For Quick Alerts
ALLOW NOTIFICATIONS  
For Daily Alerts

ಮೊಬೈಲ್ ನಲ್ಲಿ ಯುಪಿಐ ಆಪ್ ಡೌನ್ಲೋಡ್ ಮಾಡುವುದು ಹೇಗೆ?

By Siddu
|

ಡಿಜಿಟಲ್ ಇಂಡಿಯಾದಲ್ಲಿ ಯುಪಿಐ ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿದೆ ಎಂದರೆ ತಪ್ಪಾಗಲಾರದು. ಯುಪಿಐ ಮೂಲಕ ಹಣಕಾಸು ವ್ಯವಹಾರ, ಫಂಡ್ ವರ್ಗಾವಣೆ, ಬ್ಯಾಂಕು ವ್ಯವಹಾರ ಇನ್ನೂ ಸುಲಭವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಹಣ ರವಾನೆ, ಬಿಲ್ ಪಾವತಿ ಮತ್ತು ಸ್ವೀಕೃತಿಯನ್ನು ತುಂಬಾ ಸುಲಭಗೊಳಿಸಿರುವ ಮತ್ತು ನಗದು ರಹಿತ ವರ್ಗಾವಣೆ ಸೌಲಭ್ಯ ವಿಸ್ತರಣೆಗೆ ಹೊಸ ಬ್ಯಾಂಕಿಂಗ್ ಆಪ್ ಸೌಲಭ್ಯ ಕಾರ್ಯರೂಪಕ್ಕೆ ಬಂದಿದೆ. ಇದರಿಂದಾಗಿ ಎಸ್ಎಂಎಸ್ ಕಳಿಸಿದಷ್ಟೇ ಸರಳವಾಗಿ ಹಣ ಪಾವತಿ ಮಾಡಬಹುದಾಗಿದೆ. ಯುಪಿಐ ಎಂದರೇನು?ಲಾಭಗಳೇನು?

ಹಾಗಿದ್ದರೆ ಯುಪಿಐ ಎಂದರೇನು? ಪ್ರಯೋಜನಗಳೇನು? ಇದನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡದೆ ಇರುವುದಿಲ್ಲ. ಅದರ ಸಂಕ್ಷಿಪ್ತ ನೋಟ ಇಲ್ಲಿದೆ...

ಯುಪಿಐ ಆಫ್ ಡೌನ್ಲೋಡ್ ಹೇಗೆ?
 

ಯುಪಿಐ ಆಫ್ ಡೌನ್ಲೋಡ್ ಹೇಗೆ?

1. ಗೂಗಲ್ ಪ್ಲೇ ಸ್ಟೋರ್ ಮೂಲಕ ನಿಮ್ಮ ಬ್ಯಾಂಕಿನ ಯುಪಿಐ ಆಪ್ ಡೌನ್ಲೋಡ್ ಮಾಡಿ

2. ಸರಿಯಾದ ವಿಳಾಸ ನಮೂದಿಸಿ ಲಾಗಿನ್ ಆಗಿ(ಉದಾ: ವರ್ಚುವಲ್ ಐಡಿ 12345@sbi)

3. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ

4. ಮೊಬೈಲ್ ಬ್ಯಾಂಕಿಂಗ್ ಗಾಗಿ ಮೊಬೈಲ್ ಪಿನ್ ಅಥಾವ mಪಿನ್ ರಚಿಸಿ

5.ಆಧಾರ್ ನಂಬರ್ ಲಿಂಕ್ ಮಾಡುವುದಕ್ಕೂ ಅವಕಾಶ ಇದೆ.

ಯುಪಿಐ ಆಪ್ ಬಳಸಿ ಫಂಡ್ ಟ್ರಾನ್ಸ್‌ಫರ್ ಹೇಗೆ?

ಯುಪಿಐ ಆಪ್ ಬಳಸಿ ಫಂಡ್ ಟ್ರಾನ್ಸ್‌ಫರ್ ಹೇಗೆ?

ಗ್ರಾಹಕರು ವಿವಿಧ ವಾಹಿನಿಗಳ ಮೂಲಕ ಫಂಡ್ ಟ್ರಾನ್ಸ್‌ಫರ್ ಮಾಡಬಹುದಾಗಿದೆ. ಅವುಗಳೆಂದರೆ:

1. ವರ್ಚುವಲ್ ಐಡಿ ಮೂಲಕ ಫಂಡ್ ವರ್ಗಾವಣೆ

2. ಖಾತೆ ನಂಬರ್ + IFSC

3. ಮೊಬೈಲ್ ನಂಬರ್ + MMID

3. ಆಧಾರ್ ನಂಬರ್

4. ವರ್ಚುವಲ್ ಐಡಿ ಆಧಾರದಲ್ಲಿ ಹಣ ಸಂಗ್ರಹ

ತಿಳಿದುಕೊಳ್ಳಬೇಕಾದ ಇನ್ನಿತರ ಸಂಗತಿ

ತಿಳಿದುಕೊಳ್ಳಬೇಕಾದ ಇನ್ನಿತರ ಸಂಗತಿ

1. ಗ್ರಾಹಕರು ತಮ್ಮ ಅನೇಕ ಖಾತೆಗಳಿಗೆ ಒಂದೇ ವರ್ಚುವಲ್ ವಿಳಾಸವನ್ನು ಲಿಂಕ್ ಮಾಡಬಹುದು.

2. ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಿ ಮೊತ್ತವನ್ನು ಗ್ರಾಹಕರ ಖಾತೆಗೆ ತಕ್ಷಣದಲ್ಲಿ ಪಾವತಿಸಲಾಗುತ್ತದೆ.

3. ಯುಪಿಐ ಮೂಲಕ ನಡೆಸಲಾಗುವ ವ್ಯವಹಾರಗಳನ್ನು ಸುರಕ್ಷಿತ ಮತ್ತು ಸುಭದ್ರವಾಗಿಡಲಾಗುವುದು.

4. ಗ್ರಾಹಕರು ಯುಪಿಐ ಗೆ ವಾಲೆಟ್ ಲಿಂಕ್ ಮಾಡುವುದಕ್ಕೆ ಆಗುವುದಿಲ್ಲ. ಕೇವಲ ಬ್ಯಾಂಕ್ ಖಾತೆದಾರರು ಮಾತ್ರ ಸೇರಿಸಬಹುದು.

5. ಯುಪಿಐ ಮೂಲಕ ಒಂದು ದಿನಕ್ಕೆ 20 ಬಾರಿ ಒಂದು ಲಕ್ಷದ ವರೆಗೆ ವ್ಯವಹಾರ ಮಾಡಬಹುದು.

6. ಯುಪಿಐ ಆಪ್ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿದರೆ ಮಾತ್ರ ಇದನ್ನು ಬಳಸಬಹುದು.

ಹಣಕಾಸು ರಹಿತ ವ್ಯವಹಾರಗಳು
 

ಹಣಕಾಸು ರಹಿತ ವ್ಯವಹಾರಗಳು

1. ಕೇವಲ ನೋಂದಾಯಿತಿ ನಂಬರ್ ಗಳಿಗೆ ಮಾತ್ರ ಮೊಬೈಲ್ ಬ್ಯಾಂಕಿಂಗ್ ನೋಂದಣಿ ಅವಕಾಶ

2. ಒನ್ ಟೈಮ್ ಪಾಸ್ವರ್ಡ್(OTP) ಕ್ರಿಯೆಟ್ ಮಾಡಿ.

3. ಪಿನ್ ಬದಲಾಯಿಸಿ ಅಥವಾ ಹೊಂದಿಸಿ

4. ವ್ಯವಹಾರ ಸ್ಥಿತಿ ಪರಿಶೀಲಿಸಿ

5. ವಿಚಾರಣೆ ನಡೆಸಿ

English summary

How To Download UPI App On Your Mobile

Unified Payment Interface (UPI) is a mobile payment system which allows you to do a various financial transaction on your smartphone. Once the application is downloaded, the customer needs to create a unique ID by adding his bank account details.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more