ಕುಟುಂಬಗಳ ಒಡೆತನ ಹೊಂದಿರುವ ಜಗತ್ತಿನ 15 ಬೃಹತ್ ಕಂಪನಿಗಳು ಯಾವುವು ಗೊತ್ತಾ?

ಒಂದು ಕುಟುಂಬ ತನ್ನ ಜೀವನ ನಿರ್ವಹಣೆಗಾಗಿ ಚಿಕ್ಕ ಕಿರಾಣಿ ಅಂಗಡಿ ಅಥವಾ ಟೀ ಮಾರುವ ಹೊಟೇಲು ಹೀಗೆ ಯಾವುದಾದರೂ ಚಿಕ್ಕ ಪ್ರಮಾಣದ ವ್ಯವಹಾರ ನಡೆಸುತ್ತಿದ್ದರೆ ಅದನ್ನು ಕುಟುಂಬ ಒಡೆತನದ ವ್ಯಾಪಾರ ಎಂದು ಕರೆಯುತ್ತೇವೆ. ಆದರೆ ಜಗತ್ತಿನಲ್ಲಿ ಇಂದು ವ್ಯಾಪಾರ ನಡೆಸುತ್ತಿರುವ ಹಲವಾರು ಬೃಹತ್ ಕಂಪನಿಗಳು ಸಹ ಕೆಲ ಕುಟುಂಬಗಳ ಒಡೆತನದಲ್ಲಿಯೇ ಇವೆ.

ಕುಟುಂಬಗಳ ಒಡೆತನದಲ್ಲಿಯೇ ನಡೆಯುತ್ತಿರುವ ವಿಶ್ವದ 15 ಬೃಹತ್ ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

15. ರಿಲಯನ್ಸ್ ಇಂಡಸ್ಡ್ರೀಸ್ (ಅಂಬಾನಿ ಪರಿವಾರ)

ಭಾರತದ ಉದ್ಯಮಿ ಧೀರುಭಾಯಿ ಅಂಬಾನಿ ಅವರು ಪಾಲುದಾರಿಕೆಯಲ್ಲಿ 1965 ರಲ್ಲಿ ರಿಲೈಯನ್ಸ್ ಇಂಡಸ್ಟ್ರೀಸ್ ಆರಂಭಿಸಿದರು. ಮುಂಬೈನಲ್ಲಿ ಆರಂಭವಾದ ಈ ಟೆಕ್ಸ್‌ಟೈಲ್ ಕಂಪನಿ ಕೆಲವೇ ವರ್ಷಗಳಲ್ಲಿ ಭಾರತದ ಅತಿ ದೊಡ್ಡ ಕಂಪನಿಯಾಗಿ ಬೆಳೆಯಿತು. 2002 ರಲ್ಲಿ ಧೀರುಭಾಯಿ ಅವರ ಮರಣದ ನಂತರ ಮಗ ಮುಕೇಶ ಅಂಬಾನಿ, ಬಹುತೇಕ ಶೇರುಗಳ ಮೇಲೆ ಒಡೆತನ ಪಡೆದು ಚೇರಮನ್ ಹಾಗೂ ಎಂ.ಡಿ. ಆಗಿ ಅಧಿಕಾರ ವಹಿಸಿಕೊಂಡರು.
ರಿಲೈಯನ್ಸ್ ಇಂಡಸ್ಟ್ರೀಸ್ ಇಂದು ಅತಿ ಚಿಕ್ಕ ವಸ್ತುಗಳಿಂದ ಹಿಡಿದು ಪೆಟ್ರೋಕೆಮಿಕಲ್ ಉತ್ಪನ್ನಗಳವರೆಗೆ ಹಲವಾರು ರೀತಿಯ ಉದ್ಯಮಗಳನ್ನು ನಡೆಸುತ್ತಿದೆ. ಸದ್ಯ ರಿಲೈಯನ್ಸ್ ಇಂಡಸ್ಟ್ರೀಸ್ ವಾರ್ಷಿಕವಾಗಿ 56.5 ಬಿಲಿಯನ್ ಡಾಲರ್‌ಗಳಷ್ಟು ವ್ಯವಹಾರ ನಡೆಸುತ್ತಿದೆ. ಕಂಪನಿಯ ಎಂ.ಡಿ. ಮುಕೇಶ ಅಂಬಾನಿ ಮೇ 2017 ರ ವೇಳೆಗೆ ಒಟ್ಟು 29.2 ಬಿಲಿಯನ್ ಡಾಲರ್ ಮೊತ್ತದ ಸಂಪತ್ತು ಹೊಂದಿದ್ದು ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

14. ಗ್ರೌಪೆ ಔಚಾನ್ (ಮುಲಿಯೆಜ್ ಕುಟುಂಬ)

ಗ್ರೌಪೆ ಔಚಾನ್ ಇದು ಮುಲಿಯೆಜ್ ಕುಟುಂಬದ ಸಂಪೂರ್ಣ ಒಡೆತನಕ್ಕೆ ಒಳಪಟ್ಟಿದೆ. ಜೆರಾಲ್ಡ್ ಮುಲಿಯೆಜ್ ಎಂಬುವರು 1961 ರಲ್ಲಿ ಫ್ರಾನ್ಸ್‌ನ ರೋಬಾಸ ಎಂಬಲ್ಲಿ ಈ ರಿಟೇಲ್ ವ್ಯಾಪಾರವನ್ನು ಆರಂಭಿಸಿದರು. ನಂತರದ ಕಾಲದಲ್ಲಿ ತಮ್ಮ ಸೋದರ ಸಂಬಂಧಿ ವಿಯಾನೆ ಮುಲಿಯೆಜ್ ಅವರಿಗೆ ಕಂಪನಿಯ ಅಧಿಕಾರ ಹಸ್ತಾಂತರಿಸಿದರು. ಮಾರ್ಚ್ ೨೦೧೭ ರವರೆಗೆ ವಿಯಾನೆ ಮುಲಿಯೆಜ್ ಕಂಪನಿಯ ಚೇರಮನ್ ಆಗಿ ಸೇವೆ ಸಲ್ಲಿಸಿದರು.
ಜಗತ್ತಿನ ಬಹುದೊಡ್ಡ ರಿಟೇಲ್ ಬಿಸಿನೆಸ್‌ಗಳಲ್ಲೊಂದಾಗಿರುವ ಗ್ರೌಪೆ ಔಚಾನ್ ಸಮೂಹ 12 ದೇಶಗಳಲ್ಲಿ ಒಟ್ಟು ೬೩೯ ಹೈಪರ್ ಮಾರ್ಕೆಟ್ ಹಾಗೂ 2871 ಸುಪರ ಮಾರ್ಕೆಟ್‌ಗಳನ್ನು ಹೊಂದಿದೆ. ವಾರ್ಷಿಕವಾಗಿ ಹಲವಾರು ಬಿಲಿಯನ್ ಡಾಲರ್ ವ್ಯವಹಾರ ನಡೆಸುವ ಕಂಪನಿ ಡೆಕಾಥ್ಲಾನ್ ಸ್ಪೋರ್ಟ್ಸ್ ಕಂಪನಿಯಲ್ಲಿ ಸಹ ಪಾಲು ಪಡೆದುಕೊಂಡಿದೆ.

13. ಆರ್ಸೆಲರ್ ಮಿತ್ತಲ (ಮಿತ್ತಲ ಕುಟುಂಬ)

1950 ರಲ್ಲಿ ಮೋಹನಲಾಲ ಮಿತ್ತಲ ಎಂಬುವರು ರಾಜಸ್ಥಾನದಲ್ಲಿ ಮಿತ್ತಲ ಉದ್ಯಮ ಸಮೂಹವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಇದು ಆರ್ಸೆಲರ್ ಮಿತ್ತಲ ಆಗಿ ಪರಿವರ್ತನೆಗೊಂಡಿತು. ಮೋಹನ ಲಾಲ ಮಿತ್ತಲ ಅವರ ಸುಪುತ್ರ ಲಕ್ಷ್ಮಿ ಮಿತ್ತಲ ಅವರು ಪ್ರಸ್ತುತ ಕಂಪನಿಯ ಚೇರಮನ್ ಹಾಗೂ ಎಂ.ಡಿ. ಆಗಿದ್ದಾರೆ. ತಮ್ಮ ಕುಟುಂಬದೊಂದಿಗೆ ಒಟ್ಟು ಶೇ. 37.4 ರಷ್ಟು ಶೇರುಗಳ ಒಡೆತನ ಹೊಂದಿರುವ ಲಕ್ಷ್ಮಿ ಮಿತ್ತಲ, ಕಂಪನಿಯ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.
2 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಮಿತ್ತಲ ಸಮೂಹ ವಾರ್ಷಿಕವಾಗಿ 98.1 ಮಿಲಿಯನ್ ಟನ್ ಸ್ಟೀಲ್ ಉತ್ಪಾದಿಸುವ ಮೂಲಕ ಜಗತ್ತಿನಲ್ಲಿಯೇ ಅತಿ ದೊಡ್ಡ ಸ್ಟೀಲ್ ಕಂಪನಿಯಾಗಿದೆ. ಈ ಕಂಪನಿ ವಾರ್ಷಿಕವಾಗಿ 63.6 ಬಿಲಿಯನ್ ಡಾಲರ್ ಮೊತ್ತದ ವ್ಯವಹಾರ ನಡೆಸುತ್ತಿದೆ.

12. ಗುನ್ವರ್ ಎಸ್‌ಎ (ಟಾರ್ನಕ್ವಿಸ್ಟ್ ಕುಟುಂಬ)

ಜಗತ್ತಿನ ಅತಿ ದೊಡ್ಡ ಸರಕುಗಳ ಉತ್ಪಾದನೆ ಕಂಪನಿಗಳಲ್ಲೊಂದಾದ ಗುನ್ವರ್ ಅನ್ನು 2000 ನೇ ಇಸ್ವಿಯಲ್ಲಿ ಟಾರ್ಜಬಾರ್ನ್ ಟಾರ್ನಕ್ವಿಸ್ಟ್ ಮತ್ತು ಗ್ರನೆಡಿ ಟಿಮಚೆಂಕೊ ಇವರು ಆರಂಭಿಸಿದರು. 64 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ಹೊಂದಿರುವ ಇದು ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಮಾರಾಟಗಾರ ಕಂಪನಿಯಾಗಿದೆ.

11. ಕಾಮ್‌ಕಾಸ್ಟ್ (ರಾಬರ್ಟ್ಸ್ ಫ್ಯಾಮಿಲಿ)

ವಿಶ್ವದ ಅತಿ ದೊಡ್ಡ ಪ್ರಸಾರ ಹಾಗೂ ಕೇಬಲ್ ಟಿವಿ ಕಂಪನಿ ಕಾಮ್‌ಕಾಸ್ಟ್ ಅನ್ನು 1963 ರಲ್ಲಿ ದಿ. ರಾಲ್ಫ್ ಜೆ. ರಾಬರ್ಟ್ಸ್ ಆರಂಭಿಸಿದರು. ಈಗಲೂ ಶೇ. 33.6 ರಷ್ಟು ಪಾಲಿನೊಂದಿಗೆ ರಾಬರ್ಟ್ಸ್ ಕುಟುಂಬ ಕಂಪನಿಯ ಮೇಲೆ ಹಿಡಿತ ಹೊಂದಿದೆ. ರಾಲ್ಫ್ ಅವರ ಪುತ್ರ ಬ್ರಿಯಾನ್ ಅವರು ಪ್ರಸ್ತುತ ಕಂಪನಿಯ ಚೇರಮನ್ ಹಾಗೂ ಸಿಇಓ ಆಗಿದ್ದು, ರಾಬರ್ಟ್ಸ್ ಕುಟುಂಬದ ಹಲವಾರು ಜನ ಕಂಪನಿಯ ಉನ್ನತ ಹುದ್ದೆಗಳಲ್ಲಿದ್ದಾರೆ.

10. ಆಲ್ಡಿ ಗ್ರುಪ್ (ಆಲಬ್ರೆಕ್ಟ್ ಫ್ಯಾಮಿಲಿ)

1913 ರಲ್ಲಿ ಜರ್ಮನಿಯ ಎಸ್ಸೆನ್ ಎಂಬಲ್ಲಿ ಚಿಕ್ಕ ಕಿರಾಣಿ ಅಂಗಡಿಯಾಗಿ ಮೊಟ್ಟ ಮೊದಲ ಆಲ್ಡಿ ಸ್ಟೋರ್ ಅನ್ನು ಥಿಯೋ ಆಲಬ್ರೆಕ್ಟ್ ಅವರು ಆರಂಭಿಸಿದರು. 2010 ರಲ್ಲಿ ಥಿಯೋ ಆಲಬ್ರೆಕ್ಟ್ ಅವರ ನಿಧನಾನಂತರ ಮಕ್ಕಳಾದ ಥಿಯೋ ಜ್ಯೂನಿಯರ್ ಹಾಗೂ ಬೆರ್ಟಹೋಲ್ಡ್ ಅವರು ಕಂಪನಿಯ ಪ್ರಮುಖ ಸ್ಥಾನಗಳಲ್ಲಿದ್ದು, ಕಂಪನಿ 20.6 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ.

9. ಶ್ವಾರ್ಜ್ ಗ್ರುಪ್ (ಶ್ವಾರ್ಜ್ ಫ್ಯಾಮಿಲಿ)

ರಿಟೇಲ್ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ ಶ್ವಾರ್ಜ್ ಗ್ರುಪ್ ಲಿಡ್ಲ್ ಮತ್ತು ಲಾಫಲ್ಯಾಂಡ್ ಸ್ಟೋರ್‌ಗಳನ್ನು ನಡೆಸುತ್ತಿದೆ. 1930 ರಲ್ಲಿ ಜೋಸೆಫ್ ಶ್ವಾರ್ಜ್ ಹಾಗೂ ಅವರ ಮಗ ಡೈಟರ್ ಇವರು ಜರ್ಮನಿಯಲ್ಲಿ ಶ್ವಾರ್ಜ್ ಆಂಡ್ ಲಿಡ್ಲ್ ಡಿಸ್ಕೌಂಟ್ ಚೇನ್ ಹೆಸರಿನಲ್ಲಿ ವ್ಯವಹಾರ ಆರಂಭಿಸಿದ್ದರು.

8. ಕೋಚ್ ಇಂಡಸ್ಟ್ರೀಸ್ (ಕೋಚ್ ಫ್ಯಾಮಿಲಿ)

ಕೋಚ್ ಇಂಡಸ್ಟ್ರೀಸ್ ಇದು ಪೆಟ್ರೋಕೆಮಿಕಲ್ ಉತ್ಪನ್ನಗಳ ಬಹುದೊಡ್ಡ ಕಂಪನಿಯಾಗಿದೆ. ಚಾರ್ಲ್ಸ ಮತ್ತು ಡೇವಿಡ್ ಎಂಬುವರು ಕಂಪನಿಯ ಶೇ. 84 ರಷ್ಟು ಪಾಲನ್ನು ಹೊಂದಿದ್ದಾರೆ.

7. ಬಿಎಂಡಬ್ಲ್ಯೂ ಎಜಿ (ಕ್ವಾಂಡ್ಟ್ ಫ್ಯಾಮಿಲಿ)

ಉದ್ಯಮಿ ಗುಂಥರ್ ಕ್ವಾಂಡ್ಟ್ 1910 ರಲ್ಲಿ ಬಿಎಂಡಬ್ಲ್ಯೂ ಗ್ರುಪ್ ಆರಂಭಿಸಿದರು. ಆಗ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಾಝಿ ಜೀತದಾಳುಗಳನ್ನು ಕಂಪನಿಗೆ ದುಡಿಸಿಕೊಂಡ ಆರೋಪವೂ ಕಂಪನಿಯ ಮೇಲಿದೆ. ಆದರೂ ಕ್ವಾಂಡ್ಟ್ ಕುಟುಂಬ ಕಂಪನಿಯಲ್ಲಿ ಪ್ರಸ್ತುತ ಶೇ. 46.8 ರಷ್ಟು ಪಾಲು ಹೊಂದಿದೆ. ಗುಂಥರ್ ಕ್ವಾಂಡ್ಟ್ ಅವರ ಶತ ಕೋಟ್ಯಧಿಪತಿ ಮೊಮ್ಮಗ ಸ್ಟೀಫನ್ ಒಬ್ಬರೇ ಕಂಪನಿಯ ಶೇ. 17.4 ರಷ್ಟು ಶೇರುಗಳನ್ನು ಹೊಂದಿದ್ದಾರೆ. ವಾರ್ಷಿಕ 100 ಬಿಲಿಯನ್ ಡಾಲರ್‌ಗೂ ಅಧಿಕ ವಹಿವಾಟು ನಡೆಸುವ ಕಂಪನಿ ಪೆಟ್ರೋಲಿಯಂ ರಿಫೈನಿಂಗ್, ಶೇರು ವ್ಯವಹಾರ ಮುಂತಾದ ವ್ಯವಹಾರಗಳನ್ನು ನಡೆಸುತ್ತಿದೆ.
ವಿಶ್ವ ವಿಖ್ಯಾತ ಅಟೊಮೊಬೈಲ್ ಕಂಪನಿಯೂ ಆಗಿರುವ ಬಿಎಂಡಬ್ಲ್ಯೂ ವಾರ್ಷಿಕ 100.1 ಬಿಲಿಯನ್ ಡಾಲರ್ ಆದಾಯ ಹೊಂದಿದೆ. ಮತ್ತೊಂದು ಬೃಹತ್ ಅಟೊಮೊಬೈಲ್ ಕಂಪನಿ ರೋಲ್ಸ್ ರಾಯ್ಸ್ ಸಹ ಇದರ ಅಂಗಸಂಸ್ಥೆಯಾಗಿದೆ.

6. ಕಾರ್ಗಿಲ್ (ಕಾರ್ಗಿಲ್ ಮ್ಯಾಕ್‌ಮಿಲನ್ ಫ್ಯಾಮಿಲಿ)

ಕೃಷಿ ಉತ್ಪನ್ನಗಳ ಮಾರಾಟ ಕಂಪನಿ ಕಾರ್ಗಿಲ್ ಅಮೆರಿಕಾದ ಅತಿ ದೊಡ್ಡ ಖಾಸಗಿ ಕಂಪನಿಯಾಗಿದೆ. 1865 ರಲ್ಲಿ ವಿಲಿಯಂ ಡಬ್ಲ್ಯೂ. ಕಾರ್ಗಿಲ್ ಅವರು ಸ್ಥಾಪಿಸಿದ ಈ ಕಂಪನಿಯಲ್ಲಿ ಈಗಲೂ ಅವರು ಕುಟುಂಬಸ್ಥರು ಶೇ. 100 ರಷ್ಟು ಪಾಲು ಹೊಂದಿದ್ದಾರೆ.

5. ಎಕ್ಸಾರ್ ಸ್ಪಾ (ಆಗ್ನೆಲ್ಲಿ ಫ್ಯಾಮಿಲಿ)

ಇಟಲಿಯ ಕೆನಡಿಗಳು ಎಂದು ಕರೆಸಿಕೊಳ್ಳುವ ಆಗ್ನೆಲ್ಲಿ ಕುಟುಂಬ ಇಟಲಿಯ ಬೃಹತ್ ಬಂಡವಾಳ ಹೂಡಿಕೆ ಕಂಪನಿ ಎಕ್ಸಾರ್‌ನಲ್ಲಿ ಶೇ. 53 ರಷ್ಟು ಪಾಲು ಹೊಂದಿದ್ದಾರೆ. ೧೮೯೯ ರಲ್ಲಿ ಫಿಯಾಟ್ ಕಂಪನಿ ಆರಂಭಿಸಿದ ಗಿಯೊವಾನಿ ಆಗ್ನೆಲ್ಲಿ ಅವರ 5ನೇ ತಲೆಮಾರಿನ ಮೊಮ್ಮಗ ಜಾನ್ ಎಲ್ಕಾನ್ ಪ್ರಸ್ತುತ ಕಂಪನಿಯ ಚೇರಮನ್ ಆಗಿದ್ದಾರೆ.

4. ಫೋರ್ಡ್ ಮೋಟರ್ (ಫೋರ್ಡ್ ಫ್ಯಾಮಿಲಿ)

1903 ರಲ್ಲಿ ಹೆನ್ರಿ ಫೋರ್ಡ್ ಎಂಬುವರು ಫೋರ್ಡ್ ಮೋಟರ್ ಕಂಪನಿ ಆರಂಭಿಸಿದರು. ಈಗಲೂ ಫೋರ್ಡ್ ಕುಟುಂಬಸ್ಥರು ಕಂಪನಿಯಲ್ಲಿ ಶೇ. 40 ರಷ್ಟು ಅಧಿಕಾರ ಪಡೆದಿದ್ದಾರೆ. ಕಂಪನಿಯ ವ್ಯವಹಾರವೆಲ್ಲವೂ ಫೋರ್ಡ್ ಕುಟುಂಬದ ಕೈಯಲ್ಲಿಯೇ ಇದ್ದು, ಹೆನ್ರಿ ಫೋರ್ಡ್ ಅವರ ಮರಿ ಮೊಮ್ಮಗ ವಿಲಿಯಂ ಕ್ಲೇ ಫೋರ್ಡ್ ಜ್ಯೂನಿಯರ್ ಅವರು ಪ್ರಸ್ತುತ ಕಂಪನಿಯ ಎಕ್ಸೆಕ್ಯುಟಿವ್ ಚೇರಮನ್ ಹಾಗೂ ಮತ್ತೊಬ್ಬ ಮರಿ ಮೊಮ್ಮಗ ಹೆನ್ರಿ ಫೋರ್ಡ್-3 ಅವರು ಕಂಪನಿಯ ಗ್ಲೋಬಲ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ.

3. ಬರ್ಕಶೈರ್ ಹಾಥವೇ (ಬಫೆಟ್ ಫ್ಯಾಮಿಲಿ)

ವಾರೆನ್ ಬಫೆಟ್ ಅವರು ಆರಂಭಿಸಿದ ಬಂಡವಾಳ ಹೂಡಿಕೆ ಕಂಪನಿ ಬರ್ಕಶೈರ್ ಹಾಥವೇ ಜಗತ್ತಿನ ನಾಲ್ಕನೇ ಅತಿದೊಡ್ಡ ಸಾರ್ವಜನಿಕ ಕಂಪನಿಯಾಗಿದೆ. ವಾರ್ಷಿಕ ೧೯೯.೯ ಡಾಲರ್ ಆದಾಯ ಹೊಂದಿರುವ ಈ ಕಂಪನಿಯನ್ನು ಈಗ ವಾರೆನ್ ಬಫೆಟ್ ಅವರ ಹಿರಿಯ ಮಗ ಪೀಟರ್ ಹಾಗೂ ಮಗಳು ಸುಸಾನ್ ಮುನ್ನಡೆಸುತ್ತಿದ್ದಾರೆ.

2. ವೋಕ್ಸ್‌ವ್ಯಾಗನ್ ಎಜಿ (ಪೋರ್ಶ ಫ್ಯಾಮಿಲಿ)

ವಿಶ್ವದ ಅತಿ ದೊಡ್ಡ ಅಟೊಮೊಬೈಲ್ ಕಂಪನಿಗಳಲ್ಲೊಂದಾಗಿರುವ ವೋಕ್ಸ್‌ವ್ಯಾಗನ್ ಎಜಿ ಯನ್ನು ಫರ್ಡಿನಾಂಡ್ ಪೋರ್ಶ ಎಂಬುವರು ಆರಂಭಿಸಿದರು. ಈಗಲೂ ಇವರ ಕುಟುಂಬಸ್ಥರೇ ಕಂಪನಿಯ ಬಹುಪಾಲು ಒಡೆತನ ಹೊಂದಿದ್ದಾರೆ. ಫರ್ಡಿನಾಂಡ್ ಪೋರ್ಶ ಅವರ ಮರಿ ಮೊಮ್ಮಗ ಫರ್ಡಿನಾಂಡ್ ಆಲಿವರ್ ಪೋರ್ಶ ಅವರು ಕಂಪನಿಯ ಆಡಳಿತ ಮಂಡಳಿಯಲ್ಲಿ ನಿರ್ಣಾಯಕ ಹುದ್ದೆಯಲ್ಲಿ ಇದ್ದಾರೆ.

1. ವಾಲ್‌ಮಾರ್ಟ್ (ವಾಲ್ಟನ್ ಫ್ಯಾಮಿಲಿ)

ಜಗತ್ತಿನ ಅತಿ ದೊಡ್ಡ ರಿಟೇಲ್ ಸಮೂಹ ಹಾಗೂ ಆದಾಯದ ದೃಷ್ಟಿಯಿಂದ ಅಮೆರಿಕಾದ ಅತಿ ದೊಡ್ಡ ಕಂಪನಿಯಾದ ವಾಲ್‌ಮಾರ್ಟ್ ಸುಪರ್ ಮಾರ್ಕೆಟ್ ಕಂಪನಿಯಲ್ಲಿ ವಾಲ್ಟನ್ ಕುಟುಂಬ ಶೇ. 51 ರಷ್ಟು ಪಾಲು ಹೊಂದಿದೆ. 2.2 ಮಿಲಿಯನ್ ಉದ್ಯೋಗಿಗಳೊಂದಿಗೆ ವಾರ್ಷಿಕ 485.7 ಬಿಲಿಯನ್ ಡಾಲರ್ ವಹಿವಾಟನ್ನು ಕಂಪನಿ ನಡೆಸುತ್ತಿದೆ. ೧೯೬೨ ರಲ್ಲಿ ಜಂಟಿಯಾಗಿ ಕಂಪನಿ ಆರಂಭಿಸಿದ ಸ್ಯಾಮ್ ಹಾಗೂ ಜೇಮ್ಸ್ ವಾಲ್ಟನ್ ಅವರ ಕುಟುಂಬಸ್ಥರು ಕಂಪನಿಯಲ್ಲಿ ಬಹುಪಾಲು ಶೇರು ಹೊಂದಿದ್ದಾರೆ. ವಾಲ್ಟನ್ ಕುಟುಂಬದ ಎಸ್. ರಾಬ್ಸನ್ ವಾಲ್ಟನ್ ಇವರು ೧೯೯೨ ರಿಂದ ೨೦೧೫ ರವರೆಗೆ ವಾಲ್‌ಮಾರ್ಟ್ ಕಂಪನಿಯ ಚೇರಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಒಟ್ಟು 7 ಜನ ವಾಲ್ಟನ್ ಕುಟುಂಬದ ಸದಸ್ಯರು ಬಿಲಿಯನೇರ್‌ಗಳಾಗಿದ್ದಾರೆ.

Read more about: india money business finance news
Have a great day!
Read more...

English Summary

Here are the 16 largest family-owned firms on the planet.