ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಮಟ್ಟ 72.90ಕ್ಕೆ ಕುಸಿತ

ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರವೂ ಮುಂದುವರೆದಿದ್ದು, ಇಂದು ಹೊಸ ದಾಖಲೆಯ ಮಟ್ಟ 72.90ಕ್ಕೆ ಕುಸಿತ ಕಂಡಿದೆ.

ಈ ದಿನ ಬೆಳಿಗ್ಗೆ ರೂಪಾಯಿ ಮೌಲ್ಯದ ಕುಸಿತದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ರೂಪಾಯಿ ಮೌಲ್ಯದ ಕುಸಿತದಿಂದಾಗಿ ಸಂವೇದಿ ಸೂಚ್ಯಂಕಗಳು ಕೂಡಾ ಕುಸಿದಿವೆ.
ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ೭೮ ಡಾಲರ್ ದಾಟಿದೆ. ಜೊತೆಗೆ ಡಾಲರ್ ವಿಶ್ವದ ಇತರೆ ಕರೆನ್ಸಿಗಳ ಜತೆಗಿನ ವಿನಿಮಯ ದರದಲ್ಲಿ ಏರಿಕೆ ಕಂಡಿದೆ.

ಏತನ್ಮಧ್ಯೆ, ಸೆನ್ಸೆಕ್ಸ್ 11 ಪಾಯಿಂಟ್ ಗಳ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದು, ನಿಫ್ಟಿ ೩೩ ಪಾಯಿಂಟ್ಗಳ ಲಾಭದೊಂದಿಗೆ ವ್ಯಾಪಾರ ನಡೆಸುತ್ತಿದೆ. ರೂಪಾಯಿ ತೀವ್ರ ಕುಸಿತ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ತೈಲ ಮಾರಾಟದ ಷೇರುಗಳು ತೀವ್ರ ಮಾರಾಟದ ಒತ್ತಡ ಕಾಣುತ್ತಿದ್ದವು. 5 ಎಥೆನಾಲ್ ಘಟಕ ಸ್ಥಾಪನೆ, ಪೆಟ್ರೋಲ್ ರೂ. 55, ಡೀಸೆಲ್ 50 ರೂ.ಗೆ ಲಭ್ಯ

Have a great day!
Read more...

English Summary

The rupee today hit a new record low of 72.90 against the dollar, plunging further by 21 paise over Tuesday's close.