For Quick Alerts
ALLOW NOTIFICATIONS  
For Daily Alerts

ಮೂಲದಲ್ಲಿ ತೆರಿಗೆ ಕಡಿತ(TDS) ಎಂದರೇನು ಗುರು?

By Mahesh
|

ಮೂಲದಲ್ಲಿ ತೆರಿಗೆ ಕಡಿತ(TDS) ಎಂದರೇನು?
ICICI Bank: Quotes, News
BSE 411.70BSE Quote1.6 (0.39%)
NSE 411.50NSE Quote1.2 (0.29%)
Indices
Nifty11,346.20Nifty Quote-73.05 [0.64%]
ಬೆಂಗಳೂರು, ಏ.15: ಗಳಿಕೆಯ ಜೊತೆಗೆ ಪಾವತಿ ಎಂಬ ಮಂತ್ರ ಹೊಂದಿರುವ ಮೂಲದಲ್ಲಿ ತೆರಿಗೆ ಕಡಿತ(ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಬಗ್ಗೆ ಒಂದಷ್ಟು ಅನುಮಾನಗಳು ಇರುವುದು ಸಹಜ. ಆದಾಯ ನೀಡುವ ಉದ್ಯೋಗದಾತ ಹಾಗೂ ತೆರಿಗೆ ಸಂಸ್ಥೆ ಜೊತೆ ತೆರಿಗೆ ವ್ಯವಹಾರಕ್ಕೆ ಇದೇ ಸಾಧನ. ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹಣ ತುಂಬುವುದು ಹೀಗೆ.

 

ಪ್ರತಿ ತಿಂಗಳ ಕೊನೆಯೊಳಗೆ ಟಿಡಿಎಸ್ ತೆರಿಗೆ ಮುರಿದುಕೊಳ್ಳುವ ಉದ್ಯೋಗದಾತರು ಅದನ್ನು ಒಂದೇ ವಾರದ ಅವಧಿಯಲ್ಲಿ ಠೇವಣಿ ಇಡಬೇಕು. ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಳ್ಳುವ ಎಲ್ಲಾ ಉದ್ಯೋಗದಾತರು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಕಡ್ಡಾಯವಾಗಿ ಸಲ್ಲಿಸಬೇಕು. ಪ್ರತಿ ವರ್ಷದ ಜುಲೈ 15, ಅಕ್ಟೋಬರ್ 15, ಜನವರಿ 15 ಮತ್ತು ಮೇ 15 ರೊಳಗೆ ಉದ್ಯೋಗದಾತರು ಅಥವಾ ತೆರಿಗೆ ಮುರಿದುಕೊಳ್ಳುವಾತ ವಿವರ ಸಲ್ಲಿಸುವುದು ಕಡ್ಡಾಯ.

ಆದಾಯ ಅಥವಾ ವರಮಾನ ನೀಡುವ(ಪಾವತಿಸುವ) ವ್ಯಕ್ತಿಯು(ಉದಾಹರಣೆಗೆ ಉದ್ಯೋಗದಾತ) ತೆರಿಗೆಯನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಆದಾಯದಾರನಿಗೆ ನೀಡುತ್ತಾನೆ. ಮೂಲದಲ್ಲಿ ತೆರಿಗೆ ಕಡಿತ ಮಾಡಿರುವುದಕ್ಕೆ ಉದ್ಯೋಗದಾತರು ಉದ್ಯೋಗಿಗೆ ಟಿಡಿಎಸ್ ಪ್ರಮಾಣಪತ್ರ ಒದಗಿಸುತ್ತಾರೆ. ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣ ಪತ್ರದಲ್ಲಿ ಎರಡು ಬಗೆ ಇದೆ

ಸಂಬಳದಾರರು: ಅರ್ಜಿ 16: ಈ ಅರ್ಜಿ ಮೂಲಕ ಸಂಬಳದಾರರ ತೆರಿಗೆ ಪಾವತಿ ಹಾಗೂ ಕಡಿತದ ಸಂಪೂರ್ಣ ಮಾಹಿತಿ ಸಿಗಲಿದೆ.

ಸಂಬಳದಾರರಲ್ಲದವರು: ಅರ್ಜಿ 16 A: ಇದು ಕೂಡಾ ಪ್ರತ್ಯೇಕವಾಗಿ ಪ್ರತಿ ತೆರಿಗೆ ಕಡಿತ ಹಾಗೂ ಪಾವತಿ ವಿವರಗಳನ್ನು ಹೊಂದಿರುತ್ತದೆ. ಪ್ರತ್ಯೇಕ ವಿಭಾಗಕ್ಕೆ ಪ್ರತ್ಯೇಕವಾಗಿ ಅರ್ಜಿ ತುಂಬಬೇಕಾಗುತ್ತದೆ.

ಉದ್ಯೋಗಿಗಳಿಗೆ ಪಾವತಿಸುವ ವೇತನದಂತಹ ಆದಾಯಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ. ಅದೇ ರೀತಿ, ಬ್ಯಾಂಕ್ ಮತ್ತು ಬಾಂಡ್ ಠೇವಣಿಗಳಿಗೆ ಸಿಗುವ ಬಡ್ಡಿಹಣ, ಲಾಟರಿ ಮತ್ತು ಕುದುರೆ ಸ್ಪರ್ಧೆಗಳಲ್ಲಿ ಗೆಲ್ಲುವ ಹಣ ಇತ್ಯಾದಿಗಳಿಗೆ ಟಿಡಿಎಸ್ ತೆರಿಗೆ ಕಟ್ಟಲೇಬೇಕು.

ಜೂಜಾಟದಲ್ಲಿ ಗೆದ್ದ ಬಹುಮಾನದ ಮೇಲೆ ಶೇ 30 ರಷ್ಟು TDS ಕಡಿತವಾಗಲಿದೆ. ಆದರೆ, ಲಾಟರಿ, ಮುಂತಾದ ಸ್ಪರ್ಧೆಗಳಲ್ಲಿ ಗೆದ್ದ ಮೊತ್ತಕ್ಕೆ ಟಿಡಿಎಸ್ ಕಡಿತ ಮೂಲಧನ ಮಿತಿ 5000 ರು ನಷ್ಟಿರುತ್ತದೆ. ಇದೇ ಮೊತ್ತ ಕುದುರೆ ಜೂಜಿಗೆ 2500 ರು ನಷ್ಟಿದೆ.

ಟಿಡಿಎಸ್ ಮರು ಪಾವತಿ? : ಟಿಡಿಎಸ್ ರೀಫಂಡ್ ಸಾಧ್ಯವಿದೆ. ಕೆಲವು ಸಂದರ್ಭದಲ್ಲಿ ಮೂಲ ತೆರಿಗೆಗಿಂತ ಹೆಚ್ಚಿನ ಟಿಡಿಎಸ್ ಕಡಿತವಾಗಿದ್ದರೆ ರೀಫಂಡ್ ಗೆ ಬೇಡಿಕೆ ಇಡಬಹುದು.

ಟಿಡಿಎಸ್ ದರಗಳು:

ವಾರ್ಷಿಕವಾಗಿ ಸಂಬಳದಿಂದ ಬರುವ ಆದಾಯ ಲೆಕ್ಕ ಹಾಕಲಾಗುವುದು ನಂತರ ವಾರ್ಷಿಕವಾಗಿ ಕಟ್ಟಬೇಕಾಗಿರುವ ತೆರಿಗೆಯ ವಿವರ ಸಂಗ್ರಹಿಸಲಾಗುವುದು. ಸರಾಸರಿ ದರದ ಮೇಲೆ ತೆರಿಗೆ ಕಡಿತ ಮಾಡಲಾಗುತ್ತದೆ. ಉದಾಹರಣೆಗೆ : ವಾರ್ಷಿಕವಾಗಿ 24,000 ರು ತೆರಿಗೆ ಕಟ್ಟಬೇಕಾದರೆ 2000 ರು ಟಿಡಿಎಸ್ ರೂಪದಲ್ಲಿ ಪ್ರತಿ ತಿಂಗಳು ಕಡಿತ ಮಾಡಲಾಗುತ್ತದೆ.

ಆರ್ಥಿಕ ಸುರಕ್ಷತೆ / ಡಿವಿಡೆಂಟ್/ ಬಡ್ಡಿ:

ಬ್ಯಾಂಕಿಂಗ್ ಸಂಸ್ಥೆ, ಕೋ ಆಪರೇಟಿವ್ ಸೊಸೈಟಿ, ಪೈನಾನ್ಸಿಂಗ್ ಅಥವಾ ವಸತಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಬಡ್ಡಿ ದರ ಮಿತಿ 10,000 ರು ತನಕ ಇದಕ್ಕೆ ಟಿಡಿಎಸ್ ಶೇ10 ರಷ್ಟು ಪಾವತಿ ಮಾಡಬೇಕಾಗುತ್ತದೆ.

English summary

What is Tax Deducted at Source (TDS)? | ಮೂಲದಲ್ಲಿ ತೆರಿಗೆ ಕಡಿತ(ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಎಂದರೇನು?

The concept of Tax Deducted at Source (TDS) envisages the principle of "pay as you earn". It facilitates sharing of responsibility of tax collection between the deductor and the tax administration.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more