For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಯಿಂದ ಬ್ಯಾಂಕಿಗೆ ವರ್ಗಾವಣೆ ಹೇಗೆ?

By Siddu
|

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಸರ್ಕಾರ ಕಳೆದ ವರ್ಷ ಪ್ರಾರಂಭಿಸಿದ್ದು, ಮಹೀಳಾ ಸಬಲೀಕರಣಕ್ಕೆ ಸಂಬಂಧಿತ ಪ್ರತಿಷ್ಠಿತ ಯೋಜನೆ ಆಗಿದೆ. ಇದು ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಖಾತೆ ಸೌಲಭ್ಯ ಹೊಂದಿರುತ್ತದೆ. ಹೆಣ್ಣು ಮಕ್ಕಳ ಶಿಕ್ಷಣ, ಮದುವೆ ಮತ್ತು ಹಣಕಾಸು ಸುರಕ್ಷತೆಗಾಗಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಧಾನ ಉದ್ದೇಶವಾಗಿದೆ.

ಈಗಾಗಲೇ ಯಾರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ತೆರೆದಿದ್ದಾರೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸಿರಬಹುದು.

ಅಂಚೆ ಕಚೇರಿ ಇರುವ ಪ್ರದೇಶ ದೂರ ಇರಬಹುದು, ಸಾರಿಗೆ ಸಂಪರ್ಕ ಇಲ್ಲದಿರಬಹುದು. ಇಲ್ಲವೇ ಆನ್ಲೈನ್ ಮೂಲಕ ವ್ಯವಹಾರ ಮಾಡಲು ಸೌಲಭ್ಯ ಇಲ್ಲದಿರಬಹುದು ಹೀಗೆ ಅನೇಕ ತೊಂದರೆಗಳನ್ನು ಎದುರಿಸಿರಬಹುದು.

ಸುಕನ್ಯಾ ಸಮೃದ್ಧಿ ಖಾತೆ ಅಂಚೆ ಕಚೇರಿಯಿಂದ ಬ್ಯಾಂಕಿಗೆ ವರ್ಗಾವಣೆ ಹೇಗೆ?

ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಯಾವುದಾದರೂ ತೊಂದರೆಗಳು ಆದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಬೇರೆ ಬ್ಯಾಂಕಿಗೆ ಇಲ್ಲವೇ ಅಂಚೆ ಕಚೇರಿಗೆ ವರ್ಗಾಯಿಸಬಹುದಾಗಿದೆ.

ಸುಕನ್ಯಾ ಸಮೃದ್ಧಿ ಖಾತೆಯ ಮೇಲೆ ಶೇ. 8.6ರಷ್ಟು ಬಡ್ಡಿದರವನ್ನು ವಾರ್ಷಿಕ ಲೆಕ್ಕಾಚಾರದ ಪ್ರಕಾರ ಒದಗಿಸಲಾಗುತ್ತದೆ. ಇದು ಕಾಲಕಾಲಕ್ಕೆ ಬದಲಾಗಬಹುದು.

ಸುಕನ್ಯಾ ಸಮೃದ್ಧಿ ಖಾತೆ ವರ್ಗಾವಣೆಯ ನಿಯಮಗಳು:
- ಸುಕನ್ಯಾ ಸಮೃದ್ಧಿ ಖಾತೆಯ ಪಾಸ್ಬುಕ್, ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ಚೀಟಿಯೊಂದಿಗೆ ಅಂಚೆ ಕಚೇರಿಗೆ ತೆರಳಿ.
- ಖಾತೆ ವರ್ಗಾವಣೆ ಮಾಡುವುದರ ಬಗ್ಗೆ ತಿಳಿಸಿ. ನಿಮಗೆ ಪಾಸ್ಬುಕ್ ದಾಖಲಾತಿಯೊಂದಿಗೆ ಶರಣಾಗಲು ಹೇಳಬಹುದು.
- ನಿಮ್ಮ ವಿಭಾಗದ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಹೆಸರಿನಲ್ಲಿ ಅರ್ಜಿಯನ್ನು ಬರೆದು ಕಾರಣಗಳನ್ನು ತಿಳಿಸಿಬೇಕು.
- ಅಂಚೆ ಕಚೇರಿ ಇಲಾಖೆಯವರು ಖಾತೆಯ ಪರಿಶೀಲನೆ ಮತ್ತು ಪ್ರಕ್ರಿಯೆಗೆ ಸಲ್ಪ ಸಮಯಾವಕಾಶ ತೆಗೆದುಕೊಳ್ಳಬಹುದು.
- ವರ್ಗಾವಣೆ ಮಾಡಲು ಬಯಸುವ ಬ್ಯಾಂಕು ಶಾಖೆಗೆ ಬೇಟಿ ನೀಡಿ.
- ಖಾತೆ ತೆರೆಯುವ ಅರ್ಜಿಯನ್ನು ತುಂಬಿ
- ದಾಖಲಾತಿಗಳನ್ನು ಸಂಬಂಧಿಸಿದ ಅಧಿಕಾರಿಗೆ ಸಲ್ಲಿಸಿ

ಈ ಪ್ರಕ್ರಿಯೆ ಮುಗಿಸಲು ಸಲ್ಪ ಸಮಯಾವಕಾಶ ಬೇಕಾಗಬಹುದು. ಕೆಲವು ಬಾರಿ ಸಂಬಂಧಪಟ್ಟ ಶಾಖೆಗೆ ಬೇಟಿ ನೀಡಬೇಕಾಗಬಹುದು.

English summary

How To Transfer Sukanya Samriddhi Account From Post Office To Bank?

Individuals who have opened Sukanya Samriddhi Account for their girl child in a post office, may find a few difficulties. These include constraints due to location of the post office and also due to the fact that the department does not accept any online payments.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X