ಇವರು ಬಾಲಿವುಡ್ ನಟಿಯರ ಅತೀ ಶ್ರೀಮಂತ ಗಂಡಂದಿರು, ಸಂಪತ್ತು ಎಷ್ಟಿದೆ ಗೊತ್ತೆ?

ಬಾಲಿವುಡ್ ಅಂಗಳದ ಜನಪ್ರಿಯ ನಟಿಯರ ಗಂಡಂದಿರ ನಿವ್ವಳ ಸಂಪತ್ತಿನ ಬಗ್ಗೆ ಕುತೂಹಲ ಇರುವಂಥದ್ದು ಸಹಜ. ಕೆಲ ನಟಿಯರು ಬಾಲಿವುಡ್ ಉದ್ಯಮವರನ್ನು ಮದುವೆಯಾಗಿದ್ದರೆ, ಇನ್ನೂ ಕೆಲವರು ಚಲನಚಿತ್ರ ರಂಗದ ಹೊರಗಿನವರನ್ನು ಆಯ್ಕೆ ಮಾಡಿದ್ದಾರೆ. ಅದೇನೆ ಇರಲಿ, ಅವರೆಲ್ಲಾ ಬಾಲಿವುಡ್ ಅಂಗಳದಲ್ಲಿನ ಅತಿ ಪ್ರಭಾವಶಾಲಿ ದಂಪತಿಗಳೆನಿಸಿದ್ದಾರೆ.

ಇಲ್ಲಿ ಶ್ರೀಮಂತರಲ್ಲಿಯೇ ಶ್ರೀಮಂತರಾಗಿರುವ ಕೆಲವು ನಟಿಯರ ಗಂಡಂದಿರ ಸಂಪತ್ತಿನ ನಿವ್ವಳ ಮೌಲ್ಯ ನೀಡಲಾಗಿದೆ ನೋಡೋಣ.. ಇವರು ಬಾಲಿವುಡ್ ನ 10 ಅತೀ ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತಾ?

ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ

ಈ ವರ್ಷ ಮೇ 8 ರಂದು ಇಬ್ಬರೂ ವಿವಾಹವಾಗಿದ್ದಾರೆ. ಆನಂದ್ ಅವರ ನೈಜ ಮೌಲ್ಯವು ತಿಳಿದಿಲ್ಲವಾದರೂ, ಅವರ ವಾರ್ಷಿಕ ವ್ಯವಹಾರ ವಹಿವಾಟು ಸುಮಾರು ರೂ. 300 ಕೋಟಿ ಆಗಿದೆ. ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ

ನವೆಂಬರ್ 22, 2009 ರಂದು ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ರಾಜ್ ಕುಂದ್ರಾ ಅವರ ನಿವ್ವಳ ಮೌಲ್ಯ ಸುಮಾರು 400 ಮಿಲಿಯನ್ ಡಾಲರ್ ಅಥವಾ ರೂ. 2700 ಕೋಟಿ ಎಂದು ವರದಿಯಾಗಿದೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ

ಇವರು 2017 ಡಿಸೆಂಬರ್ ನಲ್ಲಿ ವಿವಾಹವಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಶ್ರೀಮಂತ ಕ್ರಿಕೆಟಿಗರಾಗಿದ್ದು, ಅವರು ಉದ್ಯಮಿ ಅಲ್ಲ. ಕೊಹ್ಲಿ ಸುಮಾರು 60 ಮಿಲಿಯನ್ ಡಾಲರ್ ಅಥವಾ ರೂ. 372 ಕೋಟಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅನುಷ್ಕಾ ಶರ್ಮಾ ಕೂಡ ಬಾಲಿವುಡ್ ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತದ ಟಾಪ್ 10 ಅತೀ ಶ್ರೀಮಂತ ಖ್ಯಾತ ಸೆಲೆಬ್ರೆಟಿಗಳು

ವಿದ್ಯಾ ಬಾಲನ್ ಮತ್ತು ಸಿದ್ಧಾರ್ಥ ರಾಯ್ ಕಪೂರ್

ಇವರು ಡಿಸೆಂಬರ್ 14, 2012 ರಂದು ವಿವಾಹವಾದರು. ಸಿದ್ದಾರ್ಥ್ ನಿರ್ಮಾಪಕರಾಗಿ ಅಷ್ಟೇ ಅಲ್ಲ, ದೇಶದ ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡಕ್ಷನ್ಸ್ ಕ್ಷೇತ್ರದ ಪ್ರಬಲ ವ್ಯಕ್ತಿಯಾಗಿದ್ದಾರೆ. ಅವರು ರೂ. 3300 ಕೋಟಿ ಮೊತ್ತದ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ.

ಅಸಿನ್ ಮತ್ತು ರಾಹುಲ್ ಶರ್ಮಾ

ಅಸಿನ್ ಉದ್ಯಮಿ ರಾಹುಲ್ ಅವರನ್ನು ಜನವರಿ 19, 2016 ರಂದು ವಿವಾಹವಾದರು. ಮೈಕ್ರೋಮ್ಯಾಕ್ಸ್ ಮಾಲೀಕರಾದ ಶರ್ಮಾ ಸುಮಾರು ರೂ. 1400 ಕೋಟಿಗಳಷ್ಟು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಸಹಿಲ್ ಸಂಘ ಮತ್ತು ದಿಯಾ ಮಿರ್ಜಾ

ದಿಯಾ ಅಕ್ಟೋಬರ್ 18, 2014 ರಂದು ನಿರ್ಮಾಪಕ ಸಾಹಿಲ್ ರನ್ನು ವಿವಾಹವಾದರು. ಸಹಿಲ್ ಅವರ ನಿವ್ವಳ ಮೌಲ್ಯ ಸುಮಾರು 20 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ.

ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ

ಜೂಹಿ ಚಾವ್ಲಾ 1995 ರ ಡಿಸೆಂಬರ್ ನಲ್ಲಿ ಉದ್ಯಮಿ ಜಯ್ ಮೆಹ್ತಾರನ್ನು ವಿವಾಹವಾದರು. ಕೈಗಾರಿಕೋದ್ಯಮಿ ಜಯ್ ಅವರಿಗೆ $ 350 ದಶಲಕ್ಷ ಅಥವಾ ರೂ. 2400 ಕೋಟಿಗಳಷ್ಟು ನಿವ್ವಳ ಮೌಲ್ಯವಿದೆ ಎಂದು ಹೇಳಲಾಗಿದೆ.

ಶ್ರೀದೇವಿ ಮತ್ತು ಬೋನಿ ಕಪೂರ್

ದಿವಂಗತ ನಟಿ ಶ್ರೀದೇವಿ ನಿರ್ಮಾಪಕ ಬೋನಿ ಅವರನ್ನು ಜೂನ್ 2, 1996 ರಂದು ವಿವಾಹವಾದರು. ಕಪೂರ್ ಅವರ ನಿವ್ವಳ ಮೌಲ್ಯ ಸುಮಾರು ರೂ. 236 ಕೋಟಿ.

ರವೀನಾ ಟಂಡನ್ ಮತ್ತು ಅನಿಲ್ ಥದಾನಿ

ರವೀನಾ ಫೆಬ್ರುವರಿ 22, 2004 ರಂದು ವಿತರಕ ಅನಿಲ್ ಅವರನ್ನು ವಿವಾಹವಾದರು. ಉದ್ಯಮಿ ಅನಿಲ್ ಒಂದು ಸಮೃದ್ಧವಾದ ನಿವ್ವಳ ಮೌಲ್ಯವನ್ನು ಹೊಂದಿದ್ದರೂ, ನಿಖರವಾದ ಮೊತ್ತವು ತಿಳಿದಿಲ್ಲ.

ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ

ಇಬ್ಬರು ರಹಸ್ಯವಾಗಿ ಏಪ್ರಿಲ್ 21, 2014 ರಂದು ವಿವಾಹವಾದರು. ಆದಿತ್ಯ ಚೋಪ್ರಾ ಅವರ ಅಂದಾಜು ಮೌಲ್ಯವು ಸುಮಾರು ರೂ. 6350 ಕೋಟಿ.

ಸೆಲೀನಾ ಜೇಟ್ಲಿ ಮತ್ತು ಪೀಟರ್ ಹಾಗ್

ಸೆಲಿನಾ ಜೇಟ್ಲಿ ಜುಲೈ 23, 2011 ರಂದು ಶ್ರೀಮಂತ ಹೊಟೇಲ್ ಉದ್ಯಮಿ ಪೀಟರ್ ಹಾಗ್ ರನ್ನು ಮದುವೆಯಾದರು. ಇವರ ನಿವ್ವಳ ಮೌಲ್ಯ ಸುಮಾರು ರೂ. 16.4 ಕೋಟಿ.

Have a great day!
Read more...

English Summary

While there are Bollywood actresses who found love within the industry, there are some who chose to marry outside the film fraternity.