಶಿಕ್ಷಣ

7. ಮಕ್ಕಳ ಶಿಕ್ಷಣ

ಖಾತೆದಾರರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಇದಕ್ಕೆ ಕನಿಷ್ಟ ಏಳು ವರ್ಷ ಸೇವೆ ಸಲ್ಲಿಸಿರಬೇಕು. ಮಕ್ಕಳ ವಿದ್ಯಾಬ್ಯಾಸಕ್ಕೆ ಸಂಬಂಧಿಸಿದ ಕೋರ್ಸ್ ಪ್ರಮಾಣಪತ್ರ, ಸಂಸ್ಥೆಯಿಂದ ಅಂದಾಜು ವೆಚ್ಚ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ.

8. ನಿವೃತ್ತಿ

8. ನಿವೃತ್ತಿ

ಇಪಿಎಫ್ ಖಾತೆಯಿಂದ ಶೇ. 90ರವರೆಗೆ ಕಾರ್ಪಸ್ ವಿತ್ ಡ್ರಾ ಮಾಡಲು ಖಾತೆದಾರ 54 ವರ್ಷಗಳನ್ನು ಪೂರೈಸಿರಬೇಕಾಗುತ್ತದೆ.

Read more about: ppf epf interest rates money
English summary

When Can You Withdraw Your EPF?

The Employee Provident Fund or EPF launched by EPFO (Employee Provident Fund Organization), is a scheme that helps employees to save a small fraction of their salary every month, which can be saved for the retirement life. Investments made under EPF are tax-free.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X