For Quick Alerts
ALLOW NOTIFICATIONS  
For Daily Alerts

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ 12 ಲಕ್ಷ ಮನೆ ನಿರ್ಮಾಣ

ಮನೆಗಳನ್ನು ಹೊಂದುವುದು ಪ್ರತಿಯೊಬ್ಬ ಭಾರತೀಯನ ಕನಿಷ್ಟ ಮೂಲಭೂತ ಅಗತ್ಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕೆನ್ನುವುದು ಪ್ರಧಾನಿ ಮೋದಿಯವರ ಕನಸು.

By Siddu
|

ಮನೆಗಳನ್ನು ಹೊಂದುವುದು ಪ್ರತಿಯೊಬ್ಬ ಭಾರತೀಯನ ಕನಿಷ್ಟ ಮೂಲಭೂತ ಅಗತ್ಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕೆನ್ನುವುದು ಪ್ರಧಾನಿ ಮೋದಿಯವರ ಕನಸು. ಈ ಆಶಯದ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವಾಸ್ ಯೋಜನೆ ಆರಂಭಿಸಿದೆ.

 

ಪ್ರಧಾನಮಂತ್ರಿ ಅವಾಸ ಯೋಜನೆ ಅಡಿ ದೇಶದ ಬಡವರು, ನಿರ್ಗತಿಕರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಇರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

12 ಲಕ್ಷ ಮನೆ ನಿರ್ಮಾಣ ಗುರಿ

12 ಲಕ್ಷ ಮನೆ ನಿರ್ಮಾಣ ಗುರಿ

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ 12 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, 2017-18 ರ ಸಾಲಿನಲ್ಲಿ ಈ ಗುರಿ ಮುಟ್ಟಲು ಉದ್ದೇಶಿಸಲಾಗಿದೆ.

ಪಿಎಂಎವೈ(ನಗರ) ಅಡಿ ಎಷ್ಟು ಮನೆ?

ಪಿಎಂಎವೈ(ನಗರ) ಅಡಿ ಎಷ್ಟು ಮನೆ?

ಪ್ರಧಾನಮಂತ್ರಿ ಅವಾಸ್ ಯೋಜನೆ(ನಗರ) ಅಡಿಯಲ್ಲಿ 2018-19ರಲ್ಲಿ 26 ಲಕ್ಷ ಮನೆ, 2019-20ರ ಸಾಲಿನಲ್ಲಿ 26 ಲಕ್ಷ, 2020-21ರ ಸಾಲಿನಲ್ಲಿ 30 ಲಕ್ಷ ಮನೆ, 2021-22ರಲ್ಲಿ 29.80 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರೂ ಹೇಳಿದ್ದಾರೆ.

2016-17ರಲ್ಲಿ ಎಷ್ಟು?
 

2016-17ರಲ್ಲಿ ಎಷ್ಟು?

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕಳೆದ 2016-17ರ ಸಾಲಿನಲ್ಲಿ ಕೇವಲ 1.49 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ.

ನಿಧಾನಗತಿಗೆ ಕಾರಣ?

ನಿಧಾನಗತಿಗೆ ಕಾರಣ?

ಪಿಎಂಎವೈ(ನಗರ) ಯೋಜನೆ ಅಡಿ ಮನೆ ನಿರ್ಮಾಣ ಕಾರ್ಯ ಮಂದಗತಿಯಿಂದ ಸಾಗಿದೆ. ಮನೆ ನಿರ್ಮಾಣದ ದುರ್ಬಲವಾದ ಅನುಷ್ಠಾನಕ್ಕೆ ಮತ್ತು ನಿಧಾನಗತಿಗೆ ಭೂ ಸ್ವಾಧೀನ ವಿಳಂಬ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

18 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ

18 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ

ಇಲ್ಲಿಯವರೆಗೆ 18.76 ಮನೆಗಳ ನಿರ್ಮಾಣದ ಪ್ರಸ್ತಾಪವನ್ನು ಅನುಮೋದಿಸಲಾಗಿದೆ. 13.06 ಲಕ್ಷ ಮನೆ ನಿರ್ಮಿಸಲು ಹಣ ನೀಡಲಾಗಿದೆ. ಆದರೆ 2016-17ರ ಸಾಲಿನಲ್ಲಿ ಭೂ ಸ್ವಾಧೀನ ವಿಳಂಬದಿಂದಾಗಿ 1.49 ಲಕ್ಷ ಮನೆ ನಿರ್ಮಾಣ ಮಾತ್ರ ಸಾಧ್ಯವಾಗಿದೆ.

2022ರಲ್ಲಿ ಎಲ್ಲರಿಗೂ ಮನೆ

2022ರಲ್ಲಿ ಎಲ್ಲರಿಗೂ ಮನೆ

ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎಂದು 2015ರ ಜೂನ್ ನಲ್ಲಿ ಈ ಯೋಜನೆ ಲಾಂಚ್ ಮಾಡಲಾಗಿದೆ. ಈ ಯೋಜನೆ ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ಕೊಟ್ಟು ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ.

ಇಂಪ್ಲಿಮೆಂಟ್ ಮಾಡುವವರು ಯಾರು?

ಇಂಪ್ಲಿಮೆಂಟ್ ಮಾಡುವವರು ಯಾರು?

ಕೇಂದ್ರ ಸರ್ಕಾರದ ಈ ಯೋಜನೆಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್(NHB), BLC(beneficiary led construction) ಘಟಕ ಮತ್ತು ಹುಡ್ಕೊ(HUDCO) ಸಂಸ್ಥೆಗಳು ಕಾರ್ಯಗತಗೊಳಿಸಲಿವೆ. ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

English summary

Government aims to construct 12 lakh houses in FY18 under PMAY scheme

The government has set an ambitious target to construct as many as 12 lakh houses under Pradhan Mantri Awas Yojana (Urban) in 2017-18, although only 1.49 lakh houses were built under the scheme in 2016-17.
Story first published: Tuesday, May 23, 2017, 15:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X