For Quick Alerts
ALLOW NOTIFICATIONS  
For Daily Alerts

ಸ್ಯಾಲರಿ ಸ್ಲಿಪ್ ನಲ್ಲಿನ ಸಂಬಳ ಕಡಿತದ ಬಗ್ಗೆ ನಿಮಗೆಷ್ಟು ಗೊತ್ತು?

ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ನಂತರ ಸ್ಯಾಲರಿ ಡಿಫರೆನ್ಸ್ ಮತ್ತು ಸ್ಯಾಲರಿ ಸ್ಲಿಪ್ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕಾಗುತ್ತದೆ.

By Siddu
|

ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ನಂತರ ಸ್ಯಾಲರಿ ಡಿಫರೆನ್ಸ್ ಮತ್ತು ಸ್ಯಾಲರಿ ಸ್ಲಿಪ್ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕಾಗುತ್ತದೆ. ಸ್ಯಾಲರಿ ಸ್ಲಿಪ್ ಮೂಲ ವೇತನ, ಭತ್ಯೆ, ವೈದ್ಯಕೀಯ ಭತ್ಯೆ, ಪಿಎಫ್ ಮೊತ್ತ, ತೆರಿಗೆ ಕಡಿತ ಇತ್ಯಾದಿ ಅಂಶಗಳನ್ನು ಒಳಗೊಂಡಿದ್ದರೆ, ಸ್ಯಾಲರಿ ಡಿಫರೆನ್ಸ್ ಒಟ್ಟು ಸಂಬಳ, ನಿವ್ವಳ ಸಂಬಳ, ಟೇಕ್ ಹೋಮ್ ಸಂಬಳ, ಸಿಟಿಸಿ(ನೇರ ಲಾಭ, ಪರೋಕ್ಷ ಲಾಭ, ಉಳಿತಾಯ ಕೊಡುಗೆ) ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಒಟ್ಟು ಆದಾಯ ಮತ್ತು ನಿವ್ವಳ ಆದಾಯಗಳ ಬಗ್ಗೆ ವ್ಯತ್ಯಾಸ ಪರಿಹರಿಸಿಕೊಂಡರೆ ತೆರಿಗೆ ಪಾವತಿಗೂ ಅನುಕೂಲವಾಗುತ್ತದೆ.

ಸ್ಯಾಲರಿ ಡಿಫರೆನ್ಸ್ ಮತ್ತು ಸ್ಯಾಲರಿ ಸ್ಲಿಪ್ ಬಗ್ಗೆ ಇರುವ ವ್ಯತ್ಯಾಸವನ್ನು ತಿಳಿಯೋಣ...

ಸ್ಯಾಲರಿ ಡಿಫರೆನ್ಸ್ : 1. ಒಟ್ಟು ಆದಾಯ (Gross Income)

ಸ್ಯಾಲರಿ ಡಿಫರೆನ್ಸ್ : 1. ಒಟ್ಟು ಆದಾಯ (Gross Income)

ಒಬ್ಬ ಉದ್ಯೋಗಿಯೂ ತಿಂಗಳ ಅವಧಿಗೆ ಪಡೆಯುವ ಸಂಪೂರ್ಣ ವೇತನ ಅಥವಾ ಆದಾಯವನ್ನು ಒಟ್ಟು ಆದಾಯ ಎನ್ನುತ್ತಾರೆ. ಇದರಲ್ಲಿ ಯಾವುದೇ ರೀತಿಯ ಕಡಿತ ಇರುವುದಿಲ್ಲ. ಉದಾಹರಣೆ ವಿನೋದ ಎಂಬ ವ್ಯಕ್ತಿಯೂ ತಿಂಗಳಿಗೆ 50,000 ರೂ. ಒಟ್ಟು ಆದಾಯ ಗಳಿಸುತ್ತಿದ್ದಾರೆ ಎಂದುಕೊಳ್ಳೋಣ. ಅದು ಆತನ ಒಟ್ಟು ಆದಾಯವಾಗಿರುತ್ತದೆ. ಮೂಲ ವೇತನ, ಎಚ್ಆರ್ಎ, ಭತ್ಯೆ, ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆ, ಪಿಎಫ್ ಮೊತ್ತ, ತೆರಿಗೆ ಕಡಿತ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ.

2. ನಿವ್ವಳ ಆದಾಯ/ಟೇಕ್ ಹೋಮ್ ಸ್ಯಾಲರಿ (Net Income)

2. ನಿವ್ವಳ ಆದಾಯ/ಟೇಕ್ ಹೋಮ್ ಸ್ಯಾಲರಿ (Net Income)

ತೆರಿಗೆ ಹಾಗೂ ಇನ್ನಿತರ ಕಡಿತದ ನಂತರ ಕೈಗೆ ಸಿಗುವ ಆದಾಯವೇ ನಿವ್ವಳ ಆದಾಯ. ನಿವ್ವಳ ಆದಾಯ ಯಾವಾಗಲೂ ಒಟ್ಟು ಆದಾಯಕ್ಕಿಂತ ಶೇ. 18-20ರಷ್ಟು ಕಡಿಮೆ ಇರುತ್ತದೆ. ಟಿಡಿಎಸ್ ಕಡಿತ ಮತ್ತು ಕಂಪನಿ ಪಾಲಿಸಿಗಳ ಅನ್ವಯ ಕಡಿತವಾಗಿ ಕೈಗೆ ಸೇರುವ ಮೊತ್ತವೇ ನಿವ್ವಳ ಆದಾಯ.
ನಿವ್ವಳ ಆದಾಯ= ಒಟ್ಟು ಆದಾಯ-ಆದಾಯ ತೆರಿಗೆ-ಪಿಎಫ್-ವೃತ್ತಿಪರ ತೆರಿಗೆ

3. ಸಿಟಿಸಿ(Cost to Company)

3. ಸಿಟಿಸಿ(Cost to Company)

ಕಾಸ್ಟ್ ಟು ಕಂಪನಿ (ಸಿಟಿಸಿ)ಅಂದರೆ ಏನು? ಸಿಬ್ಬಂದಿಗೆ ಕಂಪನಿ ಕೊಡಮಾಡುವ ಮೊತ್ತವನ್ನು ಕಾಸ್ಟ್ ಟು ಕಂಪನಿ ಎಂದು ಕರೆಯಬಹುದು. ಇದು ಬೋನಸ್ ಮತ್ತಿತರ ಸಂಗತಿಗಳನ್ನು ಒಳಗೊಂಡಿರುತ್ತದೆ. ಭವಿಷ್ಯ ನಿಧಿ ಸಹ ಸಿಟಿಸಿ ಗೆ ಸೇರ್ಪಡೆಯಾಗಿರುತ್ತದೆ. ಹಾಗಾಗಿ ನಿಮಗೆ ಕಂಪನಿ ವೇತನದ ಆಫರ್ ನೀಡಿದ ಮೊತ್ತಕ್ಕಿಂತ ಶೇ. 10-20 ರಷ್ಟು ಕಡಿಮೆ ಹಣ ಕೈ ಸೇರುತ್ತದೆ. ಅಂದರೆ ಪಿಎಫ್ ಮತ್ತಿತರ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಅಪಾಯಿಂಟ್ ಮೆಂಟ್ ಲೆಟರ್ ನಲ್ಲಿ ಇರುವ ಮೊತ್ತಕ್ಕೂ ಪಾವತಿಯಾದ ಮೊತ್ತಕ್ಕೂ ಏನೋ ವ್ಯತ್ಯಾಸವಾದಂತೆ ಅನಿಸುತ್ತದೆ.
ಸಿಟಿಸಿ ಮೂಲ ವೇತನ, ಎಚ್ಆರ್ಎ, ವೈದ್ಯಕೀಯ ಭತ್ಯೆ, ಇಪಿಎಫ್ ಕೊಡುಗೆ, ಗ್ರ್ಯಾಚುಯಿಟಿ, ವಿಶೇಷ ಭತ್ಯೆ ಹೊಂದಿರುತ್ತದೆ.
ಸಿಟಿಸಿ= ನೇರ ಲಾಭ+ಪರೋಕ್ಷ ಲಾಭ+ಉಳಿತಾಯ ಕೊಡುಗೆಗಳು

4. ಸ್ಯಾಲರಿ ವ್ಯತ್ಯಾಸ

4. ಸ್ಯಾಲರಿ ವ್ಯತ್ಯಾಸ

ಸಂಬಳದಾರರ ಮಾಸಿಕ ವೇತನದಿಂದ ತೆರಿಗೆ ಕಡಿತ ಮಾಡುವುದು ಎಲ್ಲರಿಗೂ ಗೊತ್ತೇ ಇರುತ್ತದೆ. ಈಗ ವಿನೋದ ಅವರ ಒಟ್ಟು ಆದಾಯವನ್ನು ನಿವ್ವಳ ಆದಾಯವಾಗಿ ಪರಿವರ್ತಿಸಿದರೆ ಸಿಗುವ ಮೊತ್ತದ ಬಗ್ಗೆ ಇಲ್ಲಿ ಗಮನ ಹರಿಸಿ.
ವಿನೋದ ಅವರಿಗೆ 50,000 ರೂ. ಒಟ್ಟು ಆದಾಯ ಇದ್ದರೆ, ಶೇ. 20ರಷ್ಟು ತೆರಿಗೆ ಕಡಿತ ಚೌಕಟ್ಟಿಗೆ ಒಳಪಡುತ್ತದೆ. ಶೇ. 20ರಷ್ಟು ತೆರಿಗೆ ಕಡಿತ ಎಂದರೆ 0.20 50,000 X 0.20= 10,000 50,000-10,000= 40,000. ಹೀಗಾಗಿ ವಿನೋದ ಅವರ ನಿವ್ವಳ ಆದಾಯ 40,000 ರೂ.ಆಗಲಿದೆ. ಒಂದು ವೇಳೆ ವಿನೋದ ಅವರು ಸ್ವಯಂ ಉದ್ಯೋಗಿಯಾಗಿದ್ದರೆ, ಅವರ ಒಟ್ಟು ಆದಾಯದಿಂದ ಖರ್ಚು ವೆಚ್ಚ, ತೆರಿಗೆ ಇನ್ನಿತರ ಕಡಿತಗಳನ್ನು ಅಳಿಸಿ ವೇತನ ಲೆಕ್ಕ ಹಾಕಲಾಗುತ್ತದೆ.
ಭಾರತೀಯ ತೆರಿಗೆದಾರರ ಕಾನೂನಿಯ ಅನ್ವಯ ಸಂಬಳದಾರರ ತಿಂಗಳ ವೇತನದ ಒಟ್ಟು ಆದಾಯದ ಮೇಲೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ತೆರಿಗೆ ಕಡಿತಗೊಳಿಸಲಾಗುತ್ತದೆ. ಸ್ವಯಂ ಉದ್ಯೋಗಿಗಳು, ಉದ್ಯಮಿಗಳ ವಿಷಯದಲ್ಲಿ ನಿವ್ವಳ ಆದಾಯದ ಮೇಲೆ ತೆರಿಗೆ ಕಡಿತಗೊಳಿಸಲಾಗುತ್ತದೆ.

ಸ್ಯಾಲರಿ ಸ್ಲಿಪ್: 1. ಮೂಲ ವೇತನ(ಬೆಸಿಕ್ ಸ್ಯಾಲರಿ)

ಸ್ಯಾಲರಿ ಸ್ಲಿಪ್: 1. ಮೂಲ ವೇತನ(ಬೆಸಿಕ್ ಸ್ಯಾಲರಿ)

ಸ್ಯಾಲರಿ ಸ್ಲಿಪ್ ನಲ್ಲಿ ಮೂಲ ವೇತನ ಎನ್ನುವುದು ತುಂಬಾ ಮಹತ್ವಪೂರ್ಣವಾಗಿರುವ ಅಂಶ. ಸಂಬಳದ ಒಟ್ಟು ಮೊತ್ತದಲ್ಲಿ ಅತಿ ಹೆಚ್ಚಿನ ಪ್ರಮಾಣವನ್ನು ಮೂಲ ವೇತನದ ರೂಪದಲ್ಲಿ ಉದ್ಯೋಗಿಗಳು ಪಡೆಯುತ್ತಾರೆ. ಇದು ಕಂಪನಿಯ ನೀತಿ ಹಾಗೂ ವ್ಯಕ್ತಿಗಳ ವೇತನದ ಆಧಾರದ ಮೇಲೆ ಶೇಕಡಾವಾರು ಬದಲಾಗುತ್ತದೆ. ಮೂಲ ವೇತನದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಉದ್ಯೋಗಿಗಳು ಗಮನಿಸಬೇಕಾಗುತ್ತದೆ.

2. ಗೃಹ ಬಾಡಿಗೆ ಭತ್ಯೆ(HRA)

2. ಗೃಹ ಬಾಡಿಗೆ ಭತ್ಯೆ(HRA)

ಗೃಹ ಬಾಡಿಗೆ ಭತ್ಯೆ ಎನ್ನುವುದು ಮನೆ ಬಾಡಿಗೆಯನ್ನು ಕಟ್ಟಲು ನೀಡಿದ ಪ್ರಯೋಜನವಾಗಿದೆ. ನಗರಗಳಿಗೆ ಅನುಗುಣವಾಗಿ ಶೇಕಡಾವಾರು ಗೃಹ ಬಾಡಿಗೆ ಭತ್ಯೆ(HRA) ಅವಲಂಬಿತವಾಗಿರುತ್ತದೆ. ಮೇಟ್ರೋ ನಲ್ಲಿ ವಾಸಿಸುವವರಾದರೆ ವೇತನದಲ್ಲಿ ಶೇ. 50ರಷ್ಟು ಅಥವಾ ಶೇ. 40ರಷ್ಟು ಸಂಬಳ ಅರ್ಹವಾಗಿರುತ್ತದೆ. ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈ ಇವು ಮೇಟ್ರೋ ನಗರಗಳಾಗಿವೆ. ಸಂಬಳದ ಭಾಗವಾಗಿ HRA ಭತ್ಯೆ ಪಡೆಯುವ ವ್ಯಕ್ತಿಗಳು ತೆರಿಗೆ ವಿನಾಯಿತಿ ಪಡೆಯುತ್ತಾರೆ.

3. ವಾಹನ ಭತ್ಯೆ

3. ವಾಹನ ಭತ್ಯೆ

ಸ್ಯಾಲರಿ ಸ್ಲಿಪ್ ಸಂದರ್ಭದಲ್ಲಿ ಈ ಅಂಶವನ್ನು ಸಹ ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಭತ್ಯೆಗಳು ನಿಶ್ಚಿತ ಅವಧಿಯ ಮೊತ್ತವಾಗಿರುತ್ತದೆ. ಸಂಸ್ಥೆಗೆ ಸಂಬಂಧಿಸಿದ ಕೆಲ ಸಭೆ, ವಿಚಾರ ಸಂಕಿರಣಗಳಿಗಾಗಿ ಉದ್ಯೋಗಿ ಹೋದಾಗ ಅವರಿಗೆ ವಾಹನ ಭತ್ಯೆ, ಉಪಾಹಾರ ಭತ್ಯೆ, ಸಮವಸ್ತ್ರ ಭತ್ಯೆ ರೂಪದಲ್ಲಿ ನೀಡಲಾಗುತ್ತದೆ. ಇದು ಸಂಬಳವನ್ನು ಹೊರತುಪಡಿಸಿದ ಮೊತ್ತವಾಗಿರುತ್ತದೆ. ರೂ. 16,000 ಸಾರಿಗೆ ಭತ್ಯೆ ಆದಾಯ ತೆರಿಗೆ ಅಡಿಯಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

4. ವೈದ್ಯಕೀಯ ಭತ್ಯೆ

4. ವೈದ್ಯಕೀಯ ಭತ್ಯೆ

ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ನೀಡುವ ನಿರ್ಧಿಷ್ಟ ಪ್ರಮಾಣದ ಮೊತ್ತವೇ ವೈದ್ಯಕೀಯ ಭತ್ಯೆ ಆಗಿದೆ. ವೈದ್ಯಕೀಯ ಭತ್ಯೆ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಕಾಲ ಕಾಲಕ್ಕೆ ವೈದ್ಯಕೀಯ ಬಿಲ್ ಗಳನ್ನು ಸಂಸ್ಥೆಗೆ ಸಲ್ಲಿಸಿದರೆ ರೂ. 15,000 ವರೆಗಿನ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ.

5. ರಜೆ ಪ್ರಯಾಣ ಭತ್ಯೆ

5. ರಜೆ ಪ್ರಯಾಣ ಭತ್ಯೆ

ರಜೆ ಪ್ರಯಾಣ ಭತ್ಯೆ ಎನ್ನುವುದು ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ಒಂದು ವಿಧದ ಸಂಭಾವನೆಯಾಗಿದೆ. ತೆರಿಗೆ ಇಲಾಖೆಯ ಸೆಕ್ಷನ್ 10 (5)ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ.

6. ಭವಿಷ್ಯ ನಿಧಿ(ಪಿಎಫ್)

6. ಭವಿಷ್ಯ ನಿಧಿ(ಪಿಎಫ್)

ಮಾಸಿಕ ಆಧಾರದಲ್ಲಿ ನಿಮ್ಮ ಮೂಲ ವೇತನದಿಂದ ಶೇ. 12ರಷ್ಟು ಪ್ರಾವಿಡೆಂಟ್ ಫಂಡ್ ನಿಮ್ಮ ಇಪಿಎಫ್ ಖಾತೆಗೆ ಜಮಾ ಆಗುತ್ತದೆ. ಇದೇ ಪ್ರಮಾಣದ ಮೊತ್ತ ನಿಮ್ಮ ಉದ್ಯೋಗದಾತರಿಂದ ನಿಮ್ಮ ಖಾತೆಗೆ ಬರುತ್ತದೆ.

7. ವೃತ್ತಿಪರ ತೆರಿಗೆ

7. ವೃತ್ತಿಪರ ತೆರಿಗೆ

ವೃತ್ತಿಪರ ತೆರಿಗೆ ಎನ್ನುವುದು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಒಂದು ವಿಧದ ತೆರಿಗೆ. ರಾಜ್ಯದ ಉದ್ಯೋಗದಾತ ಸಂಸ್ಥೆ ಸಂಬಳದಿಂದ ವೃತ್ತಿಪರ ತೆರಿಗೆ ಕಡಿತಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ವೃತ್ತಿಪರ ತೆರಿಗೆ ವ್ಯಕ್ತಿಗಳ ಆದಾಯ ಅವಲಂಬಿಸಿ ಬದಲಾಗುತ್ತದೆ.

8. ಟಿಡಿಎಸ್

8. ಟಿಡಿಎಸ್

ನಿಮ್ಮ ಆದಾಯಕ್ಕೆ ಅನುಗುಣವಾಗಿ ಟಿಡಿಎಸ್ ರೂಪದಲ್ಲಿ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ನಿರ್ಧಿಷ್ಟ ಮೊತ್ತವನ್ನು ಸಂಸ್ಥೆ ಕಡಿತಗೊಳಿಸುತ್ತದೆ. ಕಡಿತಗೊಳಿಸಿದ ಈ ಮೊತ್ತವನ್ನು ತೆರಿಗೆ ಇಲಾಖೆಗೆ ಪಾವತಿಸಲಾಗುತ್ತದೆ.

English summary

What is Salary Difference and Salary slip?

Salary slip is a document that is received every month by the employee from the employer. It shows everything from gross salary to deductions to your net take home pay.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X