For Quick Alerts
ALLOW NOTIFICATIONS  
For Daily Alerts

ರೆಪೊ ಮತ್ತು ರಿವರ್ಸ್ ರೆಪೊ ಅಂದ್ರೆ ಏನಣ್ಣ?

|

ರೆಪೊ ಮತ್ತು ರಿವರ್ಸ್ ರೆಪೊ ಅಂದ್ರೆ ಏನಣ್ಣ?
ರೆಪೊ ಮತ್ತು ರಿವರ್ಸ್ ರೆಪೊ ಎಂಬೆರಡು ಪದಗಳನ್ನು ನೀವು ಆಗಾಗ ಕೇಳಿರಬಹುದು. ಆರ್‌ಬಿಐ ರೆಪೊ ಅಥವಾ ರಿವರ್ಸ್ ಮೇಲಿನ ಬಡ್ಡಿದರ ಕಡಿತ ಮಾಡಿದೆ ಅಥವಾ ಮಾಡಿಲ್ಲವೆಂಬ ವರದಿಗಳು ಆಗಾಗ ಪ್ರಕಟವಾಗುತ್ತಿರುತ್ತವೆ. ಹಣದುಬ್ಬರ ನಿಯಂತ್ರಣ ಸೇರಿದಂತೆ ಬಿಸಿನೆಸ್ ಲೋಕದಲ್ಲಿ ಇದರ ಪಾತ್ರ ಹಿರಿದು ಎನ್ನುವುದರಲ್ಲಿ ಎರಡು ಮಾತಿಲ್ಲ.

ರೆಪೊ ಮತ್ತು ರಿವರ್ಸ್ ರೆಪೊ ಕುರಿತು ತಿಳಿಯದೆ ಇರುವವರೂ ಇರಬಹುದು. ಅವರಿಗಾಗಿ ರೆಪೊ ಮತ್ತು ರಿವರ್ಸ್ ರೆಪೊ ವ್ಯಾಖ್ಯಾನ ಇಲ್ಲಿ ನೀಡಲಾಗಿದೆ.

 

ರೆಪೊ ದರ: ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಫಂಡ್ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‌ಬಿಐ ಕೊಂಚ ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರವನ್ನೇ ರೆಪೊ ದರ ಎನ್ನಲಾಗುತ್ತದೆ.

 

ಬ್ಯಾಂಕುಗಳಿಗೆ ಸಾಲ ಪಡೆಯುವುದು ಹೆಚ್ಚು ಕಠಿಣಗೊಳಿಸಲು ಆರ್‌ಬಿಐ ಇಚ್ಚಿಸಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವೂ ರೆಪೊ ದರಗಳನ್ನು ಹೆಚ್ಚಿಸುತ್ತದೆ. ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ ಎಂದರೆ ಅತಿಶಯವಾಗದು.

ರಿವರ್ಸ್ ರೆಪೊ ದರ: ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ. ಹೀಗಾಗಿ ಇದು ರೆಪೊ ದರಕ್ಕಿಂತ ಸಂಪೂರ್ಣ ಉಲ್ಟಾ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಧಿಕ ಹಣವು ಚಲಾವಣೆಯಾಗುತ್ತಿದೆ ಎಂದು ಅನಿಸಿದರೆ ಆರ್‌ಬಿಐ ರಿವರ್ಸ್ ರೆಪೊ ಎಂಬ ಆಯುಧವನ್ನು ಬಳಸುತ್ತದೆ. ಎಲ್ಲಾದರೂ ರಿವರ್ಸ್ ರೆಪೊ ದರ ಹೆಚ್ಚಾಗಿದೆಯೆಂದರೆ ಆರ್ ಬಿಐ ಬ್ಯಾಂಕುಗಳಿಂದ ಆಕರ್ಷಕ ಬಡ್ಡಿದರಕ್ಕೆ ಹಣ ಸಾಲ ಪಡೆಯುತ್ತಿದೆ ಎಂದರ್ಥ.

ಬ್ಯಾಂಕುಗಳು ಕೂಡ ಆರ್‌ಬಿಐಗೆ ಸಂಪೂರ್ಣ ಖುಷಿಯಿಂದಲೇ ಸಾಲ ನೀಡುತ್ತವೆ. ಯಾಕೆಂದರೆ ಸುರಕ್ಷಿತ ಕೈಗೆ ಸಾಲ ಹಸ್ತಾಂತರಿಸಲಾಗಿದೆ ಎಂಬ ಸಂತೃಪ್ತಿ ಒಂದೆಡೆ ಮತ್ತು ಸಮರ್ಪಕ ಬಡ್ಡಿದರ ದೊರಕುತ್ತದೆ ಎನ್ನುವ ತೃಪ್ತಿ ಇನ್ನೊಂದೆಡೆ ಬ್ಯಾಂಕುಗಳಿಗಿರುತ್ತವೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವು ಸಮರ್ಪಕವಾಗಿರಲು ಆರ್‌ಬಿಐ ರೆಪೊ ಮತ್ತು ರಿವರ್ಸ್ ರೆಪೊ ಎಂಬ ಹರಿಗೋಲು ಬಳಕೆ ಮಾಡುತ್ತಿದೆ ಎನ್ನಬಹುದು.

English summary

Concept of Repo Rate and Reverse Repo Rate | ರೆಪೊ ಮತ್ತು ರಿವರ್ಸ್ ರೆಪೊ ವ್ಯಾಖ್ಯಾನ

Concept of Repo Rate and Reverse Repo Rate. Repo rate also known as 'Repurchase rate' is the rate at which banks borrow funds from the RBI to meet short-term requirements. Repo rate also known as 'Repurchase rate' is the rate at which banks borrow funds from the RBI to meet short-term requirements.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X