For Quick Alerts
ALLOW NOTIFICATIONS  
For Daily Alerts

ಪ್ರಧಾನಮಂತ್ರಿ ಅವಾಸ್ ಯೋಜನೆ ಆನ್‌ಲೈನ್ ಮೂಲಕ ಪಡೆಯುವುದು ಹೇಗೆ?

ಇನ್ನು ಮುಂದೆ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೈಗೆಟಕುವ ಮನೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಬಹುದಾಗಿದೆ.

By Siddu
|

ಆನ್‌ಲೈನ್ ಅರ್ಜಿ ವಿಧಾನದ ಮೂಲಕ ಪ್ರಧಾನಮಂತ್ರಿ ಅವಾಸ್ ಯೋಜನೆ(ನಗರ) ಅಡಿಯಲ್ಲಿ ಗೃಹ ನಿರ್ಮಾಣ, ನಗರ ಬಡತನ ನಿರ್ಮೂಲನ ಸಾಧಿಸಲಾಗುವುದು ಎಂದು ಕೇಂದ್ರ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದರು.

ಇನ್ನು ಮುಂದೆ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೈಗೆಟಕುವ ಮನೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಬಹುದಾಗಿದೆ. ಮೋದಿ ಸರ್ಕಾರದ ಪ್ರಮುಖ ಯೋಜನೆಗಳ ಪರಿಧಿಯೊಳಗೆ ಹೆಚ್ಚು ಜನರನ್ನು ತರುವ ಗುರಿಯೊಂದಿಗೆ ಗುರುವಾರದಿಂದ ಈ ಯೋಜನೆ ಪ್ರಾರಂಭವಾಗುತ್ತದೆ.

ಯಾವುದೇ ಸೋರಿಕೆ ಅಥವಾ ವಿಚಲನೆ ಅಥವಾ ದೌರ್ಬಲತೆ ಇಲ್ಲದೆ ಸರ್ಕಾರದ ಸೇವೆಗಳು ಜನರಿಗೆ ತಲುಪಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ ಎಂದು ಎಂ. ವೆಂಕಯ್ಯನಾಯ್ಡು ತಿಳಿಸಿದರು. ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿ ಸ್ವಂತ ಮನೆ ಪಡೆಯಿರಿ

ಫಲಾನುಭವಿಗಳ ಮನವಿಯನ್ನು ವೇಗವಾಗಿ ಸಕ್ರಿಯಗೊಳಿಸಲು ಜನರು ಸಲ್ಲಿಸುವ ನೇರ ಆನ್ಲೈನ್ ಅಪ್ಲಿಕೇಶನ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಗಮನಹರಿಸಿ ಅನುಷ್ಠಾನಕ್ಕೆ ತರುವಂತೆ ಅನುಕೂಲ ಮಾಡಲಾಗುವುದು ಎಂದರು.

ಪ್ರತಿ ಅರ್ಜಿಗೆ ರೂ. 25 ಇದ್ದು, ನಗರ ಪ್ರದೇಶಗಳಲ್ಲಿ ಇರುವ ಸುಮಾರು 60,000 CSCs ಮೂಲಕ ಗುರುವಾರದಿಂದ ಈ ಸೇವೆ ಲಭ್ಯವಾಗಲಿದೆ.

ಪ್ರಧಾನಮಂತ್ರಿ ಅವಾಸ್ ಯೋಜನೆ(PMAY) ಅಡಿಯಲ್ಲಿ ನಗರದಲ್ಲಿನ ಕಳಪೆ ಮಟ್ಟವನ್ನು ತೊಡೆದು ಹಾಕುವಲ್ಲಿ ಸಹಾಯಕವಾಗುತ್ತದೆ. ಡಿಜಿಟಲ್ ಇಂಡಿಯ ಮಿಷನ್ ದೇಶವನ್ನು ಹೊಸ ದಿಕ್ಕಿನತ್ತ ಸಾಗುವಲ್ಲಿ ಪರಿವರ್ತನೆಗೊಳ್ಳುವಂತೆ ಮಾಡುತ್ತಿದೆ ಎಂದು ಒತ್ತಿ ಹೇಳಿದರು.

ಪ್ರಧಾನಮಂತ್ರಿ ಅವಾಸ್ ಯೋಜನೆ ಆನ್‌ಲೈನ್ ಮೂಲಕ ಪಡೆಯುವುದು ಹೇಗೆ?

English summary

Online Application Under Pradhan Mantri Awas Yojana

Online applications for affordable homes under the Pradhan Mantri Awas Yojana (Urban) will begin from Thursday, with an aim to bring more people under the ambit of the Modi-government’s flagship scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X