For Quick Alerts
ALLOW NOTIFICATIONS  
For Daily Alerts

ಪಿಎಫ್(PF) ಮೇಲೆ ಪರಿಣಾಮ ಬೀರುವ 7 ಹೊಸ ನಿಯಮಗಳು

ಪ್ರಾವಿಡೆಂಡ್ ಫಂಡ್ ಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಲ್ಲಿ ಹಲವಾರು ಹೊಸ ನಿಯಮಗಳು/ಬೆಳವಣಿಗೆಗಳು ಅಭಿವೃದ್ಧಿ ಕಂಡಿವೆ. ಇಪಿಎಫ್ಒ(EPFO) ಸಂಸ್ಥೆ ಭವಿಷ್ಯ ನಿಧಿಯನ್ನು ನಿರ್ವಹಿಸುತ್ತಿದ್ದು, ಅದು ಅನೇಕ ಹೊಸ ನಿಯಮಗಳಿಗೆ ನಾಂದಿ ಹಾಡಿದೆ.

By Siddu
|

ಪ್ರಾವಿಡೆಂಡ್ ಫಂಡ್ ಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಲ್ಲಿ ಹಲವಾರು ಹೊಸ ನಿಯಮಗಳು/ಬೆಳವಣಿಗೆಗಳು ಅಭಿವೃದ್ಧಿ ಕಂಡಿವೆ. ಇಪಿಎಫ್ಒ(EPFO) ಸಂಸ್ಥೆ ಭವಿಷ್ಯ ನಿಧಿಯನ್ನು ನಿರ್ವಹಿಸುತ್ತಿದ್ದು, ಅದು ಅನೇಕ ಹೊಸ ನಿಯಮಗಳಿಗೆ ನಾಂದಿ ಹಾಡಿದೆ.(ಪಿಎಫ್)

1. ಆಧಾರ್ ಅವಧಿ ಮುಂದೂಡಿಕೆ

1. ಆಧಾರ್ ಅವಧಿ ಮುಂದೂಡಿಕೆ

ಆಧಾರ್ ಸಂಖ್ಯೆ ಸಲ್ಲಿಸಲು ಈ ಹಿಂದೆ ಇದ್ದ ದಿನಾಂಕವನ್ನು ಸಡಿಲಿಸಿ ಏಪ್ರಿಲ್ 30, 2017ರ ವರೆಗೆ ಕಾಲಾವಕಾಶವನ್ನು ನೀಡಿದೆ. ನಾಲ್ಕು ಕೋಟಿ ಪಿಎಫ್ ಚಂದಾದಾರರಿದ್ದು, ಏಪ್ರಿಲ್ 30ರ ಒಳಗಾಗಿ ಆಧಾರ್ ನಂಬರ್ ಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಬೇಕು. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

2. ಡಿಜಿಟಲ್ ಲೈಫ್ ಸರ್ಟಿಫಿಕೇಟ್

2. ಡಿಜಿಟಲ್ ಲೈಫ್ ಸರ್ಟಿಫಿಕೇಟ್

ಇಪಿಎಫ್ಒ ಸಂಸ್ಥೆ ತನ್ನ 50 ಲಕ್ಷ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಏಪ್ರಿಲ್ 30, 2017ರ ವರೆಗೆ ಕಾಲಾವಧಿ ವಿಸ್ತರಿಸಿದೆ. ಪಿಂಚಣಿ ಖಾತೆಗಳನ್ನು ಏಪ್ರಿಲ್ 30ರ ಒಳಗಾಗಿ ಆಧಾರ್ ನೊಂದಿಗೆ ಲಿಂಕ್ ಮಾಡಬೇಕು.

3. ಪಿಎಫ್ ಬಡ್ಡಿದರ
 

3. ಪಿಎಫ್ ಬಡ್ಡಿದರ

2016-17 ಡಿಸೆಂಬರ್ ಮೀಟಿಂಗ್ ನಲ್ಲಿ ನಿರ್ಧಾರವಾದಂತೆ ನಾಲ್ಕು ಕೋಟಿ ಪಿಎಫ್ ಚಂದಾದಾರರು ಶೇ. 8.65ರಷ್ಟು ಬಡ್ಡಿದರವನ್ನು ಪಡೆಯಲಿದ್ದಾರೆ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ. ಹಣಕಾಸು ಸಚಿವಾಲಯ ಶೇ. 8.65ರಷ್ಟು ಬಡ್ಡಿದರ ನೀಡಲು ಒಪ್ಪಿಗೆ ಸೂಚಿಸಿದೆ.

4. ಲೋಯಲ್ಟಿ ಕಮ್ ಲೈಫ್ ಬೆನಿಫಿಟ್

4. ಲೋಯಲ್ಟಿ ಕಮ್ ಲೈಫ್ ಬೆನಿಫಿಟ್

20 ಅಥವಾ ಅದಕ್ಕಿಂತ ಹೆಚ್ಚು ವರ್ಷ ಕೊಡುಗೆ ನೀಡಿದಲ್ಲಿ ನಿವೃತ್ತಿ ಸಮಯದಲ್ಲಿ ರೂ. 50,000ವರೆಗೆ ಲೋಯಲ್ಟಿ ಕಮ್ ಲೈಫ್ ಬೆನಿಫಿಟ್ ನೀಡುವುದಾಗಿ ಇಪಿಎಫ್ಒ ಪ್ರಸ್ತಾಪಿಸಿದೆ. ಶಾಶ್ವತ ಅಂಗವೈಕಲ್ಯ ಹೊಂದಿದವರು 20 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ್ದರೂ ಕೂಡ ಈ ಸೌಲಭ್ಯ ನೀಡಲಾಗುವುದು. ಶಾಶ್ವತ ಅಂಗವೈಕಲ್ಯ ಎಂದು ಸರ್ಕಾರ ಅನುಮೋದನೆ ಮಾಡಿದ ನಂತರವಷ್ಟೇ ಈ ಸೌಲಭ್ಯ ಸಿಗಲಿದೆ.

5. 2.5 ಲಕ್ಷ ಪರಿಹಾರ

5. 2.5 ಲಕ್ಷ ಪರಿಹಾರ

ಚಂದಾದಾರರ ಸಾವಿನ ಸಂದರ್ಭದಲ್ಲಿ ಕನಿಷ್ಟ ರೂ. 2.5 ಲಕ್ಷ ಮೊತ್ತ ನೀಡಲಾಗುವುದು ಎಂದು ಇಪಿಎಫ್ಒ ಅಂಗಸಂಸ್ಥೆ ಸಿಬಿಟಿ(Central Board of Trustees) ತೀರ್ಮಾನ ತೆಗೆದುಕೊಂಡಿದೆ. ಪ್ರಸ್ತುತ ಸತ್ತವರ ಅವಲಂಬಿತರು ರೂ. 6 ಲಕ್ಷದವೆರೆಗೆ ಮೊತ್ತ ಪಡೆಯುತ್ತಿದ್ದಾರೆ. ಬೇರೆ ಸದಸ್ಯರಿಗೆ ಯಾವುದೇ ರೀತಿಯ ವಿಮೆ ಅಥವಾ ಪ್ರಯೋಜನಗಳು ಇರುವುದಿಲ್ಲ. ಸರ್ಕಾರದ ಅನುಮೋದನೆಯ ನಂತರ ಇಪಿಎಫ್ಓ ಚಂದಾದಾರರಿಗೆ ಅನುಕೂಲಗಳು ಲಭ್ಯವಿರುತ್ತವೆ.

6. ಮೊಬೈಲ್ ಅಪ್ಲಿಕೇಶನ್ UMANG

6. ಮೊಬೈಲ್ ಅಪ್ಲಿಕೇಶನ್ UMANG

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಸುಮಾರು ನಾಲ್ಕು ಕೋಟಿ ಚಂದಾದಾರರು ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಶನ್ UMANG ಮೂಲಕ ಇಪಿಎಫ್ ವಿತ್ ಡ್ರಾವಲ್ ಮಾಡಬಹುದು. ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಇಪಿಎಫ್ಒ ಅಭಿವೃದ್ಧಿ ಪಡಿಸುತ್ತಿದೆ ಎಂದು ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

7. ಷೇರುಪೇಟೆಯಲ್ಲಿ ಶೇ. 15 ಹೂಡಿಕೆ

7. ಷೇರುಪೇಟೆಯಲ್ಲಿ ಶೇ. 15 ಹೂಡಿಕೆ

ಷೇರುಪೇಟೆಯಲ್ಲಿ ಶೇ. 10ರಷ್ಟು ಹೂಡಿಕೆ ಮಾಡುತ್ತಿದ್ದ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಶೇ. 15 ಹೂಡಿಕೆ ಮಾಡಲು ನಿರ್ಧರಿಸಿದೆ. ವಿನಿಮಯ ಕೇಂದ್ರಗಳಲ್ಲಿ ಹೂಡಿಕೆ ಹೆಚ್ಚಿಸುವ ಸಲುವಾಗಿ ಶೇ. 15ಕ್ಕೆ ಏರಿಸಲಾಗಿದೆ. ಫೆಬ್ರವರಿ 18, 2017ರವರೆಗೆ ಇಟಿಎಫ್ ಗಳಲ್ಲಿ ರೂ. 18,069 ಕೋಟಿ ಹೂಡಿಕೆ ಮಾಡಲಾಗಿದೆ.

English summary

Seven Developments On Provident Fund (PF) That Will Impact Your Money

The Employees’ Provident Fund Organisation (EPFO) had set March 31, 2017 as the deadline for submitting Aadhaar number earlier. E
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X