For Quick Alerts
ALLOW NOTIFICATIONS  
For Daily Alerts

ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?

ಜುಲೈ 1, 2017 ದಿನಾಂಕಕ್ಕೆ ಅನ್ವಯವಾಗುವಂತೆ ಈಗಾಗಲೇ ಪ್ಯಾನ್ ಕಾರ್ಡ್ ಪಡೆದಿರುವ ವ್ಯಕ್ತಿಗಳು ಹಾಗೂ ಆಧಾರ್ ಕಾರ್ಡ್ ಪಡೆಯಲು ಅರ್ಹರಿರುವ ವ್ಯಕ್ತಿಗಳು ತಮ್ಮ ಆಧಾರ್ ಸಂಖ್ಯೆ ನಿಗದಿತ ಅರ್ಜಿ ನಮೂನೆಯಲ್ಲಿ ವಿವರ ತುಂಬಿ ಕಚೇರಿಗೆ ಸಲ್ಲಿಸಬೇಕು.

|

ಜುಲೈ 1, 2017 ಆದಾಯ ತೆರಿಗೆ ಪಾವತಿಯ ದೃಷ್ಟಿಯಲ್ಲಿ ಭಾರತದ ಪಾಲಿಗೆ ಒಂದು ಅವಿಸ್ಮರಣೀಯ ದಿನ. ಕಳೆದ ಅನೇಕ ವರ್ಷಗಳಿಂದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಾ ಬಂದಿದ್ದ ಸೇವಾ ಮತ್ತು ತೆರಿಗೆ (ಜಿಎಸ್ಟಿ) ಪಾವತಿ ಕಡೆಗೂ ಜುಲೈ 1ರಂದು ಅಸ್ತಿತ್ವಕ್ಕೆ ಬಂದಿದೆ. ಇದಕ್ಕನುಗುಣವಾಗಿ ಈ ದಿನದಿಂದ ಅನ್ವಯವಾಗುವಂತೆ ಆದಾಯ ತೆರಿಗೆಯನ್ನು ಸಲ್ಲಿಸಲು ಹಾಗೂ ಪ್ಯಾನ್ ( Permanent Account Number) ಗಾಗಿ ಅರ್ಜಿ ಹಾಕಲು ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

ಆಧಾರ್-ಪ್ಯಾನ್ ಕಾರ್ಡ್ ಲಿಂಕಿಂಗ್

ಆಧಾರ್-ಪ್ಯಾನ್ ಕಾರ್ಡ್ ಲಿಂಕಿಂಗ್

ಜುಲೈ 1, 2017 ದಿನಾಂಕಕ್ಕೆ ಅನ್ವಯವಾಗುವಂತೆ ಈಗಾಗಲೇ ಪ್ಯಾನ್ ಕಾರ್ಡ್ ಪಡೆದಿರುವ ವ್ಯಕ್ತಿಗಳು ಹಾಗೂ ಆಧಾರ್ ಕಾರ್ಡ್ ಪಡೆಯಲು ಅರ್ಹರಿರುವ ವ್ಯಕ್ತಿಗಳು ತಮ್ಮ ಆಧಾರ್ ಸಂಖ್ಯೆಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ವಿವರ ತುಂಬಿ ಸಂಬಂಧಿತ ಕಚೇರಿಗೆ ಸಲ್ಲಿಸಬೇಕು. ಇತ್ತೀಚೆಗೆ CBDT ಸಂಸ್ಥೆ ಈ ವಿಧಾನವನ್ನು ಆನ್ಲೈನ್ ಮೂಲಕ ನಡೆಸಬಹುದಾದ ವಿಧಾನವನ್ನು ಎಸ್ಎಂಎಸ್ ಮೂಲಕ ಗ್ರಾಹಕರಿಗೆ ಕಳುಹಿಸಿತ್ತು. ಈ ಪ್ರಕಾರ ಗ್ರಾಹಕರು ಪ್ಯಾನ್ ಸೇವಾ ಕಚೇರಿ ಅಥವಾ ಪ್ಯಾನ್ ಸೇವೆ ಒದಗಿಸುವ ಆನ್ಲೈನ್ ತಾಣಗಳ ಮೂಲಕ ಈ ಕಾರ್ಯವನ್ನು ನೆರವೇರಿಸಬಹುದು. ಈ ಸೇವೆಯನ್ನು ಭಾರತೀಯ ಆದಾಯ ತೆರಿಗೆ ಇಲಾಖೆಯ ತಾಣದಲ್ಲಿ ಈಗಾಗಲೇ ಒದಗಿಸಲಾಗಿದೆ. ಒಂದು ವೇಳೆ ಗ್ರಾಹಕರು ತಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡದೆ ಇದ್ದಲ್ಲಿ ಪ್ಯಾನ್ ಕಾರ್ಡ್ ನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಪ್ಯಾನ್ ಕಾರ್ಡ್ ನ್ನು ಅಮಾನ್ಯವೆಂದು ಪರಿಗಣಿಸುವ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿದಿದ್ದು, ಗ್ರಾಹಕರಿಗೆ ಮುಂದಿನ ದಿನಾಂಕವನ್ನು ಶೀಘ್ರವೇ ಸೂಚಿಸಲಾಗುವುದು ಎಂದು ಪ್ರಕಟಿಸಿದೆ.

ಪ್ರಸ್ತುತ ತೆರಿಗೆ ಪಾವತಿಯಲ್ಲಿರುವ ಸವಾಲುಗಳೇನು?

ಪ್ರಸ್ತುತ ತೆರಿಗೆ ಪಾವತಿಯಲ್ಲಿರುವ ಸವಾಲುಗಳೇನು?

ಪ್ರಸ್ತುತ ಆದಾಯ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಗಳು ಆಧಾರ್ ವಿವರ ಸಲ್ಲಿಸಬೇಕು, ಯಾರನ್ನು ಹೊರತುಪಡಿಸಲಾಗಿದೆ ಎಂಬ ವಿಷಯದಲ್ಲಿ ಗೊಂದಲವಿದೆ. ವ್ಯಕ್ತಿ ವಾಸವಾಗಿರುವ ರಾಜ್ಯ, ಪ್ರಸ್ತುತ ನಿವಾಸದ ಸ್ಥಿತಿ, ವಯಸ್ಸು ಮೊದಲಾದವು ಆದಾಯ ತೆರಿಗೆ ಸಂದರ್ಭದಲ್ಲಿ ನೇರ ಮಾನದಂಡಗಳಾಗಿ ನಿರ್ಧಾರಿತವಾಗುತ್ತವೆ. ಇದು ನಾಗರೀಕತ್ವಕ್ಕೆ ಸಂಬಂಧಿಸಿದಾಗ ತೆರಿಗೆ ರಿಟರ್ನ್ಸ್ ನಿರ್ಧಿಷ್ಟ ಮಾಹಿತಿ ತುಂಬಿರದಿದ್ದಲ್ಲಿ ವ್ಯಕ್ತಿಗಳಿಗೆ ತೊಡಕಾಗಿ ಪರಿಣಮಿಸುತ್ತದೆ.

ವಿದೇಶಿ ನಾಗರಿಕರು ಎದುರಿಸುವ ಸವಾಲುಗಳು

ವಿದೇಶಿ ನಾಗರಿಕರು ಎದುರಿಸುವ ಸವಾಲುಗಳು

ಪ್ಯಾನ್ ಕಾರ್ಡ್ ನ ಮಾಹಿತಿ ಸಂಗ್ರಹದಲ್ಲಿ ಗ್ರಾಹಕನ ಪೌರತ್ವವನ್ನೂ ಪರಿಗಣಿಸಲಾಗಿದೆ. 2012ರ ಏಪ್ರಿಲ್ ಗೂ ಮುನ್ನ ಭಾರತೀಯ ಹಾಗೂ ವಿದೇಶೀ ಪೌರತ್ವ ಹೊಂದಿರುವ ವ್ಯಕ್ತಿಗಳಿಗೆ ತಮ್ಮ ಪೌರತ್ವ ಹೊಂದಿರುವ ದೇಶವನ್ನು ನಮೂದಿಸುವ ಸಮಾನವಾದ ಅರ್ಜಿ ಇತ್ತು. ಈ ಮೂಲಕ ಹಿಂದಿನ ವರ್ಷಗಳಲ್ಲಿ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಪಡೆದುಕೊಂಡಿದ್ದವರು ಬಳಿಕ ತಮ್ಮ ಪೌರತ್ವವನ್ನು ಬದಲಿಸಿಕೊಂಡಿದ್ದರೂ ಪ್ಯಾನ್ ಮಾಹಿತಿ ಸಂಗ್ರಹದಲ್ಲಿ ಇವರು ಭಾರತೀಯರಾಗಿಯೇ ಉಳಿದು ಬಿಟ್ಟಿದ್ದಾರೆ. ಹಾಗಾಗಿ ಈ ವ್ಯಕ್ತಿಗಳ ಪ್ರಸ್ತುತ ಪೌರತ್ವವನ್ನು ಬದಲಿಸಬೇಕಾಗಿರುವುದು ಅಗತ್ಯವಾಗಿದೆ. ಇಲ್ಲಿಯವರೆಗೆ ಬದಲಿಸದೇ ಇರುವ ವ್ಯಕ್ತಿಗಳಿಂದಾಗಿ ಪ್ಯಾನ್ ಕಾರ್ಡ್ ನ ಮಾಹಿತಿ ಸಂಗ್ರಹ ಒಟ್ಟು ಮಾಹಿತಿ ತಪ್ಪು ತಪ್ಪಾಗಿದೆ. ಈಗ ಆಧಾರ್ ಕಾರ್ಡುಗಳ ಸಂಖ್ಯೆಯನ್ನು ಸಮೂದಿಸುವ ಮೂಲಕ ಈ ವ್ಯಕ್ತಿಗಳ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ ಹಾಗೂ ಈ ವ್ಯಕ್ತಿಗಳು ತಮ್ಮ ಆದಾಯ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವುದು ಅಸಾಧ್ಯವಾಗುತ್ತದೆ.
ಈ ಕೊರತೆಯನ್ನು ಕಂಡುಕೊಂಡ ಬಳಿಕ ಪ್ಯಾನ್ ಕಾರ್ಡ್ ಮಾಹಿತಿ ಸಂಗ್ರಹದಿಂದ ಈ ವ್ಯಕ್ತಿಗಳಿಗೆ ತಮ್ಮ ಪೌರತ್ವವನ್ನು ಪ್ಯಾನ್ ಕಾರ್ಡ್ ನಲ್ಲಿ ಬದಲಿಸಿಕೊಳ್ಳುವಂತೆ ನಿರ್ದೇಶನವನ್ನು ಕಳುಹಿಸಲಾಗಿದ್ದು, ಈ ಮೂಲಕ ಮಾಹಿತಿ ಸಂಗ್ರಹವನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಈಗಾಗಲೇ ಆದಾಯ ತೆರಿಗೆ ಪಾವತಿಸಬೇಕಾಗಿರುವ ವಿದೇಶೀ ಪೌರತ್ವ ಹೊಂದಿರುವ ಭಾರತೀಯರಿಗೆ ಸಮಯಾವಕಾಶ ಕಡಿಮೆ ಇದ್ದು ತೊಡಕು ಎದುರಾಗಲಿದೆ.

ಭಾರತೀಯ ನಾಗರಿಕರಿಗೆ ಎದುರಾಗುವ ಸವಾಲುಗಳು

ಭಾರತೀಯ ನಾಗರಿಕರಿಗೆ ಎದುರಾಗುವ ಸವಾಲುಗಳು

ಆಧಾರ್ ಕಾರ್ಡ್ ಪಡೆಯಲು ಅನರ್ಹರಾದ ಭಾರತದ ಸಾಮಾನ್ಯ ಪ್ರಜೆಗಳು(ROR) ಸಹ ಆಧಾರ್ ಸಂಖ್ಯೆ ಇಲ್ಲದೆ ಆದಾಯ ತೆರಿಗೆ ಪಾವತಿಸಲು ತೊಡಕುಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ ಉದ್ಯೋಗ ನಿಮಿತ್ತ ನವೆಂಬರ್ 2016ರ ಬಳಿಕ ವಿದೇಶಕ್ಕೆ ತೆರಳಿರುವ ವ್ಯಕ್ತಿಗಳು ಆಧಾರ್ ಪಡೆಯಲು ಅನರ್ಹರು. ಆದರೆ ಭಾರತೀಯ ಆದಾಯ ತೆರಿಗೆ ವಿಧಿಯ ಪ್ರಕಾರ ROR ಪ್ರಜೆಗಳು 2016-17 ಆರ್ಧಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್ ನಿರ್ದೇಶನದ ಪ್ರಕಾರ ಒಂದು ವರ್ಷದಲ್ಲಿ 182 ದಿನಕ್ಕೂ ಹೆಚ್ಚು ದಿನಗಳನ್ನು ಭಾರತದಿಂದ ಹೊರಗೆ ಕಳೆದಿದ್ದರೆ ಈ ವ್ಯಕ್ತಿಗಳು ಆದಾಯ ತೆರಿಗೆ ಪಾವತಿಯಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಮೂದಿಸುವ ಅಗತ್ಯವಿಲ್ಲ. ಆದರೆ ಈ ವ್ಯಕ್ತಿಗಳು ತಮ್ಮ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವಾಗ ಆಧಾರ ಕಾರ್ಡ್ ನಮೂದಿಸಬೇಕಾಗುತ್ತದೆ. ಈ ಮಾಹಿತಿಯೂ ಗೊಂದಲಕ್ಕೆ ಎಡೆಮಾಡಿದೆ.

ಸೂಕ್ತ ಕ್ರಮ ಕೈಗೊಳ್ಳಬೇಕು

ಸೂಕ್ತ ಕ್ರಮ ಕೈಗೊಳ್ಳಬೇಕು

ಹೀಗೆ ಅನೇಕ ಗೊಂದಲಗಳು CBDT ಇಲಾಖೆಯ ಗಮನಕ್ಕೆ ಈಗಾಗಲೇ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಪ್ಯಾನ್ ಕಾರ್ಡ್ ನಲ್ಲಿ ಪೌರತ್ವದ ವಿವರಗಳು ಸ್ಪಷ್ಟವಾಗಿ ಕಾಣುವಂತೆ ಹಾಗೂ ಸುಲಭವಾಗಿ ಬದಲಿಸಿಕೊಳ್ಳಲು ಸಾಧ್ಯವಿರುವಂತೆ ವ್ಯವಸ್ಥೆಯನ್ನು ನವೀಕರಿಸಬೇಕಿದೆ. ಮುಖ್ಯವಾಗಿ, ಪ್ರಸ್ತುತ ಇರುವ ಪೌರತ್ವ ಹಾಗೂ ವ್ಯಕ್ತಿಯೊಬ್ಬರ ಆಧಾರ್ ಅರ್ಹತೆಯನ್ನು ಆದಾಯ ತೆರಿಗೆ ಪಾವತಿಸಲು ಸುಲಭವಾಗುವಂತೆ ನಿರ್ದೇಶಿಸುವುದು ಸದ್ಯದ ಸವಾಲಾಗಿದ್ದು ಇದನ್ನು ಶೀಘ್ರವೇ ಸರಿಪಡಿಸಬೇಕಾಗಿದೆ.

ಆಧಾರ್-ಪ್ಯಾನ್ ಲಿಂಕಿಂಗ್ ಯಾರಿಗೆ ಕಡ್ಡಾಯವಲ್ಲ

ಆಧಾರ್-ಪ್ಯಾನ್ ಲಿಂಕಿಂಗ್ ಯಾರಿಗೆ ಕಡ್ಡಾಯವಲ್ಲ

ಕೇಂದ್ರ ಸರ್ಕಾರ ಹೊರಡಿಸಿದ ಅನುಸೂಚಿಯ ಪ್ರಕಾರ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ ರಾಜ್ಯದ ನಿವಾಸಿಗಳು ಹಾಗೂ ಭಾರತೀಯ ತೆರಿಗೆ ಇಲಾಖೆ ನಿಮಯ 1961 ಪ್ರಕಾರ ಅನಿವಾಸಿ ಭಾರತೀಯರು, 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಹಾಗೂ ಭಾರತೀಯ ಪೌರತ್ವ ಹೊಂದಿರದ ವ್ಯಕ್ತಿಗಳನ್ನು ಹೊರತುಪಡಿಸಲಾಗಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

English summary

Aadhaar PAN linking: Filing Income tax returns turns difficult; Here is how

From an Indian tax legislation perspective, July 1, 2017 should be a historic date as the revolutionary and the most-debated GST finally came into force. It’s on the same day that another most debated tax provision also came in to effect.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X