For Quick Alerts
ALLOW NOTIFICATIONS  
For Daily Alerts

ನಿಮ್ಮ ಆದಾಯವನ್ನು ಡಬಲ್ ಮಾಡುವುದು ಹೇಗೆ? ಇಲ್ಲಿವೆ 5 ಕ್ವಿಕ್ ಟಿಪ್ಸ್

ಹೆಚ್ಚು ಹಣ ಮಾಡುವುದು ಯಾರಿಗೆ ತಾನೆ ಇಷ್ಟ ಇಲ್ಲ. ಇರುವ ಆದಾಯವನ್ನು ದುಪ್ಪಟ್ಟು ಮಾಡಲು ಎಲ್ಲರೂ ಬಯಸುತ್ತಾರೆ. ಆದರೆ ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ. ಆದಾಯ ಹಾಗೆ ಇರತ್ತೆ ಆದರೆ ಖರ್ಚುವೆಚ್ಚಗಳು ದಿನದಿನ ಹೆಚ್ಚಾಗುತ್ತಲೇ ಇರುತ್ತವೆ.

By Siddu
|

ಹೆಚ್ಚು ಹಣ ಮಾಡುವುದು ಯಾರಿಗೆ ತಾನೆ ಇಷ್ಟ ಇಲ್ಲ. ಇರುವ ಆದಾಯವನ್ನು ದುಪ್ಪಟ್ಟು ಮಾಡಲು ಎಲ್ಲರೂ ಬಯಸುತ್ತಾರೆ. ಆದರೆ ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ. ಆದಾಯ ಹಾಗೆ ಇರತ್ತೆ ಆದರೆ ಖರ್ಚುವೆಚ್ಚಗಳು ದಿನದಿನ ಹೆಚ್ಚಾಗುತ್ತಲೇ ಇರುತ್ತವೆ. ಅತಿಹೆಚ್ಚಿನ ಖರ್ಚುವೆಚ್ಚಗಳು ಉಳಿತಾಯಕ್ಕೆ ಹಿನ್ನಡೆಯನ್ನುಂಟು ಮಾಡುತ್ತವೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

ಇಷ್ಟಾದರೂ ಆದಾಯವನ್ನು ದುಪ್ಪಟ್ಟು ಮಾಡಲು ಹಲವಾರು ದಾರಿಗಳು ಇದ್ದೆ ಇರುತ್ತವೆ. ಅಂತಹ ಪ್ರಮುಖ 5 ತ್ವರಿತ ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ.

1. ಸ್ಟಾಕ್ ಮಾರ್ಕೆಟ್

1. ಸ್ಟಾಕ್ ಮಾರ್ಕೆಟ್

ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಆದಾಯವನ್ನು ಡಬಲ್ ಮಾಡುವುದಕ್ಕೆ ಇರುವ ತ್ವರಿತ ಮಾರ್ಗಗಳಲ್ಲಿ ಒಂದು. ನೀವು ಷೇರುಗಳನ್ನು ಬ್ರೋಕರ್, ಪೈನಾನ್ಸಿಯಲ್ ಪ್ಲಾನರ್ ಅಥವಾ ಆನ್ಲೈನ್ ಮೂಲಕ ಖರೀದಿಸಬಹುದು. ತುರ್ತಾಗಿ ಹಣ ಬಯಸಿದಲ್ಲಿ ಯಾವುದೇ ಸಮಯದಲ್ಲಿ ಷೇರು ಮಾರಾಟ ಮಾಡಿ ತಕ್ಷಣ ಹಣ ಪಡೆಯಬಹುದು. ಷೇರುಪೇಟೆಯಲ್ಲಿ ದುಪ್ಪಟ್ಟು ಹಣ ಗಳಿಸುವ ಹಾಗೇನೆ ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಹೂಡಿಕೆಗೆ ಷೇರುಗಳ ಆಯ್ಕೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರತಿ ಕಂಪನಿ ಬಗ್ಗೆ ಸರಿಯಾದ ತಿಳಿದುಕೊಂಡು, ವಿಶ್ಲೇಷಣೆ ಮಾಡಿ ಲಾಭದಾಯಕ ಷೇರುಗಳನ್ನು ಖರೀದಿಸಬೇಕು.

2. ಸ್ಥಿರ ಇಳುವರಿಯ ಸೆಕ್ಯುರಿಟಿಸ್ ಗಳಲ್ಲಿ ಬಂಡವಾಳ ಹೂಡಿಕೆ

2. ಸ್ಥಿರ ಇಳುವರಿಯ ಸೆಕ್ಯುರಿಟಿಸ್ ಗಳಲ್ಲಿ ಬಂಡವಾಳ ಹೂಡಿಕೆ

ಕೆಲ ಕಂಪನಿಗಳ ಎಫ್ಡಿಗಳು ನಿಮ್ಮ ಆದಾಯ ದುಪ್ಪಟ್ಟು ಮಾಡುವಲ್ಲಿ ಸಹಕಾರಿಯಾಗುತ್ತವೆ. ದೀರ್ಘಾವದಿಯ ಮೇಲೆ ಹೆಚ್ಚು ಲಾಭ ಸಿಗುತ್ತದೆ. ಉದಾಹರಣೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 120 ತಿಂಗಳ ಅವಧಿ ಮೇಲೆ ಶೇ. 10.14 ಇಳುವರಿ ಸಿಗುತ್ತದೆ. ಇದರರ್ಥ ನಿಮ್ಮ ಆದಾಯ ದುಪ್ಪಟ್ಟುಗೊಳಿಸುವ ಸಾಮರ್ಥ್ಯವಿದೆ.

3. ರಿಯಲ್ ಎಸ್ಟೇಟ್

3. ರಿಯಲ್ ಎಸ್ಟೇಟ್

ನಿಮ್ಮ ಆದಾಯವನ್ನು ದುಪ್ಪಟ್ಟು ಮಾಡುವ ತ್ವರಿತ ಮಾರ್ಗಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದು ವಿಧಾನ. ಸುಮಾರು ನಾಲ್ಕೈದು ವರ್ಷಗಳ ಅವಧಿಯಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ನಗದು ಹರಿವು ರಿಯಲ್ ಎಸ್ಟೇಟ್ ನಲ್ಲಿ ಸ್ಥಿರವಾಗಿರುತ್ತದೆ. ನೋಟು ನಿಷೇಧದ ನಂತರ ಕೊಂಚ ಇಳಿಕೆಯಾಗಿದ್ದರೂ, ಸಲ್ಪ ಸಮಯದೊಳಗೆ ಲಾಭದಾಯಕವಾಗಲಿದೆ ಎಂಬ ನಿರೀಕ್ಷೆ ಇದೆ.

4. ಸಣ್ಣ ಉದ್ಯಮ

4. ಸಣ್ಣ ಉದ್ಯಮ

ಸಣ್ಣ ಉದ್ಯಮಗಳಲ್ಲಿ ಪಾಲುದಾರರಾಗಿ ಮುಂದುವರೆದರೆ ಉತ್ತಮ ಆದಾಯ ಮಾಡಬಹುದು. ಉದ್ಯಮಗಳಲ್ಲಿ ಪಾಲುದಾರನಾಗಿದ್ದಾಗ ಅನೇಕ ರಿಸ್ಕ್ ಗಳನ್ನು ಎದುರಿಸಬೇಕಾಗುತ್ತದೆ. ಆದರಿಂದ ಈ ಆಯ್ಕೆ ಅಪಾಯಕಾರಿ ಎನಿಸಬಹುದು. ಅದಕ್ಕಾಗಿ ಕಂಪನಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು ಜಾಣ ನಡೆ ತೆಗೆದು ಮುನ್ನಡೆಯಬೇಕು. ಕಂಪನಿ ಉತ್ತಮ ಲಾಭದಲ್ಲಿದ್ದಾಗ ನೀವು ಲಾಭವನ್ನು ಗಳಿಸಬಹುದು.

5. ಸಾಲ ನೀಡುವಿಕೆ

5. ಸಾಲ ನೀಡುವಿಕೆ

ಹೆಚ್ಚು ಬಡ್ಡಿದರಕ್ಕೆ ಸಾಲ ನೀಡುವುದರ ಮುಖಾಂತರ ಕೂಡ ನಿಮ್ಮ ಆದಾಯವನ್ನು ದುಪ್ಪಟ್ಟು ಮಾಡಬಹುದು. ಅನೇಕರಿಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದಾಗ ಬಡ್ಡಿದರ ಎಷ್ಟಿದ್ದರೂ ಸಾಲ ತೆಗೆದುಕೊಳ್ಳಲು ಸಿದ್ದರಿರುತ್ತಾರೆ. ಹೀಗಾಗಿ 4-5 ವರ್ಷಗಳ ಅಲ್ಪಾವಧಿಯಲ್ಲಿ ನಿಮ್ಮ ಆದಾಯವನ್ನು ಡಬಲ್ ಮಾಡಬಹುದು. (Read more: Investment)

English summary

How To Double Your Income? Here Are 5 Quick Ways

Everyone wishes to make more money. But unfortunately, not everyone can ask for a pay increase all the time. Our needs in day to day life keeps on increasing and the income remains the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X