ಆಧಾರ್ ನೋಂದಣಿ ತಂತ್ರಾಂಶ ಹ್ಯಾಕ್ ಬಗ್ಗೆ ಯುಐಡಿಎಐ ಹೇಳಿದ್ದೇನು?

ಆಧಾರ್ ದಾಖಲಾತಿ ತಂತ್ರಾಂಶವನ್ನು ಹ್ಯಾಕ್ ಮಾಡಲಾಗಿದೆ ಎಂದು ಮಾದ್ಯಮಗಳಲ್ಲಿ ವರದಿಯಾಗಿರುವ ಸುದ್ದಿ ಸಂಪೂರ್ಣವಾಗಿ ತಪ್ಪು ಹಾಗು ಬೇಜವಾಬ್ದಾರಿಯಿಂದ ಕೂಡಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ತಿಳಿಸಿದೆ.


ಆಧಾರ್ ನೋಂದಣಿ ತಂತ್ರಾಂಶ ಸುರಕ್ಷಿತವಾಗಿದ್ದು, ಈ ಬಗ್ಗೆ ಭಯ ಬೇಡ ಎಂದು ಯುಐಡಿಎಐ ಸ್ಪಷ್ಟನೆ ನೀಡಿದೆ.
ಆಧಾರ್ ನೋಂದಣಿ ಮಾಡಿಸುವವರ ಬಯೋಮೆಟ್ರಿಕ್ ಹಾಗು ಮಾಹಿತಿಯನ್ನು ದಾಖಲಿಸಿದ ಬಳಿಕವಷ್ಟೇ ಈ ತಂತ್ರಾಂಶ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಆಧಾರ್ ತಂತ್ರಾಂಶ ದುರುಪಯೋಗಪಡಿಸಿಕೊಂಡು ನಕಲಿ ಆಧಾರ್ ಸಂಖ್ಯೆ ಸೃಷ್ಟಿಸಲು ಸಾಧ್ಯವಿಲ್ಲವೆಂದು ಯುಐಡಿಎಐ ಹೇಳಿದೆ.

ಆಧಾರ್ ನೋಂದಣಿಗೆ ತಂತ್ರಾಂಶವನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ, ನಕಲಿ ಆಧಾರ್ ಸೃಷ್ಟಿ ಮಾಡಲಾಗುತ್ತಿದೆ ಎಂದು ಮಾಧ್ಯಮವೊಂದರಲ್ಲಿ ವರದಿ ಪ್ರಕಟಗೊಂಡು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇವರು ಬಾಲಿವುಡ್ ನಟಿಯರ ಅತೀ ಶ್ರೀಮಂತ ಗಂಡಂದಿರು, ಸಂಪತ್ತು ಎಷ್ಟಿದೆ ಗೊತ್ತೆ?

Read more about: ಆಧಾರ್ uidai aadhar

Have a great day!
Read more...

English Summary

UIDAI says Aadhaar software hack claims completely baseless and false.